Property tax-2024: ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿ ಈಗ ಭಾರೀ ಸುಲಭ!

Facebook
Twitter
Telegram
WhatsApp

ಸಾರ್ವಜನಿಕರು ಇನ್ನು ಮುಂದೆ ಬೆರಳ ತುದಿಯಲ್ಲಿ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲಿಯೇ ಗ್ರಾಮ ಪಂಚಾಯತಿ ಆಸ್ತಿ ತೆರಿಗೆಯನ್ನು(property tax) ಆನ್ಲೈನ್ ನಲ್ಲಿ ಪಾವತಿ ಮಾಡಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದೆ.

ನಾಗರಿಕರು ತಮ್ಮ ಮೊಬೈಲ್ ನಲ್ಲಿ ಪೋನ್ ಪೇ(Phone pe), ಗೂಗಲ್ ಪೇ(Google pay), ಬೀಮ್(Bhim app) ಅಪ್ಲಿಕೇಶನ್, ಪೇ ಟಿಎಂ(Paytm) ಇತರೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಗ್ರಾಮ ಪಂಚಾಯತಿ ಕಚೇರಿಯನ್ನು ಭೇಟಿ ಮಾಡದೇ ಕ್ಷಣಾರ್ಧದಲ್ಲೇ ತಮ್ಮ ಹೆಸರಿನಲ್ಲಿರುವ ಆಸ್ತಿಯ ವಾರ್ಷಿಕ ತೆರಿಗೆ ಹಣವನ್ನು ಪಾವತಿ ಮಾಡಲು ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದೆ.

ಪೋನ್ ಪೇ(Phone pe), ಗೂಗಲ್ ಪೇ(Google pay), ಬೀಮ್(Bhim app) ಅಪ್ಲಿಕೇಶನ್, ಪೇ ಟಿಎಂ(Paytm)  ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಹೇಗೆ ಆಸ್ತಿ ತೆರಿಗೆಯನ್ನು ಪಾವತಿ ಮಾಡುವುದು? ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ, ಸಾರ್ವಜನಿಕರು ತಮ್ಮ ಮನೆಯ ಪ್ರತಿ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡುವಾಗ ಅನುಸರಿಸಿವ ವಿಧಾನದ ರೀತಿಯಲ್ಲೇ ಆಸ್ತಿ ತೆರಿಗೆಯನ್ನು ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮೂಲಕ ತೆರಿಗೆಯನ್ನು ಕಟ್ಟಬಹುದು.

ಇದನ್ನೂ ಓದಿ: BPL card suspension- ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು ಆಗುತ್ತದೆ!

ಯಾವೆಲ್ಲ ವಿಧಾನವನ್ನು ಅನುಸರಿಸಿ ಆಸ್ತಿ ತೆರಿಗೆ ಪಾವತಿ ಮಾಡಬಹುದು?

1) ಪೋನ್ ಪೇ(Phone pe), ಗೂಗಲ್ ಪೇ(Google pay), ಬೀಮ್(Bhim app) ಅಪ್ಲಿಕೇಶನ್, ಪೇ ಟಿಎಂ(Paytm)  ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಪಾವತಿ ಮಾಡಬಹುದು

2) ನೇರವಾಗಿ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಆಸ್ತಿ ತೆರಿಗೆಯ ಒಟ್ಟು ನಗದು ಹಣವನ್ನು ಪಾವತಿಸಿ POs ಯಂತ್ರದ ಬಿಲ್ ಪಡೆಯುವ ಮೂಲಕ ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದು.

How to pay property tax on google pay app- ಗೂಗಲ್ ಪೇ(Google pay) ಮೊಬೈಲ್ ಅಪ್ಲಿಕೇಶನ್ ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ ವಿಧಾನ:

ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ(Google pay) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದು.

Step-1: ಮೊದಲಿಗೆ ಇಲ್ಲಿಯವರೆಗೆ ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳದೇ ಇರುವವರು ಈ Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಅನ್ನು ಪ್ರವೇಶ ಮಾಡಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಅಪ್ಲಿಕೇಶನ್ ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Post office bank- ಈ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದರೆ ಸಾಕು ಎಲ್ಲಾ ಯೋಜನೆಯ ಹಣ ಸುಲಭವಾಗಿ ಜಮಾ ಅಗುತ್ತದೆ!

Step-2: ಗೂಗಲ್ ಪ್ಲೇ ನೊಂದಣಿ ಮಾಡಿಕೊಂಡ ಬಳಿಕ ಅಥವಾ ಈಗಾಗಲೇ ಬಳಕೆದಾರರಾಗಿರುವವರು ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು “Pay bills” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Life insurance yojana-2024: ಅಪಘಾತ ವಿಮೆ ಇಲ್ಲದಿದ್ದರೂ ಸಿಗುತ್ತೆ ಈ ಯೋಜನೆಯಡಿ 2 ಲಕ್ಷ!

Step-3: “Pay bills” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಮೇಲೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ “Bapuji seva kendra” ಎಂದು ಟೈಪ್ ಮಾಡಬೇಕು ಅಗ Bapuji seva kendra(RDPR) ಎನ್ನುವ ಆಯ್ಕೆ ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Greengram msp price-2024: ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ ರೂ 8,682 ರಂತೆ ಹೆಸರುಕಾಳು ಖರೀದಿಗೆ ಆದೇಶ!

Step-4: “Bapuji seva kendra(RDPR)” ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡ ನಂತರ “Property/plot number” ಕಾಲಂ ನಲ್ಲಿ ನಿಮ್ಮ ಆಸ್ತಿಯ ಸಂಖ್ಯೆಯನ್ನು ಹಾಕಿ ಇದೆ ಪೇಜ್ ನಲ್ಲಿ ಕೆಳಗೆ ಕಾಣುವ “continue” ಬಟನ್ ಮೇಲೆ ಕ್ಲಿಕ್ ಮಾಡಿದರೆ ಒಟ್ಟು ನೀವು ಪಾವತಿ ಮಾಡಬೇಕಾದ ಆಸ್ತಿ ತೆರಿಗೆ ಪಾವತಿ ಮೊತ್ತ ತೋರಿಸುತ್ತದೆ “Pay” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹಣ ಪಾವತಿ ಮಾಡಬೇಕು.

RDPR website- ಇನ್ನು ಹೆಚ್ಚಿನ ಮಾಹಿತಿಗಾಗಿ:

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವೆಬ್ಸೈಟ್: Click here
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಎಕ್ಸ್ ಖಾತೆ: Click here
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಹಾಯವಾಣಿ: 8277506000

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(Pradhan Mantri Kisan Samman Nidhi) ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಗಾವಣೆ ಮಾಡುವ ರೂ 2,000 ಹಣವನ್ನು ದೇಶದ ಎಲ್ಲಾ ರೈತರಿಗೆ ಇಂದು(05-10-2024) ಜಮಾ ಅಗಲಿದ್ದು, ರೈತರು ತಮ್ಮ ಮೊಬೈಲ್

Best insurance plan-2024: ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷ ಅಪಘಾತ ವಿಮೆ ಪರಿಹಾರಕ್ಕೆ ಅರ್ಜಿ!

ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷದವರೆಗೆ ಅಪಘಾತ ವಿಮೆ(Accidental insurance) ಪ್ರಯೋಜನ ಪಡೆಯಲು ನೂತನ ಯೋಜನೆಯನ್ನು ರಾಜ್ಯ ಸರಕಾರದಿಂದ ಜಾರಿಗೆ(insurance plan) ತರಲಾಗಿದ್ದು, ಈ ಯೋಜನೆಯ ಕುರಿತು

Bele parihara

Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಬೆಳೆ ನಷ್ಟ ಪರಿಹಾರವನ್ನು(bele parihara) ಪಡೆಯಲು ಎಲ್ಲಾ ದಾಖಲಾತಿಗಳು ಆನ್ಲೈನ್ ನಲ್ಲಿ ಸರಿಯಾಗಿ ಸಲ್ಲಿಸಿರುವ ರೈತರ ಹಳ್ಳವಾರು ಪಟ್ಟಿಯನ್ನು(Parihara farmer list) ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ನಲ್ಲಿ ಹಳ್ಳಿವಾರು ರೈತರ ಪಟ್ಟಿಯನ್ನು