- Advertisment -
HomeGovt SchemesPUC Result-2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

PUC Result-2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB)ಯಿಂದ ಇಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು(PUC Result) ಪ್ರಕಟಿಸಲಾಗಿದ್ದು ಈ ಅಂಕಣದಲ್ಲಿ ನೀಡಿರುವ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಮಧ್ಯಾಹ್ನ 12:30ಕ್ಕೆ ಮಲ್ಲೇಶ್ವರದಲ್ಲಿರುವ ಮಂಡಳಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಘೋಷಿಸಿದರು. ಈ ಸುದ್ದಿಗೋಷ್ಠಿಯ ನಂತರ, ಮಧ್ಯಾಹ್ನ 1:30ರಿಂದ ಫಲಿತಾಂಶವು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು kseab.karnataka.gov.in ನಲ್ಲಿ ವಿದ್ಯಾರ್ಥಿಗಳು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: New BPL Card-ಹೊಸ ಬಿಪಿಎಲ್ ಕಾರ್ಡ ವಿತರಣೆ! ಇಲ್ಲಿದೆ ನೂತನ ಅಪ್ಡೇಟ್!

ವಿದ್ಯಾರ್ಥಿಗಳು ಈ ವೆಬ್‌ಸೈಟ್‌ಗಳ ಮೂಲಕ ವಿದ್ಯಾರ್ಥಿಗಳು(KSEAB 2nd PUC Result) ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯದ ವಿವರಗಳನ್ನು ನಮೂದಿಸಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿತ್ತು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

PUC Result Details-ಈ ಬಾರಿ ದ್ವಿತೀಯ ಪಿಯುಸಿ ವಿವರ ಹೀಗಿದೆ:

ಕಳೆದ ಮಾರ್ಚ್ 1 ರಿಂದ ಮಾರ್ಚ್ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7.13 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ ಹೊಸ ವಿದ್ಯಾರ್ಥಿಗಳ ಸಂಖ್ಯೆ 6,61,474 ಮತ್ತು ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳ ಸಂಖ್ಯೆ ಯಥಾಕ್ರಮವಾಗಿ 34,071 ಮತ್ತು 18,317 ಇತ್ತು. ಫಲಿತಾಂಶದ ಮೊದಲ ಪ್ರಕಟಣೆಯಲ್ಲಿ ರಾಜ್ಯದ ಒಟ್ಟು ಉತ್ತೀರ್ಣ ಪ್ರಮಾಣ 73.45% ಎಂದು ವರದಿಯಾಗಿದ್ದು,

ಇದರಲ್ಲಿ ಉಡುಪಿ ಜಿಲ್ಲೆ 93.90% ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ (93.57%) ಮತ್ತು ಬೆಂಗಳೂರು ದಕ್ಷಿಣ (85.36%) ಯಥಾಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಇದನ್ನೂ ಓದಿ: Bangalore Weather-ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ! ಕರ್ನಾಟಕ ಹವಾಮಾನ ಮುನ್ಸೂಚನೆ!

PUC Result-2025: ಜಿಲ್ಲಾವಾರು ಫಲಿತಾಂಶದ ವಿವರ ಹೀಗಿದೆ:

PUC Result

ಇದನ್ನೂ ಓದಿ: Milk incentive Amount- ರೈತರಿಗೆ ₹400 ಕೋಟಿ ಹಾಲಿ ಪ್ರೋತ್ಸಾಹಧನ ಪಾವತಿ: ಸಚಿವ ಕೆ.ವೆಂಕಟೇಶ್!

PUC Status Check-ಮೊಬೈಲ್ ನಲ್ಲಿ ಫಲಿತಾಂಶವನ್ನು ಚೆಕ್ ಮಾಡುವ ವಿಧಾನ:

ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಬಹುದಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ತಂತ್ರಾಂಶವನ್ನು ಭೇಟಿ ಮಾಡಿ ಮನೆಯಲ್ಲೇ ಕುಳಿತು ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ PUC Status Check-2025 ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ದ್ವಿತೀಯ ಪಿಯುಸಿ ಫಲಿತಾಂಶದ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Mobile canteen subsidy-ಫಾಸ್ಟ್ ಫುಡ್ ವಾಹನ ಖರೀದಿಗೆ ₹5 ಲಕ್ಷದ ವರೆಗೆ ಸಬ್ಸಿಡಿ ಪಡೆಯಲು ಅರ್ಜಿ ಅಹ್ವಾನ!

2nd PUC

Step-2: ಫಲಿತಾಂಶ ಚೆಕ್ ಮಾಡುವ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “2025 ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಣೆ / II PUC EXAM-1 RESULT 2025 announced on 08/04/2025” ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ತದನಂತರ ಈ ಪೇಜ್ ನಲ್ಲಿ “Enter Reg No” ಕಾಲಂ ನಲ್ಲಿ ನೋಂದಣಿ ಸಂಖ್ಯೆಯನ್ನು ಹಾಕಿ ಕೆಳಗ ಕಾಣುವ “Select Subject” ನಲ್ಲಿ Science/Arts/Commerce ಅನ್ನು ಆಯ್ಕೆ ಮಾಡಿಕೊಂಡು “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ಫಲಿತಾಂಶವನ್ನು ನೋಡಬಹುದು.

ಕೊನೆಯದಾಗಿ ಒಂದು ಮಾತು:

ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಈಗಾಗಲೇ ಫಲಿತಾಂಶವನ್ನು ನೋಡಿರುವವರು ಈ ಮಾತನ್ನು ತಪ್ಪದೇ ಗಮನಿಸಿ “ಫಲಿತಾಂಶ ಏನೇ ಬರಲಿ, ಇದು ನಿಮ್ಮ ಜೀವನದ ಅಂತಿಮ ಗುರಿಯಲ್ಲ. ಧೈರ್ಯದಿಂದ ಮುಂದುವರಿಯಿರಿ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ”

- Advertisment -
LATEST ARTICLES

Related Articles

- Advertisment -

Most Popular

- Advertisment -