Ragi kharidi-ರೈತರಿಂದ ಪ್ರತಿ ಕ್ವಿಂಟಾಲ್ ಗೆ 3846 ರೂಗೆ ರಾಗಿ ಖರೀದಿಗೆ ನೊಂದಣಿ ಪ್ರಾರಂಭ!

Ragi kharidi: ರಾಜ್ಜ್ಯದ್ಯಂತ ಅನೇಕ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಿ ರಾಗಿ ಕಟಾವು ಕಾರ್ಯ ನಡೆಯುತ್ತಿದ್ದು ಪ್ರಸ್ತುತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲು ಸರಕಾರ ಮುಂದಾಗಿದೆ.

ರಾಜ್ಜ್ಯದ್ಯಂತ ಅನೇಕ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಿ ರಾಗಿ ಕಟಾವು ಕಾರ್ಯ ನಡೆಯುತ್ತಿದ್ದು ಪ್ರಸ್ತುತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲು ಸರಕಾರ ಮುಂದಾಗಿದೆ.

ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ಪ್ರತಿ ಕ್ವಿಂಟಾಲ್ ರಾಗಿಗೆ 3846 ರೂ. ರಂತೆ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲು ಪ್ರಥಮ ಹಂತದಲ್ಲಿ 01 ಡಿಸೆಂಬರ್ ರಿಂದ ರೈತರ ನೋಂದಣಿಯನ್ನು ಮಾಡಿಕೊಳ್ಳಲು ತಿಳಿಸಲಾಗಿದೆ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯುವುದು ಮತ್ತು ರೈತರ ನೋಂದಣಿ ಕುರಿತು ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಗಳ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ ಪೋರ್ಸ್ ಸಮಿತಿ ಸಭೆಯಲ್ಲಿ ಮಾತಾನಾಡಿದ ಅವರು ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಖರೀದಿ ಮಾಡಲು ತಿರ್ಮಾನಿಸಲಾಗಿದ್ದು, ಹಿಂದಿನ ವರ್ಷಗಳಂತೆಯೇ ಈ ವರ್ಷವು ಖರೀದಿ ಕೇಂದ್ರಗಳನ್ನು ತೆರೆದು ರೈತರ ನೋಂದಣಿ ಮಾಡಿಕೊಂಡು 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.

ಒಬ್ಬ ರೈತರು ಈ ಯೋಜನೆಯಡಿ ಒಂದು ಎಕರೆಗೆ ಗರಿಷ್ಠ 10 ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ(APMC) ಕಚೇರಿ ಬಳಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಸೂಚಿಸಲಾಗಿದ್ದು, ರೈತರು FID ನಂಬರ್ . ಆಧಾರ್ ಕಾರ್ಡ ಪ್ರತಿ , ಬ್ಯಾಂಕ್ ಪಾಸ್  ಬುಕ್, ಪಹಣಿ ದಾಖಲಾತಿಗಳೊಂದಿಗೆ 01 ಡಿಸೆಂಬರ್ ರಿಂದ ಕೇಂದ್ರ ಭೇಟಿ ಮಾಡಿ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಬವುದು.

ಡಿಸೆಂಬರ್ ಅಂತ್ಯದವರೆಗೆ ರೈತರನ್ನು ನೋಂದಣಿ ಮಾಡಿಕೊಂಡು 01 ಜನವರಿಯಿಂದ ಮಾರ್ಚ ಅಂತ್ಯದ ವರೆಗೆ ರೈತರಿಂದ ರಾಗಿ ಖರೀದಿ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ

ಪ್ರೂಟ್ಸ್ ಐಡಿ/FID ಪಡೆಯುವುದು ಹೇಗೆ?

ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ನೋಂದಣಿಯನ್ನು ಮಾಡಿಕೊಳ್ಳಲು ಮುಖ್ಯವಾಗಿ ಪ್ರೂಟ್ಸ್ ಐಡಿ/FID ನಂಬರ್ ಒದಗಿಸುವುದು ಕಡ್ಡಾಯವಾಗಿರುತ್ತದೆ ಅದ ಕಾರಣ ಈಗಾಗಲೇ ಈ ನಂಬರ್ ಅನ್ನು ಹೊಂದಿರುವವರು ಈ ಲಿಂಕ್ FID check link ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ಹಾಕಿ 16 ಅಂಕಿಯ ನಿಮ್ಮ ಪ್ರೂಟ್ಸ್ ಐಡಿ/FID ಅನ್ನು ಪಡೆಯಬವುದು.

ಪ್ರೂಟ್ಸ್ ಐಡಿ/FID ನಂಬರ್ ಇಲ್ಲಿಯವರೆಗೆ ಮಾಡಿಸಿಲ್ಲದವರು ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಅಗತ್ಯ ದಾಖಲಾತಿಗಳ(ಆಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್, ಎಲ್ಲಾ ಸರ್ವೆ ನಂಬರ್/ಪಹಣಿ) ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ನಂಬರ್ ಪಡೆಯಿರಿ.

ಇದನ್ನೂ ಓದಿ: New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?


ರಾಗಿ ಮಾರಾಟದ ಹಣ ಯಾವಾಗ ಸಿಗುತ್ತದೆ?

ರೈತರು ನೋಂದಣಿ ಮಾಡಿಕೊಂಡು ರಾಗಿ ಮಾರಾಟ ಮಾಡಿದ ಬಳಿಕ ನಿಮಗೆ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದಕ್ಕೆ ಎಷ್ಟು ಕ್ವಿಂಟಾಲ್ ರಾಗಿ? ಒಟ್ಟು ಹಣ ಎಷ್ಟು? ಎನ್ನುವ ರಶೀದಿಯನ್ನು ನೀಡುತ್ತಾರೆ ಇದಾದ ಬಳಿಕ 15 ರಿಂದ 20 ದಿನದ ಒಳಗಾಗಿ ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಹಣ ಜಮಾ ಅಗುತ್ತದೆ.