- Advertisment -
HomeGovt SchemesRation Card-ರೇಷನ್ ಕಾರ್ಡ ತಿದ್ದುಪಡಿ ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

Ration Card-ರೇಷನ್ ಕಾರ್ಡ ತಿದ್ದುಪಡಿ ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

ಆಹಾರ ಇಲಾಖೆಯಿಂದ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ತಮ್ಮ ರೇಷನ್ ಕಾರ್ಡ(Ration Card) ವಿವರವನ್ನು ತಿದ್ದುಪಡಿ ಮಾಡಿಕೊಳ್ಳಲು ಈ ತಿಂಗಳ ಕೊನೆಯ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಡಿತರ ಚೀಟಿಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಜಿ ಸಲ್ಲಿಸಲು ಸಾರ್ವಜನಿಕರು ಯಾವೆಲ್ಲ ದಾಖಲಾತಿಗಳನ್ನು(Ration card correction documents) ಅಗತ್ಯವಾಗಿ ಒದಗಿಸಬೇಕು ಮತ್ತು ತಿದ್ದುಪಡಿವಾರು ಯಾವೆಲ್ಲ ದಾಖಲಾತಿಗಳಲ್ಲು ಸಲ್ಲಿಸಬೇಕಾಗುತ್ತದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಇದಲ್ಲದೇ ಒಮ್ಮೆ ಆನ್ಲೈನ್ ಮೂಲಕ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ ನಂತರ ಪಡಿತರ ಚೀಟಿದಾರರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ಸಹ ಈ ಅಂಕಣದಲ್ಲಿ ತಿಳಿಸಲಾಗಿದ್ದು ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Khata Details-ನಿಮ್ಮ ಆಸ್ತಿಗೆ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Ration card correction documents-ತಿದ್ದುಪಡಿವಾರು ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ಮಕ್ಕಳನ್ನು ಸೇರಿಸಲು:

A) 6 ವರ್ಷ ಮೇಲ್ಪಟ್ಟವರನ್ನು ಸೇರಿಸಲು ಆಧಾರ್ ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರ
B) 6 ವರ್ಷ ಕೆಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್

2) ರೇಷನ್ ಕಾರ್ಡನಲ್ಲಿ ವಿಳಾಸ ತಿದ್ದುಪಡಿಗೆ:

ಬದಲಾವಣೆ ಅಗಿರುವ ವಿಳಾಸದ ಪೂರಾವೆ.
ಅರ್ಜಿದಾರರ ಮೊಬೈಲ್ ನಂಬರ್
ರೇಷನ್ ಕಾರ್ಡ ಪ್ರತಿ

ಇದನ್ನೂ ಓದಿ: Togari Kharidi-ರಾಜ್ಯ ಸರ್ಕಾರದಿಂದ ತೊಗರಿ ಖರೀದಿಗೆ ₹140 ರೂ ಕೋಟಿ!

Ration Card application

3) ಸದಸ್ಯರನ್ನು ತೆಗೆದುಹಾಕಲು:

ಮರಣ ದಾಖಲಾತಿ ಪ್ರಮಾಣ ಪತ್ರ

4) ಹೊಸ ಸದಸ್ಯರ ಸೇರ್ಪಡೆಗೆ:

ಅರ್ಜಿದಾರ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ ಪ್ರತಿ
ರೇಷನ್ ಕಾರ್ಡ ಪ್ರತಿ
ಮೊಬೈಲ್ ನಂಬರ್

ಸೂಚನೆ: ಮನೆಯ ಯಜಮಾನಿಯ ಆಧಾರ್ ಕಾರ್ಡ್ ವಿಳಾಸಕ್ಕೆ ರೇಷನ್ ಕಾರ್ಡ್ ವಿಳಾಸ ಹೊಂದಾಣಿಕೆ ಆಗಬೇಕು ಇಲ್ಲದಿದ್ದಲ್ಲಿ ಮನೆಯ ಯಜಮಾನಿಯು ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಖುದ್ದು ಹಾಜರು ಇದ್ದು KYC ಮಾಡಿಕೊಳ್ಳಬೇಕು.

ಇದನ್ನೂ ಓದಿ: Best Savings Scheme-ಅಂಚೆ ಇಲಾಖೆಯಿಂದ ಮಹಿಳೆಯರಿಗೆ ಭರ್ಜರಿ ಗಿಪ್ಟ್! ಎರಡು ವರ್ಷದಲ್ಲಿ ₹30 ಸಾವಿರ ಪಡೆಯಲು ಅವಕಾಶ!

How to Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ರೇಷನ್ ಕಾರ್ಡ ಹೊಂದಿರುವ ಗ್ರಾಹಕರು ತಮ್ಮ ಕಾರ್ಡನಲ್ಲಿನ ವಿವಿಧ ಬಗೆಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಈ ಕೆಳಗಿನ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

1) ಗ್ರಾಮ ಒನ್ ಕೇಂದ್ರ/Grama one
2) ಕರ್ನಾಟಕ ಒನ್ ಕೇಂದ್ರ/Karnataka one
3) ಬೆಂಗಳೂರು ಒನ್ ಕೇಂದ್ರ/Bengalore one

ಇದನ್ನೂ ಓದಿ: APAAR ID Card-ವಿದ್ಯಾರ್ಥಿಗಳಿಗೆ APAAR ID ಕಾರ್ಡ್‌! ಎಲ್ಲಿ ಪಡೆಯಬೇಕು? ಇಲ್ಲಿದೆ ಸಂಪೂರ್ಣ ವಿವರ!

Ration Card Status-ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವ ವಿಧಾನ:

ಒಮ್ಮೆ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ ತಿದ್ದುಪಡಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ Ration Card Status ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Bima Sakhi-LIC ಯಿಂದ ಬಿಮಾ ಸಖಿ ಹೊಸ ಯೋಜನೆ! ಮಾಸಿಕ ₹7,000 ಸ್ಟೈಪೆಂಡ್!

Step-2: ಬಳಿಕ ಈ ಪೇಜ್ ನಲ್ಲಿ “ಇ-ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ತಿದ್ದುಪಡಿ ವಿನಂತಿಯ ಸ್ಥಿತಿ” ಆಯ್ಕೆ ವಿಭಾಗದಲ್ಲಿ ನಿಮ್ಮ ಜಿಲ್ಲೆಯ ವ್ಯಾಪ್ತಿಯ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ಈ ಪುಟದಲ್ಲಿ “ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಡಿತರ ಚೀಟಿಯ ನಂಬರ್ ಮತ್ತು ತಿದ್ದುಪಡಿ ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ “Go” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -