Ration Card Application-ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

January 3, 2025 | Siddesh
Ration Card Application-ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!
Share Now:

ಪಡಿತರ ಚೀಟಿದಾರರಿಗೆ(Ration Card Latest News) ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ(Karnataka Ahara ilake) ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿ ಪ್ರಕಟಿಸಿದೆ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ.

ಈ ಮೊದಲು ಪಡಿತರ ಚೀಟಿಯಲ್ಲಿನ(Ration Card) ವಿವಿಧ ಬಗ್ಗೆಯ ತಿದ್ದುಪಡಿಯನ್ನು ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು ಆದರಿ ಈಗ ಆಹಾರ ಇಲಾಖೆಯಿಂದ ಪುನಃ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಅರ್ಹ ಸಾರ್ವಜನಿಕರಿಗೆ ಈ ಮಾಹಿತಿ ತಲುಪಿಸಲು ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Ration Card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!

Ration card correction last date- ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಲು ಕಾರಣವೇನು?

ಪಡಿತರ ಚೀಟಿ ಹೊಂದಿರುವ ಅನೇಕ ಗ್ರಾಹಕರು ಸರ್ವರ್ ಸಮಸ್ಯೆಯಿಂದ ವಿವಿಧ ರೀತಿಯ ತಿದ್ದುಪಡಿಗೆ ಇನ್ನು ಅನೇಕ ಜನರು ಅರ್ಜಿ ಸಲ್ಲಿಸುವುದು ಬಾಕಿಯಿರುವುದರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಹೆಚ್ಚಿನ ದಿನಗಳು ಅವಶ್ಯಕವಿರುವುದರಿಂದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ.

ration card

Ration card correction -ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ:

ಆಹಾರ ಇಲಾಖೆಯಿಂದ ಅರ್ಥಿಕವಾಗಿ ಹಿಂದುಳಿದ ಅರ್ಹ ಸಾರ್ವಜನಿಕರಿಗೆ ರೇಷನ್ ಕಾರ್ಡ ಅನ್ನು ವಿತರಣೆ ಮಾಡಿ ಅಗತ್ಯ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ ಈ ಸೌಲಭ್ಯವನ್ನು ಪಡೆಯಲು ರೇಷನ್ ಕಾರ್ಡ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯವಾದ ಕಾರಣ,

ರೇಷನ್ ಕಾರ್ಡ ನಲ್ಲಿ ತಪ್ಪಾದ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಇಲಾಖೆಯಿಂದ ಕಾಲ ಕಾಲಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ 31 ಡಿಸೆಂಬರ್ 2024 ರ ವರೆಗೆ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದ್ದ ಅವಕಾಶವನ್ನು 31 ಜನವರಿ 2025 ರ ವರೆಗೆ ವಿಸ್ತರಣೆ ಮಾಡಿ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: AO and AAO Online Application-KPSC ಯಿಂದ 86 ಕೃಷಿ ಅಧಿಕಾರಿ 586 ಸಹಾಯಕ ಕೃಷಿ ಅಧಿಕಾರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ!

Ration Card tiddupadi

ಗೊಂದಲಗಳಿಗೆ ಬ್ರೇಕ್:

ರೇಷನ್ ಕಾರ್ಡ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರ ಕುರಿತು ಹಾಗೂ ಕೊನೆಯ ದಿನಾಂಕದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಯಾದ ಕಾರಣ ಇಲಾಖೆಯಿಂದ ಈ ವದಂತಿಗೆ ಬ್ರೇಕ್ ಹಾಕಿದಂತೆ ಅಗಿದೆ.

Ration card correction application-ರೇಷನ್ ಕಾರ್ಡ ನಲ್ಲಿ ಏನೆಲ್ಲ ಬದಲಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?

ರ‍ೇಷನ್ ಕಾರ್ಡ/ಪಡಿತರ ಚೀಟಿಯಲ್ಲಿ ಯಾವೆಲ್ಲ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಇಲಾಖೆಯಿಂದ ಅವಕಾಶ ನೀಡಲಾಗಿದೆ ಎಂದರೆ ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರಿಸಲು ಹಾಗೂ ಮರಣ ಹೊಂದಿದ ಸದಸ್ಯರನ್ನು ತೆಗೆದು ಹಾಕಲು, ಕಾರ್ಡನಲ್ಲಿ ವಿಳಾಸ ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ, ಸದಸ್ಯರ ಇ-ಕೆವೈಸಿ ಮಾಡಿಕೊಳ್ಳಲು ಸಹ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Land ownership act-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕಾನೂನು ಏನು ಹೇಳುತ್ತದೆ?

Documents for Ration card correction-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಕುಟುಂಬದ ರೇಷನ್ ಕಾರ್ಡ್, ಅರ್ಜಿದಾರರ ಆಧಾರ್‌ ಕಾರ್ಡ್ ಪ್ರತಿ, ಜಾತಿ ಅಥವಾ ಆದಾಯ ಪ್ರಮಾಣ ಪತ್ರ, ಆರು ವರ್ಷದ ಒಳಗಿನ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ದಾಖಲೆ ಯನ್ನು ಒದಗಿಸಬೇಕು ಹಾಗೂ ರೇಷನ್ ಕಾರ್ಡ ಸದಸ್ಯರ ಇ-ಕೆವೈಸಿ ಮಾಡಿಕೊಳ್ಳಲು ಖುದ್ದು ಸದಸ್ಯರು ಹಾಜರು ಇರಬೇಕು.

How to apply for Ration card correction-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು:

ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳನ್ನು ಕೊನೆಯ ದಿನಾಂಕ ಮುಕ್ತಾಯ ಅಗುವುದರ ಒಳಗಾಗಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: PM-Kisan-ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಪ್ರಕಟ!

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಆಹಾರ ಇಲಾಖೆಯ ಜಾಲತಾಣ- CLICK HERE

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: