Ration card application-ಷರತ್ತಿನ ಅನ್ವಯ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

February 14, 2025 | Siddesh
Ration card application-ಷರತ್ತಿನ ಅನ್ವಯ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
Share Now:

ಆಹಾರ ಇಲಾಖೆಯಿಂದ ಷರತ್ತಿನ ಅನ್ವಯ ಹೊಸ ರ‍ೇಶನ್ ಕಾರ್ಡ ಪಡೆಯಲು ಅರ್ಹ ಅರ್ಜಿದಾರರಿಂದ ಅರ್ಜಿ(New Ration card application)ಸಲ್ಲಿಸಲು ಅವಕಾಶ ನೀಡಲಾಗಿದ್ದು ಈ ಕುರಿತು ಕೆಲವು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಭಾರತ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರತಿಯೊಬ್ಬ ನಾಗರಿಕರಿಗೆ ಆಹಾರ ಧ್ಯಾನಗಳನ್ನು ಉಚಿತವಾಗಿ ವಿತರಣೆಯನ್ನು ಮಾಡಲು ಅರ್ಹ ಫಲಾನುಭವಿಗಳನ್ನು ಗುರುತಿಸಿ ಆಹಾರ ಧಾನ್ಯವನ್ನು ವಿತರಣೆ ಮಾಡಲು ಪಡಿತರ ಚೀಟಿಗಳನ್ನು(New Ration card) ವಿತರಣೆ ಮಾಡಲಾಗುತ್ತದೆ ಈ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ರಾಜ್ಯ ಸರಕಾರದಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಜವಾಬ್ದಾರಿಯನ್ನು ವಹಿಸಲಾಗಿರುತ್ತದೆ.

ಪ್ರಸ್ತುತ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ(Ahara ilake) ಕೆಲವು ಷರತ್ತಿನ ಅನ್ವಯ ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಈ ಕುರಿತು ಯಾವೆಲ್ಲೆ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Cibil Score-ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ?

Medical emergency ration card application-ಮೆಡಿಕಲ್ ಎಮರ್ಜೆನ್ಸಿ ಇದ್ದವರಿಗೆ ಹೊಸ ಪಡಿತರ ಚೀಟಿ ಪಡೆಯಲು ಅವಕಾಶ:

ಹೊಸ ರೇಶನ್ ಕಾರ್ಡ ಅನ್ನು ಪಡೆಯಲು ಅರ್ಜಿ ಸಲ್ಲಿಸಲು ಎಲ್ಲಾ ನಾಗರಿಕರಿಗೆ ಅವಕಾಶ ನೀಡಿರುವುದಿಲ್ಲ ಕೇವಲ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮೆಡಿಕಲ್ ಎಮರ್ಜೆನ್ಸಿ ಕಾರಣದಿಂದ ಪಡಿತರ ಚೀಟಿ ಪಡೆಯಲು ಅರ್ಹರಿರುವವರಿಗೆ ಮಾತ್ರ ಅರ್ಜಿ ಸಲ್ಲಿಸಲು ಇಲಾಖೆಯಿಂದ ಅವಕಾಶ ನೀಡಲಾಗಿರುತ್ತದೆ.

ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿ ಇತರರಿಗಿಲ್ಲ ಅವಕಾಶ:

ಇಲಾಖೆಯ ಪ್ರಕಟಣೆಯನ್ವಯ ಕೇವಲ ಮೆಡಿಕಲ್ ಎಮರ್ಜೆನ್ಸಿ ಹೊಂದಿರುವ ನಾಗರಿಕರಿಗೆ/ಸಾರ್ವಜನಿಕರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಕೆಲವು ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಆಸ್ಪತ್ರೆ ವೆಚ್ಚದಲ್ಲಿ ರಿಯಾಯಿತಿಯನ್ನು/ಉಚಿತವಾಗಿ ಆರೋಗ್ಯ ಸೇವೆಯನ್ನು ಪಡೆಯಲು ಪಡಿತರ ಚೀಟಿ ಅವಶ್ಯವಿರುತ್ತದೆ ಆದ್ದರಿಂದ ಈ ವರ್ಗದ ನಾಗರಿಕರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ.

ಇದನ್ನೂ ಓದಿ: Shop registration-ರಾಜ್ಯ ಸರಕಾರದಿಂದ ಎಲ್ಲಾ ಅಂಗಡಿಗಳ ನೋಂದಣಿಗೆ ನೂತನ ನಿಯಮ ಜಾರಿ!

ration card

ಇದನ್ನೂ ಓದಿ: Aadhar card-ಆಧಾರ್ ಕಾರ್ಡನಲ್ಲಿ ಪತಿ ಹೆಸರನ್ನು ಸೇರಿಸಲು ಈ ದಾಖಲೆ ಕಡ್ಡಾಯ!

Karnataka Food Deparment-ಮೆಡಿಕಲ್ ಎಮರ್ಜೆನ್ಸಿ ಮಾತ್ರ ಏಕೆ ಅವಕಾಸ ನೀಡಲಾಗಿರುತ್ತದೆ?

ರಾಜ್ಯ ಸರಕಾರಕ್ಕೆ ಆನೇಕ ಜನರು ಆರೋಗ್ಯ ಸೇವೆಯನ್ನು ಪಡೆಯಲು ಪಡಿತರ ಚೀಟಿ ಅವಶ್ಯಕತೆ ಇರುತ್ತದೆ ಎಂದು ಮನವಿಯನ್ನು ಸಲ್ಲಿಸಿದರ ಪರಿಣಾಮದಿಂದ ಆಹಾರ ಇಲಾಖೆಯಿಂದ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮೆಡಿಕಲ್ ಎಮರ್ಜೆನ್ಸಿ ಇದ್ದ ಅರ್ಜಿದಾರರಿಗೆ ಮಾತ್ರ ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ.

Medical emergency ration card-ಮೆಡಿಕಲ್ ಎಮರ್ಜೆನ್ಸಿ ಎಂದರೆ ಯಾವೆಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ?

ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು/ವಿವಿಧ ಬಗ್ಗೆಯ ಆಪರೇಶನ್ ಗಳಿಗೆ ಉಚಿತವಾಗಿ/ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ಪಡೆಯಲು ರೇಶನ್ ಕಾರ್ಡ ಅವಶ್ಯಕತೆ ಇರುವವರು ಈ ಅವಕಾಶವನ್ನು ಬಳಕೆ ಮಾಡಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Togari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!

How To Apply For New Ration card-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ಕಚೇರಿ ಸಮಯದಲ್ಲಿ ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Required Documents For New Ration card-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3) ಕುಟುಂಬ ಸದಸ್ಯರ ಆಧಾರ್ ಕಾರ್ಡ ಪ್ರತಿ
4) ಪೋಟೋ
5) ಮೊಬೈಲ್ ನಂಬರ್

Online Ration card Status-ಅರ್ಜಿಯನ್ನು ಸಲ್ಲಿಸಿದ ಬಳಿಕ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂದು ತಿಳಿಯುವ ವಿಧಾನ:

ಅರ್ಜಿದಾರರು ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ New Ration card Application ಇಲ್ಲಿ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ತಂತ್ರಾಂಶವನ್ನು ನಿಮ್ಮ ಮೊಬೈಲ್ ಮೂಲಕ ಪ್ರವೇಶ ಮಾಡಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಮನೆಯಲ್ಲೇ ಕುಳಿತು ನೀವು ಆನ್ಲೈನ್ ಮೂಲಕ ಹೊಸ ರೇಶನ್ ಕಾರ್ಡ ಪಡೆಯಲು ಸಲ್ಲಿಸಿದ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿಯಬಹುದಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: