ಇಂದಿನಿಂದ ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ(ration card correction) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅವಕಾಶವನ್ನು ಮಾಡಿಕೊಡಲಾಗಿದ್ದು, ತಿದ್ದುಪಡಿ ಮತ್ತು ಸೇರ್ಪಡೆ ಮಾಡಿಕೊಳ್ಳಲು ಇಚ್ಚಿಸುವವರು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳು ಒದಗಿಸಬೇಕಾಗುತ್ತದೆ? ಇತ್ಯಾದಿ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ರೇಷನ್ ಕಾರ್ಡ ತಿದ್ದುಪಡಿ ಮತ್ತು ಸೇರ್ಪಡೆ ಮಾಡಿಕೊಳ್ಳುವವರು ಇದು ಒಂದು ಸುವರ್ಣಾವಕಾಶವಾಗಿರುತ್ತದೆ. ಈ ಮೊದಲು ರೇಷನ್ ಕಾರ್ಡ ತಿದ್ದುಪಡಿ(Ration card update) ಮತ್ತು ಹೊಸ ಸದಸ್ಯರ ಸೇರ್ಪಡೆಗೆ 21 ಆಗಸ್ಟ್ 2023 ಕೊನೆಯ ದಿನವಾಗಿತ್ತು ಅದರೆ ಈಗ ಮತ್ತೆಇಲಾಖೆಯಿಂದ ಹೆಚ್ಚುವರಿ 10 ದಿನ ಕಾಲಾವಕಾಶ ಮಾಡಿಕೊಡಲಾಗಿದೆ.
ಈ ಹಿಂದೆ ನೀಡಿದ ನಾಲ್ಕು ದಿನಗಳ ಗಡುವಿನಲ್ಲಿ ಹೆಚ್ಚು ಜನರು ಅರ್ಜಿ ಸಲ್ಲಿಸಲು ಗ್ರಾಮ್ ಒನ್ ಮತ್ತು ಕರ್ನಾಟಕ ಒನ್, CSC ಕೇಂದ್ರಗಳ ಕಡೆ ಬಂದಿದ್ದರಿಂದ ಸರ್ವರ್ ಸಮಸ್ಯೆಯಿಂದ ಅಧಿಕ ಪ್ರಮಾಣದ ಸಾರ್ವಜನಿಕರು ಇನ್ನು ಅರ್ಜಿ ಸಲ್ಲಿಸುವುದು ಬಾಕಿಯಿರುವುದರಿಂದ ತಿದ್ದುಪಡಿಗೆ ಮತ್ತೆ ಅವಕಾಶ ನೀಡಲಾಗಿದೆ.
ಇದನ್ನೂಓದಿ: Vehicle subsidy scheme-2023: ವಾಹನ ಖರೀದಿಸಲು ಸಹಾಯಧನಕ್ಕೆ ಅರ್ಜಿ ಅಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?
Last date for ration card correction- ರೇಷನ್ ಕಾರ್ಡ ತಿದ್ದುಪಡಿ ಎಷ್ಟು ದಿನ ಅವಕಾಶವಿದೆ?
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಟಣೆಯನ್ವಯ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಮತ್ತು ಕುಟುಂಬದ ಯಜಮಾನಿ ಬದಲಾವಣೆಗೆ 01 ಸೆಪ್ಟಂಬರ್ ರಿಂದ 10 ಸೆಪ್ಟಂಬರ್ ರವರೆಗೆ ಅವಕಾಶ ಮಾಡಿಲಾಗಿರುತ್ತದೆ.
Documents required for ration card correction- ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ?
ಈಗಾಗಲೇ ಪಡಿತರ ಚೀಟಿ ಹೊಂದಿರುವವರು ತಮ್ಮ ಕುಟುಂಬದ ಇತರೆ ಸದಸ್ಯರನ್ನು ಸೇರ್ಪಡಿಸಲು ಹೊಸದಾಗಿ ಸೇರಿಸಲು ಇಚ್ಚಿಸುವ ಸದಸ್ಯರ 1)ಆಧಾರ್ ಕಾರ್ಡ ಪ್ರತಿ 2)ಆದಾಯ ಮತ್ತು ಜಾತಿ ಪ್ರಮಾಣ ಪತ್ರ 3)ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಸಾರ್ವಜನಿಕರು ಅಗತ್ಯ ದಾಖಲಾತಿ ಸಮೇತ ಕಚೇರಿ ಕೆಲಸದ ಸಮಯದಲ್ಲಿ ನಿಮ್ಮ ಹತ್ತಿರದ ಗ್ರಾಮ್ ಒನ್(grama one) ,ಕರ್ನಾಟಕ ಒನ್(karnataka one) , CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬವುದು.
ಕುಟುಂಬದ ಯಜಮಾನಿ ಬದಲಾವಣೆಗೂ ಅವಕಾಶ:
ಪಡಿತರ ಚೀಟಿಯಲ್ಲಿರುವ ಕುಟುಂಬದ ಯಜಮಾನಿ ಮರಣ ಹೊಂದಿದಲ್ಲಿ ಅಥವಾ ಪಡಿತರ ಚೀಟಿಯಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ, ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕಾಗಿದ್ದರೆ ನಿಮ್ಮ ಪಡಿತರ ಚೀಟಿಯ ಕುಟುಂಬದ ಯಜಮಾನಿಯ ಹೆಸರನ್ನು ಬದಲಾಯಿಸಲು ಅವಕಾಶವಿರುತ್ತದೆ.
ಗಮನಿಸಿ: ಒಂದೊಮ್ಮೆ ಈಗ ಇರುವ ಕುಟುಂಬದ ಯಜಮಾನಿಯ ಹೆಸರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನಂತರ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಅರ್ಜಿ ಇತ್ಯರ್ಥ ಅಗುವವರೆಗೆ ಗೃಹಲಕ್ಷ್ಮಿ ಅರ್ಜಿಯ ಪ್ರಕ್ರಿಯೆಯನ್ನು ತಡೆಯಿಡಿಯಲಾಗುತ್ತದೆ. ಆದರೆ ಇಲ್ಲಿಯವರೆಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸದೇ ಇರುವವರು ಕುಟುಂಬದ ಯಜಮಾನಿ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬವುದು.
ಇದನ್ನೂಓದಿ: Free sewing machine- ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಅಹ್ವಾನ!
How to check ration card application status- ನೀವು ಸಲ್ಲಿಸಿದ ತಿದ್ದುಪಡಿ ಅರ್ಜಿಯನ್ನು ಆನ್ಲೈನ್ ನಲ್ಲಿ ಚೆಕ್ ಮಾಡಬವುದು?
ನಾಗರಿಕರು ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ತಿಳಿದುಕೊಳ್ಳಬವುದು.
Step-1: ಮೊದಲಿಗೆ ಈ https://ahara.kar.nic.in/lpg/ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು.
Step-2: ತದನಂತರ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಬಳಿಕ “ಪಡಿತರ ಚೀಟಿಯ ಬದಲಾವಣೆ ಕೋರಿಕೆಯ ಸ್ಥಿತಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Ration card number” ಮತ್ತು “Akcnowledgment No” ಅನ್ನು ಹಾಕಿ “GO” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ? ಮತ್ತು ಯಶ್ವಿಸಿಯಾಗಿ ಸಲ್ಲಿಕೆ ಆಗಿದಿಯೋ ಇಲ್ಲವೋ? ಎಂದು ಸಂಪೂರ್ಣ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬವುದಾಗಿದೆ.
ಪಡಿತರ ಚೀಟಿ ಕುರಿತು ಯಾವುದೇ ಸಲಹೆ ಅಥವಾ ದೂರು ನೀಡಲು ಆಹಾರ ಇಲಾಖೆಯ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬವುದು: 1967, 14445 ಅಥವಾ 1800-425-9339.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಅಂಕಣಗಳು:
Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?
How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?
Annabhagya August amount: ಅನ್ನಭಾಗ್ಯ ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.