Karnataka guarantee schemes: ಈ ಪಟ್ಟಿಯಲ್ಲಿ ಹೆಸರಿಲ್ಲದವರಿಗಿಲ್ಲ ಅನ್ನಭಾಗ್ಯ,ಗೃಹಲಕ್ಷ್ಮಿ ಹಣ! ಇಲ್ಲಿದೆ ಪರಿಷ್ಕೃತ ರೇಷನ್ ಕಾರ್ಡ ಪಟ್ಟಿ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಪರಿಷ್ಕೃತ ರೇಷನ್ ಕಾರ್ಡ ಪಟ್ಟಿಯನ್ನು(ration card list) ತನ್ನ ಅಧಿಕೃತ ಪಟ್ಟಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಇದನ್ನು ಹೇಗೆ ನಿಮ್ಮ ಮೊಬೈಲ್ ನಲ್ಲಿ ನೋಡಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಪರಿಷ್ಕೃತ ರೇಷನ್ ಕಾರ್ಡ ಪಟ್ಟಿಯನ್ನು(ration card list) ತನ್ನ ಅಧಿಕೃತ ಪಟ್ಟಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಇದನ್ನು ಹೇಗೆ ನಿಮ್ಮ ಮೊಬೈಲ್ ನಲ್ಲಿ ನೋಡಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಗ್ರಾಹಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ಸೈಟ್ ಭೇಟಿ ಮಾಡಿ ಪಡಿತರ ಚೀಟಿಯ ಪರಿಷ್ಕೃತ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬವುದು.

ration card list- ಪರಿಷ್ಕೃತ ರೇಷನ್ ಕಾರ್ಡ ಪಟ್ಟಿ ತಿಳಿಯುವ ವಿಧಾನ:

ಆಹಾರ ಇಲಾಖೆಯ ಈ https://ahara.kar.nic.in ಜಾಲತಾಣ ಭೇಟಿ ಮಾಡಿ ಪರಿಷ್ಕೃತ ರೇಷನ್ ಕಾರ್ಡ ಪಟ್ಟಿಯನ್ನು ತಿಳಿದುಕೊಳ್ಳುವ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ.

ವಿಶೇಷ ಸೂಚಿನೆ: ಮೊಬೈಲ್ ನಲ್ಲಿ ನೋಡುವವರು ಕ್ರೋಮ್ ಬ್ರೊಸರ್ ನಲ್ಲಿ  "Desktop view" ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ನೋಡಬೇಕು.

Step-1: ಮೊದಲಿಗೆ ಈ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ "ಇ-ಪಡಿತರ ಚೀಟಿ/E-Ration card" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. 

Step-2: ತದನಂತರ ಅಲ್ಲೇ ಕೆಳಗೆ ಕಾಣುವ ಹಳ್ಳಿ ಪಟ್ಟಿ/Show village list ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ಇಲ್ಲಿ ಗೋಚರಿಸುವ ಆಯ್ಕೆಯಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ ಮತ್ತು ಗ್ರಾಮ ಆಯ್ಕೆ ಮಾಡಿಕೊಂಡು "GO" ಮೇಲೆ ಕ್ಲಿಕ್ ಮಾಡಿ ರೇಷನ್ ಕಾರ್ಡ/ಪಡಿತರ ಚೀಟಿಯ ಗ್ರಾಮ/ಹಳ್ಳಿವಾರು ಅರ್ಹರ ಗ್ರಾಹಕರ  ಪರಿಷ್ಕೃತ ಪಟ್ಟಿಯನ್ನು ನೋಡಬವುದು.

ಇದನ್ನೂ ಓದಿ:  Free laptop scheme-2023: ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಸೆ.27 ಕೊನೆಯ ದಿನ.

ಪರಿಷ್ಕೃತ ಅನರ್ಹ ರೇಷನ್ ಕಾರ್ಡ ಪಟ್ಟಿ ತಿಳಿಯುವ ವಿಧಾನ:

ಗ್ರಾಹಕರು ಈ https://www.krushikamitra.com/Ration-card-ineligible-list ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ಅಂಕಣದಲ್ಲಿ ವಿವರಿಸಿರುವ ವಿಧಾನಗಳನ್ನು ಅನುಸರಿಸಿ ತಾಲ್ಲೂಕುವಾರು ಸೆಪ್ಟೆಂಬರ್ ತಿಂಗಳ ಅನರ್ಹ ರೇಷನ್ ಕಾರ್ಡ ಪಟ್ಟಿಯನ್ನು ತಿಳಿದುಕೊಳ್ಳಬವುದು.

Gruhalakshmi- ಗೃಹಲಕ್ಷ್ಮಿ ಹಣ ಇಲ್ಲಿಯವರೆಗೆ ಬಂದಿಲ್ಲವೇ ತಪ್ಪದೇ ಈ ಕೆಳಗೆ ತಿಳಿಸಿರುವ ಮಾಹಿತಿಯನ್ನು ತಿಳಿಯಿರಿ:

ರಾಜ್ಯಾದ್ಯಂತ ಈಗಾಗಲೇ ಕುಟುಂಬದ ಯಜಮಾನಿಯರ ಖಾತೆಗೆ 2000 ರೂ. ಮೊದಲನೆ ಕಂತಿನ ಹಣವನ್ನು ಹಣ ಜಮಾ ಆಗುತ್ತಿದೆ. ಒಂದೇ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಕೋಟ್ಯಾಂತರ ಮಹಿಳೆಯರಿಗೆ ಹಣ ಕಳುಹಿಸುತ್ತಿರುವುದರಿಂದ ಕೆಲವೊಂದು ತಾಂತ್ರಿಕ ಕಾರಣಗಳಿಂದ ಇನ್ನು ಒಂದಿಷ್ಟು ಮಹಿಳೆಯರಿಗೆ ಮೊದಲನೆ ಕಂತಿನ ಹಣ ಜಮಾ ಆಗಿರುವುದಿಲ್ಲ  ಅಥವಾ ನಿವೇನಾದರು ರೇಷನ್ ಕಾರ್ಡ್ ನ ಇ-ಕೆವೈಸಿ, ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಅಂತಹವರಿಗೂ ಹಣ ಜಮಾ ಆಗಿರುವುದಿಲ್ಲ. 

ಈ ಕೆಳಗೆ ತಿಳಿಸಿರುವ ಮಾಹಿತಿಯನ್ನು ತಿಳಿದು ನಿಮ್ಮ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ:

1) ನಿಮ್ಮ ರೇಷನ್ ಕಾರ್ಡ್ ಗೆ ಎಲ್ಲಾ ಸದಸ್ಯರ KYC ಅಪ್ಡೇಟ್ ಆಗಿದೆಯೇ  ಇಲ್ಲವೇ ಎಂದು ಒಮ್ಮೆ ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ  KYC ಅಪ್ಡೇಟ್ ಮಾಡಿಸಿಕೊಳ್ಳಿ.

2) ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ, ತೊಂದರೆ ಇದ್ದರೆ ಸರಿಪಡಿಸಿಕೊಳ್ಳಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಅಗಿರುವುದನ್ನು ಚೆಕ್ ಮಾಡಲು ಒಮ್ಮೆ ನಿಮ್ಮ ನಿಮ್ಮ ಬ್ಯಾಂಕ್ ಖಾತೆಯಿರುವ ಶಾಖೆಗೆ ಭೇಟಿ  ಮಾಡಿ. ಹೀಗೆ ಸರಿಪಡಿಸಿಕೊಂಡರೆ ಮುಂದಿನ ತಿಂಗಳಿನಿಂದ 2000 ರೂ ಪಡೆಯಬಹುದು.

4) ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ NPCI ಮ್ಯಾಪಿಂಗ್ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ , ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.

5) ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ನಲ್ಲಿರುವ ಹೆಸರು ಇತ್ಯಾದಿ ಮಾಹಿತಿ ಹೊಂದಾಣಿಕೆ ಅಗುತ್ತದೆಯೇ ಎನ್ನುವುದನ್ನು ಖತರಿಪಡಿಸಿಕೊಳ್ಳಿ, ಇಲ್ಲವಾದಲ್ಲಿ ಇದನ್ನು ತಿದ್ದುಪಡಿ ಕೂಡ ಮಾಡಿಸಬೇಕಾಗುತ್ತದೆ.

ಈ ಮೇಲೆ ತಿಳಿಸಿದ ಎಲ್ಲಾ ಮಾಹಿತಿ ಸರಿಯಿದ್ದು ನಿಮಗೆ ಹಣ ಜಮಾ ಅಗದಿದ್ದರೆ ನೀವು ಇನ್ನು ಸ್ವಲ್ಪ ದಿನ ಕಾಯಬೇಕಾಗುತ್ತದೆ ರಾಜ್ಯ ಸರಕಾರದಿಂದ ಮೊದಲನೇ ಕಂತಿನ ಹಣವನ್ನು 2ನೇ ಹಂತದಲ್ಲಿ ಶೀಘ್ರದಲ್ಲೇ ವರ್ಗಾವಣೆ ಮಾಡಲಾಗುವುದು ಎಂದು ಸಂಬಂದಪಟ್ಟ ಸಚಿವರು ಇತ್ತೀಚೇಗೆ ಮಾಹಿತಿ ಹಂಚಿಕೊಂಡಿದ್ದಾರೆ. ಏಕೆಂದರೆ ತಾಂತ್ರಿಕ ತೊಂದರೆಯಿದ ಅರ್ಜಿ ಸಲ್ಲಿಸಿದವರಲ್ಲಿ ಎಲ್ಲಾ ಮಾಹಿತಿ  ಸರಿ ಇದ್ದರು ಸಹ ಮೊದಲ  ಕಂತಿನ ಹಣ ಜಮಾ ಅಗಿರುವುದಿಲ್ಲ.

ರೇಷನ್ ಕಾರ್ಡ ಕುರಿತು ಇತರೆ ಅಂಕಣಗಳು: