- Advertisment -
HomeGovt SchemesRation Card List-2025: ತಾಲೂಕುವಾರು ಅನರ್ಹರ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ!

Ration Card List-2025: ತಾಲೂಕುವಾರು ಅನರ್ಹರ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ!

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಆಹಾರ ಇಲಾಖೆಯ(Ahara Ilake) ಅಧಿಕೃತ ಜಾಲತಾಣದಲ್ಲಿ ಪರಿಷ್ಕೃತ ಅನರ್ಹರ ರೇಷನ್ ಕಾರ್ಡದಾರರ(Ration Card) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಕುರಿತು ವಿವರವಾದ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಭಾರತದ ಪೌರತ್ವದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಪಡಿತರ ವ್ಯವಹಾರವು, ವರ್ಷಗಳಿಂದ ಲಕ್ಷಾಂತರ ಬಡವರ ಜೀವನಾಧಾರವಾಗಿದೆ. ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯನ್ನು ಮತ್ತು ನ್ಯಾಯಸಮ್ಮತ ಹಕ್ಕುದಾರರಿಗೆ ಪಡಿತರವನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್ಯಗಳು ನಿರಂತರ ಪರಿಷ್ಕರಣೆ ಮಾಡುತ್ತಾ ಬಂದಿವೆ. ಇದರ ಭಾಗವಾಗಿ, ಕರ್ನಾಟಕ ರಾಜ್ಯ ಸರ್ಕಾರವು ಪರಿಷ್ಕೃತ ಅನರ್ಹರ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: BBPM Schemes-ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ!

ಕೇಂದ್ರ ಮತ್ತು ರಾಜ್ಯ ಸರ್ಕಾರದ(Karnataka Food Department) ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಪ್ರತಿ ತಿಂಗಳು ಅಕ್ಕಿ,ರಾಗಿ ಇನ್ನಿತರೆ ದವಸ ಧಾನ್ಯಗಳನ್ನು ಉಚಿತವಾಗಿ ಒಂದು ಕುಟುಂಬಕ್ಕೆ ಇಂತಿಷ್ಟರಂತೆ ನೀಡಲಾಗುತ್ತದೆ.

ಇದಕ್ಕಾಗಿ ಹಳ್ಳಿ ಮಟ್ಟದಲ್ಲಿ ಆಹಾರ ಇಲಾಖೆಯ(Ineligible Ration Card) ನೇತೃತ್ವದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪನೆ ಮಾಡಲಾಗಿದ್ದು ಅರ್ಹ ಫಲಾನುಭವಿಗಳಿಗೆಯೇ ಈ ಯೋಜನೆಯ ಸೌಲಭ್ಯ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲು ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಸಹ ಮಾರ್ಗಸೂಚಿಯ ಪ್ರಕಾರ ಪಡಿತರ ಚೀಟಿ ಪಡೆಯಲು ಅರ್ಹರಿಲ್ಲದ ಫಲಾನುಭವಿಗಳನ್ನು ಗುರುತಿಸಿ ಅಂತಹ ಕಾರ್ಡಗಳನ್ನು ರದ್ದು ಮಾಡಲಾಗುತ್ತದೆ.

ಇದನ್ನೂ ಓದಿ: Gig Workers Bill-ಗಿಗ್ ಕಾರ್ಮಿಕರಿಗೆ ಭರ್ಜರಿ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ವಿವರ!

Ineligible Ration Card List-2025: ಅನರ್ಹ ರೇಶನ್ ಕಾರ್ಡ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ:

ರೇಷನ್ ಕಾರ್ಡ ಹೊಂದಿರುವ ಗ್ರಾಹಕರು ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ತಮ್ಮ ಮನೆಯಲ್ಲಿ ಕುಳಿತು ಅನರ್ಹ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಬಹುದು. ಪ್ರತಿ ತಿಂಗಳು ಸಹ ಕಾಲ ಕಾಲಕ್ಕೆ ತಾಲೂಕುವಾರು ಅನರ್ಹ ರೇಶನ್ ಕಾರ್ಡದಾರರ ಪಟ್ಟಿಯನ್ನು ಈ ತಂತ್ರಾಂಶದಲ್ಲಿ ಪ್ರಕಟಗೊಳಿಸಲಾಗುತ್ತದೆ.

Step-1: ಮೊಟ್ಟ ಮೊದಲಿಗೆ ಈ Ineligible Ration Card List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ration card list-2025

Step-2: ತದನಂತರ ಇಲ್ಲಿ ಮುಖಪುಟದಲ್ಲಿ ಗೋಚರಿಸುವ “ಇ-ಸೇವೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: “ಇ-ಸೇವೆಗಳು” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ಪುಟದಲ್ಲಿ ಎಡಬದಿಯಲ್ಲಿ ಕಾಣುವ “ಇ-ಪಡಿತರ ಚೀಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-4: ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು ಮತ್ತು ವರ್ಷ ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲ್ಲೂಕಿನಲ್ಲಿ ಆ ತಿಂಗಳಿನಲ್ಲಿ ಅನರ್ಹ/ರದ್ದುಗೊಳಿಸಲಾದ ರೇಶನ್ ಕಾರ್ಡದಾರರ ಪಟ್ಟಿ ತೆರೆದುಕೊಳ್ಳುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಇಲ್ಲವಾ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Ration Card e-KYC-ಇ-ಕೆವೈಸಿ ಅಗದಿದ್ದಲ್ಲಿ ರೇಷನ್ ವಿತರಣೆ ಸ್ಥಗಿತ:

ಆಹಾರ ಇಲಾಖೆಯ ಅಧಿಕೃತ ಪ್ರಕಟಣೆಯನ್ವಯ ಒಂದು ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರು ಅಗತ್ಯ ವಿವರವನ್ನು ಮತ್ತು ಬೆರಳಚ್ಚನ್ನು ತಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಯನ್ನು ನೇರವಾಗಿ ಭೇಟಿ ಮಾಡಿ ನೀಡಿ ರೇಶನ್ ಕಾರ್ಡ ಇ-ಕೆವೈಸಿಯನ್ನು ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಇಲ್ಲಿಯವರೆಗೆ ಇ-ಕೆವೈಸಿಯನ್ನು ಮಾಡಿಕೊಳ್ಳದೇ ಇರುವವರಿಗೆ ಪ್ರತಿ ತಿಂಗಳು ನೀಡುವ ರೇಷನ್ ಅನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

How To Apply For Ration Card e-KYC: ಇ-ಕೆವೈಸಿ ಅನ್ನು ಎಲ್ಲಿ ಮಾಡಿಸಬೇಕು?

ಇಲ್ಲಿಯವರೆಗೆ ರೇಶನ್ ಕಾರ್ಡ ನಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿಯನ್ನು ಮಾಡಿಸಿಕೊಳ್ಳದೇ ಇರುವವರು ತಪ್ಪದೇ ಕೂಡಲೇ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ನ್ಯಾಯಬೆಲೆ ಅಂಗಡಿಯನ್ನು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಬೆರಳಚ್ಚನ್ನು ನೀಡಿ ಇ-ಕೆವೈಸಿಯನ್ನು ತಪ್ಪದೇ ಮಾಡಿಕೊಳ್ಳಿ.

ಇದನ್ನೂ ಓದಿ: Gas Dealership-ಗ್ಯಾಸ್ ವಿತರಣಾ ಡೀಲರ್ ಶಿಪ್ ಪಡೆಯಲು ಅರ್ಜಿ ಆಹ್ವಾನ!

Ration Card e-KYC Status-ಈಗಾಗಲೇ ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ರೇಷನ್ ಕಾರ್ಡ ಅನ್ನು ಹೊಂದಿರುವ ಸಾರ್ವಜನಿಕರು Ration Card E-KYC Status ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆ ತಂತ್ರಾಂಶವನ್ನು ಭೇಟಿ ಮಾಡಿ “ಇ-ಸ್ಥಿತಿ” ಕಾಲಂ ನಲ್ಲಿ ಕಾನುವ “ಹಾಲಿ ಪಡಿತರ ಚೀಟಿಯ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “e-KYC Status”ಅನ್ನು ನಿಮ್ಮ ಮೊಬೈಲ್ ನಲ್ಲೇ ತಿಳಿಯಬಹುದು.

Karnataka Food Department-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಹಾರ ಇಲಾಖೆಯ ವೆಬ್ಸೈಟ್- CLICK HERE

- Advertisment -
LATEST ARTICLES

Related Articles

- Advertisment -

Most Popular

- Advertisment -