- Advertisment -
HomeGovt SchemesRation Card News-ರೇಶನ್ ಕಾರ್ಡ ಹೊಂದಿರುವವರು ಈ ಕೆಲಸ ಮಾಡಲು ಇನ್ನು 3 ದಿನ ಮಾತ್ರ...

Ration Card News-ರೇಶನ್ ಕಾರ್ಡ ಹೊಂದಿರುವವರು ಈ ಕೆಲಸ ಮಾಡಲು ಇನ್ನು 3 ದಿನ ಮಾತ್ರ ಬಾಕಿ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿ(Ration Card Latest News) ಹೊಂದಿರುವ ಗ್ರಾಹಕರಿಗೆ ಕೆಲವು ಆನ್ಲೈನ್ ಸೇವೆಗಳನ್ನು ಪಡೆಯಲು ಈ ವರ್ಷಕ್ಕೆ 31 ಡಿಸೆಂಬರ್ 2024 ಕೊನೆಯ ದಿನಾಂಕ ನಿಗದಿಪಡಿಸಿದ್ದು ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಗ್ರಾಮ ಒನ್ ಕಂಪ್ಯೂಟರ್ ಸೆಂಟರ್(Grama one) ನಲ್ಲಿ ಅರ್ಹ ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ರೇಷನ್ ಕಾರ್ಡನಲ್ಲಿ ವೈಯಕ್ತಿಕ ವಿವರ ಮತ್ತು ಸದಸ್ಯರ ವಿವರ, ಹೊಸ ಸದಸ್ಯರ ಸೇರ್ಪಡೆ ಮತ್ತು ತೆಗೆದುಹಾಕುವುದು, ಇ-ಕೆವೈಸಿ, ವಿಳಾಸ ಬದಲಾವಣೆ ಹಾಗೂ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಈ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಲು ವರ್ಷಕ್ಕೆ 31 ಡಿಸೆಂಬರ್ 2024 ಕೊನೆಯ ದಿನಾಂಕವಾಗಿರುತ್ತದೆ.

ರೇಷನ್ ಕಾರ್ಡ(Paditara Cheeti tiddupadi) ವಿವರ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಯಾವ ಕ್ರಮ ಅನುಸರಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳು ಯಾವುವು? ಯಾವೆಲ್ಲ ಬಗ್ಗೆಯ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

How to apply for Paditara Cheeti Tiddupadi-ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ರೇಷನ್ ಕಾರ್ಡನಲ್ಲಿ ಯಾವುದೇ ಬಗ್ಗೆಯ ತಿದ್ದುಪಡಿಯನ್ನು ಮಾಡಿಸಲು ನಿಮ್ಮ ಹಳ್ಳಿಗೆ ಹತ್ತಿರದಲ್ಲಿರುವ ಗ್ರಾಮ್ ಒನ್ ಕಂಪ್ಯೂಟರ್ ಸೆಂಟರ್ ಅನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ಕಾಗದ ಪತ್ರಗಳನ್ನು ಒದಗಿಸಿ ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

Last Date For Application-ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:

ಆಸಕ್ತ ಗ್ರಾಹಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಲು 31 ಡಿಸೆಂಬರ್ 2024 ಅಂತಿಮ ದಿನಾಂಕವಾಗಿರುತ್ತದೆ.

ಇದನ್ನೂ ಓದಿ: Parihara Farmer list-ತಾಂತ್ರಿಕ ಸಮಸ್ಯೆಯಿಂದ ಬೆಳೆ ಪರಿಹಾರ ಜಮಾ ಅಗದ ರೈತರ ಪಟ್ಟಿ ಬಿಡುಗಡೆ!

Required Documents-ಅರ್ಜಿ ಸಲ್ಲಿಸಲು ಒದಗಿಸಬೇಕಾದ ಅಗತ್ಯ ದಾಖಲೆಗಳು ಯಾವುವು?

(1) ಪಡಿತರ ಚೀಟಿದಾರರ ಆಧಾರ್ ಕಾರ್ಡ/ Adhaar Card
(2) ಅರ್ಜಿದಾರ ಕುಟುಂಬದ ರೇಷನ್ ಕಾರ್ಡ/ Ration Card
(3) ಅರ್ಜಿ ಸಲ್ಲಿಸುವ ಸಮಯದಲ್ಲಿ ಸದಸ್ಯರು ಖುದ್ದು ಸ್ಥಳದಲ್ಲಿ ಇರಬೇಕು/Ration Card Member
(4) ಮೊಬೈಲ್ ಸಂಖ್ಯೆ/ Mobile Number

Ration Card Application-ಯಾವೆಲ್ಲ ಬಗ್ಗೆಯ ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರದಲ್ಲಿ ಅವಕಾಶ ಮಾಡಿಕೊಡಲಾಗಿದೆ?

(1) ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸಲು ಅವಕಾಶವಿರುತ್ತದೆ.
(2) ಪಡಿತರ ಚೀಟಿಯಿಂದ ಸದಸ್ಯರ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು.
(3) ರ‍ೇಷನ್ ಕಾರ್ಡನಲ್ಲಿ ನಮೂದಿಸಿರುವ ವಿಳಾಸವನ್ನು ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು.
(4) ಪ್ರತಿ ತಿಂಗಳು ಆಹಾರ ಧಾನ್ಯವನ್ನು ಪಡೆಯಲು ನ್ಯಾಯಬೆಲೆ ಅಂಗಡಿ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.
(5) ಪಡಿತರ ಚೀಟಿಯಲ್ಲಿರುವ ಸದಸ್ಯರ ಇ-ಕೆವೈಸಿ ಮಾಡಲು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Svavalambi App- ಸಾರ್ವಜನಿಕರಿಗೆ ಭರ್ಜರಿ ಸಿಹಿ ಸುದ್ದಿ ತಮ್ಮ ಮೊಬೈನಲ್ಲೇ ಜಮೀನಿನ ಸರ್ವೆ ಮಾಡಿ ಪೋಡಿ ಮಾಡಿಕೊಳ್ಳಲು ಅವಕಾಶ! ಇಲ್ಲಿದೆ ವೆಬ್ಸೈಟ್ ಲಿಂಕ್!

Ration card arji status check- ಒಮ್ಮೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಚೆಕ್ ಮಾಡುವ ವಿಧಾನ:

ಗ್ರಾಹಕರು ಒಮ್ಮೆ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಪಡಿತರ ಚೀಟಿ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಈ ಲೇಖನದ ಕೊನೆಯಲ್ಲಿ ಹಾಕಿರುವ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ತಮ್ಮ ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ ಮೊಬೈಲ್ ನಲ್ಲೇ ಪಡಿತರ ಚೀಟಿ ತಿದ್ದುಪಡಿಗೆ ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಬಹುದು.

ಆಹಾರ ಇಲಾಖೆಯ ವೆಬ್ಸೈಟ್ ಲಿಂಕ್- Ration card tiddupadi arji status check

ಅನುಸರಿಸಬೇಕಾದ ವಿಧಾನ:

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Ration Card Status Check ಮಾಡಿ ಅಧಿಕೃತ ಆಹಾರ ಇಲಾಖೆಯ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: School Holiday in Karnataka: ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ! ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ!

Ration Card Status

ಇದನ್ನೂ ಓದಿ: State Government Total Vacancy- ರಾಜ್ಯ ಸರಕಾರದಲ್ಲಿ ಇಲಾಖಾವಾರು ಖಾಲಿಯಿರುವ ಹುದ್ದೆಗಳ ವಿವರ ಬಿಡುಗಡೆ! ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ!

Step-2: ಬಳಿಕ ಈ ಪೇಜ್ ನಲ್ಲಿ “ಇ-ಸ್ಥಿತಿ” ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ ಯಾವ ವಿಭಾಗದ ಕೆಳಗೆ ಬರುತ್ತದೆ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ(ಬೆಂಗಳೂರು ವಿಭಾಗ, ಮೈಸೂರು ವಿಭಾಗ, ಕಲಬುರಗಿ ವಿಭಾಗ)

Ration Card Online Status

Step-3: ಒಂದು ವಿಭಾಗದ ಮೇಲೆ ಕ್ಲಿಕ್ ಮಾಡಿದ ಬಳಿಕ ಈ ಕೆಳಗಿನ ಚಿತ್ರದಲ್ಲಿ ತೋರಿಸಿದ ಪೇಜ್ ತೆರೆದುಕೊಳ್ಳುತ್ತದೆ ಇದರಲ್ಲಿ “ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ(Ration Card Amendment Request Status)” ಬಟನ್ ಮೇಲೆ ಕ್ಲಿಕ್ ಮಾಡಿ “RC No/ RC ನಂ” ಕಾಲಂ ನಲ್ಲಿ ನಿಮ್ಮ ರೇಶನ್ ಕಾರ್ಡ ಸಂಖ್ಯೆಯನ್ನು ಹಾಕಿ ನಂತರ ಕೆಳಗೆ ಕಾಣುವ “Akcnowledgment No/ Akcnowledgment ನಂ” ಕಾಲಂ ನಲ್ಲಿ ಸಂಖ್ಯೆಯನ್ನು ನಮೂದಿಸಿ “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಡಿತರ ಚೀಟಿ ತಿದ್ದುಪಡಿ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿ ತೋರಿಸುತ್ತದೆ.

Ration Card status
- Advertisment -
LATEST ARTICLES

Related Articles

- Advertisment -

Most Popular

- Advertisment -