New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅವಶ್ಯವಿರುವ ಗ್ರಾಮ ಪ್ರದೇಶದಲ್ಲಿ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.

New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?
New ration shop application-2023

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅವಶ್ಯವಿರುವ ಗ್ರಾಮ ಪ್ರದೇಶದಲ್ಲಿ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.

ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಯಾರೆಲ್ಲೆ ಅರ್ಜಿ ಸಲ್ಲಿಸಬವುದು? ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಎಷ್ಟು ಹಣವನ್ನು ಸರಕಾರ ನೀಡುತ್ತದೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. 

New ration shop application-ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಆದಿವಾಸಿ, ನೇಕಾರ, ಮಹಿಳಾ, ಅಂಗವಿಕಲ ವಿಕಲಚೇತನರು ಸೇರಿದಂತೆ ರಾಜ್ಯ ಸರ್ಕಾರದ ಸ್ವಾಮ್ಯದ ನಿಗಮ, ಸಂಸ್ಥೆ, ಗ್ರಾಮ ಹಾಗೂ ಸ್ಥಳೀಯ ಪಂಚಾಯಿತಿಗಳು, ಕೃಷಿ ಪತ್ತಿನ ಸಂಘ, ತೋಟಗಾರಿಕೆ, ಪ್ರಾಥಮಿಕ ಬಳಕೆದಾರರು, ವಿವಿಧ ಸಹಕಾರಿ ಸಂಘಗಳು, ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು,  ಹಾಗೂ ತೃತೀಯ ಲಿಂಗಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

fruits ID: ರೈತರು ನಿಮ್ಮ FID ನಂಬರ್ ನಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ? ಎಂದು ನಿಮ್ಮ ಮೊಬೈಲ್‌ನಲ್ಲೇ ತಿಳಿಯಿರಿ!

Required documents for new ration shop- ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ?

  • ಅರ್ಜಿ ಸಲ್ಲಿಸಲು ಸಹಕಾರಿ ಸಂಘಗಳು ಕನಿಷ್ಠ 3 ವರ್ಷದ ಹಿಂದೆ ನೋಂದಾಯಿತರಾಗಿರಬೇಕು. 
  • ಕನಿಷ್ಠ ರೂ.2 ಲಕ್ಷರೂಪಾಯಿಗಳ ಬ್ಯಾಂಕ್ ಮೊತ್ತ ಬ್ಯಾಲೆನ್ಸ್ ಹೊಂದಿರಬೇಕು. 
  • ಇದೇ ಮಾದರಿಯಲ್ಲಿ ಸ್ತ್ರೀ ಸಹಾಯ ಸಂಘಗಳು ರೂ.1 ಲಕ್ಷ ಹಾಗೂ ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಕನಿಷ್ಠ ರೂ.50 ಸಾವಿರ ಬ್ಯಾಂಕ್ ಠೇವಣಿ ಹೊಂದಿರಬೇಕು.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಹತ್ತನೇ ತರಗತಿ ಪಾಸಾಗಿರಬೇಕು. (ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಮಾತ್ರ).
  • ಸಹಕಾರ ಸಂಘ, ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳಾದರೆ ನೋಂದಾವಣೆ ಪತ್ರ, ಸಹಕಾರ ಸಂಘ ಸಂಸ್ಥೆಯಾದರೆ ಕಳೆದ 3 ವರ್ಷಗಳ ದೃಢೀಕೃತ ಲೆಕ್ಕ ಪರಿಶೋಧನಾ ವರದಿ, ಬೈಲಾ, ಪ್ರತನಿಧಿ ನೇಮಕ ನಿರ್ಣಯ, ಅರ್ಜಿ ಸಲ್ಲಿಸಿದ ಸಹಕಾರಿ ಸಂಘದ ಮೇಲೆ ಯಾವುದೆ ವಿಚಾರಣೆ, ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಢೀಕರಣ ಪತ್ರ, ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ ಕರಾರು ಪತ್ರ, ಹಣಕಾಸು ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ 3 ಭಾವಚಿತ್ರ, ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಪ್ರಕರಣಗಳು ಹೊಂದಿಲ್ಲದಿರುವ ಬಗ್ಗೆ ಪೋಲಿಸ್ ಇಲಾಖೆಯಿಂದ ಪೋಲಿಸ್ ವೆರಿಪಿಕೇಷನ್ ರಿಪೋರ್ಟ್‍ನ್ನು ಪಡೆದು ಕಡ್ಡಾಯವಾಗಿ ಸಲ್ಲಿಸಬೇಕು.

ಇದನ್ನೂ ಓದಿ: DBT Status App-ಅರ್ಜಿದಾರರಿಗೆ ಗ್ಯಾರಂಟಿ ಯೋಜನೆಗಳ ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್!

ಎಲ್ಲಿ ಅರ್ಜಿ ಸಲ್ಲಿಸಬೇಕು?

ಬಹುತೇಕ ಜಿಲ್ಲೆಗಳಲ್ಲಿ ಈ ತಿಂಗಳು ಕೊನೆಯ ದಿನಾಂಕವಾಗಿದ್ದು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಅರ್ಹ ಅರ್ಜಿದಾರರು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ನಮೂನೆ-ಎ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ನಿಮ್ಮ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು.

ನ್ಯಾಯಬೆಲೆ ಅಂಗಡಿ ನಡೆಸುವವರೆಗೆ ಎಷ್ಟು ಹಣ  ಪಾವತಿ ಮಾಡಲಾಗುತ್ತದೆ?

ನ್ಯಾಯಬೆಲೆ ಅಂಗಡಿಯನ್ನು ನಡೆಸುವ ಪ್ರತಿನಿಧಿಗೆ ತಿಂಗಳಿಗೆ ಇಂತಿಷ್ಟು ಹಣ ಪಾವತಿ ಮಾಡುವುದರ ಜೊತೆಗೆ ಆ ಭಾಗದಲ್ಲಿರುವ ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಗೌರವ ಧನ ನೀಡಲಾಗುತ್ತದೆ.

ಪ್ರಸ್ತುತ ಪಡಿತರ ವಿತರಣಾ ವ್ಯವಸ್ಥೆಯು ಸಂಪೂರ್ಣ ಗಣಕೀಕರಣ ಮಾಡಲಾಗಿದೆ:

ಪ್ರಸ್ತುತ ರಾಜ್ಯದ್ಯಂತ ಪಡಿತರ ವಿತರಣಾ ವ್ಯವಸ್ಥೆಯು ಸಂಪೂರ್ಣ ಗಣಕೀಕರಣ ಮಾಡಲಾಗಿದ್ದು ಅರ್ಜಿ ಸಲ್ಲಿಸುವ ಪ್ರತಿನಿಧಿಯು ಕಂಪ್ಯೂಟರ್ ಜ್ಞಾನ ಹೊಂದಿರುವುದು ಅತ್ಯವಶಕವಾಗಿದೆ.

ಏಕೆಂದರೆ ಸಾರ್ವಜನಿಕ ವಿತರಣಾ ಪದ್ಧತಿಯ ಗಣಕೀಕರಣದಡಿ ಪಡಿತರ ಚೀಟಿದಾರರ ದತ್ತಾಂಶವನ್ನು ಸಿದ್ಧಪಡಿಸಲಾಗಿರುತ್ತದೆ. ಪ್ರತಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಜೋಡಣೆಗೊಳಿಸಲಾಗಿದ್ದು. 

ಪ್ರತಿ ತಿಂಗಳು ಗ್ರಾಹಕರಿಗೆ ವಿತರಣೆಯಾಗುವ ಆಹಾರ ಧಾನ್ಯದ ವಿವರವು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿರುತ್ತದೆ. 

ಇದನ್ನೂ ಓದಿ: MSP price-2023: ಬೆಂಬಲ ಬೆಲೆಯಲ್ಲಿ ರಾಗಿ,ಜೋಳ,ಭತ್ತ ಖರೀದಿ! ಬೆಲೆ ಎಷ್ಟು? ನೊಂದಣಿ ಪ್ರಕ್ರಿಯೆ ಹೇಗಿರಲಿದೆ?

ಸಂಘ-ಸಂಸ್ಥೆಗಳಿಗೆ ಮೊದಲ ಆದ್ಯತೆ:

ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸನ್ನಿವೇಶಗಳಲ್ಲಿ ಆ ಭಾಗದಲ್ಲಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ ಅಥವಾ ಕಂಪನಿಗಳು ಅಥವಾ ಗ್ರಾಮ ಪಂಚಾಯ್ತಿ /ನಗರ ಸ್ಥಳೀಯ ಸಂಸ್ಥೆಗಳು, ಪ್ರಾಥಮಿಕ ಕೃಷಿ ಸಹಕಾರಸಂಘ, ತೋಟಗಾರಿಕಾ ಬೆಳೆಗಾರರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘ ನಿಯಮಿತ, ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಕೆ.ಎಂ.ಎಫ್., ತಾಲ್ಲೂಕು ಕೃಷಿ ಪ್ರಾಥಮಿಕ ಸಹಕಾರ ಮಾರುಕಟ್ಟೆ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಮಾನ್ಯತೆ ಪಡೆದ ಸ್ತ್ರೀಶಕ್ತಿ ಗುಂಪುಗಳು/ಸ್ವಸಹಾಯ ಸಂಘಗಳು ಮುಂದೆ ಬಂದರೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದವರಿಗಿಂತ ಇಂತಹ ಅರ್ಜಿಗಳಿಗೆ ಮೊದಲ ಆದ್ಯತೆಯನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Ahara elake website-ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಿ: click here