ಆಹಾರ ಇಲಾಖೆಯ ನೂತನ ಪ್ರಕಟಣೆಯ ಪ್ರಕಾರ ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ(ration card ekyc) ಅಗದಿದ್ದಲ್ಲಿ ಅಂತಹ ಸದಸ್ಯರನ್ನು ಪಡಿತರ ಚೀಟಿಯಿಂದ ಕೈಬಿಡಲಾಗುವುದು ಎಂದು ಸೂಚಿಸಲಾಗಿದೆ.
ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆಯ ಹೊಸ ವಿಧಾನ ಮತ್ತು ಪ್ರಸ್ತುತ ನಿಗದಿಪಡಿಸಿರುವ ಕೊನೆಯ ದಿನಾಂಕ ಯಾವುದು? ಈಗಾಗಲೇ e-KYC ಮಾಡಿಸಿದ ಗ್ರಾಹಕರು ತಮ್ಮ ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲಾ ಗ್ರಾಹಕರು ಮಾಸಿಕವಾಗಿ ಆಹಾರ ಧಾನ್ಯವನ್ನು ಪಡೆಯಲು e-kyc ಅನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ: Mahila nigama yojana-ಉದ್ಯೋಗಿನಿ ಯೋಜನೆಯಡಿ 1.5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
last date for ration cad kyc- ಇ-ಕೆವೈಸಿ ಮಾಡಲು ಕೊನೆಯ ದಿನಾಂಕ ನಿಗದಿ:
ಆಹಾರ ಇಲಾಖೆಯ ಅಧಿಕೃತ ನೂತನ ಪ್ರಕಟಣೆಯನ್ವಯ 31 ಆಗಸ್ಟ್ 2024 ಇ-ಕೆವೈಸಿ ಮಾಡಲು ಕೊನೆಯ ದಿನಾಂಕವಾಗಿದೆ.
ಇ-ಕೆವೈಸಿ ಮಾಡದಿದ್ದಲ್ಲಿ ಸದಸ್ಯತ್ವ ರದ್ದು:
ಒಂದೊಮ್ಮೆ ಗ್ರಾಹಕರು ಕೊನೆಯ ದಿನಾಂಕದ ಒಳಗಾಗಿ ಇ-ಕೆವೈಸಿ ಮಾಡದಿದ್ದಲ್ಲಿ ಪಡಿತರ ಚೀಟಿಯಲ್ಲಿನ ಸದಸ್ಯತ್ವ ರದ್ದು ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ration card kyc new method-ಇ-ಕೆವೈಸಿ ಮಾಡಿಸಲು ನೂತನ ಕ್ರಮ:
ಗ್ರಾಹಕರು ನ್ಯಾಯಬೆಲೆ ಅಂಗಡಿಯಲ್ಲಿ e-KYC ಮಾಡಿಸಲು ಬೆರಳಚ್ಚು ಬಾರದೆ ಸಾಧ್ಯವಾಗದೇ ಇದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್ , ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ OTP ಆಧಾರಿತವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳಬಹುದು.
ಇದನ್ನೂ ಓದಿ: Krushi Pumpset-ಕೃಷಿ ಪಂಪ್ ಸೆಟ್ ಹೊಂದಿರುವವರು ತಪ್ಪದೇ ಈ ಕೆಲಸವನ್ನು ಮಾಡುವುದು ಕಡ್ಡಾಯ!
ration card ekyc status check- ಈಗಾಗಲೇ e-kyc ಮಾಡಿಸಿದವರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳುವ ವಿಧಾನ:
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.
Step-1: ಪ್ರಥಮದಲ್ಲಿ ಈ ekyc status check ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಜಾಲತಾಣವನ್ನು ಭೇಟಿ ಮಾಡಬೇಕು.
Step-2: ಇದಾದ ಬಳಿಕ ಈ ಪೇಜ್ ನಲ್ಲಿ ಇ-ಸೇವೆಗಳು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ ನಂತರ ಇ-ಸ್ಥಿತಿ ಬಟನ್ ಮೇಲೆ ಕ್ಲಿಕ್ ಮಾಡಿ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ಬಟನ್ ಮೇಲೆ ಕ್ಲಿಕ್ ಮಾಡಿರಿ.
ಇದನ್ನೂ ಓದಿ: Indian Air Force Jobs-2024: ವಾಯುಪಡೆಯಲ್ಲಿ 12th ಪಾಸಾದವರಿಗೆ ಹಲವು ಹುದ್ದೆಗಳ ಅವಕಾಶ!
Step-3: ಬಳಿಕ ಈ ಪುಟದಲ್ಲಿ ಮೂರು ಆಯ್ಕೆಗಳು ಗೋಚರಿಸುತ್ತವೆ ಇಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವ ಬಟನ್ ಮೇಲೆ ಕ್ಲಿಕ್ ಮಾಡಿ ತದನಂತರ “ಪಡಿತರ ಚೀಟಿ ವಿವರ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ with out otp ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಶನ್ ಕಾರ್ಡ ನಂಬರ್ ಅನ್ನು ಹಾಕಿ Go ಬಟನ್ ಮೇಲೆ ಕ್ಲಿಕ್ ಮಾಡಿದರೆ Member count ಆಯ್ಕೆ ವಿಭಾಗದಲ್ಲಿ e-KYC Done ಎಂದು ತೋರಿಸಿ ಎಲ್ಲಾ ಸದಸ್ಯರ ಸಂಖ್ಯೆ ಕಾಣಿಸಿದರೆ ನಿಮ್ಮ ರೇಷನ್ ಕಾರ್ಡ ನಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಅಗಿದೆ ಎಂದು ಅರ್ಥ.
ಇದನ್ನೂ ಓದಿ: Vidyarthi vethana-2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!
ಒಂದೊಮ್ಮೆ ರೇಷನ್ ಕಾರ್ಡ ನಲ್ಲಿ 4 ಜನ ಸದಸ್ಯರಿದ್ದು 3 ಜನ e-KYC Done ಕಾಲಂ ಕೆಳಗೆ ತೋರಿಸಿ eKyc Remaining ಕಾಲಂ ನಲ್ಲಿ 1 ಎಂದು ತೋರಿಸಿದರೆ ಇನ್ನು ಒಬ್ಬರ ಕೆವೈಸಿ ಮಾಡುವುದು ಬಾಕಿ ಉಳಿದಿದೆ ಎಂದು ತಿಳಿಯಬೇಕು.
ಇದನ್ನೂ ಓದಿ: free vermicompost and dairy training- ಉಚಿತ ಡೈರಿ ಮತ್ತು ಎರೆಹುಳು ಗೊಬ್ಬರ ಉತ್ಪಾದನೆ ತರಬೇತಿಗೆ ಅರ್ಜಿ!