ಕೇಂದ್ರ ಸರಕಾರದ ಕನಿಷ್ಥ ಬೆಂಬಲ ಬೆಲೆ(Rice MSP) ಯೋಜನೆಯಡಿ ಭತ್ತ ಬೆಳೆದ ರೈತರಿಂದ ನೇರವಾಗಿ ಭತ್ತವನ್ನು ಖರೀದಿ(Bhata kharidi kendra) ಮಾಡಲು ಖರೀದಿ ಕೇಂದ್ರಗಳನ್ನು ತೆರೆದು ರೈತರ ನೋಂದಣಿಯನ್ನು ಮಾಡಿಕೊಳ್ಳಲು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಡಳಿತದಿಂದ ತಯಾರಿಯನ್ನು ನಡೆಸಲಾಗುತ್ತಿದೆ.
ಭತ್ತ ಬೆಳೆದ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಭತ್ತವನ್ನು ಖರೀದಿ ಮಾಡಲು ಸರಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ದತೆ ನಡೆಸಲಾಗಿದ್ದು ಬೆಂಬಲ ಬೆಲೆಯಲ್ಲಿ ಭತ್ತವನ್ನು ಮಾರಾಟ ಮಾಡಲು ರೈತರು ಯಾವ? ಕ್ರಮ ಅನುಸರಿಸಬೇಕು. ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Land owner details- ಒಂದೆರಡು ಕ್ಲಿಕ್ ನಲ್ಲಿ ಜಮೀನಿನ ಮಾಲೀಕರ ವಿವರ ತಿಳಿಯಬಹುದು!
ಭತ್ತಕ್ಕೆ ಎಷ್ಟು ಬೆಂಬಲ ಬೆಲೆ(bembala bele) ನಿಗದಿ ಮಾಡಲಾಗಿದೆ? ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದಾಗ ಎಷ್ಟು ದಿನಗಳಲ್ಲಿ ಹಣ ಪಾವತಿ ಅಗುತ್ತದೆ? ನೋಂದಣಿ ಮಾಡಿಕೊಳ್ಳುವ ವಿಧಾನ ಹೇಗಿರುತ್ತದೆಈ ಕುರಿತು ಒಂದಿಷ್ಟು ಮಾಹಿತಿ ಈ ಕೆಳಗಿನಂತಿದೆ.
Rice msp price-2024: ಭತ್ತಕ್ಕೆ ನಿಗದಿಪಡಿಸಿದ ಬೆಂಬಲ ಬೆಲೆ:
ಪ್ರತಿ ವರ್ಷ ಕೇಂದ್ರ ಸರಕಾರದಿಂದ ಬೆಂಬಲ ಬೆಲೆಯಲ್ಲಿ ಭತ್ತವನ್ನು ಖರೀದಿ ಮಾಡಲಾಗುತ್ತದೆ ಇದಕ್ಕೆ ಮುಂಚಿತವಾಗಿ ಬೆಲೆಯನ್ನು ನಿಗದಿ ಮಾಡಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಇದರಂತೆ ಈ ವರ್ಷ ರೈತರಿಂದ ಖರೀದಿ ಮಾಡುವ ಒಂದು ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ರೂ 2,300/- ದರ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Raagi Msp price-ರೈತರಿಗೆ ಸಿಹಿ ಸುದ್ದಿ ಕ್ವಿಂಟಲ್‌ಗೆ ₹4,290 ರೂ ರಂತೆ ರಾಗಿ ಖರೀದಿ!
Rice MSP- ಬೆಂಬಲ ಬೆಲೆಯಲ್ಲಿ ಭತ್ತವನ್ನು ಮಾರಾಟ ಮಾಡಲು ಏನು ಮಾಡಬೇಕು?
ಭತ್ತ ಬೆಳೆದ ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಸರಕಾರದಿಂದ ವಿವಿಧ ಜಿಲ್ಲೆಗಳಲ್ಲಿ ತೆರೆಯುವ ಭತ್ತ ಖರೀದಿ ಕೇಂದ್ರಗಳನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಭತ್ತ ಮಾರಾಟ ಮಾಡಲು ನೋಂದಣಿಯನ್ನು ಮಾಡಿಕೊಳ್ಳಬೇಕು ತದನಂತರ ಖರೀದಿ ಕೇಂದ್ರದಲ್ಲಿ ನಿಗದಿಪಡಿಸುವ ದಿನಾಂಕದಂದ್ಯ್ ಭತ್ತವನ್ನು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು.
Documents- ನೋಂದಣಿಗೆ ಅಗತ್ಯ ದಾಖಲೆಗಳು:
1) ರೈತರ ಆಧಾರ್ ಕಾರ್ಡ ಪ್ರತಿ.
2) ಬ್ಯಾಂಕ್ ಪಾಸ್ ಬುಕ್
3) ಪಹಣಿ/ಉತಾರ್
4) ಮೊಬೈಲ್ ನಂಬರ್
5) ಪ್ರೋಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿ FID ನಂಬರ್ ಅನ್ನು ಹೊಂದಿರಬೇಕು.
ಇದನ್ನೂ ಓದಿ: Supreme Court Order- ಸುಪ್ರೀಂಕೋರ್ಟ್ ನಿಂದ ಕೃಷಿ ಭೂಮಿ ಮಾರಾಟದ ಬಗ್ಗೆ ಮಹತ್ವದ ತೀರ್ಪು ಪ್ರಕಟ!
ಪ್ರಸುತ್ತ ಮೈಸೂರು ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ ಖರೀದಿ ಮಾಡಲು ಖರೀದಿ ಕೇಂದ್ರವನ್ನು ತೆರೆಯಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಯನ್ನು ಖರೀದಿ ಏಜೆನ್ಸಿ ಯನ್ನಾಗಿ ಸರಕಾರದಿಂದ ನೇಮಕ ಮಾಡಲಾಗಿದ್ದು ಖರೀದಿ ಪ್ರಕ್ರಿಯೆಯು ಈ ಸಂಸ್ಥೆಯ ಮೂಲಕ ನಡೆಯುತ್ತದೆ. ಇದೇ ಮಾದರಿಯಲ್ಲಿ ಅತೀ ಹೆಚ್ಚು ಭತ್ತ ಬೆಳೆಯುವ ಆಯಾ ಜಿಲ್ಲೆಗಳಲ್ಲೂ ಖರೀದಿಗೆ ಪ್ರಕ್ರಿಯೆಗೆ ನೋಡಲ್ ಏಜೆನ್ಸಿಗಳನ್ನು ಸರ್ಕಾರದ ವಿವಿಧ ಸಂಸ್ಥೆಗಳನ್ನು ನೇಮಿಸಲಾಗಿದೆ. ಆ ಸಂಸ್ಥೆಗಳು ಖರೀದಿಗೆ ಬೇಕಾದ ಸಿದ್ದತೆಯನ್ನು ಮಾಡಿಕೊಳ್ಳುತ್ತಿವೆ.
Rice MSP Information for farmers-ರೈತರಿಗೆ ಪ್ರಮುಖ ಸೂಚನೆಗಳು:
ಬೆಂಬಲ ಬೆಲೆಯಲ್ಲಿ ಯಾವುದೇ ಕೃಷಿ ಉತ್ಪನ್ನವನ್ನು ಮಾರಾಟ ಮಾಡಲು ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೊಂದಣಿಯನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ FID ನಂಬರ್ ಅನ್ನು ರಚನೆ ಮಾಡಿಕೊಳ್ಳಬೇಕು.
ಬೆಂಬಲ ಬೆಲೆಯಲ್ಲಿ ಭತ್ತವನ್ನು ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ರೈತರು ತಾವು ಬೆಳೆದ ಉತ್ಪನ್ನವನ್ನು ತೆಗೆದುಕೊಂಡು ಬರುವ ಮುನ್ನ ಆ ಉತ್ಪನ್ನವು ಚೆನ್ನಾಗಿ ಒಣಗಿರಬೇಕು ಅಂದರೆ ಉತ್ತಮ ಗುಣಮಟ್ಟದಲ್ಲಿರಬೇಕು ಕನಿಷ್ಠ ನಿಗದಿಪಡಿಸಿದ ತೇವಾಂಶವನ್ನು ಹೊಂದಿರಬೇಕು.
ಇದನ್ನೂ ಓದಿ: PAN Card News: ನಿಮ್ಮ ಬಳಿ ಪಾನ್ ಕಾರ್ಡ್ ಇದ್ಯಾ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!
DBT Payment method-ಉತ್ಪನ್ನದ ಹಣ ಪಾವತಿ ವಿಧಾನ:
ರೈತರು ಒಮ್ಮೆ ಖರೀದಿ ಕೇಂದ್ರಗಳಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದ ಬಳಿಕ ಸರಕಾರದಿಂದ ನಿಗದಿಪಡಿಸಿದ ದಿನಾಂಕದಂದು ರೈತರು ಖಾತೆಗೆ ನೇರವಾಗಿ DBT ಮೂಲಕ ಉತ್ಪನ್ನದ ಹಣವನ್ನು ಪಾವತಿ ಮಾಡಲಾಗುತ್ತದೆ. ಇದಕ್ಕಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಇರುವುದು ಕಡ್ಡಾಯವಾಗಿದ್ದು ಅದ್ದರಿಂದ ಎಲ್ಲಾ ರೈತರು ತಮ್ಮ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿಕೊಳ್ಳಬೇಕು.