RTC Aadhar link- ಪಹಣಿಗೆ ಆಧಾರ್ ಲಿಂಕ್ ಸರಕಾರದಿಂದ ಮಹತ್ವದ ಮಾಹಿತಿ ಪ್ರಕಟ!

October 13, 2024 | Siddesh
RTC Aadhar link- ಪಹಣಿಗೆ ಆಧಾರ್ ಲಿಂಕ್ ಸರಕಾರದಿಂದ ಮಹತ್ವದ ಮಾಹಿತಿ ಪ್ರಕಟ!
Share Now:

ರಾಜ್ಯಾದ್ಯಂತ ಕಂದಾಯ ಇಲಾಖೆಯಿಂದ ಜೂನ್ ತಿಂಗಳಿನಿಂದ ಜಮೀನಿನ ಪಹಣಿಗಳಿಗೆ ಆಧಾರ್ ಕಾರ್ಡ ಲಿಂಕ್(RTC adhar link) ಮಾಡುವ ಕಾರ್ಯ ನಡೆಯುತ್ತಿದ್ದು, ಈ ಕುರಿತು ಕೆಲವು ಮಹತ್ವದ ಮಾಹಿತಿಯನ್ನು ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.

"ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ" ಯೋಜನೆಯಡಿ ರಾಜ್ಯದಲ್ಲಿರುವ ಎಲ್ಲಾ ಜಮೀನಿನ ಪಹಣಿ/ಊತಾರ್/RTC ಗಳಿಗೆ ಮಾಲೀಕರ ಆಧಾರ್ ಕಾರ್ಡ ಲಿಂಕ್ ಮಾಡುವ ಕೆಲಸವನ್ನು ಕಂದಾಯ ಇಲಾಖೆಯಿಂದ ಕಳೆದ 3-4 ತಿಂಗಳಿನಿಂದ ಮಾಡುತ್ತಿದ್ದು ಇಲ್ಲಿಯವರೆಗೆ ಈ ಯೋಜನೆಯ ಮೂಲಕ ಬರೋಬ್ಬರಿ 4 ಕೋಟಿಗೂ ಅಧಿಕ ಭೂ ವಿವರಕ್ಕೆ ಮಾಲೀಕರ ಆಧಾರ್ ಲಿಂಕ್ ಮಾಡಲಾಗಿರುತ್ತದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: BPL Card-ಪಡಿತರ ಚೀಟಿದಾರರೇ ಗಮನಿಸಿ ಈ ನಿಯಮ ಪಾಲಿಸದಿದ್ದರೆ ನಿಮ್ಮ ಕಾರ್ಡ ರದ್ದಾಗುತ್ತದೆ!

Pahani adhar link-ಜಮೀನಿನ ಸರ್ವೆ ನಂಬರ್ ಗೆ ಆಧಾರ್ ಲಿಂಕ್ ನಿಂದ ಲಭ್ಯವಾದ ಅಧಿಕೃತ ಮಾಹಿತಿ:

  • ಕಂದಾಯ ಇಲಾಖೆಯಿಂದ ಕಳೆದ 3-4 ತಿಂಗಳಿಂದ ಆಧಾರ್ ಲಿಂಕ್ ಮಾಡಿರುವುದರಿಂದ ರಾಜ್ಯದಲ್ಲಿರುವ ಭೂಮಿಯ ಸಂಪೂರ್ಣ ನಿಖರ ಮಾಲೀಕರ ವಿವರ ಲಭ್ಯವಾಗಿರುತ್ತದೆ.
  • ಕಂದಾಯ ಇಲಾಖೆಯು ಕೃಷಿ ಮತ್ತು ಕೃಷಿಯೇತರ ಭೂಮಿ, ವಿವಿಧ ಇಲಾಖೆಗೆ ಸರಕಾರದಿಂದ ನಿಗದಿಪಡಿಸಿರುವ ಭೂ ಸ್ವಾಧಿನ ವಿವರ ಲಭ್ಯವಾಗಿರುತ್ತದೆ.
  • ಒಬ್ಬ ರೈತ ತನ್ನ ಹೆಸರಿನಲ್ಲಿ ಬೇರೆ ಬೇರೆ ಸ್ಥಳಗಳನ್ನು ಬೇರೆ ಬೇರೆ ಸರ್ವೆ ನಂಬರ್ ನಲ್ಲಿ ಜಮೀನು ಹೊಂದಿರುವ ಮಾಹಿತಿ ದೊರೆತ್ತಿರುತ್ತದೆ.
  • ತಮ್ಮ ಹೆಸರಿನಲ್ಲಿ ಜಮೀನನ್ನು ಹೊಂದಿ ಎಷ್ಟು ಮಂದಿ ಮರಣ ಹೊಂದಿದ್ದಾರೆ ಇದರ ಅಂಕಿ-ಸಂಖ್ಯೆ ವಿವರ ಕೂಡ ಸಂಗ್ರಹವಾಗಿರುತ್ತದೆ.

ಇದನ್ನೂ ಓದಿ: Best Top 5 Tractors- ದಸರಾ ಹಬ್ಬಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್ ಗಳು!

Pahani details-ಪಹಣಿಯ ಅಂಕಿ-ಸಂಖ್ಯೆ ವಿವರ:

ಗಮನಿಸಿ: ಈ ಕೆಳಗೆ ನೀಡಿರುವ ಅಂಕಿ-ಅಂಶ ಅಧಿಕವಾಗಿದೆ ಏಕೆಂದರೆ ಒಬ್ಬರ ಹೆಸರಿನಲ್ಲೇ ಅನೇಕ ಸ್ಥಳಗಳಲ್ಲಿ ಭೂಮಿಯನ್ನು ಹೊಂದಿರುವುದರಿಂದ ಅದ್ದರಿಂದ ಸಂಖ್ಯೆ ಹೆಚ್ಚು ಅನಿಸಿದರು ರೈತರ ಸಂಖ್ಯೆ ಕಡಿಮೆ ಇರುತ್ತದೆ.

1) ಇಲ್ಲಿಯವರೆಗೆ ಪಹಣಿಯೋಂದಿಗೆ ಆಧಾರ್ ಕಾರ್ಡ ಲಿಂಕ್ ಮಾಡಿಕೊಡಿರುವ ಭೂಮಿ- 4,09,87,831

2) ಮರಣ ಹೊಂದಿರುವ ಭೂ ಮಾಲೀಕರ ಭೂಮಿ- 48.16 ಲಕ್ಷ

3) ಇ-ಕೆವೈಸಿ ಮಾಡಿಕೊಂಡುವ ಭೂಮಿ- 2.15 ಕೋಟಿ

4) ತುಂಡು ಭೂಮಿ ಹೊಂದಿರುವ ಭೂಮಿ- 91,689

5) ಅಧಿಕ ಪ್ರಮಾಣದ ಜಮೀನನ್ನು ಕೃಷಿಯೇತರ ಚಟುವಟಿಕೆಗೆ ಬಳಕೆ ಮಾಡುತ್ತಿರುವವ ಭೂಮಿ- 61.4 ಲಕ್ಷ

6) ಜಂಟಿ ಖಾತೆ ಸೇರಿದಂತೆ ಒಟ್ಟು ಖಾತೆದಾರರು- 70.50 ಲಕ್ಷ

rtc aadhar link

ಇದನ್ನೂ ಓದಿ: Dishank mobile app- ಕರ್ನಾಟಕದ ಯಾವುದೇ ಸ್ಥಳದ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯಬಹುದು!

Land records-ಕಂದಾಯ ಇಲಾಖೆಯಿಂದ RTC ಗೆ ಆಧಾರ್ ಲಿಂಕ್ ಏಕೆ ಮಾಡಲಾಗುತ್ತಿದೆ?

1) ರಾಜ್ಯದ ಎಲ್ಲಾ ಜಿಲ್ಲೆಯ ನಿಖರ ಭೂ ಮಾಲೀಕರ ವಿವರವನ್ನು ಸಂಗ್ರಹಿಸಲು.

2) ನಕಲಿ ಭೂ ದಾಖಲೆಗಳನ್ನು ಸೃಷ್ಟಿಸಿ ಭೂ ಕಳ್ಳತನ ಮಾಡುವವರಿಗೆ ಕಡಿವಾಣ ಹಾಕಲು ಆಧಾರ್ ಲಿಂಕ್ ಸಹಕಾರಿಯಾಗಿದೆ.

3) ಸರಕಾರಿ ಒತ್ತುವರಿ ಜಮೀನನ್ನು ಗುರುತಿಸಿ ಒತ್ತುವರಿ ತೆರವುಗೊಳಿಸಲು ಈ ಕ್ರಮ ಅನುಕೂಲವಾಗುತ್ತದೆ.

4) ರೈತರು ಪಹಣಿಗೆ ತಮ್ಮ ಆಧಾರ್ ಲಿಂಕ್ ಮಾಡುವುದರಿಂದ ತಮ್ಮ ಜಮೀನಿನ ವಿವರವನ್ನು ಕಾಲ ಕಾಲಕ್ಕೆ ಮೇಸೆಜ್ ಮೂಲಕ ಮೊಬೈಲ್ ಗೆ ರವಾನಿಸುವ ಯೋಜನೆಯನ್ನು ಇಲಾಖೆಯಿಂದ ಹಾಕಿಕೊಂಡಿದ್ದು ಈ ಕ್ರಮದಿಂದ ರೈತರ ಜಮೀನಿಗೆ ಭದ್ರತೆಯನ್ನು ಒದಗಿಸದಂತಾಗುತ್ತದೆ.

ಇದನ್ನೂ ಓದಿ: Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

RTC update mobile sms-ಕಾಲ ಕಾಲಕ್ಕೆ ಮೊಬೈಲ್ ಗೆ ಸಂದೇಶ:

ಪಹಣಿಗೆ ಆಧಾರ್ ಲಿಂಕ್ ಮಾಡಿರುವುದರಿಂದ ಕಂದಾಯ ಇಲಾಖೆಯಿಂದ ರೈತರ ಮೊಬೈಲ್ ಸಂಖ್ಯೆಗೆ ಕಾಲ ಕಾಲಕ್ಕೆ ಜಮೀನಿನ ಬೆಳವಣಿಗಗಳ ಕುರಿತು ಮೊಬೈಲ್ ಸಂದೇಶವನ್ನು ಕಳುಹಿಸಲಾಗುತ್ತದೆ.

ರೈತರ ಜಮೀನು ಭೂಗಳ್ಳರಿಂದ ಸುರಕ್ಷಿತವಾಗಿಡಲು ಅಧಾರ್ ಲಿಂಕ್ ಸಹಕರಿಸುತ್ತದೆ ನಕಲಿ ದಾಖಲಾತಿಗಳನ್ನು ರಚನೆ ಮಾಡಿಕೊಂಡು ಜಮೀನನ್ನು ಕಬಳಿಸುವುದನ್ನು ತಪ್ಪಿಸಬಹುದು. ಇದರಿಂದ ಅಮಾಯಕ ರೈತರಿಗೆ ಈ ಯೋಜನೆಯಿಂದ ನೆರವಾಗುತ್ತದೆ.

ಇದನ್ನೂ ಓದಿ: D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

RTC Aadhar link-ಇಲ್ಲಿಯವರೆಗೆ ಇ-ಕೆವೈಸಿ ಮಾಡಿಸದವರು ತಪ್ಪದೇ ಮಾಡಿಸಿ:

ಇಲ್ಲಿಯವರ ತಮ್ಮ ಜಮೀನಿನ ಸರ್ವೆ ನಂಬರ್ ಗೆ ಆಧಾರ್ ಕಾರ್ಡ ಲಿಂಕ್ ಮಾಡಿಸದ ರೈತರು ನಿಮ್ಮ ಆಧಾರ್ ಕಾರ್ಡ ಪ್ರತಿ, ಜಮೀನಿನ ಸರ್ವೆ ನಂಬರ್, ಜೊತೆಗೆ ಆಧಾರ್ ಲಿಂಕ್ ಯಿರುವ ಮೊಬೈಲ್ ಅನ್ನು ತೆಗೆದುಕೊಂಡು ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಭೇಟಿ ಮಾಡಿ ಕೂಡಲೇ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.

ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಈ ಲಿಂಕ್ RTC ekyc status ಮೇಲೆ ಕ್ಲಿಕ್ ಮಾಡಿ ನಮ್ಮ ಪುಟದ ಇನ್ನೊಂದು ಅಂಕಣ ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೇ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: