RTC adhar link- ಪಹಣಿ/RTC ಮತ್ತು ಆಧಾರ್ ಜೋಡಣೆಗೆ ಕಂದಾಯ ಇಲಾಖೆಯಿಂದ ನೂತನ ಕ್ರಮ: ಸಚಿವ ಕೃಷ್ಣಬೈರೇಗೌಡ.

ಈಗಾಗಲೇ ಬಹುತೇಕ ಜನರಿಗೆ ತಿಳಿದಿರುವ ಹಾಗೆಯೇ ಜಮೀನಿನ ಪಹಣಿ/ಉತಾರ್/RTC ಗೆ ಆಧಾರ್ ಜೋಡಣೆ(RTC adhar link) ಮಾಡುವುದನ್ನು ಕಂದಾಯ ಇಲಾಖೆಯಿಂದ ಕಡ್ಡಾಯ ಗೊಳಿಸಲಾಗಿದೆ.

ಈ ಕುರಿತು ನೂತನ ಕ್ರಮ ಒಂದನ್ನು ಕಂದಾಯ ಇಲಾಖೆಯಿಂದ ಜಾರಿಗೆ ತರಲಾಗಿದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡ ರವರು ಹಂಚಿಕೊಂಡಿ ಮಾಹಿತಿಯನ್ವ ರಾಜ್ಯದಾದ್ಯಂತ ಆರ್.ಟಿ.ಸಿ-ಆಧಾರ್ ಜೋಡಣೆ ಕೆಲಸ ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದ್ದು, ಈವರೆಗೆ 15 ಲಕ್ಷ ಆರ್.ಟಿ.ಸಿ ಮಾಲೀಕರನ್ನು ಸಂಪರ್ಕಿಸಲಾಗಿದೆ. 

ಮುಂದಿನ ಎರಡು-ಮೂರು ತಿಂಗಳಲ್ಲಿ ಎಲ್ಲ ಆರ್.ಟಿ. ಸಿ ಮಾಲೀಕರನ್ನು ತಲುಪಲು ರೂಪುರೇಷ ಸಿದ್ದಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಹಣಿ/RTC ಮತ್ತು ಆಧಾರ್ ಜೋಡಣೆ ಏಕೆ? ಮಾಡಿಸಬೇಕು, ಪಹಣಿ/RTC ಮತ್ತು ಆಧಾರ್ ಜೋಡಣೆ ಎಲ್ಲಿ ಮಾಡಿಕೊಳ್ಳಬೇಕು, ಮೊಬೈಲ್ ನಲ್ಲೇ ಪಹಣಿ/RTC ಮತ್ತು ಆಧಾರ್ ಜೋಡಣೆ ಮಾಡಬಹುದಾ? ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Agriculture officer recruitment-2024: ಕೃಷಿ ಇಲಾಖೆಯಲ್ಲಿ ಖಾಲಿ ಇರುವ 750 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

Aadhaar with RTC link- ಅಭಿಯಾನದ ಮಾದರಿ: ಗ್ರಾಮ ಲೆಕ್ಕಿಗರ ಮನೆ ಬಾಗಿಲಿಗೆ ತೆರಳಿ ಆರ್‌ಟಿಸಿ-ಆಧಾರ್‌ ಜೋಡಣೆ:

ಪ್ರಸ್ತುತ ರಾಜ್ಯದಲ್ಲಿ 88 ಸಾವಿರ ಪಹಣಿಗಳಲ್ಲಿ ಕೃಷಿ ಭೂಮಿ ಇದ್ದು 15 ಲಕ್ಷ ಮಾಲೀಕರು ಈಗಾಗಲೇ ತಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ ಉಳಿದಿರುವ ಪಹಣಿಗಳಿಗೆ ಶೀಘ್ರವಾಗಿ ಆಧಾರ್ ಜೋಡಣೆ ಮಾಡಲು ಗ್ರಾಮ ಲೆಕ್ಕಿಗರ ಮನೆ ಬಾಗಿಲಿಗೆ ತೆರಳಿ ಆರ್‌ಟಿಸಿ-ಆಧಾರ್‌ ಜೋಡಣೆ ಮಾಡುವ ಅಭಿಯಾನ ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. 

ಇದನ್ನು ಹೊರತುಪಡಿಸಿ ಆರ್‌ಟಿಸಿ-ಆಧಾರ್‌ ಜೋಡಣೆ ಮಾಡಿಕೊಳ್ಳುವ ಮಾಹಿತಿ ತಿಳಿದಿರುವ ಸಾರ್ವಜನಿಕರು ತಪ್ಪದೇ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಿಗರನ್ನು ಭೇಟಿ ಮಾಡಿ ಆರ್‌ಟಿಸಿ-ಆಧಾರ್‌ ಜೋಡಣೆ ಮಾಡಿಸಬೇಕು ಎಂದು ಕಂದಾಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Panchamitra Whatsapp Chat- ಪಂಚಮಿತ್ರ ವಾಟ್ಸಾಪ್ ಚಾಟ್ ಬೆರಳ ತುದಿಯಲ್ಲೇ ಅರ್ಜಿ ಸಲ್ಲಿಸಲು ವಾಟ್ಸಾಪ್ ಚಾಟ್ ಬಿಡುಗಡೆ!

ಪಹಣಿ/RTC ಗೆ ಆಧಾರ್ ಜೋಡಣೆ  ಏಕೆ? ಮಾಡಿಸಬೇಕು:

ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು ಮತ್ತು ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್‌ ಬಂದ್‌ ಮಾಹಿತಿ ಪಡೆಯಬೇಕು. ನಿಖರವಾದ ಆಕಾರ್‌ ಬಂದ್‌ ಇಲ್ಲದೇ ಆರ್‌ಟಿಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಪಹಣಿ/RTC ಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಲಾಗಿದೆ.

ಇದಲ್ಲದೇ ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್‌ ಬಂದ್‌ ಡಿಜಿಟಲೀಕರಣಗೊಳಿಸಲು ಇಲಾಖೆಯಿಂದ ಯೋಜನೆಯನ್ನು ರೂಪಿಸಲಾಗಿದ್ದು ಅದ್ದರಿಂದ ಈ ಕ್ರಮ ಅನುಸರಿಸುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ: KSRTC driver job-KSRTC ಯಲ್ಲಿ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ!

How to link Aadhaar with RTC: ನಿಮ್ಮ ಮೊಬೈಲ್ ನಲ್ಲೇ ಆರ್‌ಟಿಸಿ-ಆಧಾರ್‌ ಜೋಡಣೆಯನ್ನು ಮಾಡಬಹುದು:

ಜಮೀನನ್ನು ಹೊಂದಿರುವ ಮಾಲೀಕರು ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ತಮ್ಮ ಜಮೀನಿನ ವಿವರ ಮತ್ತು ಆಧಾರ್ ವಿವರವನ್ನು ಹಾಕಿ ಜಮೀನಿನ ವಿವರವನ್ನು ಪಡೆದುಕೊಂಡು ಆರ್‌ಟಿಸಿ-ಆಧಾರ್‌ ಜೋಡಣೆಯನ್ನು ನಿಮ್ಮ ಮೊಬೈಲ್ ನಲ್ಲೇ ಮಾಡಬಹುದಾಗಿದೆ. ನಿಮ್ಮ ಮೊಬೈಲ್ ನಲ್ಲೇ ಆರ್‌ಟಿಸಿ-ಆಧಾರ್‌ ಜೋಡಣೆಯನ್ನು ಮಾಡುವ  ವಿಧಾವನ್ನು ಕೆಳಗಡೆ ವಿವರಿಸಲಾಗಿದೆ.

Step-1: ಮೊದಲಿಗೆ ಈ Rtc adhar link website ಲಿಂಕ್ ಮೇಲೆ ಕ್ಲಿಕ್ ಮಾಡಿ ಭೂಮಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ OTP ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಗೆ ಬರುವ OTP ಅನ್ನು ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Agriculture machinery- ಕೃಷಿ ಇಲಾಖೆಯಿಂದ ಶೇ 90 ಸಹಾಯಧನದಲ್ಲಿ ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

Step-2: ಲಾಗಿನ್ ಅದ ನಂತರ ಮುಖಪುಟದಲ್ಲಿ ಪಹಣಿಗೆ ಆಧಾರ್ ಜೋಡಣೆ ಮಾಡಲಿರುವ ವ್ಯಕ್ತಿಯ ಆಧಾರ್ ನಂಬರ್ ಮತ್ತು ಹೆಸರನ್ನು ಹಾಕಿ ಮತ್ತೆ ಪುನಃ OTP ಪಡೆದು Verify ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ನಿಮ್ಮ ಜಮೀನಿನ ಸರ್ವೆ ನಂಬರ್ ವಾರು ವಿವರ ತೋರಿಸುತ್ತದೆ ಒಂದೊಂದೇ ಸರ್ವೆ ನಂಬರ್ ಅನ್ನು ಕ್ಲಿಕ್ ಮಾಡಿಕೊಂಡು ಕೊನೆಯಲ್ಲಿ ಕಾಣುವ Link ಬಟನ್ ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ Verify ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಅಗುತ್ತದೆ.

ಪ್ರಮುಖ ಉಪಯುಕ್ತ ಕೊಂಡಿಗಳು:

Rtc adhar link – ಆರ್‌ಟಿಸಿ-ಆಧಾರ್‌ ಜೋಡಣೆ ಮಾಡಲು: Link Now
ಪಹಣಿ/RTC ಕುರಿತು ನಮ್ಮ ಪುಟದ ಇತರೆ ಅಂಕಣಗಳು: click here