RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

RTC adhar link status- ಬಹುತೇಕ ಎಲ್ಲರಿಗೂ ತಿಳಿದಿರುವ ಹಾಗೆಯೇ ಕಂದಾಯ ಇಲಾಖೆಯ ನೂತನ ಪ್ರಕಟಣೆಯನ್ವಯ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.
RTC adhar link status check

ಬಹುತೇಕ ಎಲ್ಲರಿಗೂ ತಿಳಿದಿರುವ ಹಾಗೆಯೇ ಕಂದಾಯ ಇಲಾಖೆಯ ನೂತನ ಪ್ರಕಟಣೆಯನ್ವಯ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಳ್ಳಿ ಮಟ್ಟದಲ್ಲಿ ಈಗಾಗಲೇ ಆಂದೋಲನ ಮಾದರಿಯಲ್ಲಿ ಆರ್.ಟಿ.ಸಿ ಗಳಿಗೆ ಆಧಾರ್ ಲಿಂಕ್ ಮಾಡುವ ಕೆಲಸದಲ್ಲಿ ತೊಡಗಿದ್ದು, ಇಂದು ಈ ಲೇಖನದಲ್ಲಿ ಜಮೀನು ಹೊಂದಿರುವವರು ತಮ್ಮ ಪಹಣಿಗೆ ಆಧಾರ್ ಲಿಂಕ್(RTC adhar link status) ಅಗಿದಿಯೋ? ಇಲ್ಲವೋ? ಎಂದು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ವಿವರಿಸಲಾಗಿದೆ.

ಕಂದಾಯ ಇಲಾಖೆಯ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಪಹಣಿ(RTC) ಗೆ ಆಧಾರ್ ಕಾರ್ಡ ಜೋಡಣೆ ಅಗಿದಿಯೋ? ಇಲ್ಲವೋ? ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Scholarship application- ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

RTC adhar link status- ನಿಮ್ಮ ಜಮೀನಿನ ಪಹಣಿ/RTC/ಊತಾರ್ ಗೆ ಆಧಾರ್ ಜೋಡಣೆ ಅಗಿರುವುದನ್ನು ಚೆಕ್ ಮಾಡುವ ವಿಧಾನ:

Step-1: ಮೊದಲಿಗೆ ಈ RTC adhar link status ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಭೂಮಿ ಜಾಲತಾಣವನ್ನು ಭೇಟಿ ಮಾಡಬೇಕು. ಬಳಿಕ ಜಮೀನು ಯಾರ ಹೆಸರಿಗೆ ಇರುತ್ತದೆಯೋ ಅವರ ಮೊಬೈಲ್ ನಂಬರ್ ಅನ್ನು ಹಾಕಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ "SEND OTP" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ತದನಂತರ ನೀವು ಹಾಕಿರುವ ಮೊಬೈಲ್ ನಂಬರ್ ಗೆ ಬಂದಿರುವ 6 ಅಂಕಿಯ ಒಟಿಪಿ ಅನ್ನು ನಮೂದಿಸಿ "LOGIN" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ಮೇಲಿನ ವಿಧಾನವನ್ನು ಅನುಸರಿಸಿ ಲಾಗಿನ್ ಅದ ಬಳಿಕ ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆಯನ್ನು ಮತ್ತು ಆಧಾರ್ ಕಾರ್ಡನಲ್ಲಿರುವಂತೆ ಹೆಸರನ್ನು ಭರ್ತಿ ಮಾಡಿ "Verify" ಎಂದು ಕಾಣುಸುವ ಬಟನ್ ಮೇಲೆ ಕ್ಲಿಕ್ ಮಾಡಿದರೆ "ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ" ಎಂದು ಗೋಚರಿಸುತ್ತದೆ ಇದಕ್ಕೆ "OK" ಎಂದು ಕ್ಲಿಕ್ ಮಾಡಿಬೇಕು.

ಇದನ್ನೂ ಓದಿ: Copra msp price- ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪುನಃ ನೋಂದಣಿಗೆ ಅವಕಾಶ! ಎಷ್ಟು ದಿನ ಅವಕಾಶ ನೀಡಲಾಗಿದೆ?

Step-3: ಈ ಮೇಲಿನ ಹಂತವನ್ನು ಮುಗಿಸಿದ ಬಳಿಕ ಅಲ್ಲೇ ಕೆಳಗೆ ಗೋಚರಿಸುವ "ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ" ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಮತ್ತೊಮ್ಮೆ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ OTP ಬಟನ್ ಮೇಲೆ ಟಿಕ್ ಮಾಡಿ ಒಟಿಪಿ ಪಡೆಯಿರಿ/Generate OTP ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ಹಾಕಿ "ಸಲ್ಲಿಸು/Submit" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಈ ಪೇಜ್ ನ ಮುಖಪುಟದ ಎಡಬದಿಯಲ್ಲಿ ಕಾಣುವ "ಲಿಂಕ್ ಆಧಾರ್/Link Aadhar" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಕಾಣುವ ನಿಮ್ಮ ಸರ್ವೆ ನಂಬರ್ ಒಂದೊಂದನ್ನು ಟಿಕ್ ಮಾಡಿಕೊಂಡು ಅದರ ಮುಂದೆ ಕಾಣುವ "Link" ಬಟನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ "Verify OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಗ "ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ?/ Do you want to link your Aadhaar with the RTC?" ಎಂದು ಪ್ರಶ್ನೆ ತೋರಿಸುತ್ತದೆ ಅದಕ್ಕೆ ಹೌದು/Yes ಎಂದು ಕ್ಲಿಕ್ ಮಾಡಿದರೆ ಈ ಸರ್ವೆ ನಂಬರ್ ಈಗಾಗಲೇ ಲಿಂಕ್ ಆಗಿದೆ/Survey No. already linked" ಎನ್ನುವ ಸಂದೇಶ ತೋರಿಸಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಅಗಿದೆ ಎಂದು ನೀವು ತಿಳಿದುಕೊಳ್ಳಬೇಕು.

ಇದನ್ನೂ ಓದಿ: Bara Parihara status- ಮೊದಲ ಕಂತಿನ ಬರ ಪರಿಹಾರ ನಿಮಗೆ ಬಂದಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮ!