RTC And Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ!

April 30, 2025 | Siddesh
RTC And Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ!
Share Now:

ಕಂದಾಯ ಇಲಾಖೆಯ ವತಿಯಿಂದ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ(VA Recruitment-2025) ನೇಮಾಕತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4 ಸಾವಿರ ಗೂಗಲ್ ಕ್ರೋಮ್ ಬುಕ್ (ಲ್ಯಾಪ್ ಟಾಪ್) ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು,

ಗ್ರಾಮ ಆಡಳಿತ ಅಧಿಕಾರಿಗಳ(Village Administrative Officer Job) ಹುದ್ದೆಗೆ ರಾಜ್ಯದಲ್ಲಿ ಸುಮಾರು 6.33 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಯಾವುದೇ ಲಂಚವಿಲ್ಲದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ನೇರವಾಗಿ ಪರೀಕ್ಷೆ ಬರೆದು, ಮೆರಿಟ್ ಮತ್ತು ಮೀಸಲಾತಿ ಮೂಲಕ ಆಯ್ಕೆಯಾಗಿರುವ 1000 ಅಭ್ಯರ್ಥಿಗಳು ಪುಣ್ಯವಂತರು ಎಂದರು.

ಇದನ್ನೂ ಓದಿ: Bangalore university-ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿವಿಧ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಕೃಷಿಯೇ ದೇಶದ ಬೆನ್ನಲಬು. ನಮ್ಮ ದೇಶ ಹಳ್ಳಿಗಳಿಂದ ಕೂಡಿದೆ. ನಾವೆಲ್ಲರೂ ಹಳ್ಳಿಗಳಿಂದ ಬಂದಿದ್ದೇವೆ. ಹಳ್ಳಿಗಳಲ್ಲಿ ಶೇಕಡ 60 ರಷ್ಟು ಜನ ರೈತರಿದ್ದಾರೆ. ಅವರ ಹಿತ ಕಾಯುವುದು ನಮ್ಮ ಕರ್ತವ್ಯ. ಅವರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಗ್ರಾಮ ಆಡಳಿತಾಧಿಕಾರಿಗಳ ಪ್ರಮುಖ ಕರ್ತವ್ಯ ರೈತರ ಹಿತ ಕಾಯುವುದು. ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯು ಮಹತ್ವದ ಹುದ್ದೆಯಾಗಿದೆ ಎಂದು ತಿಳಿಸಿದರು.

ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ನೂತನವಾಗಿ ನೇಮಕಾತಿ ಹೊಂದಿರುವ ಗ್ರಾಮಾಡಳಿತಾಧಿಕಾರಿಗಳಿಗೆ(village accountant) ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದರು.

ಇದನ್ನೂ ಓದಿ: Life Insurance- LIC ಜೀವನ್ ಲಾಭ್ ಯೋಜನೆ: ದಿನಕ್ಕೆ ₹80 ಪಾವತಿಸಿ ₹10 ಲಕ್ಷ ಪಡೆಯಿರಿ!

Village administrative officer-ರಾಜ್ಯದಲ್ಲಿ 9,834 ಗ್ರಾಮ ಆಡಳಿತಾಧಿಕಾರಿಗಳು:

ರಾಜ್ಯದಲ್ಲಿ 8,834 ಗ್ರಾಮ ಆಡಳಿತಾಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು, ಈಗ ಆಯ್ಕೆಯಾಗಿರುವವರು ಸೇರಿ 9,834 ಗ್ರಾಮ ಆಡಳಿತಾಧಿಕಾರಿಗಳು ಕೆಲಸ ನಿರ್ವಹಿಸುತ್ತಾರೆ. ಉಳಿದ 500 ಗ್ರಾಮ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಆನ್‍ಲೈನ್ ಮೂಲಕ ದಾಖಲಾತಿ ಒದಗಿಸುತ್ತಿರುವುದರಿಂದ ಮೊದಲ ಹಂತದಲ್ಲಿ 4 ಸಾವಿರ ಕ್ರೋಮ್‍ಬುಕ್ ಲ್ಯಾಪ್ ಟಾಪ್ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉಳಿದವರಿಗೂ ವಿತರಿಸಲಾಗುವುದು ಎಂದರು.

ಭೂಮಿ ಲೆಕ್ಕ(Land Documents) ಇಡುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ. ಹಳ್ಳಿಗಾಡಿನ ಜನರು ಶಾಂತಿ ನೆಮ್ಮದಿಯಿಂದ ಇರಬೇಕಾದರೆ, ರೆಕಾರ್ಡ್ ಕರಾರುವಕ್ಕಾಗಿ ಇರಬೇಕು. ಆಧುನಿಕ ಭಾರತದಲ್ಲಿ ತಂತ್ರಜ್ಞಾನ, ವಿಜ್ಞಾನ ಬೆಳೆದಿದೆ. ಡಿಜಿಟಲೀಕರಣ ಬಂದ ಮೇಲೆ ಈಗ ಭೌತಿಕ ರೂಪದಲ್ಲಿ ದಾಖಲೆಗಳನ್ನು ಶೇಕರಣೆ ಮಾಡುವ ಅಗತ್ಯತೆ ಇಲ್ಲ. ಆನ್‍ಲೈನ್‍ನಲ್ಲೇ ಎಲ್ಲಾ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಬಂದಿದೆ. ಯಾವ ಕಾರಣಕ್ಕೂ ಡಿಜಿಟಲೀಕರಣ ಮಾಡುವಾಗ ತಪ್ಪುಗಳಾಗದಂತೆ ಎಚ್ಚರ ವಹಿಸಿ ಕೆಲಸ ನಿರ್ವಹಿಸಿ ರೈತರ ಹಿತ ಕಾಪಾಡುವುದು ನಿಮ್ಮೆಲ್ಲರ ಜವಬ್ದಾರಿ ಎಂದು ತಿಳಿಸಿದರು.

ಇದನ್ನೂ ಓದಿ: Free Laptop-SSLC ಅಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ವಿತರಣೆ!

ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಹುದ್ದೆಯ ಮಹತ್ವವನ್ನು ಅರಿತುಕೊಳ್ಳಬೇಕು. ನಿಮ್ಮ ಮತ್ತು ರೈತರ ಸಂಬಂಧ ಉತ್ತಮವಾಗಿರಬೇಕು. ಪ್ರತೊಯೊಬ್ಬ ರೈತರ ಪರಿಚಯದೊಂದಿಗೆ ಭೂಮಿಗೆ ಬೇಕಾಗುವ ದಾಖಲೆಗಳನ್ನು ರೈತರಿಗೆ ಒದಗಿಸಿಕೊಡಬೇಕು. ಹಿಂದೆ ಶಾನುಭೋಗರು ಇದ್ದರು ಅವರೀಗ ಗ್ರಾಮ ಆಡಳಿತಾಧಿಕಾರಿಗಳಾಗಿದ್ದಾರೆ. ಆಗಿನ ಕಾಲದಲ್ಲಿ ಶಾನುಭೋಗರು ಅಂದರೆ ರೈತರಿಗೆ ಗುರುಗಳು ಇದ್ದಂತೆ, ಅವರು ಹೇಳುವುದೇ ಅಂತಿಮವಾಗಿತ್ತು ಎಂದರು.

Online RTC and Mutation

ಇದನ್ನೂ ಓದಿ: Land Owner Document-1 ಲಕ್ಷ ನಿವಾಸಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಣೆ: ಸಚಿವ ಕೃಷ್ಣಬೈರೇಗೌಡ

Karnataka Government Officers-ರಾಜ್ಯದಲ್ಲಿ ಸುಮಾರು 6 ಲಕ್ಷ ಸರ್ಕಾರಿ ನೌಕರರು:

ರಾಜ್ಯದಲ್ಲಿ ಸುಮಾರು 6 ಲಕ್ಷ ಸರ್ಕಾರಿ ನೌಕರರಿದ್ದು, ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಜನರ ಕೆಲಸ ದೇವರ ಕೆಲಸ ಎಂದು ನೆನಪಿಟ್ಟುಕೊಂಟು ಜನಪರ ಸೇವೆ ಮಾಡಬೇಕೆಂದರು.
ಕಂದಾಯ ಇಲಾಖೆಯ ಜವಾಬ್ದಾರಿಯನ್ನು ಕೃಷ್ಣ ಬೈರೇಗೌಡ ಅವರಿಗೆ ವಹಿಸುವಾಗ ಇಲಾಖೆಯ ಸುಧಾರಣೆ ಮಾಡುವಂತೆ ಸೂಚಿಸಿದ್ದೆ, ಅದರಂತೆ ಅವರು ಕೆಲವು ಸುಧಾರಣೆ ಮಾಡಿದ್ದು, ಇನ್ನೂ ಕೆಲವು ಸುಧಾರಣೆಯಾಗಬೇಕು ಅದನ್ನು ಮಾಡುತ್ತೇವೆ ಎಂದರು.

ನಮ್ಮ ರಾಜ್ಯದಲ್ಲಿ ಸಣ್ಣ ಇಡುವಳಿದಾರರು ಹೆಚ್ಚಾಗಿ ಇದ್ದು, ವ್ಯವಸಾಯ ಲಾಭದಾಯಕ ಕಸುಬಾಗಿರದೆ ಇರುವುದರಿಂದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಅನ್ನದಾತ ರೈತರಿಗೆ ಯಾವುದೇ ಕಿರುಕುಳ ನೀಡದೆ, ಅವರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಕಂದಾಯ ಇಲಾಖೆಗೆ ತಂದಿರುವ ಸುಧಾರಣೆಗಳನ್ನು ಬಳಸಿಕೊಂಡು ಪ್ರಾಮಾಣಿಕ ಸೇವೆ ಮಾಡುವುದೇ, ನಾಡಿಗೆ ಕೋಡುವ ಕೊಡುಗೆ ಎಂದು ನೂತನ ಗ್ರಾಮ ಆಡಳಿತಾಧಿಕಾರಿಗಳಿಗೆ ಶುಭವಾಗಲಿ ಎಂದು ಶುಭ ಕೋರಿದರು.

ಇದನ್ನೂ ಓದಿ: Pouthi Khata Abhiyana-ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ!

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 30 ಜನರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು. ಗೂಗಲ್ ಕ್ರೋಮ್ ಬುಕ್ (ಲ್ಯಾಪ್ ಟಾಪ್) ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿದರು.

Revenue Minister Of Karnataka-ಎಲ್ಲರೂ ಪ್ರಾಮಾಣಿಕವಾಗಿ ಬದ್ದತೆಯಿಂದ ಕಾರ್ಯ ನಿರ್ವಹಿಸಿ-ಸಚಿವ ಕೃಷ್ಣ ಬೈರೇಗೌಡ:

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ನಮ್ಮ ಸರ್ಕಾರದ ಧ್ಯೇಯ ಕಾಯಕವೇ ಕೈಲಾಸವಾಗಿದ್ದು, ವಿಧಾನಸೌಧ ಮುಂದೆ ಬರೆದಿರುವಂತೆ “ಸರ್ಕಾರದ ಕೆಲಸ ದೇವರ ಕೆಲಸ” ವೆಂದು ತಿಳಿದು ಕೆಲಸ ಮಾಡಬೇಕು. ಸರ್ಕಾರದ ಮೌಲ್ಯ ಏನು ಎಂಬುದು ಮನವರಿಕೆಯಾಬೇಕು, ಕೈಲಾದ ಮಟ್ಟಿಗೆ ಬದ್ಧತೆಯಿಂದ ಕೆಲಸ ಮಾಡಿ ಋಣ ತೀರಿಸಬೇಕು ಎಂದರು.

ತಂತ್ರಜ್ಞಾನದ ಕಾಲದಲ್ಲಿಯೂ ಟಪಾಲ್ ವ್ಯವಸ್ಥೆಯಿಂದ ಕೆಲಸಗಳು ವಿಳಂಬವಾಗುವುದನ್ನು ತಡೆಗಟ್ಟಲು ಹಾಗೂ ಎಲ್ಲಾ ದಾಖಲೆಗಳನ್ನು ಡಿಜಟಲೀಕರಣ ಮಾಡಲು ಸಿಬ್ಬಂದಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ. ಎಲ್ಲಾ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು ಎಂದರು.

Bhoo Surakhsa Yojane-ಭೂ ಸುರಕ್ಷಾ ಯೋಜನೆಯಡಿ ಡಿಜಿಟಲೀಕರಣ:

ಭೂ ಸುರಕ್ಷಾ ಯೋಜನೆಯಡಿ 19 ಕೋಟಿಗೂ ಹೆಚ್ಚು ಪುಟಗಳ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಅದೇ ರೀತಿ ಭೂ ಆಸ್ತಿಗೆ ಮಾಲಿಕರ ಆಧಾರ್ ಜೋಡಣೆ, ಸ್ವಯಂಚಾಲಿತ ಮ್ಯುಟೇಷನ್, ಕಾಗದ ರಹಿತ ಇ-ಆಫೀಸ್, ಆಪ್ ಆಧಾರಿತ ಬರಖಾಸ್ತು, ಪೋಡಿ, ಬಗರ್ ಹುಕುಂ ಮತ್ತು ಸರ್ಕಾರಿ ಭೂಮಿಗಳ ಸಂರಕ್ಷಣೆ ಮಾಡಲಾಗುವುದು ಎಂದರು.

Online RTC and Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ ಸಲ್ಲಿಸಲು ಅವಕಾಶ:

ಇಂದಿನಿಂದಲೇ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಚಾಲನೆ ನೀಡಲಾಗುವುದು. ಪಹಣಿ ಮತ್ತು ಮ್ಯುಟೇಷನ್ ಮಾಡಲು 30 ದಿನ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ 12 ಗಂಟೆಯೊಳಗೆ ಮಾಡುತ್ತಿದ್ದೇವೆ. ತಹಸೀಲ್ದಾರ್ ಕೋರ್ಟಿನಲ್ಲಿ ಅವಧಿ ಮೀರಿ ಉಳಿದಿದ್ದ 10,700 ಪ್ರಕರಣಗಳಲ್ಲಿ 10,284 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಕೇವಲ 416 ಪ್ರಕರಣಗಳು ಮಾತ್ರ ಬಾಕು ಉಳಿದಿವೆ. ಉಪವಿಭಾಗಾಧಿಕಾರಿಗಳ ಕೋರ್ಟ್‍ನಲ್ಲಿ 69,800 ಪ್ರಕರಣಗಳು ಇದ್ದು, ಇದರಲ್ಲಿ 21 ಸಾವಿರ ಪ್ರಕರಣಗಳನ್ನು ವಿಲೇ ಮಾಡಲಾಗಿದೆ ಎಂದರು.

ಕಂದಾಯ ಇಲಾಖೆಯು ಹುಟ್ಟಿನಿಂದ-ಮರಣದವರೆಗೆ ಸಂಪರ್ಕ ಇರುವ ಮಾತೃ ಇಲಾಖೆಯಾಗಿದ್ದು, ಸರ್ಕಾರದ ಬೆನ್ನೆಲುಬಾಗಿದೆ. ಇದಕ್ಕೆ ವೇಗ ತರಲು ತಂತ್ರಜ್ಞಾನ ಅಳವಡಿಸಲಾಗಿದೆ. ಭೂ ದಾಖಲೆಗಳ ನಿರ್ವಹಣೆ ಇಲ್ಲದೆ ಜನರಿಗೆ ನೆಮ್ಮದಿ ಇರಲಿಲ್ಲ. ಜನರಿಗೆ ನೆಮ್ಮದಿ ತರಬೇಕು ಎನ್ನುವ ಉದ್ದೇಶದಿಂದ ಭೂ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ಉತ್ತಮ ಅಧಿಕಾರಿಗಳ ತಂಡವಿದ್ದು, ಅವರ ಸಹಕಾರದಿಂದ ಸುಧಾರಣೆಯ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ತರೀಕೆರೆಯ ಶಾಸಕ ಶ್ರೀನಿವಾಸ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ, ಕಂದಾಯ ಆಯುಕ್ತರಾದ ಪಿ. ಸುನೀಲ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ಕಂದಾಯ ಇಲಾಖೆಯ ವೆಬ್ಸೈಟ್- Click here

Share Now: