RTC Name correction- ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಪಹಣಿಯನ್ನು ನಿಮ್ಮ ಮೊಬೈನಲ್ಲೇ ಡೌನ್ಲೋಡ್ ಮಾಡಿ.

ಪಹಣಿಯಲ್ಲಿ ಹೆಸರು ತಪ್ಪಾಗಿ ನಮೂದಿಸಿದಲ್ಲಿ ಅದನ್ನು ಹೇಗೆ ತಿದ್ದುಪಡಿ(RTC Name correction) ಮಾಡಿಕೊಳ್ಳಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಪಹಣಿಯಲ್ಲಿ ಹೆಸರು  ತಿದ್ದುಪಡೆ ಪ್ರಕ್ರಿಯ ಹೇಗೆ ಇರುತ್ತದೆ? ಈ ಕುರಿತು ಅನೇಕ ಜನರಿಗೆ ಸಮರ್ಪಕ ಮಾಹಿತಿ ಇರುವುದಿಲ್ಲ ಈ ಕುರಿತು ಇಂದು ನಾವು ಸಂಕ್ಷೀಪ್ತವಾಗಿ ವಿವರಿಸುವ ಪ್ರಯತ್ನ ಮಾಡಿದ್ದೇವೆ. ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಅಪ್ತರಿಗೂ ತಪ್ಪದೇ ಶೇರ್ ಮಾಡಿ.

RTC name correction required documents- ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಬೇಕಾದರೆ ಬೇಕಾಗುವ ದಾಖಲೆಗಳು:

ಸದ್ಯ ಲಭ್ಯವಿರುವ ಪಹಣಿಯನ್ನು ತೆಗೆದುಕೊಳ್ಳಬೇಕು. ನೆಮ್ಮದಿ ಕೇಂದ್ರ/ನಾಡ ಕಚೇರಿ/ತಹಶೀಲ್ದಾರ ಕಚೇರಿಯಲ್ಲಿ ಸಿಗುತ್ತದೆ. 
20 ರೂಪಾಯಿ ಬೆಲೆಯ ಇ-ಸ್ಟಾಂಪ್ ಪೇಪರ್ (ಬಾಂಡ್ ಪೇಪರ್): ಇ-ಸ್ಟಾಂಪ್ ಪೇಪರ್ ನಲ್ಲಿ ಹೆಸರು ತಿದ್ದುಪಡಿ ಮಾಡುತ್ತಿರುವ ಕುರಿತು ವಿವರವನ್ನು ಟೈಪಿಂಗ್ ಮಾಡಿಸಬೇಕು. ನಂತರ ಅದರ ಮೇಲೆ ವಕೀಲರಿಂದ ತಪ್ಪದೇ ನೋಟರಿ ಮಾಡಿಸಬೇಕಾಗುತ್ತದೆ.
ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಕುರಿತು ಮಾದರಿ ಅರ್ಜಿ ಸಿದ್ದಪಡಿಸಬೇಕು.
ಆಧಾರ ಕಾರ್ಡ ಪ್ರತಿ.

ಇದನ್ನೂ ಓದಿ: Pouthi Khate- ಹಾಳೆ ಖಾತೆದಾರರಿಂದ ಹಾಲಿ ಸಾಗುವಳಿದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಳ್ಳುವುದೇಗೆ?

RTC correction process- ಪಹಣಿ ತಿದ್ದುಪಡಿ ಪ್ರಕ್ರಿಯೆ:

ಈ ಮೇಲಿನ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ತಾಲೂಕಿನಲ್ಲಿರುವ ಭೂಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಭೂಮಿ ಕೇಂದ್ರದವರು ನಿಮ್ಮ ಗ್ರಾಮಕ್ಕೆ ಸಂಬಂಧಪಡುವ ಗ್ರಾಮಲೆಕ್ಕಿಗರ ಬಳಿ ನೀವು ಸಲ್ಲಿಸಿದ ಅರ್ಜಿ ಕಳಿಸುತ್ತಾರೆ. ತದನಂತರ ಗ್ರಾಮ ಲೆಕ್ಕಿಗರು ತಮಗೆ ಬಂದಿರುವ ದಾಖಲೆಗಳನ್ನು ಪರಿಶೀಲಿಸಿ. ದಾಖಲೆಗಳು ತಪ್ಪಾಗಿದ್ದಲ್ಲಿ ತಿರಸ್ಕರಿಸುವ ಹಕ್ಕನ್ನು ಸಹ ಅವರು ಹೊಂದಿರುತ್ತಾರೆ. ಒಂದು ವೇಳೆ ದಾಖಲೆಗಳು ಸರಿಯಾಗಿದ ಪಕ್ಷದಲ್ಲಿ ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ. ಅವರ ಆದೇಶಕ್ಕೆ ಅನುಗುಣವಾಗಿ ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಮಾಡುಲಾಗುತ್ತದೆ. ಕೆಲವು ದಿನಗಳ ನಂತರ ತಿದ್ದುಪಡಿಯಾದ ಪಹಣಿ ನಿಮ್ಮ ಕೈ ಸೇರುತ್ತದೆ. ಈ ರೀತಿಯಾಗಿ ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಮಾಡಬಹುದು.

ಪಹಣಿ ತಿದ್ದುಪಡಿಯ ಪ್ರಯೋಜನಗಳು:

ಜಮೀನು ಮಾರುವಾಗ/ಕೊಂಡುಕೊಳ್ಳುವಾಗ/ವಿಭಾಗ/ದಾನ ಮಾಡುವಾಗ ಬ್ಯಾಂಕಿನಿಂದ ಬೆಳೆ ಸಾಲ ಪಡೆದುಕೊಳ್ಳಲು ಆಧಾರ ಪ್ರತಿಯಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿ ಇರುವ ಹೆಸರು ಒಂದೇ ಆಗಿದ್ದಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.

ಸರ್ಕಾರದಿಂದ ಸಿಗುವ ಸವಲತ್ತು ಅಥವಾ ಸಹಾಯಧನ ಪಡೆಯುವುದಕ್ಕೆ ಪಹಣಿಯಲ್ಲಿ ಹೆಸರು ಸರಿಯಾಗಿ ಇರುವುದು ಕಡ್ಡಾಯವಾಗಿದೆ.

ಸರ್ಕಾರದಿಂದ ಯಾವುದೇ ಯೋಜನೆಯಿಂದ ಹಣ ನೇರವಾಗಿ ಅಥವಾ ಡಿಬಿಟಿ ಮುಖಾಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: FID Number: ರೈತರು ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಎಫ್.ಐ.ಡಿ. (FID) ನಂಬರ್ ಕಡ್ಡಾಯ!

Online RTC- ಜಮೀನಿನ ಪಹಣಿಯ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ನೋಡಬವುದು:

ನಿಮ್ಮ ಜಮೀನಿನ ಪಹಣಿ ಮಾಹಿತಿಯನ್ನು ನೀವು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ನಲ್ಲಿ ಕಂದಾಯ ಇಲಾಖೆಯ ಈ ವೆಬ್ಸೈಟ್ ಭೇಟಿ ಮಾಡಿ https://landrecords.karnataka.gov.in/service2/ ಇಲ್ಲಿ ನಿಮ್ಮ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ, ಸರ್ವೆನಂಬರ್, ಹಿಸ್ಸಾ ನಂಬರ್, ಯಾವ ವರ್ಷದ ಪಹಣಿ ನೋಡಬೇಕಾಗಿದೆ ಅದನ್ನು ಆಯ್ಕೆ ಮಾಡಿಕೊಂದು ಪಹಣಿಯ ಮಾಹಿತಿಯನ್ನು ವಿಕ್ಷೀಸಬವುದಾಗಿದೆ. 

ಇದರ ಜೊತೆಗೆ ಇಲ್ಲಿ ನೀವು ಜಮೀನಿನ ಖಾತೆ ಬದಲಾವಣೆ, ಹಕ್ಕು ಬದಲಾವಣೆಗೆ, ಬಾಕಿ ಇರುವ ವಹಿವಾಟಿನ ವಿವರಗಳು, ವಹಿವಾಟು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಸಹ ಗಮನಿಸಬಹುದು. ಪಹಣಿ ಗಣಕೀಕೃತಗೊಂಡ ನಂತರದಿಂದ ಜಮೀನಿನ ಮೇಲೆ ಯಾವುದಾದರೂ ವಹಿವಾಟು ನಡೆದಿದ್ದರೆ ಅಂತಹ ವಹಿವಾಟುಗಳ ಸಂಪೂರ್ಣ ಮಾಹಿತಿಯನ್ನು ಸಹ ಇಲ್ಲಿ ನೋಡಬಹುದು.

ಜಮೀನು ಕೃಷಿಯೇತರ ಬಳಕೆಗಾಗಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದಲ್ಲಿ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಬಹುದು ಹಾಗೂ ತಂತ್ರಾಂಶ ಮೂಲಕ ಭೂ ಪರಿವರ್ತನೆಯಾಗಿರುವ ಆದೇಶಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈಗ ರೈತರು ಮನೆಯಲ್ಲಿಯೇ ಕುಳಿತು ಪಹಣಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬವುದಾಗಿದೆ.