ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಒಂದಾದ ಸೈನಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ(Sainik School Entrance Exam) ಆಹ್ವಾನಿಸಲಾಗಿದ್ದು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ.
ಸೈನಿಕ ಶಾಲೆಗಳು ಗುಣಮಟ್ಟದ ಶಿಕ್ಷಣದಿಂದಲೇ ದೇಶವ್ಯಾಪ್ತಿ ಪ್ರಸಿದ್ದಿಯನ್ನು(Sainik School Exam Date) ಹೊಂದಿದ್ದು ಪ್ರತಿ ವರ್ಷ ಸೈನಿಕ ಶಾಲೆ ಸೇರಲು ಸುಮಾರು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಾರೆ ಇದರಂತೆ ಈ ವರ್ಷವು ಸಹ ಪ್ರವೇಶ ಪರೀಕ್ಷೆ ಬರೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Matru Vandana Yojana- ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ₹11,000!
ಸೈನಿಕ ಶಾಲೆ ಪ್ರವೇಶಕ್ಕೆ ಯಾರೆಲ್ಲೆ ಅರ್ಜಿ ಸಲ್ಲಿಸಬಹುದು? ಅಜಿ ಸಲ್ಲಿಸುವ ವಿಧಾನ ಹೇಗೆ?(Sainik School Admission Notification) ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ಆಸಕ್ತರಿಗೆ ತಲುಪುವವರೆಗೆ ಶೇರ್ ಮಾಡಿ ಸಹಕರಿಸಿ.
Who Can Apply For Sainika School Admission- ಪ್ರವೇಶ ಪರೀಕ್ಷೆ ಬರೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು:
31-03-2025 ಕ್ಕೆ ಅರ್ಜಿದಾರ ವಿದ್ಯಾರ್ಥಿಯ ವಯಸ್ಸು 10 ರಿಂದ 12 ವರ್ಷದ ಒಳಗಿರುವವರು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಸೈನಿಕ ಶಾಲೆಯ 6 ಮತ್ತು 9 ನೇ ತರಗತಿಗಳಿಗೆ ಪ್ರವೇಶಕ್ಕಾಗಿ, ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ (AISSEE) ಉತ್ತೀರ್ಣರಾಗುವುದು ಅವಶ್ಯಕವಾಗಿರುತ್ತದೆ.
ಭಾರತದಲ್ಲಿ ಒಟ್ಟು 33 ಸೈನಿಕ ಶಾಲೆಗಳಿವೆ. ಇವೆಲ್ಲವನ್ನೂ ನಿರ್ವಹಿಸುವ ಜವಾಬ್ದಾರಿ ಸೈನಿಕ್ ಸ್ಕೂಲ್ ಸೊಸೈಟಿಯ ಮೇಲಿದೆ. ಅದರ ವಿವರಗಳನ್ನು https://sainikschoolsociety.in/ ನಲ್ಲಿ ಪರಿಶೀಲಿಸಬಹುದು. ಯಾವೆಲ್ಲ ನಗರಗಳಲ್ಲಿ ಸೈನಿಕ ಶಾಲೆ ಇವೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್- https://sainikschoolsociety.in/schools
ಇದನ್ನೂ ಓದಿ: Bond Paper-ಇನ್ನು ಮುಂದೆ ಬಾಂಡ್ ಪೇಪರ್ ಪಡೆಯುವುದು ಬಾರೀ ಸುಲಭ! ಇಲ್ಲಿದೆ ಸಂಪೂರ್ಣ ವಿವರ!
ಸೈನಿಕ ಶಾಲೆಯ 6 ನೇ ತರಗತಿಗೆ ಪ್ರವೇಶಕ್ಕಾಗಿ, 31.03.2025 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 10-11 ವರ್ಷಗಳು ಮತ್ತು 9, 13-14 ವರ್ಷಗಳು. ನೀವು 6 ನೇ ತರಗತಿಗೆ ಪ್ರವೇಶ ಪಡೆಯುತ್ತಿದ್ದರೆ, ನಂತರ 5 ನೇ ತರಗತಿಯಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ಅದೇ ರೀತಿ ಸೈನಿಕ ಶಾಲೆಯ 9ನೇ ತರಗತಿ ಪ್ರವೇಶಕ್ಕೆ 8ನೇ ತೇರ್ಗಡೆಯಾಗಿರಬೇಕು.
ಇದನ್ನೂ ಓದಿ: E-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!
Last date for Sainika School Admission Application-ಸೈನಿಕ್ ಶಾಲಾ ಪ್ರವೇಶಕ್ಕೆ ಪ್ರಮುಖ ದಿನಾಂಕಗಳು:
(a) ಅರ್ಜಿ ಸಲ್ಲಿಕೆ ಪ್ರಾರಂಭ – 24.12.2024
(b) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -13.01.2025 (ಸಂಜೆ 5.00 ಗಂಟೆಯವರೆಗೆ)
(c) ಪರೀಕ್ಷೆಯ ದಿನಾಂಕ : ಇನ್ನು ಪ್ರಕಟವಾಗಿಲ್ಲ ವೆಬ್ಸೈಟ್-
(d) ಪರೀಕ್ಷಾ ವಿಧಾನ : ಪೆನ್ ಪೇಪರ್ (OMR Sheets based)
(e) ಪ್ರಶ್ನೆಗಳ ಮಾದರಿ : ಬಹು ಆಯ್ಕೆ ಪ್ರಶ್ನೆಗಳು
Selection Procces-ಸೈನಿಕ ಶಾಲೆಯ ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ?
ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಪ್ರವೇಶ ಪಡೆಯಲು ಮೊದಲು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ನಂತರ ಸಂದರ್ಶನ ನಡೆಸಲಾಗುತ್ತದೆ ಇದಾದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಸೈನಿಕ್ ಶಾಲಾ ಪ್ರವೇಶ ಅವಕಾಶ ನೀಡಲಾಗುತ್ತದೆ.
Application fee-ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ/ಪಂಗಡ- 650/-
ಇತರೆ ವರ್ಗದವರಿಗೆ- 800/-
How to Apply for Sainik School-ಅರ್ಜಿ ಸಲ್ಲಿಸುವ ವಿಧಾನ:
ಪ್ರವೇಶ ಪರೀಕ್ಷೆ ಬರೆಯಲು ಆಸಕ್ತಿಯಿರುವ ವಿದ್ಯಾರ್ಥಿಗಳು ಮೊದಲು ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಬಳಕೆದಾರ ನೋಂದಣಿಯನ್ನು ಮಾಡಿಕೊಂಡು ಲಾಗಿನ್ ಅಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Kharif Bele Parihara-ಮುಂಗಾರು ಹಂಗಾಮಿನಿ ಬೆಳೆ ಪರಿಹಾರ ಹಣ ಜಮಾ ಅದ ರೈತರ ಪಟ್ಟಿ ಬಿಡುಗಡೆ!
ಸೈನಿಕ ಶಾಲೆಗೆ ಪ್ರವೇಶಕ್ಕಾಗಿ ಮೀಸಲಾತಿ ವಿವರ:
1) 67% ಸೀಟುಗಳನ್ನು ರಕ್ಷಣಾ ಸಿಬ್ಬಂದಿಯ ಮಕ್ಕಳಿಗೆ ಕಾಯ್ದಿರಿಸಲಾಗಿದೆ (50% ರಕ್ಷಣಾ ಸಿಬ್ಬಂದಿಗೆ ಮತ್ತು 17% ಮಾಜಿ ಸೈನಿಕರಿಗೆ).
2) 27% ಸೀಟುಗಳನ್ನು ಇತರೆ ಹಿಂದುಳಿದ ವರ್ಗಗಳಿಗೆ (OBC)
3) 15% ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಿಗೆ (SC)
4) 7.5% ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ (ST)
ಇದನ್ನೂ ಓದಿ: Parihara farmer list-ರೈತರ ಖಾತೆಗೆ ₹297 ಕೋಟಿ ಪರಿಹಾರ! ಹಳ್ಳಿವಾರು ಪಟ್ಟಿ ಬಿಡುಗಡೆ!
Important website links-ಪ್ರಮುಖ ಉಪಯುಕ್ತ ವೆಬ್ಸೈಟ್ ಲಿಂಕ್ ಗಳು:
ಪ್ರವೇಶ ಪರೀಕ್ಷೆಯ (AISSEE) ಕುರಿತು ಮಾಹಿತಿ ಪಡೆಯಲು- CLICK HERE
ಸೈನಿಕ ಶಾಲೆ ಅಧಿಕೃತ ವೆಬ್ಸೈಟ್- CLICK HERE
ಯಾವೆಲ್ಲ ನಗರಗಳಲ್ಲಿ ಸೈನಿಕ ಶಾಲೆ ಇದೆ ಎಂದು ತಿಳಿಯಲು- CLICK HERE