ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ.
ಕುಶಲಕಮಿಗಳ ಅಭಿವೃದ್ದಿಗೆ ಅರ್ಥಿಕವಾಗಿ ನೆರವಾಗಲು ಒಟ್ಟು 8 ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅಗತ್ಯ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!
ಅರ್ಜಿ ಆಹ್ವಾನಿಸಿದ ಯೋಜನೆಗಳ ಪಟ್ಟಿ ಹೀಗಿದೆ:
1) ಸ್ವಾವಲಂಬಿ/ಸಂಚಾರಿ ಮಾರಾಟ ಮಳಿಗೆ ಯೋಜನೆ
2) ಚರ್ಮಕಾರರ ಕಿರು ಅರ್ಥಿಕ ಚಟುವಟಿಗಳಿಗಾಗಿ ನೇರ ಸಾಲ ಯೋಜನೆ
3) ಚರ್ಮಕಾರರ ವಸತಿ ಯೋಜನೆ
4) ಚರ್ಮ ಶಿಲ್ಪಿ ಯೋಜನೆ
5) ಕೌಶಲ್ಯ ಉತ್ನತೀಕರಣ ಯೋಜನೆ
6) ಪದುಕೆ ಕುಟೀರ ಯೋಜನೆ
7) ಮಾರುಕಟ್ಟೆ ಸಹಾಯ ಯೋಜನೆ
8) ಕಾಯಕ ಸ್ಪೂರ್ತಿ(ಮಹಿಳೆಯರಿಗೆ)ಯೋಜನೆ
1) ಸ್ವಾವಲಂಬಿ/ಸಂಚಾರಿ ಮಾರಾಟ ಮಳಿಗೆ ಯೋಜನೆ:
ಈ ಯೋಜನೆಯಡಿಯಲ್ಲಿ ಸ್ವ-ಉದ್ಯೋಗ ಮಾಡಲು ಆಸಕ್ತಿಯಿರುವವರಿಗೆ ಸಂಚಾರಿ ಮಾರಾಟ ಮಳಿಗೆಯನ್ನು ಖರೀದಿ ಮಾಡಲು ತಾಲ್ಲೂಕು ಮಟ್ಟದವರೆಗೆ ರೂ 2.00 ಲಕ್ಷ ಸಹಾಯಧನ ನೀಡಲಾಗುತ್ತದೆ ಜಿಲ್ಲಾ ಕೇಂದ್ರಕ್ಕೆ ರೂ 3.00 ಲಕ್ಷ ಅದೇ ರೀತಿ ಮಹಾನಗರ ಪಾಲಿಕೆ ವ್ಯಾಪ್ತಿ ರೂ 4.00 ಲಕ್ಷ ಸಬ್ಸಿಡಿ BBMP ವ್ಯಾಪ್ತಿಯಲ್ಲಿ ರೂ 5.00 ಲಕ್ಷ ವನ್ನು ನೀಡಲಾಗುತ್ತದೆ.
ಇದನ್ನೂ ಓದಿ: Rabi MSP Price-ಕಡಲೆ,ಗೋಧಿ ಸೇರಿದಂತೆ ಒಟ್ಟು 6 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಮಾಡಿದ ಕೇಂದ್ರ ಸರಕಾರ!
2) ಚರ್ಮಕಾರರ ಕಿರು ಅರ್ಥಿಕ ಚಟುವಟಿಗಳಿಗಾಗಿ ನೇರ ಸಾಲ ಯೋಜನೆ:
ಕಚ್ಚಾ ಮಾಲು ಖರೀದಿ, ಚರ್ಮೋತ್ಪನ್ನಗಳ ಉತ್ಪಾದನೆ, ರಿಪೇರಿ, ಮತ್ತು ಮಾರಾಟ ಮಾಡುವ ಅಂಗಡಿ ತೆರೆಯಲು ಅಥವಾ ಲಘು ವಾಹನದ ಮೂಲಕ ವ್ಯಾಪಾರ ಮಾಡುವವರಿಗೆ ಘಟಕ ವೆಚ್ಚ ಒಟ್ಟು ರೂ 1.00 ಲಕ್ಷಕ್ಕೆ ನಿಗಮದಿಂದ ರೂ 50,000 ಸಹಾಯಧನ ಬ್ಯಾಂಕ್ ಮೂಲಕ ರೂ 50,000 ಸಹಾಯಧನ ಪಡೆಯಲು ಅವಕಾಶವಿರುತ್ತದೆ.
3) ಚರ್ಮಕಾರರ ವಸತಿ ಯೋಜನೆ:
ಚರ್ಮ ಕುಶಲಕರ್ಮಿಗಳು ಖಾಲಿ ನಿವೇಶನ ಹೊಂದಿದ್ದಲ್ಲಿ ಚರ್ಮಕಾರರಿಗೆ ವಾಸಕ್ಕೆ ಮತ್ತು ಉದ್ಯೋಗ ಮುಂದುವರೆಸಲು ಅನುಕೂಲವಾಗುವಂತೆ ವಸತಿ ಕಾರ್ಯಗಾರಗಳನ್ನು ನಿರ್ಮಿಸಿಕೊಳ್ಳಲು ನಿಗಮದ ಮೂಲಕ ರೂ 2.20 ಲಕ್ಷ ಧನ ಸಹಾಯ ಈ ಯೋಜನೆಯನ್ನು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಈ ಯೋಜನೆಯನ್ನು ಜಾರಿ ಮಾಡಲಾಗುತ್ತದೆ.
ಇದನ್ನೂ ಓದಿ: South tour package- ರಾಜ್ಯ ಸರಕಾರದಿಂದ 6 ದಿನದ ದಕ್ಷಿಣ ಭಾರತ ಪ್ರವಾಸಕ್ಕೆ ರೂ 15,000/- ಸಾವಿರ ಸಹಾಯಧನ!
4) ಚರ್ಮ ಶಿಲ್ಪಿ ಯೋಜನೆ:
ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಅಥವಾ ಕುಶಲಕರ್ಮಿಗಳ ಸ್ವ-ಸಹಾಯ ಸಂಘಗಳು/ಸಹಕಾರ ಸಂಘಗಳು ಪಾರಂಪರಿಕ ವಿಧಾನದಲ್ಲಿ ಪಾದರಕ್ಷೆಗಳನ್ನು/ಚರ್ಮ ವಸ್ತುಗಳನ್ನು ತಯಾರಿಸುತ್ತಿರುವವರು ಮುಂದೆ ಬಂದಲ್ಲಿ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಕೊಟ್ಟು ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಘಟಕ ವೆಚ್ಚ ರೂ 10.00 ಲಕ್ಷಗಳಲ್ಲಿ ರೂ 5.00 ಲಕ್ಷ ಸಬ್ಸಿಡಿ ಉಳಿದ ಮೊತ್ತಕ್ಕೆ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತದೆ.
5) ಕೌಶಲ್ಯ ಉತ್ನತೀಕರಣ ಯೋಜನೆ:
ಈ ಯೋಜನೆಯ ಮೂಲಕ 3 ವರ್ಷದ Diploma in Leather Technology ಕರ್ನಾಟಕ ಚರ್ಮ ತಾಂತ್ರಿಕ ಸಂಸ್ಥೆ ಬೆಂಗಳೂರು ಮೂಲಕ ಅರ್ಹ 80 ಯುವಕರಿಗೆ ಹೊಸ ತಂತ್ರಜ್ಞಾನ ವಿನ್ಯಾಸಗಳು ಹಾಗೂ ಮಾರುಕಟ್ಟೆ ಬೇಡಿಕೆಗಳ ಬಗ್ಗೆ ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತರಬೇತಿ ಪಡೆಯಲು ಅದ್ಯಯನ ಪ್ರವಾಸ ಯೋಜನೆ ಇದಾಗಿರುತ್ತದೆ.
ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!
6) ಪಾದುಕೆ ಕುಟೀರ ಯೋಜನೆ:
ರಸ್ತೆ ಬದಿಯಲ್ಲಿ ಕಾಯಕ ನಿರ್ವಹಿಸುತ್ತಿರುವ ಚರ್ಮ ಕುಶಲಕರ್ಮಿಗಳಿಗೆ ಕುಟೀರ ಜೊತೆಗೆ ಒಂದು ಉಪಕರಣ ಪೆಟ್ಟಿಗೆಯನ್ನು ರೂ 1.25 ಲಕ್ಷಗಳ ಘಟಕ ವೆಚ್ಚದಲ್ಲಿ ನಿಗಮದಿಂದ ನೀಡಲಾಗುತ್ತದೆ.
7) ಮಾರುಕಟ್ಟೆ ಸಹಾಯ ಯೋಜನೆ:
ಕುಶಲಕರ್ಮಿಗಳು ತಯಾರಿಸಿರುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮತ್ತು ಅವರ ಉತ್ಪನ್ನಗಳಿಗೆ ರಿಯಾಯಿತಿಯನ್ನು ಈ ಯೋಜನೆಯಡಿ ನೀಡಲಾಗುತ್ತದೆ.
ಇದನ್ನೂ ಓದಿ: Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!
8) ಕಾಯಕ ಸ್ಪೂರ್ತಿ(ಮಹಿಳೆಯರಿಗೆ)ಯೋಜನೆ:
8) ಕಾಯಕ ಸ್ಪೂರ್ತಿ(ಮಹಿಳೆಯರಿಗೆ)ಯೋಜನೆ ಮೂಲಕ ಅರ್ಹ ಮಹಿಳೆಯರಿಗೆ ಕೌಶಲ್ಯಾಭಿವೃದ್ದಿ ತರಬೇತಿ ಪಡೆದಿರುವ ಮಹಿಳೆಯರು ಕನಿಷ್ಥ 10 ಮಂದಿ ಸ್ವ-ಸಹಾಯ ಸಂಘ ರಚಿಸಿಕೊಂಡಿದಲ್ಲಿ ರೂ 2.5 ಲಕ್ಷ ಅನುದಾನ ನೀಡಿ ಇದಕ್ಕೆ ರೂ 1.50 ಲಕ್ಷ ಸಬ್ಸಿಡಿ ಜೊರೆಗೆ ರೂ 1.00 ಸಾಲ ವಿತರಿಸಲಾಗುತ್ತದೆ.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನೇರವಾಗಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸಲು 30 ಅಕ್ಟೋಬರ್ 2024 ಕೊನೆಯ ದಿನಾಂಕವಾಗಿದೆ.
Helpline number-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ: 9482300400