ಮಾಜಿ ಪ್ರಧಾನಿ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರು ನಿಧನ ಹಿನ್ನೆಲೆಯಲ್ಲಿ ಇಂದು(ಶುಕ್ರವಾರ) ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ(Government Holiday) ಮಾಡಲಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್(Dr Manmohan Singh) ರವರು 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಮನಮೋಹನ್ ಸಿಂಗ್ ರವರು 26 ಸೆಪ್ಟೆಂಬರ್ 1932 ಇಸವಿಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ಭಾರತ ಕಂಡ ದಕ್ಷ ಪ್ರಧಾನಿಗಳಲ್ಲಿ ಇವರ ಒಬ್ಬರಾಗಿದ್ದಾರೆ. ಅತೀ ಹೆಚ್ಚು ಕಾಲಾವಧಿಯವರೆಗೆ ಪ್ರಧಾನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಹುದ್ದೆಯಲ್ಲಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷರಾಗಿ, ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾಗಿಯು ಸಹ ತಮ್ಮ ಸೇವೆಯನ್ನು ಸಲ್ಲಿಸಿದ್ದು,
ಇದರ ಗೌರವಾರ್ಥ ರಾಜ್ಯಾದ್ಯಂತ ಒಂದು ದಿನ ಸರ್ಕಾರಿ ರಜೆ (Government Holiday) ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ (School College Holiday) ಘೋಷಣೆ ಮಾಡಲಾಗಿದೆ ಎಂದು ಅಧಿಕೃತವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
School Holiday in Karnataka- ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧಿಕೃತ ಪ್ರಕಟಣೆಯನ್ವಯ ಇಂದು ರಾಜ್ಯದ್ಯಂತ ಮನಮೋಹನ ಸಿಂಗ್ ಅವರ ನಿಧನದ ಹಿನ್ನಲೆ ಅವರ ಗೌರವಾರ್ಥವಾಗಿ ರಾಜ್ಯದಲ್ಲಿ 7 ದಿನಗಳ ಶೋಕಾಚರಣೆ ಘೋಷಣೆ ಮಾಡುವುರ ಜೊತೆಯಲ್ಲಿ ಇಂದು (27-12-2024-ಶುಕ್ರವಾರ) ಸರಕಾರಿ ರಜೆ ಘೋಷಿಸಲಾಗಿದೆ. ಇದಲ್ಲದೇ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು 7 ದಿನಗಳ ಕಾಲ ರದ್ದು ಮಾಡೋದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Sainika School Admission-ಸೈನಿಕ ಶಾಲೆಯಲ್ಲಿ ಓದುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಸುವರ್ಣ ಅವಕಾಶ!
Dr Manmohan Singh And His Achievements-ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪ್ರಮುಖ ಸಾಧನೆಗಳು:
1) ಸರಾಸರಿ ಭಾರತ ಜಿಡಿಪಿ 10 ವರ್ಷಗಳ ಆಡಳಿತ ಅವಧಿಯಲ್ಲಿ 7.7% ಇರುವ ಹಾಗೆ ಆಡಳಿತ ನಿರ್ವಹಣೆ ಮಾಡಿದರು(7.7% average GDP in 10 years UPA)
2) 2007-08 ರಲ್ಲಿ ವಿಶ್ವದಾದ್ಯಂತ ಅರ್ಥಿಕವಾಗಿ ಸಂಕಷ್ಟ ಎದುರಾದಗ ಈ ಸಮಯದಲ್ಲಿ ಭಾರತಕ್ಕೆ ಯಾವುದೇ ನಷ್ಟವಾಗದಂತೆ ನಿರ್ವಹಣೆ ಮಾಡಿದ್ದಾರೆ(Protected India from Global headwinds of 2007-8 financial crises)
3) ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು 2005 ರಲ್ಲಿ ಜಾರಿಗೆ ತಂದರು(Special Economic Zones for export promotion)
4) ಅರಣ್ಯ ಹಕ್ಕು ಕಾಯ್ದೆ(Forest Rights Act, 2006)
5) ಆರ್.ಟಿ.ಐ/ಲೋಕ್ ಪಾಲ್/ ಲೋಕಾಯುಕ್ತ ಜಾರಿಗೆ ತಂದರು(Right to Information and Lokpal/Lokayukta)
6) ನ್ಯಾಷನಲ್ ಪುಡ್ ಸೆಕ್ಯುರಿಟಿ ಕಾಯ್ದೆ(National Food Security Act. 2013)
7) ಎಲ್ಲಾ ಕಂಪನಿಗಳು ತಮ್ಮ ಆದಾಯದಲ್ಲಿ ಶೇ 2% ಅನ್ನು ಸಮಾಜಿಕ ಸೇವೆಗೆ ಬಳಕೆ ಮಾಡಬೇಕು ಎನ್ನುವ ಕಾಯ್ದೆಯನ್ನು 2013ರಲ್ಲಿ ಜಾರಿಗೆ ತಂದರು(Right to Fair Compensation and Transparency in Land Acquisition, 2013)
ಇದನ್ನೂ ಓದಿ: Matru Vandana Yojana- ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ₹11,000!
8) ಭಾರತ ಮತ್ತು ಅಮೇರಿಕಾ ಅಣ್ಣು ಒಪ್ಪಂದ(Indo-US civil nuclear deal)
9) 2009 ರಲ್ಲಿ ರೈಟ್ ಟು ಎಜುಕೇಶನ್ ಕಾಯ್ದೆ ಜಾರಿ(Right to Education Act 2009)
10) ಆಶಾ ಕಾರ್ಯಕರ್ತೆ ಸೇವೆಯನ್ನು ತೆಗೆದುಕೊಳ್ಳುವುದರ ಮೂಲಕ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಸಲ್ಲಿಸಲು ದಾರಿ ಮಾಡಿಕೊಟ್ಟರು(ASHA worker scheme for robust rural public health care)
ಇದನ್ನೂ ಓದಿ: Bond Paper-ಇನ್ನು ಮುಂದೆ ಬಾಂಡ್ ಪೇಪರ್ ಪಡೆಯುವುದು ಬಾರೀ ಸುಲಭ! ಇಲ್ಲಿದೆ ಸಂಪೂರ್ಣ ವಿವರ!
ಕೇಂದ್ರದಿಂದ 7 ದಿನಗಳ ರಾಷ್ಟ್ರೀಯ ಶೋಕಾಚರಣೆ:
ದೇಶದಾದ್ಯಂತ ನಡೆಯಬೇಕಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು, ಡಾ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಯಲ್ಲಿ 7 ದಿನಗಳವರೆಗೆ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಲಾಗಿದ್ದು 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಲಿದೆ ಅಂತ್ಯಕ್ರಿಯೆಯನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ.