- Advertisment -
HomeGovt SchemesSchool Holidays-ಶಿಕ್ಷಣ ಇಲಾಖೆಯಿಂದ ಅಧಿಕೃತ ಬೇಸಿಗೆ ರಜೆ ಅವಧಿ ಮತ್ತು ಶಾಲೆ ಪ್ರಾರಂಭ ದಿನಾಂಕ ಪ್ರಕಟ!

School Holidays-ಶಿಕ್ಷಣ ಇಲಾಖೆಯಿಂದ ಅಧಿಕೃತ ಬೇಸಿಗೆ ರಜೆ ಅವಧಿ ಮತ್ತು ಶಾಲೆ ಪ್ರಾರಂಭ ದಿನಾಂಕ ಪ್ರಕಟ!

ಶಾಲಾ ಶಿಕ್ಷಣ ಇಲಾಖೆಯಿಂದ ಬೇಸಿಗೆ ರಜೆ, ದಸರ ರಜೆ ಶಾಲಾ ಪ್ರಾರಂಭಕ್ಕೆ(School Holidays) ಸಂಬಂಧಪಟ್ಟಂತೆ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಗಿದ್ದು ಇದರ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

2024-25ನೇ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಲ್ಲಿದ್ದು, ಮುಂದಿನ 2025-26ನೇ ಸಾಲಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು(Summer holidays-2025) ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29-05-2025 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ.

ಇದನ್ನೂ ಓದಿ: Sprinkler set-ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಎಲ್ಲ ರೈತರಿಗೂ ಅವಕಾಶ!

ಪ್ರಯುಕ್ತ ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ(Karnataka School Holidays) ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ತಿಳಿಸಿದೆ.

School Holidays Dates-ಶಾಲಾ ರಜೆ ಅವಧಿ ಮತ್ತು ಶಾಲೆ ಪ್ರಾರಂಭ ದಿನಾಂಕಗಳ ವಿವರ:

  • ಬೇಸಿಗೆ ರಜೆ ಅವಧಿ- 11 ಏಪ್ರಿಲ್ 2025 ರಿಂದ ಬೇಸಿಗೆ ರಜೆ ಆರಂಭವಾಗಿ 28 ಮೇ 2025 ರವರೆಗೆ ಇರಲಿದೆ.
  • ಶಾಲಾ ಆರಂಭ ದಿನಾಂಕ- 29 ಮೇ 2025 ರಿಂದ ಶಾಲೆಯು ಆರಂಭವಾಗಲಿದೆ.
  • ದಸರಾ ರಜೆ ಅವಧಿ- 20 ಸೆಪ್ಟಂಬರ್ 2025 ರಿಂದ ಆರಂಭವಾಗಿ 07 ಅಕ್ಟೋಬರ್ 2025 ಕ್ಕೆ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: Home Subsidy Scheme- ಸರ್ಕಾರದಿಂದ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆ ಹಂಚಿಕೆ!

School Holidays dates

Karnataka School Holidays-2025-26ನೇ ಶೈಕ್ಷಣಿಕ ಸಾಲಿನಲ್ಲಿ ನಿರ್ವಹಿಸಬೇಕಾದ ಅಂಶಗಳ ಕುರಿತು:

1) ದಿನಾಂಕ: 29-05-2025ರಿಂದ ಶಾಲೆಗಳು ಪ್ರಾರಂಭವಾಗಲಿದ್ದು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಸದರಿ ದಿನದಂದು ಶಾಲೆಗಳಿಗೆ ಹಾಜರಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಪ್ರವೇಶಾತಿಯನ್ನು/ದಾಖಲಾತಿಯನ್ನು ದಿನಾಂಕ: 30-05-2025 ರಿಂದ ಶಾಲಾ ಪ್ರಾರಂಭೋತ್ಸವದೊಂದಿಗೆ ಆರಂಭಿಸಿ, ದಿನಾಂಕ : 30-06-2025 ರಂದು ಮುಕ್ತಾಯಗೊಳಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

2) ಕೆಲವು ಮಕ್ಕಳು ನಿರಂತರವಾಗಿ ಶಾಲೆಗೆ ಗೈರು ಹಾಜರಾಗುತ್ತಿರುವುದು ಮತ್ತು ಶಾಲೆಯನ್ನು ಅರ್ಧದಲ್ಲಿಯೇ ಬಿಡುವ ಮಕ್ಕಳನ್ನು ಕಡ್ಡಾಯವಾಗಿ ಹಾಜರಾತಿ ಅಧಿಕಾರಿಯು (ಶಿಕ್ಷಣ ಸಂಯೋಜಕರು) CRP & BRP ಗಳೊಂದಿಗೆ ಸಂಪರ್ಕದಲ್ಲಿದ್ದು ದಾಖಲಾತಿ ಅಂದೋಲನದ ಮುಖಾಂತರ ವ್ಯಾಪಕ ಪ್ರಚಾರ ಕೈಗೊಂಡು ಶಾಲಾ ಮುಖ್ಯವಾಹಿನಿಗೆ ತರುವುದು.

3) ಕ್ರಿಸ್‌ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಸಲ್ಲಿಸಿದಲ್ಲಿ ಈ ಬಗ್ಗೆ ಆಯಾ ಉಪನಿರ್ದೇಶಕರು (ಆಡಳಿತ) ರವರು ಈ ಕುರಿತು ಪರಿಶೀಲಿಸಿ ನಿರ್ಧರಿಸುವುದು. ಸದರಿ ಡಿಸೆಂಬರ್ ಮಾಹೆಯಲ್ಲಿ ನೀಡುವ ಕ್ರಿಸ್ ಮಸ್ ರಜಾ ಅವಧಿಯನ್ನು ಅಕ್ಟೋಬರ್ ಮಾಹೆಯ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಲು ಕ್ರಮವಹಿಸತಕ್ಕದ್ದು.

ಇದನ್ನೂ ಓದಿ: Nrega Yojana-2025: ನರೇಗಾ ಕೂಲಿ ಕಾರ್ಮಿಕರಿಗೆ ಬಂಪರ್ ಸಿಹಿ ಸುದ್ದಿ! ಕೂಲಿ ದರ ಹೆಚ್ಚಳ!

4) ರಾಜ್ಯ/ಜಿಲ್ಲಾ ಕಛೇರಿಗಳಿಂದ ನಿಯೋಜಿಸಿದ ಜಿಲ್ಲಾ ಮತ್ತು ತಾಲ್ಲೂಕು ಶೈಕ್ಷಣಿಕ ಉಸ್ತುವಾರಿ ನೋಡಲ್ ಅಧಿಕಾರಿಗಳು, ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ರವರುಗಳು, ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿಗಳು, ತಮ್ಮ ತಮ್ಮ ವ್ಯಾಪ್ತಿಗನುಗುಣವಾಗಿ ಕ್ರಿಯಾಶೀಲ ಮೇಲ್ವಿಚಾರಣೆ ಮತ್ತು ಶೈಕ್ಷಣಿಕ ಉಸ್ತುವಾರಿ ಕ್ರಿಯಾ ಯೋಜನೆಯನ್ನು,

ಈ ಮುಂದೆ ನೀಡಲಾಗುವ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ತಿಳಿಸುವಂತೆ ತಯಾರಿಸಿಕೊಂಡು ಶಾಲೆಗಳ ಪ್ರಾರಂಭಕ್ಕೆ, ಪೂರ್ವ ತಯಾರಿ ಮಾಡಿಕೊಳ್ಳುವುದು. ಶಾಲೆಗಳ ಪ್ರಾರಂಭದ ಸಮಯದಲ್ಲಿ ಇರುವ ಇಲಾಖಾ ಪ್ರೋತ್ಸಾಹದಾಯಕ ಯೋಜನೆಗಳಾದ PM ಪೋಷಣ್, ಕ್ಷೀರ ಭಾಗ್ಯ, ಹಾಗೂ ಪೂರೈಸಲಾಗುವ ಸಮವಸ್ತ್ರ ಪಠ್ಯಪುಸ್ತಕ ವಿತರಣೆಗೆ ಕ್ರಮವಹಿಸುವುದು, ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಅಭಿವೃದ್ಧಿಪಡಿಸಲು ಮಿಂಚಿನ ಸಂಚಾರ ಕೈಗೊಂಡು ಉಸ್ತುವಾರಿ ಮಾಡುವುದು.

5) ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡ ಹಬ್ಬವಾದ ಕರ್ನಾಟಕ ರಾಜ್ಯೋತ್ಸವ ಮತ್ತು ಇತರೆ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವಪೂರ್ವಕವಾಗಿ ಆಚರಿಸತಕ್ಕದು.

ಇದನ್ನೂ ಓದಿ: Borewell Subsidy-ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು 4,923 ಕೊಳವೆ ಬಾವಿ ಕೊರೆಸಲು ಅನುಮತಿ!

6) ನಿಗಧಿಪಡಿಸಿದ ಶೈಕ್ಷಣಿಕ ಕರ್ತವ್ಯದ ಅವಧಿಗಳು ಕಡಿಮೆಯಾಗದಂತೆ ಮುಷ್ಕರ ಮಳೆಗಾಗಿ, ಇನ್ನಿತರೆ ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗೆ ರಜೆ ಘೋಷಣೆಯಾದಲ್ಲಿ ಆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣದಿನದ ಶಾಲೆಗಳನ್ನು ನಡೆಸಿ, ಶಾಲಾ ಕರ್ತವ್ಯದ ದಿನಗಳನ್ನು ಸರಿದೂಗಿಸಿಕೊಳ್ಳಲು ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸುವುದು.

7) ಪರೀಕ್ಷಾ ದಿನಗಳು, ಮೌಲ್ಯಾಂಕನ ದಿನಗಳು, ಹಾಗೂ ಪೂರಕ ಶೈಕ್ಷಣಿಕ ಚಟುವಟಿಕೆ ನಡೆಸುವ ದಿನಗಳನ್ನು ಕೂಡ ಶಾಲಾ ಕರ್ತವ್ಯದ ದಿನವೆಂದು ನಿಗದಿತ ಅವಧಿಗಳಲ್ಲಿ ಪರಿಗಣಿಸುವುದು.

8) 2025-26 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಿ ನಂತರ ಪೂರೈಸಲಾಗುವುದು. ಅದರಂತೆ ಶಾಲಾ/ಕ್ಲಸ್ಟರ್/ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಅನುಪಾಲನೆ ಮಾಡತಕ್ಕದ್ದು.

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ- Click here
Helpline-ಸಹಾಯವಾಣಿ-1902

- Advertisment -
LATEST ARTICLES

Related Articles

- Advertisment -

Most Popular

- Advertisment -