Free sewing machine- ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಅಹ್ವಾನ!

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆವತಿಯಿಂದ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮತ್ತು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳಿದೆ ಉಚಿತ ಹೊಲಿಗೆ ಯಂತ್ರ ವಿತರಣೆ(free tailoring machine scheme) ಮಾಡಲು ಅರ್ಜಿ ಅಹ್ವಾನಿಸಲಾಗಿದೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆವತಿಯಿಂದ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮತ್ತು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳಿದೆ ಉಚಿತ ಹೊಲಿಗೆ ಯಂತ್ರ ವಿತರಣೆ(free tailoring machine scheme) ಮಾಡಲು ಅರ್ಜಿ ಅಹ್ವಾನಿಸಲಾಗಿದೆ.

2023-24ನೇ ಸಾಲಿಗೆ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಯೋಜನೆ ಮತ್ತು ಜಿಲ್ಲಾ ಉದ್ಯಮ ಕೇಂದ್ರ ಬಂಡವಾಳ ಹೂಡಿಕೆ ಯೋಜನೆಯಡಿ ಮರಗೆಲಸ, ಗಾರೆಕೆಲಸ, ಕ್ಷೌರಿಕ, ದೋಬಿ, ಕಮ್ಮಾರಿಕೆ ಮತ್ತು ಹೊಲಿಗೆಯಂತ್ರ ಕಸುಬಿನ ಸುಧಾರಿತ ಉಪಕರಣ ಹಾಗೂ ಸಾಲ ಸಹಾಯಧನ ಪಡೆಯಲು ಆಸಕ್ತಿಯುಳ್ಳ ಗ್ರಾಮಾಂತರ ಪ್ರದೇಶದ ವೃತ್ತಿನಿರತ ಕಸುಬುದಾರರು ನಿಗಧಿತ ದಾಖಲಾತಿಗಳೊಂದಿಗೆ ಈ ಕೆಳಗಿನ ನಮೂದಿಸಿರುವ ವೆಬ್‌ ಸೈಟ್ ಭೇಟಿ ಮಾಡಿ ಅಂತಿಮ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬವುದು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರೆಲ್ಲ ಅರ್ಜಿ ಸಲ್ಲಿಸಬವುದು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇತ್ಯಾದಿ ಸಂಫೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

ಯಾವೆಲ್ಲ ಯೋಜನೆಯಡಿ ಸೌಲಭ್ಯ ಪಡೆಯಬವುದು: 
 
1) ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಮರಗೆಲಸ, ದೋಬಿ, ಗಾರೆಕೆಲಸ, ಕಮ್ಮಾರಿಕೆ, ಕ್ಷೌರಿಕ ಮತ್ತು ವಿದ್ಯುತ್‌ ಚಾಲಿತ ಹೊಲಿಗೆಯಂತ ವೃತ್ತಿಯ ಉಪಕರಣಗಳನ್ನು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬವುದು.

ಇದೇ ಇಲಾಖೇಯ ಇನ್ನೊಂದು ಯೋಜನೆಯಾದ "ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ" ಆಸಕ್ತ ಅಭ್ಯರ್ಥಿಗಳು ಉದ್ಯಮಿಯನ್ನು ಆರಂಭಿಸಲು ಪ್ರಾರಂಭಿಕ ಹಂತದಲ್ಲಿ ಸಹಾಯಧನವನ್ನು ಸಹ ಪಡೆಯಬವುದು.

Last date- ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಮತ್ತು ಅರ್ಜಿ ಸಲ್ಲಿಸಲು ಅನ್ಲೈನ್ ಲಿಂಕ್:

ಜಿಲ್ಲೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ  ಅರ್ಜಿ ಸಲ್ಲಿಸಲು ಲಿಂಕ್
ಮೈಸೂರು 04 ಸೆಪ್ಟೆಂಬರ್ 2023 click here
ಮಂಡ್ಯ 10 ಸೆಪ್ಟೆಂಬರ್ 2023 click here
ಚಿಕ್ಕಮಗಳೂರು 15 ಸೆಪ್ಟೆಂಬರ್ 2023 click here
ತುಮಕೂರು 31 ಆಗಸ್ಟ್ 2023 click here

ಯಾವೆಲ್ಲ ಜಿಲ್ಲೆಯಲ್ಲಿ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ:

ಮೈಸೂರು, ಮಂಡ್ಯ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ಈ ಮೇಲೆ ತಿಳಿಸಿರುವ ಯೋಜನೆಗಳಿಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ ಇನ್ನುಳಿದ ಜಿಲ್ಲೆಯ ಆಸಕ್ತ ಫಲಾನುಭವಿಗಳು ಒಮ್ಮೆ ನಿಮ್ಮ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಕೆ ಕುರಿತು ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬವುದು.

Required documents free tailoring machine- ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿ ಮಾಹಿತಿ ಹೀಗಿದೆ:

1) ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಗೆ ದಾಖಲಾತಿಗಳು:

  • ಪಾಸ್ಪೋರ್ಟ್‌ ಗಾತ್ರದ ಭಾವಚಿತ್ರ.
  • ಜಾತಿ ಪ್ರಮಾಣ ಪತ್ರ. 
  • ಆದಾಯ ದೃಢೀಕರಣ ಪತ್ರ (in PDF file) (SC, ST) 4)ಮರಗೆಲಸ, ದೋಬಿ, ಗಾರೆಕೆಲಸ, ಕಮಾರಿಕೆ, ಕ್ಷೌರಿಕ ಮತ್ತು ಹೊಲಿಗೆಯಂತ್ರ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ. 

2) ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಗೆ ದಾಖಲಾತಿಗಳು

  • ಪಾಸ್ಪೋರ್ಟ್ ಗಾತ್ರದ ಭಾವಚಿತ್ರ. 
  • ಜಾತಿ ಪ್ರಮಾಣ ಪತ್ರ. 
  • ಆದಾಯ ದೃಢೀಕರಣ ಪತ್ರ.
  • ಬ್ಯಾಂಕ್‌ ಪಾಸ್ ಪುಸ್ತಕ. .
  • ತಾವು ನಡೆಸುತ್ತಿರುವ ಕಸುಬಿನ ಬಗ್ಗೆ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ) ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ. 

ಪ್ರಕಟಣೆ ಪತ್ರ: 

ಈ ಅಂಕಣಗಳನ್ನು ಓದಿ: