ಪ್ರತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅನೇಕ ರೋಗ-ಕೀಟ ಭಾದೆ, ನೀರಿನ ಕೊರತೆ, ಗುಣಮಟ್ಟದ ಉತ್ಪಾದನೆ ಮಾಡಲು ರೈತರಿಗೆ ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗುತ್ತಿದೆ.
ಈಗಾಗಿ ಅನೇಕ ರೈತರು ಕೃಷಿ ಪೂರಕ ಉಪಕಸುಬುಗಳ ಕಡೆ ಒಲವು ತೋರಿಸುತ್ತಿದ್ದು ಇದರಲ್ಲಿ ಒಂದಾದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಸಾಲ ಮತ್ತು ಸಹಾಯಧನ ಯೋಜನೆಗಳಿವೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಯಾವೆಲ್ಲ ಯೋಜನೆಗಳಿವೆ?
ನರೇಗಾ ಯೋಜನೆ, ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದ ಯೋಜನೆಗಳು, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (PKCC) ಯೋಜನೆ, ರಾಷ್ಟ್ರೀಯ ಜಾನುವಾರು ಮಿಷನ್(NLM) ಯೋಜನೆ.
ನರೇಗಾ ಯೋಜನೆ:
ಸಣ್ಣ ಪ್ರಮಾಣದ ಕುರಿ ಮತ್ತು ಮೇಕೆಗಳನ್ನು ಸಾಕಾಣಿಕೆ ಮಾಡಲು ಆಸಕ್ತಿಯಿರುವವರು ನರೇಗಾ ಯೋಜನೆಯಡಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅರ್ಥಿಕ ಸಹಾಯಧನ ಪಡೆಯಬವುದು ಅರ್ಜಿ ಸಲ್ಲಿಸಲು ನಿಮ್ಮ ಗ್ರಾಮ ಪಂಚಾಯತ ಭೇಟಿ ಮಾಡಿ.
ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ:
ಈ ನಿಗಮದಿಂದ ನೊಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ/ ಪರಿಶಿಷ್ಟ ಜಾತಿ ವರ್ಗದ ರೈತರಿಗೆ ಶೇ 90% ಸಹಾಯಧನದಲ್ಲಿ 6+1 ಕುರಿ/ಮೇಕೆ ಘಟಕ ಪಡೆಯಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಈ ಯೋಜನೆಯಡಿ ಅರ್ಜಿ ಆಹ್ವಾನ ಮಾಡಿದ ಸಂದರ್ಭದಲ್ಲಿ ನಿಮ್ಮ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಕಚೇರಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು..
https://kswdcl.karnataka.gov.in/page/Farmer+Producers+Organization+(FPO)/kn ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹತ್ತಿರದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ವಿವರ ಪಡೆಯಬವುದು.
ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ಜಾಲತಾಣದ ವೆಬ್ಸ್ಸೈಟ್ ಲಿಂಕ್: https://kswdcl.karnataka.gov.in/
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (PKCC) ಯೋಜನೆ:
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (PKCC) ಯೋಜನೆಯಡಿ ಮೀನು ಸಾಕಣೆ, ಕೋಳಿ ಸಾಕಣೆ, ಕುರಿ-ಮೇಕೆ, ಹಸು ಮತ್ತು ಎಮ್ಮೆ ಸಾಕಾಣಿಕೆಗೆ ರೈತರಿಗೆ ಸಾಲ ಒದಗಿಸಲಾಗುತ್ತದೆ. ಈ ಕಾರ್ಡ್ ಪಡೆಯುವ ರೈತರಿಗೆ ಪಶುಪಾಲನೆ ಮಾಡಲು ಸಾಲ ಪಡೆಯಬಹುದು. ಕೃಷಿಗೆ ಪೂರಕವಾದ ಉಪ ಕಸುಬುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬವುದು.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (PKCC) ಯೋಜನೆಯಡಿ ಪ್ರತಿ ಕುರಿ/ಮೇಕೆಯ ಮೇಲೆ ತಲಾ 34,063 ರೂಪಾಯಿ ಸಾಲ ನೀಡಲಾಗುತ್ತದೆ. ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳು 7% ಬಡ್ಡಿದರದಲ್ಲಿ ಸಾಲವನ್ನು ನೀಡಿದರೆ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 4% ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಒದಗಿಸಲಾಗುತ್ತದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು?
ಅರ್ಜಿದಾರರು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಬ್ಯಾಂಕ್ ಅಧಿಕಾರಿಗೆ ಸಲ್ಲಿಸಬೇಕು. ಅರ್ಜಿಯ ಪರಿಶೀಲನೆಯ ನಂತರ ಒಂದು ತಿಂಗಳ ಅದ ಬಳಿಕೆ ನಿಮಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಈ ಸಾಲಕ್ಕೆ ಯಾವುದೇ ಸಹಾಯಧನ ಇರುವುದಿಲ್ಲ, ಸಾಲದ ಪೂರ್ಣ ಮೊತ್ತವನ್ನು ಮರು ಸಂದಾಯ ಮಾಡಬೇಕು.
ರಾಷ್ಟ್ರೀಯ ಜಾನುವಾರು ಮಿಷನ್(NLM) ಯೋಜನೆ:
ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್(NLM) ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ (NLM) ಕುರಿ, ಮೇಕೆ ತಳಿ ಸಂವರ್ಧನಾ ಘಟಕ ಸ್ಥಾಪನೆ ಮಾಡಿಕೊಳ್ಳಲು ಅವಕಾಶವಿದೆ. 100 ಕುರಿಗಳು ಮತ್ತು 5 ಟಗರು ಖರೀದಿಗೆ 70 ಲಕ್ಷದವರೆಗೆ ಆರ್ಥಿಕ ಸೌಲಭ್ಯ ಒದಗಿಸಲಾಗುತ್ತದೆ.
ರಾಷ್ಟ್ರೀಯ ಜಾನುವಾರು ಮಿಷನ್(NLM) ಯೋಜನೆಯಡಿ ಶೇ.50ರಷ್ಟು ಸಹಾಯಧನ ಪಡೆಯಬವುದು. ನೀವು ಪಡೆದ ಒಟ್ಟು ಸಾಲದ ಮೊತ್ತದಲ್ಲಿ ಅರ್ಧದಷ್ಟು ಸಾಲ ಮನ್ನಾ ವಾಗುತ್ತದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು?
ಈ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತಿಯಿರುವವರು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ತಾಲ್ಲೂಕಿನ ಪಶುಪಾಲನಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ನೀವೆ ನೇರವಾಗಿ https://nlm.udyamimitra.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬವುದು.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವೆಬ್ಸೈಟ್ ಭೇಟಿ ಮಾಡಿ: https://ahvs.karnataka.gov.in/
ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು