HomeAgricultureSheep farming loan-ಶೇ 50% ಸಬ್ಸಿಡಿ ಪಡೆದು ಕುರಿ ಸಾಕಾಣಿಕೆ ಆರಂಭಿಸಲು ಆನ್ಲೈನ್ ಮೂಲಕ ಅರ್ಜಿ...

Sheep farming loan-ಶೇ 50% ಸಬ್ಸಿಡಿ ಪಡೆದು ಕುರಿ ಸಾಕಾಣಿಕೆ ಆರಂಭಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಗ್ರಾಮೀಣ ಭಾಗದಲ್ಲಿ ಸ್ವಂತ ಉದ್ಯೋಗ(Self Employment Subsidy Loan Yojana) ಮಾಡಲು ಅರ್ಥಿಕವಾಗಿ ನೆರವು ನೀಡಲು ಡಾ|| ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಶೇ 50% ಸಬ್ಸಿಡಿ ಪಡೆದು ಕುರಿ ಸಾಕಾಣಿಕೆ(Kuri sakanike yojane) ಆರಂಭಿಸಲು ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಡಾ|| ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ(Dr. BR Ambedkar Development Corporation) ಬ್ಯಾಂಕ್ ಸಹಯೋಗದಲ್ಲಿ ಮತ್ತು ಸಹಾಯಧನ ಸೌಲಭ್ಯದೊಂದಿಗೆ ಸಾಲವನ್ನು ಪಡೆದು ಕೃಷಿಯ ಜೊತೆಗೆ ಉಪಕಸುಬಾದ ಕುರಿ ಸಾಕಾಣಿಕೆಯನ್ನು ಪ್ರಾರಂಭಿಸಲು ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಅರ್ಜಿಯನ್ನು ಕರೆಯಲಾಗಿದೆ.

ಇದನ್ನೂ ಓದಿ: Food cart vehicle subsidy- 4 ಲಕ್ಷ ಸಬ್ಸಿಡಿಯಲ್ಲಿ ಫುಡ್ ಕಾರ್ಟ್ ವಾಹನ ಖರೀದಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಕುರಿ ಸಾಕಾಣಿಕೆಗೆ(Sheep farming subsidy loan scheme) ಎಷ್ಟು ಸಾಲ ಮತ್ತು ಸಬ್ಸಿಡಿ ನೀಡಲಾಗುತ್ತದೆ? ಅರ್ಜಿ ಸಲ್ಲಿಸಲು ಅರ್ಹರು ಯಾರು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅಗತ್ಯ ದಾಖಲಾತಿಗಳ ಸಮೇತ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

Sheep farming subsidy- ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಕುರಿ ಸಾಕಾಣಿಕೆಗೆ ಎಷ್ಟು ಸಾಲ ಮತ್ತು ಸಬ್ಸಿಡಿ ನೀಡಲಾಗುತ್ತದೆ?

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಒಟ್ಟು 1 ಲಕ್ಷ ಬ್ಯಾಂಕ್ ಸಾಲ ಮತ್ತು ಇದಕ್ಕೆ ನಿಗಮದಿಂದ 50 ಸಾವಿರ ಸಬ್ಸಿಡಿ ನೀಡಲಾಗುತ್ತದೆ.

kuri sakanike

ಇದನ್ನೂ ಓದಿ: PM-Vishwakarma 2024-ಪಿ ಎಂ ವಿಶ್ವಕರ್ಮ ಯೋಜನೆಯಡಿ ಹೋಲಿಗೆ ಯಂತ್ರ ಸಬ್ಸಿಡಿ ಹಾಗೂ ಇತರೆ ಸೌಲಭ್ಯಕ್ಕೆ ₹1,751 ಕೋಟಿ ಅನುದಾನ!

Self Employment Subsidy Loan Scheme Online Application-ಅರ್ಜಿ ಸಲ್ಲಿಸುವ ವಿಧಾನ:

ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ವೆಬ್ಸೈಟ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ Self Employment Subsidy Loan online application ಸೇವಾ ಸಿಂಧು ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಮೇಲಿನ ಲಿಂಕ್ ಒತ್ತಿ ಸೇವಾ ಸಿಂಧು ವೆಬ್ಸೈಟ್ ಅನ್ನು ಭೇಟಿ ಮಾಡಿದ ನಂತರ ಈ ವೆಬ್ಸೈಟ್ ಗೆ ಪ್ರಥಮ ಬಾರಿಗೆ ಪ್ರವೇಶ ಮಾಡುತ್ತಿರುವವರು USER ID ಮತ್ತು PASSWORD ಅನ್ನು ರಚನೆ ಮಾಡಿಕೊಂಡು LOGIN ಅಗಬೇಕು.

Step-3: LOGIN ಅದ ಬಳಿಕ ಇಲ್ಲಿ “ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ” ಎಂದು ಆಯ್ಕೆ ಮಾಡಿಕೊಂಡು “ಸ್ವಯಂ ಉದ್ಯೋಗ ನೇರಸಾಲ ಯೋಜನೆ” ಮೇಲೆ ಕ್ಲಿಕ್ ಮಾಡಿ “ಅರ್ಜಿ ಸಲ್ಲಿಸಿ/Apply Now” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅಥವಾ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಬೆಂಗಳೂರು ಒನ್/ಗ್ರಾಮ ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ!

kuri sakanike

ಇದನ್ನೂ ಓದಿ: Digital Ration card-ಡಿಜಿಟಲ್ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಆಪ್ಲಿಕೇಶನ್ ಬಿಡುಗಡೆ!

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಡಿಸೆಂಬರ್ 2024

Documents- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡಪ್ರತಿ
(2) ಬ್ಯಾಂಕ್ ಅಕೌಂಟ್ ಡಿಟೈಲ್ಸ್
(3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
(4) ಜಮೀನಿನ ಪಹಣಿ
(5) ಪೋಟೋ
(6) ರೇಶನ್ ಕಾರ್ಡ

Who Can Apply For Self Employment Subsidy Loan Scheme- ಯಾರೆಲ್ಲ ಅರ್ಜಿ ಸಲ್ಲಿಸಬಹುದು:

1) ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಅರ್ಜಿದಾರರಿಗೆ 18 ವರ್ಷ ಭರ್ತಿಯಾಗಿರಬೇಕು.

2) ಅರ್ಜಿದಾರರು ನಿಗಮದಿಂದ ನಿಗದಿಪಡಿಸಿರುವ ವರ್ಗಕ್ಕೆ ಸೇರಿದವರಾಗಿರಬೇಕು(ಪರಿಶಿಷ್ಟ ಜಾತಿ).

3) ಈಗಾಗಲೇ ಈ ಯೋಜನೆಯಡಿ ಹಿಂದಿನ ವರ್ಷಗಳಲ್ಲಿ ಈ ನಿಗಮದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಸಹಾಯಧನ ಪಡೆದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಬರುವುದಿಲ್ಲ.

ಈ ಯೋಜನೆಯ ಕುರಿತು ಮತ್ತು ಅರ್ಜಿ ಸಲ್ಲಿಸುವುದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ: 9482300400 ಮತ್ತು ನಿಗಮದ ಜಾಲತಾಣದ ಲಿಂಕ್- Click here

Most Popular

Latest Articles

Related Articles