SIM Card-ಸಿಮ್ ಕಾರ್ಡ ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!

February 27, 2025 | Siddesh
SIM Card-ಸಿಮ್ ಕಾರ್ಡ ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!
Share Now:

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(TRAI) ಮತ್ತು ಕೇಂದ್ರ ಸರಕಾರದಿಂದ ಮೊಬೈಲ್ ಬಳಕೆದಾರರಿಗೆ ಹೊಸ ಸಿಮ್ ಕಾರ್ಡ(SIM Card New Rules) ಅನ್ನು ಖರೀದಿ ಮಾಡಲು ನೂತನವಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಪ್ರಸ್ತುತ ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿಯು ಸಹ ಮೊಬೈಲ್(Mobile) ಪೋನ್ ಸರ್ವೆ ಸಾಮಾನ್ಯ ಮೊಬೈಲ್ ಪೋನ್ ಉಪಯೋಗವನ್ನು ತೆಗೆದುಕೊಳ್ಳಲು ಸಿಮ್ ಕಾರ್ಡ ಅನ್ನು ಅದಕ್ಕೆ ಹಾಕಬೇಕಾಗುತ್ತದೆ ಇದಕ್ಕಾಗಿ ಟೆಲಿಕಾಂ ಕಂಪನಿಗಳ ಮೂಲಕ ಬಳಕೆದಾರರು ಸಿಮ್ ಅನ್ನು ಖರೀದಿ ಮಾಡುವಾಗ ಅನುಸರಿಸಬೇಕಿದ್ದ ಹಳೆ ನಿಯಮದಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ.

ಅಕ್ರಮ ಚಟುವಟಿಕೆಗೆ ನಕಲಿ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಸಿಮ್ ಕಾರ್ಡ(SIM Card) ಅನ್ನು ಖರೀದಿ ಮಾಡುವವರಿಗೆ ಕಡಿವಾಣ ಹಾಕಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(TRAI) ಮತ್ತು ಕೇಂದ್ರ ಸರಕಾರದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Horticulture Training-10 ತಿಂಗಳ ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನ! ಪ್ರತಿ ತಿಂಗಳು 1,750 ರೂ ಶಿಷ್ಯವೇತನ!

SIM Card Purchase Rules-ನೂತನ ಸಿಮ್ ಕಾರ್ಡ ಖರೀದಿ ನಿಯಮಗಳು:

ಗ್ರಾಹಕರು ಇನ್ನುಂದೆ ಸಿಮ್ ಕಾರ್ಡ ಖರೀದಿ ಮಾಡುವಾಗ ಕಡ್ಡಾಯವಾಗಿ ಖುದ್ದು ಹಾಜರಿದ್ದು ಆಧಾರ್ ಬಯೋಮೆಟ್ರಿಕ್ ಬೆರಳಚ್ಚನ್ನು ನೀಡಬೇಕಾಗುತ್ತದೆ.

ಸಿಮ್ ಖರೀದಿದಾರರ ವಿವಿಧ ರೀತಿಯ ಭಾವಚಿತ್ರ(Photo) ವೆರಿಫಿಕೇಶನ್ ಅನ್ನು ಮಾಡಬೇಕಾಗುತ್ತದೆ.

ಟೆಲಿಕಾಂ ಕಂಪನಿಗಳು ಆಧಾರ್ ಕಾರ್ಡ ದೃಡೀಕರಣ ಮತ್ತು ಗ್ರಾಹಕರ ಇ-ಕೆವೈಸಿ ಮಾಡದೇ ಸಿಮ್ ಮಾರಾಟ ಮಾಡಿದ್ದರೆ ಸರಕಾರದಿಂದ ಇಂತಹ ಕಂಪನಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಲಾಗಿದೆ.

ನಕಲಿ ದಾಖಲೆಗಳನ್ನು ನೀಡಿ ಸಿಮ್ ಕಾರ್ಡ ಖರೀದಿ ಮಾಡಿದವರನ್ನು ಪತ್ತೆಹಚ್ಚಲು ಇನ್ನು ಮುಂದೆ AI(Artificial Intelligence) ಡಿಜಿಟಲ್ ತಂತ್ರಜ್ಞಾನ ಬಳಕೆ.

ಇದನ್ನೂ ಓದಿ: PM kisan-ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲವಾ? ಇಲ್ಲಿದೆ ಉಪಯುಕ್ತ ಸಲಹೆಗಳು!

sim card rules

ಇದನ್ನೂ ಓದಿ: Gruha Jyothi Scheme: ಮನೆ ಬದಲಾವಣೆ ಮಾಡಿದರೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

Mobile SIM Card-ಸಿಮ್ ಕಾರ್ಡ ದುರ್ಬಳಕೆಗೆ ಕಡಿವಾಣ:

ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಮ್ ಕಾರ್ಡ ಅನ್ನು ತೆಗೆದುಕೊಂಡು ವಿವಿಧ ಬಗ್ಗೆಯ ಸೈಬರ್ ವಂಚನೆ, ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಇನ್ನು ಮುಂದೆ ಬ್ರೇಕ್ ಬಿಳಲಿದ್ದು ಸಿಮ್ ಕಾರ್ಡ ಬಳಕೆ ಮಾಡಿಕೊಂಡು ವಂಚನೆಯನ್ನು ಮಾಡುತ್ತಿರುವವರನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

Documents For SIM Card Purchase-ಹೊಸ ಸಿಮ್ ಕಾರ್ಡ ಖರೀದಿ ಮಾಡಲು ಅವಶ್ಯವಿರುವ ದಾಖಲೆಗಳು:

1) ಖರೀದಿದಾರರ ಆಧಾರ್ ಕಾರ್ಡ
2) ಖುದ್ದು ಸಿಮ್ ಖರೀದಿ ಮಾಡುವವರು ಹಾಜರಿರಬೇಕು
3) ಪೋಟೋ

ಇದನ್ನೂ ಓದಿ: Labour Card Application-ಹೊಸದಾಗಿ ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

SIM Card Purchase Method-ಸಿಮ್ ಖರೀದಿ ವಿಧಾನ:

ನಿಮಗೆ ಯಾವ ಕಂಪನಿಯ ಸಿಮ್ ಬೇಕಾಗಿರುತ್ತದೆಯೋ ಅಂದರೆ ಉದಾಹರಣೆಗೆ: Airtel, Jio, BSNL ಇನ್ನಿತರೆ ಆ ಕಂಪನಿಯ ಸಿಮ್ ವಿತರಕರ ಶಾಪ್ ಗೆ ನೇರವಾಗಿ ಭೇಟಿ ಮಾಡಿ ಮೊದಲಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಇದಾದ ಬಳಿಕ ನಿಮ್ಮ ಆಧಾರ್ ಕಾರ್ಡ ವಿವರ ಮತ್ತು ಬೆರಳಚ್ಚು ದೃಡೀಕರಣವನ್ನು ಟೆಲಿಕಾಂ ಕಂಪನಿಯ ಪ್ರತಿನಿಧಿಗಳು ಮಾಡಿಕೊಳ್ಳುತ್ತಾರೆ ನಂತರ ಆನ್ಲೈನ್ ಮೂಲಕ ಪೋಟೋ ವೆರಿಫಿಕೇಶನ್ ಮಾಡಿ ಕೊನೆಯಲ್ಲಿ ಸಿಮ್ ಕಾರ್ಡ ಅನ್ನು ವಿತರಣೆ ಮಾಡಲಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: