ಕೃಷಿಕ ಮಿತ್ರ ಓದುಗ ಮಿತ್ರರಿಗೆ ನಮಸ್ಕಾರಗಳು ಈ ಹಿಂದೆ ನಮ್ಮ ಪುಟದಿಂದ ಸರ್ಕಾರಿ ಯೋಜನೆಗಳು ಕೃಷಿ ಯೋಜನೆಗಳು ಕೃಷಿ ಯಂತ್ರೋಪಕರಣ ಮತ್ತು ಉಪಯುಕ್ತ ಮೊಬೈಲ್ ಅಪ್ಲಿಕೇಶನ್ ಗಳ ಕುರಿತು ಲೇಖನಗಳನ್ನು ಪ್ರಕಟಿಸುತ್ತಿದ್ದೆವು. ಇನ್ನು ಮುಂದೆ ಇದರ ಜೊತೆಯಲ್ಲಿ ನಮ್ಮ ಪುಟದಿಂದ ಹಣಕಾಸು ನಿರ್ವಹಣೆ(best investment plan), ಹೂಡಿಕೆ, ಹಣ ಉಳಿತಾಯ ವಿಷಯಗಳ ಕುರಿತು ಲೇಖನಗಳನ್ನು ಪ್ರಕಟಿಸಲಾಗುವುದು.
ಪ್ರಸ್ತುತ ದೇಶದಾದ್ಯಂತ ಹಣ ಹೂಡಿಕೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ SIP(Systematic investment plan) ಯೋಜನೆ ಕುರಿತು ಮತ್ತು ಸಾರ್ವಜನಿಕರು ಈ ಯೋಜನೆಯಲ್ಲಿ ಪ್ರತಿ ತಿಂಗಳು ಅಲ್ಪ ಪ್ರಮಾಣದ ಉಳಿತಾಯ ಮಾಡಿ ಹೆಚ್ಚು ಆದಾಯವನ್ನು ಹೇಗೆ ಗಳಿಸುವುದು ಎಂದು ವಿವರಿಸಲಾಗಿದೆ.
ಇದನ್ನೂ ಓದಿ: Dairy farm subsidy-ಹೈನುಗಾರಿಕೆಗೆ 40 ಸಾವಿರ ಸಹಾಯಧನ! ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ!
SIP- ಎಂದರೇನು? SIP ಹೇಗೆ ಕೆಲಸ ಮಾಡುತ್ತದೆ? SIP ಎಲ್ಲಿ ಹೂಡಿಕೆ ಪ್ರಯೋಜನಗಳೇನು? ಸಾರ್ವಜನಿಕರು ತಮ್ಮ ಮೊಬೈಲ್ನಲ್ಲೇ ಉತ್ತಮ ಅಪ್ಲಿಕೇಶನ್ಗಳನ್ನು ಬಳಕೆ ಮಾಡಿಕೊಂಡು ಪ್ರತಿ ತಿಂಗಳು ಹಣ ಉಳಿತಾಯ ಮಾಡುವುದು ಹೇಗೆ? SIP ಮಾಡಲು ಬೆಸ್ಟ್ ಮೊಬೈಲ್ ಆಪ್ ಯಾವುದು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
SIP- ಪ್ರತಿ ತಿಂಗಳು ರೂ 1,000 ಸಾವಿರ ಉಳಿತಾಯ ಮಾಡಿ 12 ಲಕ್ಷ ಆದಾಯ ಗಳಿಸುವುದು ಹೇಗೆ?
ನೀವೇನಾದರೂ SIP ಯಲ್ಲಿ ಪ್ರತಿ ತಿಂಗಳು 2 1000ವನ್ನು 15 ವರ್ಷಗಳವರೆಗೆ ನಿರಂತರವಾಗಿ ಉಳಿತಾಯ ಮಾಡಿಕೊಂಡು ಹೋದರೆ 15 ವರ್ಷಗಳ ಬಳಿಕ ನೀವು ಪಾವತಿಸಿದ ಒಟ್ಟು ಮೊತ್ತಕ್ಕೆ 20% return ಬಂದರು ನಿಮಗೆ 12 ಲಕ್ಷ ಆದಾಯ ದೊರೆಯುತ್ತದೆ.
ಇದನ್ನೂ ಓದಿ: Labour card application- ಕಾರ್ಮಿಕ ಮಂಡಳಿಯಿಂದ ಸ್ಮಾರ್ಟ್ ಕಾರ್ಡ! ಈ ಕಾರ್ಡ ಹೊಂದಿರುವವರಿಗೆ 5 ಲಕ್ಷ ವಿಮೆ ಸೌಲಭ್ಯ!
SIP- ಎಂದರೇನು?
SIP ಎಂದರೆ systematic investment plan ಎಂದು ಅರ್ಥ ಸಾರ್ವಜನಿಕರು ಹೂಡಿಕೆ ಮಾಡುವ ಹಣವನ್ನು ಷೇರು ಮಾರುಕಟ್ಟೆಯಲ್ಲಿರುವ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿ ಅಲ್ಲಿಂದ ಬಂದ ಹಣವನ್ನು ಹೂಡಿಕೆದಾರರಿಗೆ ಮರಳಿಸುವುದು. ನಿಮ್ಮ ಹಣವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಮತ್ತು ಶೇರು ಮಾರುಕಟ್ಟೆಯಲ್ಲಿ ಅಧಿಕ ಲಾಭವನ್ನು ನೀಡುವ ಕಂಪನಿಗಳಲ್ಲೇ invest ಮಾಡಲು fund manager ಗಳನ್ನು ನೇಮಿಸಲಾಗುತ್ತದೆ ಷೇರು ಮಾರುಕಟ್ಟೆ ಕುರಿತು ಹೆಚ್ಚಿನ ಮಾಹಿತಿ ಇಲ್ಲದವರು SIP ಯಲ್ಲಿ ಹೂಡಿಕೆ ಮಾಡುತ್ತಾರೆ.
SIP- ಹೇಗೆ ಕೆಲಸ ಮಾಡುತ್ತದೆ?
ಒಮ್ಮೆ ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ Mobile app ಗಳನ್ನು ಬಳಕೆ ಮಾಡಿಕೊಂಡು SIP plan ಅನ್ನು ಆಯ್ಕೆ ಮಾಡಿಕೊಂಡು invest ಮಾಡಲು ಪ್ರಾರಂಭಿಸಿದಾಗ ನಿಮ್ಮ Bank account ನಿಂದ ಪ್ರತಿ ತಿಂಗಳು ಹಣ automatic ಆಗಿ debit ಮಾಡಲಾಗುತ್ತದೆ. ಈ ಹಣವನ್ನು Fund manager ಗಳು Mutual Fund ನಲ್ಲಿ ಮರು ಹೂಡಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: Junior Power Man: KEB ಯಿಂದ SSLC ಪಾಸಾದವರಿಗೆ ಭರ್ಜರಿ ಉದ್ಯೋಗವಾಕಾಶ! 2,975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!
ಉದಾಹರಣೆಗೆ ಹೇಳುವುದಾದರೆ ನೀವು mutual fund ನಲ್ಲಿ ಒಂದು ಬಾರಿಗೆ 1 ಲಕ್ಷ ಹೂಡಿಕೆ ಮಾಡಲು ಬಯಸಿದ್ದೀರಾ ಎಂದುಕೊಳ್ಳೋಣ ಇಲ್ಲಿ ಎರಡು ಮಾರ್ಗಗಳಿವೆ ನೀವು ಒಂದೇ ಬಾರಿಗೆ 1 ಲಕ್ಷ ಹಣವನ್ನು ಹಾಕಬಹುದು ಅಥವಾ ಹಂತ ಹಂತವಾಗಿ ನಿಗದಿತ ಸಮಯ ತೆಗೆದುಕೊಂಡು ತಿಂಗಳಿಗೆ ಇಂತಿಷ್ಟರಂತೆ invest ಮಾಡಿಕೊಂಡು ಹೋಗುವುದಕ್ಕೆ SIP ಎನ್ನುತ್ತಾರೆ.
SIP ಯಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಲಾಭಗಳೇನು?
ಪ್ರಿಯ ಓದುಗ ಮಿತ್ರರೇ, ನೀವು SIP ಹೂಡಿಕೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅವುಗಳ ವಿವರ ಈ ಕೆಳಗಿನಂತಿವೆ
- ಷೇರು ಮಾರುಕಟ್ಟೆಯಲ್ಲಿ(Share market) ಅಧಿಕ ಮಟ್ಟದ ಜ್ಞಾನ ಇಲ್ಲದವರಿಗೆ SIPಯು ಸುರಕ್ಷಿತ ಹೂಡಿಕೆಯಾಗಿದೆ.
- ಇತರೆ ಬೇರೆ ಎಲ್ಲ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಎಸ್ಐಪಿಯು ಉತ್ತಮ Returns ನೀಡುತ್ತದೆ.
- ನೀವು ನಿಯಮಿತವಾಗಿ ಪ್ರತಿ ತಿಂಗಳು ನಿಮ್ಮ Income ನಲ್ಲಿ ಅಲ್ಪ Amount ಅನ್ನು ಉಳಿತಾಯ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು.
- SIP ಯಲ್ಲಿ ಹೂಡಿಕೆ ಮಾಡುವುದು ಹೂಡಿಕೆದಾರರಿಗೆ ರಿಸ್ಕ್ ಕಮ್ಮಿ ಇರುತ್ತದೆ.
ಇದನ್ನೂ ಓದಿ: Bigg boss kannada-ಬಿಗ್ ಬಾಸ್ ಗೆ ವಿದಾಯ ಹೇಳಿದ ಕಿಚ್ಚ ಸುದೀಪ್!
SIP ಮಾಡಲು ಬೆಸ್ಟ್ ಮೊಬೈಲ್ ಆಪ್ ಗಳಾವುವು?
ಬಳಕೆದಾರರು ಈ ಕೆಳಗೆ ತಿಳಿಸಿರುವ Mobile application ಗಳನ್ನು ತಮ್ಮ ಮೊಬೈಲ್ನಲ್ಲೇ Gogle play store ಗೆ ಭೇಟಿ ಮಾಡಿ download ಮಾಡಿಕೊಂಡು SIP ಯಲ್ಲಿ Invest ಮಾಡಬಹುದು ನಿಮ್ಮ Bank account ಅನ್ನು link ಮಾಡಿ ಪ್ರತಿ ತಿಂಗಳು ನಿಯಮಿತವಾಗಿ Invest ಮಾಡಬಹುದು.
APPS NAME | LINKS |
GROWW | DOWNLOAD NOW |
ZERODHA COIN | DOWNLOAD NOW |
ET MONEY | DOWNLOAD NOW |
PAYTM MONEY | DOWNLOAD NOW |
IND MONEY | DOWNLOAD NOW |
UPSTOX | DOWNLOAD NOW |
AXIS DIRECT(ACCESS MUTUAL FUND) | DOWNLOAD NOW |