South tour package- ರಾಜ್ಯ ಸರಕಾರದಿಂದ 6 ದಿನದ ದಕ್ಷಿಣ ಭಾರತ ಪ್ರವಾಸಕ್ಕೆ ರೂ 15,000/- ಸಾವಿರ ಸಹಾಯಧನ!

October 20, 2024 | Siddesh
South tour package- ರಾಜ್ಯ ಸರಕಾರದಿಂದ 6 ದಿನದ ದಕ್ಷಿಣ ಭಾರತ ಪ್ರವಾಸಕ್ಕೆ ರೂ 15,000/- ಸಾವಿರ ಸಹಾಯಧನ!
Share Now:

ರಾಜ್ಯ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಧಾರ್ಮಿಕ ದತ್ತಿ ಇಲಾಖೆಯಿಂದ ರಾಜ್ಯದ ಅರ್ಹ ನಾಗರಿಕರಿಗೆ 6 ದಿನದ ದಕ್ಷಿಣ ಭಾರತದ ಆಯ್ದ ಸ್ಥಳಗಳಿಗೆ ಪ್ರವಾಸವನ್ನು(South india tour package) ಕೈಗೊಳ್ಳಲು ರೂ 15,000/- ಸಾವಿರ ಸಹಾಯಧನ.

ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಕ್ಷೇತ್ರಗಳ(DAKSHINA YATRA) ಯಾತ್ರೆಯನ್ನು ಆಯೋಜನೆ ಮಾಡಲಾಗಿದ್ದು. ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ ಈ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 6 ದಿನಗಳ ಪ್ರವಾಸ ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ: Bussiness Loan- ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ 1.5 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ಪ್ರವಾಸ ಸಬ್ಸಿಡಿ ವಿವರ ಹೀಗಿದೆ:

  • ಈ ಪ್ಯಾಕೇಜ್‌ಗೆ ಒಟ್ಟು ವೆಚ್ಚ:- ₹25,000
  • ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ ಸಹಾಯಧನ:- ₹15,000 ಭರಿಸಲಾಗುತ್ತದೆ.
  • ಯಾತ್ರಾರ್ಥಿಗಳು ಬುಕ್ಕಿಂಗ್‌ ಮೊತ್ತವಾಗಿ ₹10,000 ಮಾತ್ರ ಪಾವತಿಸಬೇಕಾಗುತ್ತದೆ.

6 ದಿನದ ಪ್ರವಾಸದ ಸೌಲಭ್ಯಗಳ ವಿವರ:

ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.

3 ಟೈರ್‌ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ.

ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ.

ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು:

1) ಬೆಳಗಾವಿ
2) ಹುಬ್ಬಳಿ
3) ಹಾವೇರಿ
4) ದಾವಣಗೆರೆ
5) ಬಿರೂರ್
6) ತುಮಕೂರು
7) ಬೆಂಗಳೂರು

ಯಾವೆಲ್ಲ ಸ್ಥಳಗಳನ್ನು ತೋರಿಸಲಾಗುತ್ತದೆ:

1) ಕನ್ಯಾಕುಮಾರಿಯಲ್ಲಿ ಭಾಗವತಿ ದೇವಸ್ಥಾನ, ವಿವೇಕಾನಂದ ರಾಕ್ ಮೇಮೋರಿಯಲ್

2) ತಿರುವನಂತಪುರಂ ನಲ್ಲಿ ಶ್ರೀ ಪದ್ಮನಾಂದಸ್ವಾಮಿ ದೇವಸ್ಥಾನ.

3) ರಾಮೇಶ್ವರದಲ್ಲಿ ರಾಮನಾಥಸ್ವಾಮಿ ದೇವಸ್ಥಾನ.

4) ಮದುರೈನಲ್ಲಿ ಮೀನಾಕ್ಷಿ ದೇವಸ್ಥಾನ.

ಪ್ರವಾಸ ಆರಂಭವಾಗುವ ದಿನಾಂಕ: 25-10-2024
ಪ್ರವಾಸ ಮುಕ್ತಾಯವಾಗುವ ದಿನಾಂಕ: 30-10-2024

ಇದನ್ನೂ ಓದಿ: Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ಪ್ರವಾಸಕ್ಕೆ ಟ್ರೈನ್ ಟಿಕೆಟ್ ಬುಕ್ ಮಾಡುವ ವಿಧಾನ:

ಆಸಕ್ತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಪ್ರವಾಸಕ್ಕೆ ಹೋಗಲು ರೈಲು ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದು.

Step-1: ಮೊದಲು ಈ Book Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಈ ಪೇಜ್ ನಲ್ಲಿ ಕೆಳಗೆ ಕಾಣಿಸುವ "Book Now" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

South india tour

ಇದನ್ನೂ ಓದಿ: Best mileage bikes-ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು!ಫುಲ್ ಟ್ಯಾಂಕ್ ಮಾಡಿದರೆ 700-750 km ಓಡಿಸಬಹುದು!

Step-3: ನಂತರ ಇಲ್ಲಿ Tour "Starting date" "Boarding station" "Deboarding Station" ಈ ಮೂರನ್ನು ಆಯ್ಕೆ ಮಾಡಿಕೊಂಡು ಕೆಳಗೆ ಕೊನೆಯಲ್ಲಿ "No of Pax" ಆಯ್ಕೆಯಲ್ಲಿ ಎಷ್ಟು ಜನ ಎಂದು ಆಯ್ಕೆ ಮಾಡಿಕೊಂಡು "Continue" ಬಟನ್ ಮೇಲೆ ಕ್ಲಿಕ್ ಮಾಡಬೇಕು.

South india tour package

Step-4: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಇಲ್ಲಿ "Guest user login" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೆಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಹಾಕಿ ಪ್ರವಾಸಕ್ಕೆ ತೆರಲುವ ಅಭ್ಯರ್ಥಿಗಳ ವಿವರವನ್ನು ಹಾಕಿ ಕೊನೆಯಲ್ಲಿ ಹಣ ಪಾವತಿ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬುಕಿಂಗ್ ಪೂರ್ಣಗೊಳ್ಳುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: