Sprinkler pipes Subsidy- ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

February 17, 2025 | Siddesh
Sprinkler pipes Subsidy- ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
Share Now:

ಕೃಷಿ ಇಲಾಖೆಯಿಂದ 2024-25 ನೇ ಸಾಲಿನ ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯಡಿ(PMKSY) ಎಲ್ಲಾ ವರ್ಗದ ರೈತರಿಗೆ ಶೇ 90 ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್(Sprinkler Set ) ಅನ್ನು ಒದಗಿಸಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಬೇಸಿಗೆ ಸಮಯದಲ್ಲಿ ರೈತರು ತಮ್ಮ ಬೆಳೆಗಳಿಗೆ ನೀರನ್ನು ಒದಗಿಸಲು ತುಂತುರು ನೀರಾವರಿ ಘಟಕವನ್ನು(Sprinkler Set Application) ಪಡೆಯಲು ಇಲಾಖೆಯಿಂದ ಆರ್ಥಿಕ ನೆರವು ನೀಡಲು ಸಹಾಯಧನದಲ್ಲಿ ಸ್ಪಿಂಕ್ಲರ್ ಪೈಪ್ ಮತ್ತು ಜೆಟ್ ಅನ್ನು ಒದಗಿಸಲಾಗುತ್ತದೆ.

ರೈತರು ಈ ಯೋಜನೆಯಡಿ ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ರೈತರ ವಂತಿಕೆಯನ್ನು ಎಷ್ಟು ಪಾವತಿ ಮಾಡಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ನಿಯಮಗಳು ಯಾವುವು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Birth Certificate-ಹೈಕೋರ್ಟ್ ನಿಂದ ಜನನ ಪ್ರಮಾಣ ಪತ್ರದ ಕುರಿತು ಮಹತ್ವದ ತೀರ್ಪು!

Sprinkler Set Subsidy Amount-ರೈತರಿಗೆ ಈ ಯೋಜನೆಯಡಿ ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಒದಗಿಸುವ ತುಂತುರು ನೀರಾವರಿ ಘಟಕಕ್ಕೆ ಶೇ 90% ಸಬ್ಸಿಡಿಯನ್ನು ನೀಡಲಾಗುತ್ತದೆ ರೈತರು ಪೈಪ್ ಸರಬರಾಜು ಕಂಪನಿಗೆ ₹4,667/- ರೂ ರೈತರ ವಂತಿಕೆಯನ್ನು ಪಾವತಿ ಮಾಡಿ ತುಂತುರು ನೀರಾವರಿ ಘಟಕವನ್ನು ಪಡೆಯಬಹುದು.

Sprinkler pipes Details-ಈ ಯೋಜನೆಯಡಿ ಎಷ್ಟು ಪೈಪ್ ಮತ್ತು ಸ್ಪಿಂಕ್ಲರ್ ಒದಗಿಸಲಾಗುತ್ತದೆ?

ಕೃಷಿ ಇಲಾಖೆಯಿಂದ(Karnataka Agriculture Department) ರೈತರಿಗೆ ಬೇಸಿಗೆ ಸಮಯದಲ್ಲಿ ಬೆಳೆಗಳಿಗೆ ನೀರನ್ನು ಒದಗಿಸಲು ಈ ಯೋಜನೆಯಡಿ ಸಹಾಯಧನದಲ್ಲಿ 30 ಪೈಪ್ಸ್ ಮತ್ತು 5 ಜೆಟ್ಸ್, ಕ್ಲಾಂಪ್ಸ್, ಕಪಲರ್ಸ್,ಎಂಡ್ ಕ್ಯಾಪ್ಸ್, ವಾಷರ್ಸ್,T ಸಲಕರಣೆಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Crop Insurance List-ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿ ಬಿಡುಗಡೆ!

Sprinkler Set Application

Required Documents For Sprinkler pipes-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರ ರೈತರ ಜಮೀನಿನ ಪಹಣಿ
2) ಆಧಾರ್ ಕಾರ್ಡ ಪ್ರತಿ
3) ಬ್ಯಾಂಕ್ ಪಾಸ್ ಬುಕ್ ಪ್ರತಿ
4) ಬೆಳೆ ಧೃಡೀಕರಣ ಪ್ರಮಾಣ ಪತ್ರ
5) ಕೊಳವೆ ಭಾವಿ ಧೃಡೀಕರಣ ಪತ್ರ
6) ₹100 ರೂ ಛಾಪಾ ಕಾಗದ
7) ಪೋಟೋ

How To Apply For Sprinkler Set Yojana-ಅರ್ಜಿಯನ್ನು ಸಲ್ಲಿಸುವ ವಿಧಾನ:

ಆಸಕ್ತ ಅರ್ಹ ಅರ್ಜಿದಾರ ರೈತರು ಮೇಲೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು(RSK) ಕಚೇರಿ ಸಮಯದಲ್ಲಿ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Post office recruitment-ಅಂಚೆ ಇಲಾಖೆಯಲ್ಲಿ ಬರೋಬ್ಬರಿ 21,413 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ!

Who Can Apply For Sprinkler Set Scheme-ಯಾರೆಲ್ಲ ಅರ್ಜಿ ಸಲ್ಲಿಸಿ ಸ್ಪಿಂಕ್ಲರ್ ಸೆಟ್ ಪಡೆಯಬಹುದು?

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

ಅರ್ಜಿದಾರರು ತಮ್ಮ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು.

ಕಳೆದ 7 ವರ್ಷಗಳಲ್ಲಿ ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆದಿರಬಾರದು.

ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಎಲ್ಲಾ ವರ್ಗದ ರೈತರಿಗೂ ಶೇ 90% ಸಬ್ಸಿಡಿ:

ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯಡಿ ಪ.ಜಾ/ಪ.ಪ ಹಾಗೂ ಇತರೆ ಎಲ್ಲಾ ವರ್ಗದ ರೈತರಿಗೂ ಸಹ ಸರಿ ಸಮಾನವಾಗಿ ಶೇ 90% ಸಬ್ಸಿಡಿಯಲ್ಲಿ ತುಂತುರು ನೀರಾವರಿ ಘಟಕವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Uchitha Holige Tarabeti-ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿ!

Sprinkler Pipe Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ರೈತರು ತಾವೇ ಸ್ವಂತ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು Apply Now ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೃಷಿ ಇಲಾಖೆಯ ಅಧಿಕೃತ ಕೆ-ಕಿಸಾನ್ ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಬಹುದು.

Agriculture Department-ಕೃಷಿ ಇಲಾಖೆಯ ಅಧಿಕೃತ ಜಾಲತಾಣ- CLICK HERE
Helpline-ಸಹಾಯವಾಣಿ- 1800 425 3553

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: