Sugarcane rate in karnataka-2023: ಕಬ್ಬು ಪೂರೈಕೆ ಮತ್ತು ದರ ಕುರಿತು ಪ್ರಕಟಣೆ ಹೊರಡಿಸಿದ ಶುಗರ್ ಪ್ಯಾಕ್ಟರಿಗಳು!

Sugarcane rate in karnataka: ರಾಜ್ಯಾದ್ಯಂತ ಕಬ್ಬು ನುರಿಸಲು ಎಲ್ಲಾ ಜಿಲ್ಲೆಗಳಲ್ಲಿ ರ್ಕಾಖಾನೆಗಳು ಪೂರ್ವ ತಯಾರಿಯನ್ನು ಮಾಡಿಕೊಳ್ಳುತಿದ್ದು ಕೆಲವು ಕಾರ್ಖಾನೆಗಳು ತಮ್ಮ ಈ ವರ್ಷದ ಕಬ್ಬಿನ ದರವನ್ನು ನಿಗದಿ ಮಾಡಿವೆ ಈ ಪೈಕೆ ಒಂದಿಷ್ಟು ಪ್ಯಾಕ್ಟರಿಯ ದರ ವಿವರವನ್ನು ಈ ಅಂಕಣದಲ್ಲಿ ಪ್ರಕಟಣೆ ಮಾಡಲಾಗಿದೆ.

ಚಿಕ್ಕೋಡಿಯ ಕಾಗವಾಡ ವ್ಯಾಪ್ತಿಯ ಉಗಾರ ಶುಗರ್ ಪ್ಯಾಕ್ಟರಿಯಿಂ ದರ ಕುರಿತು ಈ ರೀತಿ ಪ್ರಕಟಣೆ ಹೊರಡಿಸಿದೆ ಕಾರ್ಖಾನೆಗೆ ಕಬ್ಬು ಪೂರೈಸುವ ಎಲ್ಲಾ ರೈತ ಬಾಂಧವರಿಗೆ ಈ ಮೂಲಕ ತಿಳಿಸುವದೆನೆಂದರೇ 2023-24 ನೇ  ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿಗಾಗಿ ಸರಕಾರದಿಂದ ನಮ್ಮ ಕಾರ್ಖಾನೆಗೆ ನಿಗದಿ ಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (F.R.P.) ರೂ. 3,564/- ಪ್ರತಿ ಟನ್ (ಕಬ್ಬಿನ ಬೆಲೆ, ಸರಾಸರಿ ಕಬ್ಬು ಕಟಾವು, ಸಾಗಾಣಿಕೆ ವೆಚ್ಚ ಮತ್ತು ಸರಕಾರಿ ಅನುದಾನ ಸಹಿತ ) ಇರುವದು.

ಸರಾಸರಿ ಕಬ್ಬು ಕಟಾವು ಹಾಗು ಸಾಗಾಣಿಕೆ ವೆಚ್ಚ ವಜಾ ಮಾಡಿ ಸರಕಾರಿ ಅನುದಾನಸಹಿತ ರೂ. 2,900/- ಪ್ರತಿ ಟನ್‌ಗೆ ನೀಡಲು ಕಾರ್ಖಾನೆಯ ವ್ಯವಸ್ಥಾಪಕ ಮಂಡಳಿ ನಿರ್ಧರಿಸಿದೆ. ಇದರಂತೆ ರೈತರು ಈ  2023-24 ನಲ್ಲಿ ಹೆಚ್ಚಾನು ಹೆಚ್ಚು ಕಬ್ಬು ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು ಎಂದು ರ್ಕಾಖಾನೆಯ ಎಮ್ ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: KSRTC Job Notification-2023: ಸರಕಾರಿ ಉದ್ಯೋಗಾಂಕ್ಷಿಗಳಿಗೆ ಶುಭ ಸುದ್ದಿ, 8 ವರ್ಷದ ಬಳಿಕ ಕರ್ನಾಟಕ ಸಾರಿಗೆ ನಿಗಮಕ್ಕೆ 6,500 ಹುದ್ದೆ ನೇಮಕಾತಿಗೆ ಅನುಮೋದನೆ!

Sugarcane rate- ಇತರೆ ಕಾರ್ಖಾನೆಗಳ ಕಬ್ಬಿನ ದರ ವಿವರ:

ಹಾವೇರಿ ಜಿಲ್ಲೆಯಲ್ಲಿ 3 ಕಾರ್ಖಾನೆಗಳು ಕಬ್ಬು ನುರಿಸಲು ಸಿದ್ಧತೆಯನ್ನು ನಡೆಸುತ್ತಿದ್ದು ಇದರಲ್ಲಿ ಶಿಗ್ಗಾವಿಯ ಕಬ್ಬಿನ ಕಾರ್ಖಾನೆ ದರ 3070 ರೂ. ಹಾಗೂ ಹಾವೇರಿ ಜಿ.ಎಂ., ಶುಗರ್ಸ್ 2973 ರೂ. ದರ ನಿಗದಿಪಡಿಸಿವೆ. ತುಮ್ಮಿನಕಟ್ಟಿ ಕಾರ್ಖಾನೆ ಇನ್ನೂ ದರ ನಿಗದಿಪಡಿಸಿಲ್ಲ. ಪಕ್ಕದ ಬಳ್ಳಾರಿ ಜಿಲ್ಲೆಯ ಮೈಲಾ‌ ಶುಗರ್ಸ್ 3015 ರೂ. ದರ ನಿಗದಿ ಮಾಡಿದೆ.

sugar factory in karnataka- ನವೆಂಬರ್ 1 ರಿಂದ ಕಬ್ಬು ನುರಿಸಲು ಜಿಲ್ಲಾದಿಕಾರಿಗಳಿಂದ ಸೂಚನೆ:

ಕಬ್ಬಿನ ರ್ಕಾಖಾನೆಗಳ ಮಧ್ಯ ಪೈಪೂಟಿ ಕಬ್ಬಿನ ಕೊರತೆ ತಗ್ಗಿಸಲು ಎಲ್ಲಾ ರ್ಕಾಖಾನೆಗಳು ಏಕ ಕಾಲಕ್ಕೆ 1 ನವೆಂಬರ್ 2023 ರಿಂದ ಕಬ್ಬನ್ನು ನುರಿಸುವಂತೆ ಜಿಲ್ಲಾದಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: Bele parihara status- 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

Sugarcane FRP rate-2023: ಎಫ್ ಆರ್ ಪಿ ದರ ಏರಿಕೆ ಮನವಿ ಪತ್ರ ಸಲ್ಲಿಕೆ:

ರಾಜ್ಯದ ಎಲ್ಲಾ ಕಬ್ಬು ಬೆಳೆಗಾರರವತಿಯಿಂದ ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಒತ್ತಾಯಿಸಿ ಕುರುಬೂರು ಶಾಂತಕುಮಾರ್ ದೆಹಲಿಯ ಕೃಷಿ ಭವನದಲ್ಲಿ ನಡೆದ ಸಿ ಎ ಸಿ ಪಿ ಸಭೆಯಲ್ಲಿ  ಮನವಿ ಪತ್ರ ಸಲ್ಲಿಸಿದ್ದಾರೆ. ಇದರ ವಿವರ ಈ ಕೆಳಗೆ ತಿಳಿಸಲಾಗಿದೆ.

ಕಬ್ಬಿನ ಎಫ್ ಆರ್ ಪಿ ದರ ನಿಗದಿ ರೈತರಿಗೆ ಅನ್ಯಾಯವಾಗುತ್ತಿದೆ ಕಬ್ಬಿನ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ದರ ನಿಗದಿಯಾಗುತ್ತಿದೆ ಸಕ್ಕರೆ ಇಳುವರಿ 8.5 ರಿಂದ 10.25 ವರಗೆ ಏರಿಕೆ ಮಾಡಿರುವುದು ರೈತರಿಗೆ ಅನ್ಯಾಯವಾಗುತ್ತಿದೆ, ರಾಜ್ಯದಲ್ಲಿ 1-2 ಎಕರೆ ಕಬ್ಬು ಬೆಳೆಯುವ ರೈತರೆ ಹೆಚ್ಚು ಇರುವ ಕಾರಣ ಕಬ್ಬು ಉತ್ಪಾದನಾ ವೆಚ್ಚವನ್ನು ಪರಿಗಣಿಸುವಾಗ ಪ್ರತಿ ಹೆಕ್ಟರ್ ಗೆ ಬದಲಾಗಿ ಎಕರೆಗೆ ಲೆಕ್ಕ ಹಾಕಬೇಕು.

ಈಗ ಎಫ್ ಆರ್ ಪಿ ದರ ಏರಿಕೆ ಮಾಡಿದ ಹೆಚ್ಚುವರಿ ಹಣ ರೈತರಿಗೆ ಸಿಗುತ್ತಿಲ್ಲ, ಕಬ್ಬಿನ ಕಟಾವು ಸಾಗಾಣಿಕೆ ರೈತರಿಗೆ ಸಂಕಷ್ಟವಾಗಿದೆ ಕಬ್ಬಿನ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಗೊಳಿಸಿ ಪ್ರತಿ ಟನ್ ಕಬ್ಬು ಬೆಳೆಯಲು ಕನಿಷ್ಠ 3600 ಉತ್ಪಾದನಾ ವೆಚ್ಚವಾಗುತ್ತದೆ.

ಅದಕ್ಕೆ ಲಾಭ ಸೇರಿಸಿ 4000 ಕನಿಷ್ಠ ನಿಗದಿ ಮಾಡಬೇಕು ಎಂದು ದೆಹಲಿಯ ಕೃಷಿ ಭವನದಲ್ಲಿ ನಡೆದ ಸಿ ಎ ಸಿ ಪಿ ಸಭೆಯಲ್ಲಿ ರಾಜ್ಯಾಧ್ಯಕ್ಷರು ಕುರುಬೂರು ಶಾಂತಕುಮಾರ್ ಒತ್ತಾಯಿಸಿ ಹಲವಾರು ಪ್ರಮುಖ ವಿಷಯಗಳ ಬಗೆ ಕೇಂದ್ರದ ಗಮನ ಸೆಳೆದರು.

ಇದನ್ನೂ ಓದಿ: Rabi MSP price- 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.