Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!

November 1, 2024 | Siddesh
Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!
Share Now:

ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೇಂದ್ರ ಸರಕಾರದಿಂದ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Yojana) ಅನುಷ್ಥಾನ ಮಾಡಲಾಗುತ್ತಿದ್ದು, ಈ ಯೋಜನೆಯಡಿ ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕೆ ಮತ್ತು ಮದುವೆ ವೆಚ್ಚಕ್ಕೆ ಅರ್ಥಿಕವಾಗಿ ಸಬಲರಾಗಲು ನೆರವು ನೀಡಲಾಗುತ್ತದೆ.

ಕೇಂದ್ರದಿಂದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕೇಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು ಈ ಬದಲಾವಣೆಯಿಂದ ಫಲಾನುಭವಿಗಳಿಗೆ ಈ ಯೋಜನೆಯ(best savings plans) ಮೂಲಕ ಇನ್ನು ಹೆಚ್ಚಿನ ಅರ್ಥಿಕ ನೆರವನ್ನು ಪಡೆಯಲು ಸಹಾಯಕವಾಗಲಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಯಾವೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ? ಇದರಿಂದ ಫಲಾನುಭವಿಗಳಿಗೆ ಏನೆಲ್ಲ ಲಾಭಗಳಾಗುತ್ತವೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Waqf board-ಏನಿದು ವಕ್ಫ್ ಕಾಯ್ದೆ? ಇದರಿಂದ ರೈತರಿಗೆ ಹೇಗೆ ತೊಂದರೆಯಾಗುತ್ತದೆ? ಇಲ್ಲಿದೆ ಸಂಪೂರ್ಣ ವಿವರ!

Sukanya samriddhi yojana details-ಏನಿದು ಸುಕನ್ಯಾ ಸಮೃದ್ಧಿ ಯೋಜನೆ?

ಸುಕನ್ಯಾ ಸಮೃದ್ಧಿ ಯೋಜನೆಯಡಿ ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ಪೋಸ್ಟ್ ಅಪೀಸ್ ನಲ್ಲಿ ಖಾತೆಯನ್ನು ತೆರೆದು ಪ್ರತಿ ವರ್ಷ ಇಂತಿಷ್ಟು ಹಣವನ್ನು ಠೇವಣಿ ಮಾಡಿಕೊಂಡು ಹೋಗಬೇಕು ಹೆಣ್ಣು ಮಗುವಿಗೆ 21 ವರ್ಷ ಅಗುವವರಿಗೂ ಪ್ರತಿ ವರ್ಷ ಒಂದಿಷ್ಟು ಹಣವನ್ನು ಠೇವಣಿ ಮಾಡಿದರೆ ಕೊನೆಯಲ್ಲಿ ಉತ್ತಮ ಬಡ್ಡಿದರದಲ್ಲಿ ದೊಡ್ಡ ಮೊತ್ತವನ್ನು ಈ ಯೋಜನೆಯಡಿಯಲ್ಲಿ ಪಡೆಯಬಹುದು.

Who can apply for Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಯಾರೆಲ್ಲ ಅರ್ಹರು?

1) ಹೆಣ್ಣು ಮಗುವಿನ ವಯಸ್ಸು 10 ವರ್ಷಕ್ಕಿಂತ ಹೆಚ್ಚಿರಬಾರದು.

2) ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.

3) ಒಂದು ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: NPCI mapping status-ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಲು ಅಪ್ಲಿಕೇಶನ್ ಬಿಡುಗಡೆ!

Sukanya Samriddhi Yojana

ಕೇಂದ್ರ ಸರಕಾರದಿಂದ ಪ್ರಮುಖವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 5 ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ ಅವುಗಳ ವಿವರ ಹೀಗಿದೆ:

1) ಬಡ್ಡಿ ದರದಲ್ಲಿ ಪರಿಷ್ಕರಣೆ-Rate of Interest
2) ಠೇವಣಿ ಮಿತಿಯಲ್ಲಿ ಏರಿಕೆ-Investment term
3) ಹಣ ಹಿಂಪಡೆಯುವ ತೀರ್ಮಾನದ ಅವಧಿ ವಿಸ್ತರಣೆ-Sukanya samriddhi Yojana plan
4) ಅಕೌಂಟ್ ತೆರೆಯುವ ವಿಧಾನದಲ್ಲಿ ಸರಳೀಕರಣ- Sukanya samriddhi account
5) ತೆರಿಗೆ ವಿನಾಯಿತಿ-Income tax

1) ಬಡ್ಡಿ ದರದಲ್ಲಿ ಪರಿಷ್ಕರಣೆ/Rate of Interest

ಈ ಯೋಜನೆಯಡಿ ಕೇಂದ್ರ ಸರಕಾರವು ಈ ಹಿಂದೆ ನೀಡುತ್ತಿದ್ದ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಲಾಗಿದ್ದು ಪ್ರಸ್ತುತ ಈ ಯೋಜನೆಯಡಿ ಫಲಾನುಭವಿಗಳಿಗೆ 8.2% ಬಡ್ಡಿದರ ನೀಡಲಾಗುತ್ತದೆ. ಇದರಿಂದ ಫಲಾನುಭವಿಗಲಿಗೆ ಇನ್ನು ಹೆಚ್ಚಿನ ಆದಾಯ ಗಳಿಕೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: Student stipend application-ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

2) ಠೇವಣಿ ಮಿತಿಯಲ್ಲಿ ಏರಿಕೆ/Investment term

ಈ ಯೋಜನೆಯ ಠೇವಣಿ ಮಿತಿಯಲ್ಲಿ ಏರಿಕೆ ಮಾಡಲಾಗಿದ್ದು ಪ್ರತಿವರ್ಷ 1.5 ಲಕ್ಷದ ವರೆಗೆ ಠೇವಣಿಯನ್ನು ಮಾಡಿಕೊಂಡು ಹೋಗಬಹುದಾಗಿದೆ.

3) ಹಣ ಹಿಂಪಡೆಯುವ ತೀರ್ಮಾನದ ಅವಧಿ ವಿಸ್ತರಣೆ/Sukanya samriddhi Yojana plan

ಸುಕನ್ಯಾ ಸಮೃದ್ಧಿ ಯೋಜನೆಯಡಿ ಅಕೌಂಟ್ ಅನ್ನು ತೆರೆದು ಪ್ರತಿ ವರ್ಷ ಇಂತಿಷ್ಟು ಠೇವಣಿಯನ್ನು ಇರಿಸಿಕೊಂಡು ಹೋಗಲಾಗುತ್ತದೆ ಇನ್ನು ಮುಂದೆ ಇದನ್ನು 21 ವರ್ಷದ ವರೆಗೆ ಮುಂದುವರೆಸಿಕೊಂಡು ಹೋಗಬಹುದು ಈ ಹಿಂದೆ ಇದ್ದ 14 ವರ್ಷ ಮಿತಿಯನ್ನು 21 ವರ್ಷಕ್ಕೆ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: Voter ID list- ಹಳ್ಳಿವಾರು ಅಧಿಕೃತ ಮತದಾರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ!

4) ಅಕೌಂಟ್ ತೆರೆಯುವ ವಿಧಾನದಲ್ಲಿ ಸರಳೀಕರಣ/Sukanya samriddhi account

ಸುಕನ್ಯಾ ಸಮೃದ್ಧಿ ಯೋಜನೆ ಪ್ರಯೋಜನವನ್ನು ಪಡೆಯಲು ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಖಾತೆಯನ್ನು ತೆರೆಯುವುದನ್ನು ಮತ್ತೊಷ್ಟು ಸರಳೀಕರಣ ಗೊಳಿಸಲಾಗಿದೆ. ಅರ್ಜಿದಾರರು ತಮ್ಮ ಹಳ್ಳಿಗೆ ಹತ್ತಿರವಿರುವ ಪೋಸ್ಟ್ ಅಪೀಸ್ ಅನ್ನು ನೇರವಾಗಿ ಭೇಟಿ ಮಾಡಿ ಖಾತೆಯನ್ನು ತೆರೆಯಬಹುದು.

5) ತೆರಿಗೆ ವಿನಾಯಿತಿ/Income tax

ಫಲಾನುಭವಿಗಳು ಈ ಯೋಜನೆಯಡಿ ಪಡೆಯುವ ಒಟ್ಟು ಉಳಿತಾಯ ಹಣಕ್ಕೆ ಕೇಂದ್ರ ಸರಕಾರದಿಂದ ತೆರಿಗೆ ವಿನಾಯಿತಿಯನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ನಲ್ಲಿ ಪಡೆಯಬಹುದಾಗಿದೆ.

Sukanya Samriddhi Yojana Calculator- ಸುಕನ್ಯಾ ಸಮೃದ್ಧಿ ಯೋಜನೆಯಡಿ ಎಷ್ಟು ರಿಟರ್ನ್ಸ್ ಪಡೆಯಬಹುದು?

ಈ ಯೋಜನೆಯಡಿ ಉದಾಹರಣೆಗೆ ಹೇಳುವುದಾದರೆ ನೀವು ಒಂದು ವರ್ಷಕ್ಕೆ ರೂ 10,000/- ದಂತೆ ಒಟ್ಟು 21 ವರ್ಷದ ವರೆಗೆ ಪ್ರತಿ ವರ್ಷ ಪಾವತಿ ಮಾಡುತ್ತಾ ಹೋದರೆ 21 ವರ್ಷದ ಬಳಿಕ ನಿಮಗೆ ನೀವು ಪಾವತಿ ಮಾಡಿದ ಒಟ್ಟು ಮೊತ್ತಕ್ಕೆ 4.6 ಲಕ್ಷ ರಿಟರ್ನ್ಸ್ ಹಣವನ್ನು ಪಡೆಯಬಹುದು ಬಡ್ಡಿದರ ಶೇ 8.2% ರಂತೆ.

Sukanya Samriddhi Yojana Calculator: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: