- Advertisment -
HomeGovt SchemesTogari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!

Togari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!

ರಾಜ್ಯ ಸರಕಾರದಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ತೊಗರಿ ಬೆಳೆಯನ್ನು(Togari MSP) ಖರೀದಿ ಮಾಡಲು ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ರೈತರ ನೋಂದಣಿಯನ್ನು ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಕೇಂದ್ರ ಸರಕಾರದಿಂದ ರೈತರಿಂದ ನೇರವಾಗಿ ಖರೀದಿ ಮಾಡುವ ಪ್ರತಿ ಕ್ವಿಂಟಾಲ್ ತೊಗರಿಗೆ(Togari MSP Rate) ರೂ.7,550 ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದ್ದು ರಾಜ್ಯ ಸರಕಾರವು ಇದಕ್ಕೆ ಹೆಚ್ಚುವರಿಯಾಗಿ ರೂ.450 ಸೇರಿಸಿ ಒಟ್ಟು 8,000/- ರೂ ಅನ್ನು ಒಂದು ಕ್ವಿಂಟಾಲ್ ತೊಗರಿಗೆ ದರವನ್ನು ನಿಗಡಿಪಡಿಸಲಾಗಿರುತ್ತದೆ.

ಬೆಂಬಲ ಬೆಲೆ ಯೋಜನೆಯಡಿ ತೊಗರಿಯನ್ನು ಮಾರಾಟ(Togari MSP Price) ಮಾಡಲು ರೈತರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ನೋಂದಣಿಯನ್ನು ಮಾಡಿಕೊಳ್ಳಲು ಬೇಕಾಗುವ ದಾಖಲೆಗಳೇನು? ಇನ್ನಿತರೆ ವಿವರಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PM-Kisan 19th installment- ಈ ದಿನ ಪಿ ಎಂ ಕಿಸಾನ್ 19ನೇ ಕಂತಿನ ಹಣ ರೈತರ ಖಾತೆಗೆ!

CM of Karnataka-ರಾಜ್ಯ ಸರ್ಕಾರದಿಂದ ಹೆಚ್ಚುವರು ರೂ.450: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರಕಾರವು ರೈತರಿಂದ ನೇರವಾಗಿ ತೋಗರಿಯನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಕ್ವಿಂಟಾಲ್‌ ತೊಗರಿಗೆ ರೂ.7,550 ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ರೂ. 450 ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ.
ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ಕೂಡ ದೊರೆತಿದ್ದು ನಾಡಿನ ತೊಗರಿ ಬೆಳೆಗಾರರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ರಾಜ್ಯದ ರೈತರ ಜೊತೆ ನಮ್ಮ ಸರ್ಕಾರ ಸದಾಕಾಲ ಇರಲಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: KSOU Admission-ಮನೆಯಲ್ಲೇ ಕುಳಿತು ಓದಿ ಡಿಗ್ರಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆಯಲು ಅವಕಾಶ!

Togari MSP

Togari Sell-ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಮಾರಾಟ ಮಾಡಲು ಈ ವಿಧಾನ ಅನುಸರಿಸಿ:

ರೈತರು ತಾವು ಬೆಳೆದಿರುವ ತೊಗರಿ ಬೆಳೆಯನ್ನು ಕನಿಷ್ಥ ಬೆಂಬಲ ಬೆಲೆಯಲ್ಲಿ ಸರಕಾರಕ್ಕೆ ಮರು ಮಾರಾಟ ಮಾಡಲು ಮೊದಲು ಖರೀದಿ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು. ಒಮ್ಮೆ ನೋಂದಣಿಯನ್ನು ಮಾಡಿಕೊಂಡ ಬಳಿಕ ಇಂತಹ ದಿನ ತೊಗರಿಯನ್ನು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬರಬೇಕು ಎಂದು ರೈತರಿಗೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಆ ದಿನ ನಿಮ್ಮ ಉತ್ಪನ್ನವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು.

Togari MSP Amount-ಹಣ ಸಂದಾಯ ಹೇಗೆ ಮಾಡಲಾಗುತ್ತದೆ?

ಒಮ್ಮೆ ತೊಗರಿಯನ್ನು ಕನಿಷ್ಥ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳ ಮೂಲಕ ಸರಕಾರಕ್ಕೆ ತೊಗರಿಯನ್ನು ಮಾರಾಟ ಮಾಡಿದ ಬಳಿಕ ಒಂದರಿಂದ ಎರಡು ವಾರದ ಒಳಗಾಗಿ ರೈತರ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Land registration-ಆಸ್ತಿ ನೋಂದಣಿ ಮಾಡಿಕೊಳ್ಳುವರಿಗೆ ಇಲ್ಲಿದೆ ನೂತನ ಮಾಹಿತಿ!

Documents For Togari MSP Yojana-ನೋಂದಣಿಗೆ ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರ ರೈತರ ಆಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ತೊಗರಿ ಬೆಳೆದಿರುವ ಜಮೀನಿನ ಪಹಣಿ/ಊತಾರ್/RTC
4) ಮೊಬೈಲ್ ನಂಬರ್

ಸೂಚನೆ: ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಜಮೀನಿನ ಬೆಳೆಯು ತೊಗರಿ ಎಂದು ನಮೂದಿಸಿರುವುದು ಕಡ್ಡಾಯವಾಗಿದೆ.

Togari Kharidi Kendra-ನಿಮ್ಮ ಜಿಲ್ಲೆಯ ಖರೀದಿ ಕೇಂದ್ರದ ಮಾಹಿತಿ ಪಡೆಯುವುದು ಹೇಗೆ?

ನಿಮ್ಮ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರವನ್ನು ಎಲ್ಲಿ ತೆರೆಯಲಾಗಿದೆ ಎನ್ನುವ ಮಾಹಿತಿಯನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಮಾರಾಟ ಇಲಾಖೆ ಕಚೇರಿ/APMC ಅನ್ನು ನೇರವಾಗಿ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: e-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!

Karnataka Togari Kharidi Kendra-ಯಾವೆಲ್ಲ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ?

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಬೆಳಗಾವಿ, ಚಿಕ್ಕಬಳ್ಳಾಪುರ,ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು ರಾಜ್ಯಾದ್ಯಂತ ಒಟ್ಟು 300 ಕ್ಕೂ ಅಧಿಕ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

Karnataka APMC Department-ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಮಾರಾಟ ಮಾಡಲು ಇಲಾಖೆಯ ಪ್ರಮುಖ ಸೂಚನೆಗಳು:

ರೈತರಿಂದ ಪ್ರತಿ ಎಕರೆಗೆ 04 ಕ್ವಿಂಟಲ್ ರಂತೆ – ಗರಿಷ್ಠ 40 ಕ್ವಿಂಟಲ್ ವರೆಗೆ ಪ್ರತಿ ರೈತರಿಂದ ಖರೀದಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ರೈತ ಬಾಂಧವರು ತಮ್ಮ ಹತ್ತಿರದ PACS/FPO/TAPCMS ಗಳಲ್ಲಿ ತಮ್ಮ ಪ್ರೂಟ್ಸ್ ಐ ಡಿ ಸಂಖ್ಯೆ ನೀಡಿ ನೊಂದಣಿ ಮಾಡಿಕೊಂಡು ತೊಗರಿ ಮಾರಾಟ ಮಾಡಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -