- Advertisment -
HomeGovt SchemesTrade License-ವ್ಯಾಪಾರ ಪರವಾನಗಿಯನ್ನು ಪಡೆಯಲು ಈ ದಾಖಲೆಗಳು ಕಡ್ಡಾಯ!

Trade License-ವ್ಯಾಪಾರ ಪರವಾನಗಿಯನ್ನು ಪಡೆಯಲು ಈ ದಾಖಲೆಗಳು ಕಡ್ಡಾಯ!

ಸ್ವಂತ ಅಂಗಡಿ ಅಥವಾ ವ್ಯಾಪಾರ ಮಳಿಗೆಯನ್ನು ತೆರೆದು ವ್ಯಾಪಾರವನ್ನುಆರಂಭಿಸಲು ಸಾರ್ವಜನಿಕರು ಸ್ಥಳೀಯ ಆಡಳಿತ ಮಂಡಳಿಯಿಂದ ಮುಂಚಿತವಾಗಿ ಅಧಿಕೃತ ಪರವಾನಗಿ ಪ್ರಮಾಣ(Trade License)ಪತ್ರವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ, ಇದರ ಬಗ್ಗೆ ಈ ಲೇಖನದಲ್ಲಿ ಅಗತ್ಯ ಮಾಹಿತಿಯನ್ನು ವಿವರಿಸಲಾಗಿದೆ.

ಗ್ರಾಮೀಣ ಭಾಗದ ಜನರು ಗ್ರಾಮ ಪಂಚಾಯತಿಯಲ್ಲಿ(Grama panchayat) ನಗರ ಪ್ರವೇಶದ ನಾಗರಿಕರು ನಗರಸಭೆ/ಮಹಾನಗರ ಪಾಲಿಕೆ/ಬಿಬಿಎಂಪಿ ಕಛೇರಿಯಲ್ಲಿ ವ್ಯಾಪಾರ ಪರವಾನಗಿಯನ್ನು ಪಡೆದುಕೊಳ್ಳಬೇಕು ಇಂದು ಈ ಅಂಕಣದಲ್ಲಿ ಗ್ರಾಮ ಪಂಚಾಯತಿಯಲ್ಲಿ ವ್ಯಾಪಾರ ಪರವಾನಗಿ(Business License) ದಾಖಲೆಯನ್ನು ಪಡೆಯಲು ಅಗತ್ಯವಾಗಿ ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

ಆನ್ಲೈನ್ ಮೂಲಕ ಅರ್ಜಿ(Business License Application) ಸಲ್ಲಿಸುವುದು ಹೇಗೆ? ಯಾವೆಲ್ಲ ಬಗ್ಗೆಯ ವ್ಯಾಪಾರಕ್ಕೆ ಪರವಾನಗಿಯನ್ನು ಪಡೆದುಕೊಳ್ಳಬೇಕು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: Property Documents-ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ಬಿಡುಗಡೆ!

Documents for Business License-ಪರವಾನಗಿಯನ್ನು ಪಡೆಯಲು ಈ ದಾಖಲೆಗಳು ಕಡ್ಡಾಯ:

  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
  • ವ್ಯಾಪಾರಕ್ಕೆ ಸಂಬಂಧಿಸಿದ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ
  • ಇ-ಸ್ವತ್ತು ಫಾರ್ಮ್
  • ಮಾಲೀಕತ್ವ ಪ್ರಮಾಣ ಪತ್ರ(ಸ್ವಂತ ಕಟ್ಟಡವಾಗಿದ್ದಲ್ಲಿ)
  • ಬಾಡಿಗೆ/ಗುತ್ತಿಗೆ ಒಪ್ಪಂದ(ಬಾಡಿಗೆ/ಗುತ್ತಿಗೆ ಕಟ್ಟಡವಾಗಿದ್ದಲ್ಲಿ)
  • ಆಸ್ತಿ ತೆರಿಗೆ ಪಾವತಿಸಿದ ರಶೀದಿ

ಇದನ್ನೂ ಓದಿ: Land Records-ರಾಜ್ಯ ಸರಕಾರದಿಂದ ರೈತರ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿಡಲು “ಭೂ ಸುರಕ್ಷಾ” ಯೋಜನೆ!

Shop License

How Can I Get Business License-ವ್ಯಾಪಾರ ಪರವಾನಗಿ ಪಡೆಯುವುದು ಹೇಗೆ?

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಬಗ್ಗೆಯ ವ್ಯಾಪಾರವನ್ನು ಆರಂಭಿಸಲು ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ ಮೊದಲು ವ್ಯಾಪಾರ ಪರವಾನಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಬಳಿಕ 50/- ರೂ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ವ್ಯಾಪಾರ ಪರವಾನಗಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು.

Business License registration-ಯಾವೆಲ್ಲ ಉದ್ದಿಮೆಗೆ ಪರವಾನಗಿಯನ್ನು ಪಡೆಯಬೇಕು?

1) ಎಲ್ಲಾ ಬಗ್ಗೆಯ ಅಂಗಡಿಗಳನ್ನು ಸ್ಥಾಪನೆ ಮಾಡಲು.

2) ಕೃಷಿ ಮತ್ತು ಇನ್ನಿತರೆ ವಿವಿಧ ಕೈಗಾರಿಕೆಗಳನ್ನು ಆರಂಭಿಸಲು.

3) ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಆರಂಭಿಸಲು.

ಇದನ್ನೂ ಓದಿ: E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

Online Shop license Apply Method-ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿದೆ:

ಗ್ರಾಮ ಪಂಚಾಯತಿಯಿಂದ ವ್ಯಾಪಾರ ಪರವಾನಗಿಯನ್ನು ಪಡೆಯಲು ಸಾರ್ವಜನಿಕರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ ವ್ಯಾಪಾರ ಪರವಾನಗಿ ಪ್ರಮಾಣ ಪತ್ರವನ್ನು ಪಡೆಯಬಹುದು.

Step-1: ಮೊದಲಿಗೆ ಈ Apply For Business License ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬಾಪೂಜಿ ಸೇವಾ ಕೇಂದ್ರದ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಭೇಟಿ ಮಾಡುತ್ತಿರುವವರು ಮೊಟ್ಟ ಮೊದಲಿಗೆ ಮುಖಪುಟದಲ್ಲಿ ಕಾಣುವ “Register/Login” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು “Register Now” ಬಟನ್ ಮೇಲೆ ಕ್ಲಿಕ್ ಮಾಡಿ “Register using Mobile Number ID and OTP Click Here” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Annabhagya status- ಫೆಬ್ರವರಿ-2025 ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!

trade License

Step-3: ನಂತರ ನಿಮ್ಮ ಹೆಸರು ಮತ್ತುವಿಳಾಸ, ಮೊಬೈಲ್ ನಂಬರ್, ಇಮೇಲ್ ಐಡಿಯನ್ನು ನಮೂದಿಸಿ ನಿಮ್ಮ ಮೊಬೈಲ್ ಗೆ ಬರುವ OTP ಅನ್ನು ನಮೂದಿಸಿ “Verify OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಮೇಲಿನ ಹಂತಗಳನ್ನು ಅನುಸರಿಸಿ ಬಳಕೆದಾರ ಐಡಿ ಅನ್ನು ನೊಂದಣಿ ಮಾಡಿಕೊಂಡ ಬಳಿಕ “Login” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ “Send OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಒಟಿಪಿ ಅನ್ನು ನಮೂದಿಸಿ ಲಾಗಿನ್ ಅಗಬೇಕು.

Step-5: ಲಾಗಿನ್ ಅದ ನಂತರ “Trade License” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ “Save And Next” ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ವ್ಯಾಪಾರ ಆರಂಭಿಸುವ ಸ್ಥಳದ ವಿವರ ಭರ್ತಿ ಮಾಡಿ.

ಇದನ್ನೂ ಓದಿ: Waqf Bill-2025: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ತಿದ್ದುಪಡಿಗೆ ಒಪ್ಪಿಗೆ!

Step-6: ಬಳಿಕ “Upload Documents”ವಿಭಾಗ ತೆರೆದುಕೊಳ್ಳುತ್ತದೆ ಇಲ್ಲಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Upload” ಬಟನ್ ಮೇಲೆ ಕ್ಲಿಕ್ ಮಾಡಿ.

Step-7: ಕೊನೆಯ ಪೇಜ್ ನಲ್ಲಿ ಶುಲ್ಕ ಪಾವತಿ ಪುಟ ತೆರೆದುಕೊಳ್ಳುತ್ತದೆ ಇಲ್ಲಿ 50 ರೂ ಪಾವತಿ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿ ಅರ್ಜಿಯ ವಿವರಗಳ ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ಪರಿಶೀಲನೆ ಕೈಗೊಂಡು ಅರ್ಹ ಅರ್ಜಿದಾರರಿಗೆ ಪರವಾನಗಿ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಗುತ್ತದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -