ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ(PM Ujjwala Yojana) ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಜಮಾ ಮಾಡಲಾಗಿದ್ದು ಅರ್ಹ ಫಲಾನುಭವಿಗಳು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ಅನುಸರಿಸಿ ತಮಗೆ ಹಣ ಜಮಾ ಅಗಿರುವ ವಿವರವನ್ನು ಪಡೆಯಬಹುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಮನೆ ಬಳಕೆಗೆ ಉಪಯೋಗ ಮಾಡುವ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಗೆ ಕೇಂದ್ರ ಸರಕಾರದಿಂದ ₹300 ರೂ ಸಬ್ಸಿಡಿಯನ್ನು(Gas cylinder subsidy) ಈ ಯೋಜನೆಯಡಿ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಈ ಅಂಕಣದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಿಡುಗಡೆ ಮಾಡುವ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣದ ಜಮಾ ವಿವರವನ್ನು ಪಡೆಯುವುದು ಹೇಗೆ? ನಾಗರಿಕರು ತಮ್ಮ ಮೊಬೈಲ್ ನಲ್ಲೇ ಸಹಾಯಧನವನ್ನು ಪಡೆಯಲು ಅರ್ಹರಿರುವ ನಿಮ್ಮ ಜಿಲ್ಲೆಯ ಫಲಾನುಭವಿಗಳ ಪಟ್ಟಿಯನ್ನು ಪಡೆಯುವ ವಿಧಾನದ ಮಾಹಿತಿಯನ್ನು ಸಹ ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: FASTag New Rules- ಇಂದಿನಿಂದ FASTag ಬಳಕೆಗೆ ಹೊಸ ನಿಯಮ ಜಾರಿ!
Ujjwala Yojana Subsidy Amount-ಪ್ರಸ್ತುತ ಎಷ್ಟು ಸಹಾಯಧನ ನೀಡಲಾಗುತ್ತದೆ?
ಉಜ್ವಲ ಯೋಜನೆಯಡಿ ಗೃಹ ಬಳಕೆಗೆ ಉಪಯೋಗ ಮಾಡುವ 14.2 ಕೆಜಿ ತೂಕದ ಪ್ರತಿ ಗ್ಯಾಸ್ ಸಿಲಿಂಡರ್ ಗೆ ಈ ಹಿಂದೆ ₹200 ರೂ ಸಹಾಯಧನವನ್ನು ನೀಡಲಾಗುತ್ತಿತ್ತು ಕಳೆದ ಅಕ್ಟೋಬರ್ ತಿಂಗಳಿನಿಂದ ಈ ಸಹಾಯಧನವನ್ನು ₹300 ರೂ ಗೆ ಏರಿಕೆ ಮಾಡಲಾಗಿರುತ್ತದೆ.
Gas Cylinder Price-14.2 ಕೆಜಿ ತೂಕದ ಸಿಲಿಂಡರ್ ಬೆಲೆ ಎಷ್ಟಿದೆ?
ಒಟ್ಟು ಮೊತ್ತ- ₹890/- ರೂ
ಸಹಾಯಧನ- ₹300/- ರೂ
ಗ್ರಾಹಕರ ವಂತಿಕೆ- ₹590/- ರೂ
ಇದನ್ನೂ ಓದಿ: Sprinkler pipes Subsidy- ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
ಸಹಾಯಧನವನ್ನು ಹೇಗೆ ವಿತರಣೆ ಮಾಡಲಾಗುತ್ತದೆ?
ಗ್ರಾಹಕರು ತಾವು ಮನೆ ಬಳಕೆಗೆ ಖರೀದಿ ಮಾಡುವ ಸಿಲಿಂಡರ್ ಗೆ ಮೊದಲಿಗೆ ಪೂರ್ಣ ಪ್ರಮಾಣದ ಮೊತ್ತವನ್ನು ಪಾವತಿ ಮಾಡಿ ಸಿಲಿಂಡರ್ ಅನ್ನು ಗ್ಯಾಸ್ ಏಜೆನ್ಸಿ ಮೂಲಕ ಪಡೆಯಬೇಕು ಬಳಿಕ ಕೇಂದ್ರದಿಂದ ₹300 ರೂ ಸಹಾಯಧನವನ್ನು ಗ್ರಾಹಕರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
Ujjwala Yojane Subsidy Status Check-ಸಬ್ಸಿಡಿ ಹಣ ಜಮಾ ವಿವರವನ್ನು ಪಡೆಯುವುದು ಹೇಗೆ?
ಗ್ರಾಹಕರು ಗ್ಯಾಸ್ ಸಿಲಿಂಡರ್ ಅನ್ನು ಯಾರ ಹೆಸರಿಗೆ ಬುಕ್ ಮಾಡುತ್ತಾರೋ ಅವರ ಬ್ಯಾಂಕ್ ಅಕೌಂಟ್ ಗೆ ಈ ಸಹಾಯಧನ ಜಮಾ ಅಗುತ್ತದೆ ಇದನ್ನು ಖಚಿತಪಡಿಸಿಕೊಳ್ಳಲು ನೇರವಾಗಿ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಪಾಸ್ ಬುಕ್ ಅನ್ನು ಮುದ್ರಿಸಿ ಮಾಹಿತಿಯನ್ನು ಪಡೆಯಬಹುದು ಜೊತೆಗೆ ಆಧಾರ್ ಕಾರ್ಡ ಲಿಂಕ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಗ್ಯಾಸ್ ಸಬ್ಸಿಡಿ ಹಣ ವರ್ಗಾವಣೆ ಅದಾಗ ಈ ಕೆಳಗಿನ ಪೋಟೋ ದಲ್ಲಿ ಬಂದಿರುವ ಹಾಗೇ ನಿಮ್ಮ ಮೊಬೈಲ್ ನಂಬರ್ ಗೆ ಮೇಸೆಜ್ ಬಂದಿರುತ್ತದೆ.
ಇದನ್ನೂ ಓದಿ: Birth Certificate-ಹೈಕೋರ್ಟ್ ನಿಂದ ಜನನ ಪ್ರಮಾಣ ಪತ್ರದ ಕುರಿತು ಮಹತ್ವದ ತೀರ್ಪು!

ಇದನ್ನೂ ಓದಿ: Crop Insurance List-ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿ ಬಿಡುಗಡೆ!
Ujjwala Yojana Beneficiary List-ಸಿಲಿಂಡರ್ ಗೆ ಸಬ್ಸಿಡಿಯನ್ನು ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೋಡುವ ವಿಧಾನ:
ಗ್ರಾಹಕರು ತಮ್ಮ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಹಾಯಧನದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಲು ಅರ್ಹರಿರುವ ಗ್ರಾಹಕರ ಪಟ್ಟಿಯನ್ನು ತಮ್ಮ ಮೊಬೈಲ್ ನಲ್ಲಿ ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಕೇಂದ್ರದ ಅಧಿಕೃತ Mylpg ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ಸಿಲಿಂಡರ್ ಸಹಾಯಧನ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿಯನ್ನು ಪಡೆಯಬಹುದಾಗಿದೆ.
Step-1: ಮೊದಲಿಗೆ ಈ ತಂತ್ರಾಂಶದ Ujjwala Yojana Beneficiary List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ “ಮೈ ಎಲ್ ಪಿ ಜಿ/Mylpg” ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Post office recruitment-ಅಂಚೆ ಇಲಾಖೆಯಲ್ಲಿ ಬರೋಬ್ಬರಿ 21,413 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ!
Step-2: ಬಳಿಕ ಈ ತಂತ್ರಾಂಶದ ಮುಖಪುಟದಲ್ಲಿ ಕಾಣುವ ವಿವಿಧ ಕಂಪನಿಯ ಸಿಲಿಂಡರ್ ಚಿತ್ರದಲ್ಲಿ(Bharath/HP/Indian) ನಿಮ್ಮ ಮನೆಯಲ್ಲಿ ಉಪಯೋಗಿಸುತ್ತಿರುವ ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-3: ತದನಂತರ ಈ ಪೇಜ್ ನಲ್ಲಿ ಬಲಗಡೆ ಕೊನೆಯಲ್ಲಿ ಕಾಣುವ “Ujjwala Beneficaries” ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ.
Step-4: ಇಲ್ಲಿ ರಾಜ್ಯ-Karnataka ಮತ್ತು ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಂಡು ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಿಲಿಂಡರ್ ಗೆ ಸಬ್ಸಿಡಿಯನ್ನು ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ.
ವಿಶೇಷ ಸೂಚನೆ- ಪೂರ್ಣ ಪ್ರಮಾಣದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೋಡಲು ಈ ಪೇಜ್ ನಲ್ಲಿ ಕೆಳಗೆ ಕಾಣಿಸುವ 1.2.3.4.5…. ಪೇಜ್ ನಂಬರ್ ಗಳ ಮೇಲೆ ಕ್ಲಿಕ್ ಮಾಡಿ.