Varuna mitra: ನಿಮ್ಮ ಗ್ರಾಮದ ಮಳೆ ಮುನ್ಸೂಚನೆಯನ್ನು ಒಂದೇ ಒಂದು ಪೋಲ್ ಕರೆಯಲ್ಲಿ ತಿಳಿಯಿರಿ!

ಹೌದು ರೈತ ಬಾಂಧವರೇ ನಿಮ್ಮ ಗ್ರಾಮದಲ್ಲಿ ಮಳೆ ಯಾವಾಗ ಬರುತ್ತದೆ ಎಂದು ಅತೀ ಸುಲಭವಾಗಿ ಕ್ಷಣಾರ್ದದಲ್ಲಿ ತಿಳಿಯಲು ಒಂದು ಕರೆ ಮಾಡಿದರೆ ಸಾಕು ಮಳೆ ಮುನ್ಸೂಚನೆಯನ್ನು ನೀಡಲು ಅನೇಕ ಮೊಬೈಲ್ ಅಪ್ಲಿಕೇಶನ್ ಇವೆ. ಆದರೆ ರೈತರಿಗೆ ಸುಲಭವಾಗಿ ಮಳೆ ಮುನ್ಸೂಚನೆಯನ್ನು ನೀಡಲು "ವರುಣ ಮಿತ್ರ" ಸಹಾಯವಾಣಿ ಅನ್ನು 2011ರಿಂದ ಪ್ರಾರಂಭಿಸಿದ್ದು ಈ ಸಹಾಯವಾಣಿಯನ್ನು ಹೇಗೆ ಬಳಸಬೇಕು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

24*7 ಉಚಿತ ಮಳೆ ಮುನ್ಸೂಚನೆ ನೀಡುವ "ವರುಣ ಮಿತ್ರ"

9243345433 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮದ ಹೆಸರು ಮತ್ತು ನಿಮ್ಮ ಹೆಸರನ್ನು ತಿಳಿಸಿದರೆ ಸಾಕು ನಿಮ್ಮ ಭಾಗದಲ್ಲಿ ಮಳೆ ಬರುತ್ತದೆಯೋ ಇಲ್ಲವೋ ಎಂದು ತಿಳಿಸುತ್ತಾರ‍ೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಂಟರ್(KSNDMC)ನ ಹವಾಮಾನ ಮೇಲ್ವಿಚಾರಣಾ ಕೇಂದ್ರಗಳ ವಿಸ್ತಾರವಾದ ಜಾಲವು, ಹೋಬಳಿ ಮಟ್ಟದಲ್ಲಿ ದತ್ತಾಂಶವನ್ನು ಸಂಗ್ರಹಿಸಿ ಈ ಮಾಹಿತಿಯನ್ನು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ.

ಈ ಸಹಾಯವಾಣಿಗೆ ರೈತರು 24*7 ಅಂದರೆ ಕೇವಲ ಕಚೇರಿ ಸಮಯದಲ್ಲಿ ಮಾತ್ರವಲ್ಲದೆ ದಿನದ 24 ಗಂಟೆಯು ಕರೆ ಮಾಡಿ ಮಳೆ ಮುನ್ಸೂಚನೆಯನ್ನು ಪಡೆಯಬವುದು. ಇದರಿಂದ ರೈತರಿಗೆ ಮುಂಚಿತವಾಗಿಯೇ ಮಳೆ ಮುನ್ಸೂಚನೆಯು ಲಭ್ಯವಾಗಿ ತಮ್ಮ ಕೃಷಿ ಚಟುವಟಿಗೆಯನ್ನು ಕಾಲ ಕಾಲಕ್ಕೆ ಸಮರ್ಪಕವಾಗಿ ರೂಪಿಸಿಕೊಳ್ಳಬವುದು ಜೊತೆಗೆ ಹವಾಮಾನ ವೈಪರೀತ್ಯಗಳಿಂದ ರೈತರಿಗೆ ಉಂಟಾಗಬವುದಾದ ಹಾನಿಯನ್ನು ತಗ್ಗಿಸಲು ಈ ಸಹಾಯವಾಣಿ ತುಂಬ ಅನುಕೂಲಕರವಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಂಟರ್(KSNDMC) ಟ್ವಿಟರ್ ನಲ್ಲಿಯೂ ಮಾಹಿತಿ ಲಭ್ಯ:

https://twitter.com/KarnatakaSNDMC?s=20 ಈ ಲಿಂಕ್ ಮೇಲೆ ಒತ್ತಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಂಟರ್(KSNDMC)ನ ಟ್ವಿಟರ್ ಖಾತೆಯನ್ನು ಭೇಟಿ ಮಾಡಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದ ಮಳೆ ಮುನ್ಸೂಚನೆ, ಗಾಳಿ ವೇಗ, ತಾಪಮಾನ ಇತ್ಯಾದಿ ಮಾಹಿತಿಯ ಲೈವ್ ಅಪ್ಡೇಟ್ ಅನ್ನು ನಿರಂತರವಾಗಿ ಇಲ್ಲಿ ನೀವು ಪಡೆಯಬವುದಾಗಿದೆ.