ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿ(Vasati Yojane) ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಹಾಗೂ ಸ್ವಂತ ಮನೆಯನ್ನು ಹೊಂದಿಲ್ಲದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಮನೆಯನ್ನು ಒದಗಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸದನದಲ್ಲಿ ಪ್ರಶ್ನೋತರಕ್ಕೆ ಉತ್ತರಿಸಿದ ವಸತಿ ಸಚಿವ ಜಮೀರ ಅಹ್ಮದ್ ಅವರ ಹಂಚಿಕೊಂಡಿರುವ ಲಿಖಿತ ಉತ್ತರದ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ ಯಾವೆಲ್ಲ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ(Karnataka Vasati Yojane) ಮಾಡಿಕೊಡಲಾಗುತ್ತಿದೆ? ವಸತಿ ಯೋಜನೆಯಡಿ ಪ್ರಸ್ತುತ ಪ್ರಗತಿಯಲ್ಲಿರುವ ಮನೆ ನಿರ್ಮಾಣದ ಅಂಕಿ-ಅಂಶದ ಕುರಿತು ವಸತಿ ಸಚಿವರು ಸದನದಲ್ಲಿ ಹಂಚಿಕೊಂಡಿರುವ ಮಾಹಿತಿಯನ್ನು ಸಹ ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: Aadhar Card- ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಆಧಾರ್ ಗೆ ತಪ್ಪದೇ ಈ ಆಯ್ಕೆಯನ್ನು ಸಕ್ರಿಯಗೊಳಿಸಿ!
ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 1.80 ಲಕ್ಷ ಮನೆಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ 36,749 ಮನೆಗಳನ್ನು(Home Loan) ಪೂರ್ಣಗೊಳಿಸಲಾಗಿದ್ದು ಎರಡನೇ ಹಂತದಲ್ಲಿ 39,843 ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು ಇನ್ನುಳಿದ ಬಾಕಿ 1.30 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಸದನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Karnataka Vasati Yojane-ಈ ವರ್ಷ ವಿವಿಧ ವಸತಿ ಯೋಜನೆಯಡಿ 2.30 ಲಕ್ಷ ಮನೆ:
ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ 46 ಸಾವಿರ ಮನೆ ಸೇರಿದಂತೆ ಕೇಂದ್ರ ಸರಕಾರದ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ಈ ವರ್ಷದ ಅಂತ್ಯದ ಒಳಗಾಗಿ 2.30 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: UAE ನಲ್ಲಿ 10ನೇ ತರಗತಿ ಪಾಸಾದವರಿಗೆ ತಿಂಗಳಿಗೆ ರೂ 53,584/- ವೇತನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!
ಪ್ರಶ್ನೆ: ಕಳೆದ ಸರ್ಕಾರದಲ್ಲಿ ವಿವಿಧ ಯೋಜನೆಯಡಿ ಹಂಚಿಕೆಯಾರ್ದ ಮನೆಗಳನ್ನು ಪೂರ್ಣಗೊಳಿಸಿ ಹಂಚಿಕೆ ಮಾಡಲಾಗಿದೆಯೇ; ಎಷ್ಟು ಮನೆಗಳನ್ನು ಮಾಡಲಾಗಿದೆ?
ಸಚಿವರ ಉತ್ತರ: 2019-20 ರಿಂದ 2022-23ನೇ ಸಾಲಿನವರೆಗೆ ಕೇಂದ್ರ ಯೋಜನೆಯಡಿ ಹಂಚಿಕೆಯಾದ ಮತ್ತು ರಾಜ್ಯ ಸರ್ಕಾರದ ವಿವಿಧ ವಸತಿ ಮನೆಗಳನ್ನು ಪೂರ್ಣಗೊಳಿಸಿ ಹಂಚಿಕೆ ಯೋಜನೆಗಳಡಿ ಒಟ್ಟಾರೆ ಹಂಚಿಕೆಯಾದ 7,59,896 ಮಾಡಲಾಗಿದೆಯೇ; ಎಷ್ಟು ಮನೆಗಳನ್ನು ಮಾಡಲಾಗಿದೆ; ಒದಗಿಸುವುದು) ಹಾಗಿದ್ದರೇ ಮನೆಗಳ ಗುರಿಯಲ್ಲಿ 6,55,647 ಹಂಚಿಕೆ ಮಂಜೂರು ಮಾಡಲಾಗಿದೆ. ಮಂಜೂರಾದ ಮನೆಗಳ (ವಿವರ
ಪೈಕಿ 3,03,890 ಮನೆಗಳು ಪೂರ್ಣಗೊಂಡಿರುತ್ತವೆ. 1,56,151 1 . 1,37,098 ಮನೆಗಳು ಪ್ರಾರಂಭವಾಗಬೇಕಾಗಿದ್ದು, ಇನ್ನುಳಿದ 58,508 ಮನೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ತಾತ್ಕಾಲಿಕವಾಗಿ ತಡೆಹಿಡಿಯಲಾಗಿರುತ್ತದೆ ಯೋಜನವಾರು ವಿವರವನ್ನು ಅನುಬಂಧ-1ರಲ್ಲಿ ಒದಗಿಸಲಾಗಿದೆ.
ಇದನ್ನೂ ಓದಿ: Pension Scheme-ವಿವಿಧ ಪಿಂಚಣಿ ಯೋಜನೆಯ ಹಣ ವರ್ಗಾವಣೆಯಲ್ಲಿ ಬದಲಾವಣೆ!
ಅನುಬಂಧ-1


Home Subsidy Schemes-ಯಾವೆಲ್ಲ ಯೋಜನೆಯಡಿ ವಸತಿಯನ್ನು ಪಡೆಯಬಹುದು?
ನಾಗರಿಕರು ಈ ಕೆಳಗೆ ತಿಳಿಸಿರುವ ವಸತಿ ಯೋಜನೆಯಡಿ ಅರ್ಹತೆ ಅನುಸಾರವಾಗಿ ಅರ್ಜಿಯನ್ನು ಸಲ್ಲಿಸಿ ಅರ್ಹ ಫಲಾನುಭವಿಗಳು ವಸತಿಯನ್ನು ಪಡೆಯಲು ಅವಕಾಶವಿರುತ್ತದೆ.
1) ಬಸವ ವಸತಿ ಯೋಜನೆ
2) ದೇವರಾಜು ಅರಸು ವಸತಿ ಯೋಜನೆ (ಗ್ರಾ)
3) ದೇವರಾಜು ಅರಸು ವಸತಿ ಯೋಜನೆ(ನ)
4) ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ(ಗ್ರಾ)
5) ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ(ನ)
6) ಪ್ರಧಾನ ಮಂತ್ರಿ ಅವಾಸ್ ಯೋಜನೆ (ಗ್ರಾ)
7) ವಾಜಪೇಯಿ ನಗರ ಯೋಜನೆ
8) ಪ್ರಧಾನ ಮಂತ್ರಿ ಅವಾಸ್ ಯೋಜನೆ(ನ)- Non Convergence
9) ಪ್ರಧಾನ ಮಂತ್ರಿ ಅವಾಸ್ ಯೋಜನೆ(ನ)-AHP
ಇದನ್ನೂ ಓದಿ: Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

Vasati Yojanae Website-ವಸತಿ ಯೋಜನೆಗಳ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ರಾಜೀವ್ ಗಾಂಧಿ ವಸತಿ ನಿಗಮದ(Rajiv Gandhi Nigama) ವೆಬ್ಸೈಟ್ ಲಿಂಕ್- Click here
