Vishwa kharma Yojana-ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 15 ಸಾವಿರ ಸಹಾಯಧನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ವಿವಿಧ ಸೌಲಭ್ಯ ಪಡೆಯಲು ಅರ್ಹ ನಾಗರಿಕರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅರ್ಜಿದಾರರು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣ ಓದಿಕೊಂಡು ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬವುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಕೇಂದ್ರ ಸರಕಾರದ ನೂತನ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ದೇಶದ ಗುಡಿ ಮತ್ತು ಕೌಶಲ್ಯ ಆಧಾರಿತ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಅರ್ಥಿಕವಾಗಿ ನೇರವು ನೀಡಿ ಇಂತಹ ವರ್ಗದ ಜನರನ್ನು ಸಬಲರನ್ನಾಗಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಡಿ ಯಾವೆಲ್ಲ ಪ್ರಯೋಜನ ಪಡೆದುಕೊಳ್ಳಬವುದು? ಅಗತ್ಯ ದಾಖಲಾತಿಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Interim Crop Insurance- ಈ ಜಿಲ್ಲೆಗಳಲ್ಲಿ 50.298 ಕೋಟಿ ಮಧ್ಯಂತರ ಬೆಳೆ ವಿಮೆ ಬಿಡುಗಡೆ!

Vishwa kharma Yojana-2023: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸೌಲಭ್ಯ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು.

  • ಬಡಿಗ ವೃತ್ತಿ ಮಾಡುವವರು
  • ದೋಣಿ ತಯಾರಿಸುವವರು
  • ಶಸ್ತ್ರ ತಯಾರಕರು
  • ಕಮ್ಮಾರ ವೃತ್ತಿ ಮಾಡುವವರು
  • ಕಲ್ಲುಕುಟಗ ವೃತ್ತಿ ಮಾಡುವವರು
  • ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು
  • ಗೊಂಬೆ ಮತ್ತು ಆಟಿಕೆ ತಯಾರಕರು (ಸಂಪ್ರದಾಯಿಕ)
  • ಕ್ಷೌರಿಕ ವೃತ್ತಿ ಮಾಡುವವರು
  • ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು
  • ಹೂಮಾಲೆ ತಯಾರಕರು
  • ಅಗಸರು (ದೋಬಿ)
  • ಆಭರಣ ತಯಾರಕರು
  • ಶಿಂಪಿಗ (ಬಟ್ಟೆ ಹೊಲೆಯುವರು)
  • ಕುಂಬಾರ ವೃತ್ತಿ ಮಾಡುವವರು
  • ಮೀನು ಬಲೆ ಹೆಣೆಯುವವರು
  • ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ)
  • ಚಮ್ಮಾರ ಪಾದರಕ್ಷೆ ತಯಾರಕರು
  • ಬೀಗ ತಯಾರಕರು

ಇದನ್ನೂ ಓದಿ: Drought relief list: 2023-24 ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ ನಿಮ್ಮ ಹೆಸರು ಪರೀಕ್ಷಿಸಿಕೊಳ್ಳಿ.

Vishwa kharma scheme-ಅರ್ಜಿ ಸಲ್ಲಿಸಲು ಅರ್ಹತೆಗಳು:

  • ಅರ್ಜಿದಾರರು ಈ ಮೇಲೆ ತಿಳಿಸಿರುವ ವೃತ್ತಿಯಲ್ಲಿ ತೊಡಗಿಕೊಂಡಿರಬೇಕು.
  • ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು 18 ತುಂಬಿರಬೇಕು.
  • ಅರ್ಜಿದಾರರು ಕಳೆದ 5 ವರ್ಷದಲ್ಲಿ ಕೇಂದ್ರ ಸರಕಾರದ ಯಾವುದೇ ಸಹಾಯಧನ ಆಧಾರಿತ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆದಿರಬಾರದು ಉದಾಹರಣೆಗೆ: PMEGP, PM-SVANidhi, Mudra.

Vishwa kharma Yojana application- ಎಲ್ಲಿ ಅರ್ಜಿ ಸಲ್ಲಿಸಬೇಕು:

ಆಸಕ್ತ ಅರ್ಜಿದಾರರು ಅಗತ್ಯ ದಾಖಲಾತಿ ಸಮೇತ ನಿಮ್ಮ ಹತ್ತಿರದ CSC ಸೆಂಟರ್/ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದು.

ಅಗತ್ಯ ದಾಖಲಾತಿಗಳು:

  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
  • ಪೋಟೋ.
  • ಬ್ಯಾಂಕ್ ಪಾಸ್ ಬುಕ್.
  • ರೇಷನ್ ಕಾರ್ಡ್ ಪ್ರತಿ.

ಇದನ್ನೂ ಓದಿ: Bara Parihara-2023: ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ! ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ಈ ಯೋಜನೆಯಡಿ ಸಿಗುವ ಸೌಲಭ್ಯಗಳು:

(1) ಈ ಯೋಜನೆಯಡಿ ರೂ.3 ಲಕ್ಷದವರೆಗೆ ಜಾಮೀನುರಹಿತ ಸಾಲ ಪಡೆಯಬವುದು ಇದು ಬ್ಯಾಂಕ್‌ ನಿಂದ ಶೇ 5 ರ ಬಡ್ಡಿ ದರದಲ್ಲಿ 2 ಹಂತಗಳಲ್ಲಿ ಸಾಲ ಸಿಗಲಿದ್ದು ಮೊದಲ ಹಂತದಲ್ಲಿ ಗರಿಷ್ಠ ರೂ 1 ಲಕ್ಷ 18 ತಿಂಗಳ ಮರುಪಾವತಿ, ಎರಡನೇ ಹಂತದಲ್ಲಿ ಗರಿಷ್ಠ ರೂ 2 ಲಕ್ಷ 30 ತಿಂಗಳ ಮರುಪಾವತಿಗೆ ಅವಕಾಶ ನೀಡಲಾಗಿದೆ.

(2) 15,000 ರೂ ಮೊತ್ತದ ಉಪಕರಣಗಳಿಗೆ ಸಹಾಯಧನ.

(3) ಕೌಶಲಾಭಿವೃದ್ಧಿಗಾಗಿ ತರಬೇತಿ ಮತ್ತು ಪ್ರತಿದಿನ ರೂ.500 ಸ್ಟೈಫಂಡ್ ಗುಣಮಟ್ಟದ ತರಬೇತಿ ಮತ್ತು ಪ್ರಮಾಣಪತ್ರ, ಬ್ರಾಂಡಿಂಗ್ ಮತ್ತು ತಯಾರಾದ ಉತ್ಪನ್ನಗಳ ಮಾರಾಟಕ್ಕೆ ಜಾಹೀರಾತು ಸೇರಿ ಮಾರ್ಕೆಂಟಿಂಗ್ ನೆರವು ಪಡೆಯಬವುದು. 

ಹೆಚ್ಚಿನ ಮಾಹಿತಿಗಾಗಿ:

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮಾರ್ಗಸೂಚಿ ಡೌನ್ಲೋಡ್ ಲಿಂಕ್: Download Now

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್: Click here

ಇದನ್ನೂ ಓದಿ: Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!