- Advertisment -
HomeGovt SchemesVoter ID-ವೋಟರ್ ಐಡಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Voter ID-ವೋಟರ್ ಐಡಿ ಕುರಿತು ಮಹತ್ವದ ಮಾಹಿತಿ ಪ್ರಕಟ!

ಹೊಸದಾಗಿ ವೋಟರ್ ಐಡಿಯನ್ನು ಮಾಡಿಕೊಳ್ಳಲು ಮತ್ತು ವೋಟರ್ ಐಡಿ(Voter ID) ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗದಿಂದ ಅವಕಾಶವನ್ನು ಕಲ್ಪಿಸಲಾಗಿದ್ದು ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ. ಅರ್ಹರು ತಪ್ಪದೇ ತಮ್ಮ ಮತದಾನ ಕೇಂದ್ರಗಳಲ್ಲಿ ನೇಮಕಗೊಂಡಿರುವ ನಿರ್ಧಿಷ್ಠಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದಲ್ಲದೇ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ(Voter ID List) ನಿಮ್ಮ ಹೆಸರು ಇದಿಯಾ? ಅಥವಾ ಇಲ್ಲವಾ? ಎಂದು ಮತದಾರ ಚೀಟಿಯನ್ನು ಹೊಂದಿರುವ ನಾಗರಿಕರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ವಿವರವನ್ನು ಸಹ ಇಲ್ಲಿ ತಿಳಿಸಲಾಗಿದ್ದು ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Yashaswini Card-2025: ಯಶಸ್ವಿನಿ ಕಾರ್ಡ ಪಡೆಯಲು ಇನ್ನು 10 ದಿನ ಮಾತ್ರ ಅವಕಾಶ!

ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೆಸರುಗಳನ್ನು(New Voter ID Application) ಸೇರ್ಪಡೆ ಮಾಡಲು ವರ್ಷಕ್ಕೆ ನಾಲ್ಕು ಅರ್ಹತಾ ದಿನಾಂಕಗಳನ್ನು ನೀಡಿ ಅವಕಾಶ ಕಲ್ಪಿಸಿದೆ. ವರ್ಷದಲ್ಲಿ ನಾಲ್ಕು ದಿನ ಅಂದರೆ, ಜನವರಿ, ಏಪ್ರಿಲ್‌, ಜುಲೈ ಹಾಗೂ ಅಕ್ಟೋಬರ್‌ತಿಂಗಳ 1ರಂದು ಅವಕಾಶ ಕಲ್ಪಿಸಿದ್ದು, ಆ ದಿನಗಳಲ್ಲಿ 18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದು, ತಿದ್ದುಪಡಿ ಇದ್ದರೂ ಸರಿಪಡಿಸಬಹುದು.

Voter ID List-2025: ಪರಿಷ್ಕೃತ ಮತದಾರ ಪಟ್ಟಿಯನ್ನು ಚೆಕ್ ಮಾಡುವ ವಿಧಾನ:

ಎರಡು ವಿಧಾನ ಅನುಸರಿಸಿ ಪರಿಷ್ಕೃತ ಮತದಾರ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು ಒಂದು 2025ರ ಜನವರಿ 6 ರಂದು ಪ್ರಚುರ ಪಡಿಸಿದ ಅಂತಿಮ ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಮ ಪಂಚಾಯತಿ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ, ತಾಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ: Hero Bike Offers-ಯುಗಾದಿ ಹಬ್ಬಕ್ಕೆ ಹೀರೊ ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್!

How To Check Voter ID List-ಮೊಬೈಲ್ ನಲ್ಲಿ ಪರಿಷ್ಕೃತ ಮತದಾರ ಪಟ್ಟಿಯನ್ನು ಪಡೆಯುವ ವಿಧಾನ:

ನಾಗರಿಕರು ತಮ್ಮ ಹಳ್ಳಿಯ ಪರಿಷ್ಕೃತ ಮತದಾರ ಪಟ್ಟಿಯನ್ನು ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದ್ದು ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

Step-1: ಮೊದಲಿಗೆ Voter ID List-2025 ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕದ ಚುನಾವಣಾ ಆಯೋಗದ ತಂತ್ರಾಂಶವನ್ನು ಪ್ರವೇಶ ಮಾಡಬೇಕು ಬಳಿಕ ಈ ವೆಬ್ಸೈಟ್ ನಲ್ಲಿ ಮುಖಪುಟದಲ್ಲಿ ಕಾಣುವ “ಅಂತಿಮ ಮತದಾರರ ಪಟ್ಟಿ-2025” ಬಟನ್ ಮೇಲೆ ಕ್ಲಿಕ್ ಮಾಡಬೇಕು.

voter id list

ಇದನ್ನೂ ಓದಿ: Diploma Certificate Courses-ಕೃಷಿ ವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವ ಅರ್ಜಿ ಆಹ್ವಾನ!

Step-2: ತದನಂತರ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ ವಿಧಾಸ ಸಭಾ ಕ್ಷೇತ್ರ ಮತ್ತು ಭಾಷೆಯನ್ನು ಆಯ್ಕೆ ಮಾಡಿಕೊಂಡು ಕೆಳಗೆ ಕಾಣುವ “Captcha” ಕೋಡ್ ಅನ್ನು ನಮೂದಿಸಿದರೆ ನಿಮ್ಮ ಹಳ್ಳಿಯ ಮತಗಟ್ಟೆಯ ಪರಿಷ್ಕೃತ ಮತದಾರ ಪಟ್ಟಿಯ PDF ಪೈಲ್ ತೋರಿಸುತ್ತದೆ ಆ ಐಕಾನ್ ಮೇಲೆ ಕ್ಲಿಕ್ ಮಾಡಿ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಹೀಗೆ ಮಾಡಿ:

ಮೇಲೆ ತಿಳಿಸಿದ ವಿಧಾನವನ್ನು ಅನುಸರಿಸಿ ಪರಿಷ್ಕೃತ ಮತದಾರ ಪಟ್ಟಿಯನ್ನು ಚೆಕ್ ಮಾಡಿದಾಫ಼ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ವೋಟರ್‌ ಹೆಲ್ಪ್‌ಲೈನ್‌ ಆನ್‌ಲೈನ್ ಮೂಲಕವೂ ಸಲ್ಲಿಸಬಹುದು.

ಇದನ್ನೂ ಓದಿ: Land Conversion-ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಚಿವ ಕೃಷ್ಣಬೈರೇಗೌಡ

Documents For Voter ID-ಮತದಾರರ ಪಟ್ಟಿಗೆ ಹೆಸರನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳು:

18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿ ಅಧಿಕೃತ ವೋಟರ್ ಐಡಿ ಕಾರ್ಡ ಅನ್ನು ಪಡೆಯಲು ಅವಶ್ಯಕ ದಾಖಲಾತಿಗಳ ವಿವರ ಹೀಗಿದೆ.

ವಯಸ್ಸಿನ ಬಗ್ಗೆ ದಾಖಲೆಗಾಗಿ ಸ್ಥಳೀಯ ಸಂಸ್ಥೆ, ಪುರಸಭಾ ಪ್ರಾಧಿಕಾರ, ಜನನ ಮತ್ತು ಮರಣಗಳ ರಿಜಿಸ್ಟ್ರಾರರು ನೀಡಿದ ಜನನ ಪ್ರಮಾಣ ಪತ್ರ, ಆಧಾರ ಕಾರ್ಡ್, ಡ್ರೈವಿಂಗ್‌ಲೈಸೆನ್ಸ್‌, ಜನ್ಮ ದಿನಾಂಕ ಹೊಂದಿದ ಸಿಬಿಎಸ್ಸಿ, ಐಸಿಎಸ್‌ಇ, ರಾಜ್ಯ ಶಿಕ್ಷಣ ಮಂಡಳಿಗಳು ನೀಡಿದ 10 ಅಥವಾ 12ನೇ ತರಗತಿಯ ಪ್ರಮಾಣ ಪತ್ರಗಳನ್ನು ದಾಖಲೆಗಾಗಿ ನೀಡಬಹುದು.

ವಿಳಾಸದ ಬಗ್ಗೆ ದಾಖಲೆಗಾಗಿ ಕನಿಷ್ಠ 1 ವರ್ಷದ ನೀರು, ವಿದ್ಯುಚ್ಛಕ್ತಿ, ಗ್ಯಾಸ್‌ಸಂಪರ್ಕದ ಬಿಲ್‌, ಆಧಾರ ಕಾರ್ಡ್‌, ರಾಷ್ಟ್ರೀಕೃತ ಶೆಡ್ಯೂಲ್‌ಬ್ಯಾಂಕ್‌, ಅಂಚೆ ಕಚೇರಿಯ ಚಾಲ್ತಿಯಲ್ಲಿರುವ ಪಾಸ್‌ಬುಕ್‌, ಪಾಸ್‌ಪೋರ್ಟ್‌, ಕಿಸಾನ್‌ಸಹಿಯನ್ನೊಳಗೊಂಡ ಕಂದಾಯ ಇಲಾಖೆಯ ಭೂ ಮಾಲೀಕತ್ವದ ದಾಖಲೆಗಳು, ನೋಂದಾಯಿತ ಬಾಡಿಗೆ ಭೋಗ್ಯ ಪತ್ರ, ನೋಂದಾಯತ ಕ್ರಯ ಪತ್ರ ವಿಳಾಸದ ಬಗ್ಗೆ ದಾಖಲೆಗಳನ್ನು ನೀಡಬಹುದಾಗಿದೆ.

ಇದನ್ನೂ ಓದಿ: Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!

New Voter ID Application-ವೋಟರ್ ಐಡಿಗೆ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ನಿಮ್ಮ ಹತ್ತಿರದ ಮತಗಟ್ಟೆಯ ಅಧಿಕಾರಿಗಳನ್ನು ಅಗತ್ಯ ದಾಖಲಾತಿಗಳ ಸಮೇತ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರಗಳನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Online New Voter ID Application-ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

ವೋಟರ್ ಐಡಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ನೇರವಾಗಿ ತಮ್ಮ ಮೊಬೈಲ್ ನಲ್ಲಿ ವೋಟರ್ ಐಡಿಗೆ ಸಂಬಂಧಪಟ್ಟ ತಂತ್ರಾಂಶವನ್ನು ಭೇಟಿ ಮಾಡಿ ಆನ್ಲೈನ್ ಮೂಲಕವು ಸಹ ಅರ್ಜಿಯನ್ನು ಸಲ್ಲಿಸಬಹುದು.

Step-1: ಪ್ರಥಮದಲ್ಲಿ Voter ID Application ಇಲ್ಲಿ ಕ್ಲಿಕ್ ಮಾಡಿ ವೋಟರ್ ತಂತ್ರಾಂಶವನ್ನು ಪ್ರವೇಶ ಮಾಡಬೇಕು ನಂತರ ಮುಖಪುಟದಲ್ಲಿ ಕಾಣುವ “New registration for general electors” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Diploma Certificate Courses-ಕೃಷಿ ವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವ ಅರ್ಜಿ ಆಹ್ವಾನ!

Step-2: “New registration for general electors” ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಗ ಹೊಸ ವೋಟರ್ ಐಡಿ ಪಡೆಯಲು ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

- Advertisment -
LATEST ARTICLES

Related Articles

- Advertisment -

Most Popular

- Advertisment -