ಚುನಾವಣಾ ಆಯೋಗದಿಂದ ಮತ ಚಲಾಯಿಸಲು ಅರ್ಹರಿರುವ ಹಳ್ಳಿವಾರು ಮತದಾರರ ಪಟ್ಟಿಯನ್ನು(Voter ID List) ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಚುನಾವಣಾ ಆಯೋಗದ ಜಾಲತಾಣವನ್ನು ತಮ್ಮ ಮೊಬೈಲ್ ನಲ್ಲೇ ಭೇಟಿ ಮಾಡಿ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದು.
ಅಧಿಕೃತವಾಗಿ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳುವುದರ ಜೊತೆಗೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇತರೆ ವಿವರವು ಸರಿಯಾಗಿ ನಮೂದಿಸಲಾಗಿದೆಯೇ? ಎನ್ನುವ ಮಾಹಿತಿಯನ್ನು ಸಹ ಖಚಿತಪಡಿಸಿಕೊಳ್ಳಬೇಕು.
ಇದನ್ನೂ ಓದಿ: Ration card list-2024: ಹಳ್ಳಿವಾರು ಅರ್ಹ ರೇಶನ್ ಕಾರ್ಡದಾರರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!
18 ವರ್ಷ ತುಂಬಿದವರು ಮತ್ತು ಇಲ್ಲಿಯವರೆಗೆ ವೋಟರ್ ಐಡಿ ಪಡೆಯದೇ ಇರುವವರು ಹಾಗೂ ವೋಟರ್ ಐಡಿಯಲ್ಲಿ ವಿಳಾಸ, ಹೆಸರು ಇತರೆ ವಿವರ ತಿದ್ದುಪಡಿ ಮಾಡಿಕೊಳ್ಳಲು ಸಹ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಯೋಗದಿಂದ(Election commission of karnataka) ಅವಕಾಶ ನೀಡಲಾಗಿದೆ.
ವೋಟರ್ ಐಡಿಯು(New Voter ID application) ನಮ್ಮ ದೇಶದಲ್ಲಿ ಅತೀ ಮುಖ್ಯವಾದ ಗುರುತಿನ ಚೀಟಿಯಲ್ಲಿ ಒಂದಾಗಿದ್ದು ಇದಲ್ಲಿ ನಮೂದಿಸಿದ ವಿವರಗಳು ಸರಿಯಾಗಿದಿಯೇ? ಎಂದು ತಪ್ಪದೇ ಚೆಕ್ ಮಾಡಿಕೊಳ್ಳಬೇಕು ಮತ್ತು ಈ ಗುರುತಿನ ಚೀಟಿಯನ್ನು ಪಡೆಯಲು ಅರ್ಹರಿದ್ದರು ಪಡೆಯದೇ ಇರುವವರು ಹಾಗೂ 18 ವರ್ಷ ತುಂಬಿದವರು ತಪ್ಪದೇ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
Voter ID List- ಹಳ್ಳಿವಾರು ಅಧಿಕೃತ ಮತದಾರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ!
ಸಾರ್ವಜನಿಕರು ಇಲ್ಲಿ ನೀಡಿರುವ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಕಡಿಮೆ ಸಮಯ ಬಳಕೆ ಮಾಡಿಕೊಂಡು ಮನೆಯಲ್ಲಿ ಕುಳಿತು ನಿಮ್ಮ ಹಳ್ಳಿಯ ಮತದಾರರ ಪಟ್ಟಿಯನ್ನು ಪಡೆದು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಇದ್ದರೆ ಎಲ್ಲಾ ವಿವರ ಸರಿಯಾಗಿ ಇದಿಯಾ? ಎಂದು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Jaminige dhari-ಜಮೀನಿಗೆ ಹೋಗಲು ಅಕ್ಕ-ಪಕ್ಕದವರು ದಾರಿ ಬಿಡುತ್ತಿಲ್ಲವೇ? ಬಂತು ನೋಡಿ ಹೊಸ ನಿಯಮ!
Step-1: ಮೊದಲಿಗೆ Voter ID List ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ/District, ವಿಧಾನ ಸಭಾ ಕ್ಷೇತ್ರ/Assembly Constituency, ಭಾಷೆಯನ್ನು/Language ಆಯ್ಕೆ ಮಾಡಿಕೊಂಡು “Captcha” ಕೋಡ್ ನಮೂದಿಸಬೇಕು.
Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ಈ ಪೇಜ್ ನಲ್ಲಿ ನಿಮ್ಮ ವಿಧಾನ ಸಭಾ ಕ್ಷೇತ್ರ/Assembly Constituency ದಲ್ಲಿ ಲಭ್ಯವಿರುವ ಎಲ್ಲಾ ಮತಗಟ್ಟೆಗಳ ಪಟ್ಟಿ ತೋರಿಸುತ್ತದೆ ಇದಲ್ಲಿ ನಿಮ್ಮ ಮತಗಟ್ಟೆ ಅಂದರೆ ನಿಮ್ಮ ಹಳ್ಳಿಯ ಹೆಸರು ಇರುವುದನ್ನು ಚೆಕ್ ಮಾಡಿ ಅದರ ಮುಂದೆ ಕಾಣುವ DraftRoll – 2025 ಕಾಲಂ ನಲ್ಲಿರುವ ಡೌನ್ಲೋಡ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ಮತದಾರ ಪಟ್ಟಿ PDF ಪಟ್ಟಿ ಡೌನ್ಲೋಡ್ ಅಗುತ್ತದೆ.
ಮೊದಲಿಗೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿ ನಂತರ ನಿಮ್ಮ ಹೆಸರು ಇತರೆ ವಿವರ ಸರಿಯಾಗಿ ನಮೂದಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: Bank Loan-ಬ್ಯಾಂಕ್ ನಿಂದ ಸಾಲ ಪಡೆಯುವಾಗ ಈ ತಪ್ಪು ಮಾಡದಿರಿ!
Voter ID application- ವೋಟರ್ ಐಡಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಒಂದೊಮ್ಮೆ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು, ವಯಸ್ಸು, ವಿಳಾಸ ತಪ್ಪಾಗಿದ್ದರೆ ಅಥವಾ ವೋಟರ್ ಐಡಿಯಲ್ಲಿ ತಿದ್ದುಪಡಿ ಮಾಡಿಸುವುದಿದ್ದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹಳ್ಳಿಯ ಮತಗಟ್ಟೆಯ ಅಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.
ಅಥವಾ ಗ್ರಾಮ್ ಒನ್/ಕರ್ನಾಟಕ ಒನ್ ಇತರೆ ಕಂಪ್ಯೂಟರ್ ಸೆಂಟರ್ ಮೂಲಕವು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್: Apply Now
New Voter ID application- ಹೊಸ ವೋಟರ್ ಪಡೆಯಲು ಅರ್ಜಿ ಆಹ್ವಾನ:
18 ವರ್ಷ ತುಂಬಿದವರು ಅಗತ್ಯ ದಾಖಲಾತಿಗಳನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ ವೋಟರ್ ಐಡಿ ಪಡೆಯಬಹುದು.
ಅರ್ಜಿ ಸಲ್ಲಿಸಲು ಲಿಂಕ್: Apply Now
Assembly Constituency Voter ID- ವಿಧಾನ ಸಭಾ ಕ್ಷೇತ್ರವಾರು ಮತದಾರ ಅಂಕಿ-ಅಂಶ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ : Download Now