- Advertisment -
HomeAgricultureWaqf Bill-2025: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ತಿದ್ದುಪಡಿಗೆ ಒಪ್ಪಿಗೆ!

Waqf Bill-2025: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ತಿದ್ದುಪಡಿಗೆ ಒಪ್ಪಿಗೆ!

ವಕ್ಫ್ ತಿದ್ದುಪಡಿಗೆ(Waqf Act) ಕೇಂದ್ರ ಪ್ರತಿ ಪಕ್ಷಗಳ ವಿರೋಧದ ನಡುವೆಯು ಸಹ ಜಂಟಿ ಸದನ ಸಮಿತಿಯ(JPC) 14 ತಿದ್ದುಪಡಿ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ.

ರಾಜ್ಯದಲ್ಲಿಯು ಸಹ ಈ ವಕ್ಫ್ ಕಾಯ್ದೆಯ(Waqf Act) ಕುರಿತು ಕಳೆದ 2 ತಿಂಗಳ ಹಿಂದೆ ತೀರ್ವ ವಿವಾದಗಳು ಹಲವು ಜಿಲ್ಲೆಗಳಲ್ಲಿ ಉದ್ಬವಿಸಿದ್ದವು ರೈತರ ಜಮೀನಿನ ಪಹಣಿಯಲ್ಲಿ ಇದು “ವಕ್ಪ್ ಆಸ್ತಿ” ಎಂದು ರೈತರಿಗೆ ತಿಳಿಸದೇ ರಾತ್ರೋರಾತ್ರಿ ಕಂದಾಯ ಇಲಾಕೆಯಿಂದ ನಮೂದಿಸಲಾಗಿತ್ತು.

“ವಕ್ಫ್ ಕಾಯ್ದೆ” ತಿದ್ದುಪಡಿಯ ಉದ್ದೇಶವೇನು? ವಕ್ಫ್ ತಿದ್ದುಪಡಿ(Waqf Act Amendment) ವಿಧೇಯಕದಲ್ಲಿ ಯಾವೆಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ? ವಕ್ಫ್ ಕಾಯ್ದೆ ಕುರಿತು ರಾಜ್ಯ ಸರಕಾರದ ಆದೇಶದಲ್ಲಿ ಉಲೇಖಿಸಿರುವ ಅಂಶಗಳು ಯಾವುವು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Microfinance Helpline-ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ದೂರು ಸಲ್ಲಿಸಲು ಸಹಾಯವಾಣಿ!

What is the purpose of Waqf Act Amendment?-ವಕ್ಫ್ ಕಾಯ್ದೆ ತಿದ್ದುಪಡಿಯ ಉದ್ದೇಶವೇನು?

ಪ್ರಸ್ತುತ ವಕ್ಫ್ ಕಾಯ್ದೆಯಿಂದ ಸಾರ್ವಜನಿಕರಿಗೆ ಅಗುತ್ತಿರುವ ನಷ್ಟಕ್ಕೆ ಸೂಕ್ತ ರಕ್ಷಣೆಯನ್ನು ನೀಡುವುದು.

ವಕ್ಫ್ ಕಾಯ್ದೆಯನ್ನು ಬಳಕೆ ಮಾಡಿಕೊಂಡು ವಕ್ಫ್ ಆಸ್ತಿಯನ್ನು(waqf property) ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕುವುದು.

ಈ ಹಿಂದಿನ ಕಾಯಿದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಆಡಳಿತದಲ್ಲಿ ಸುಧಾರಣೆಯನ್ನು ತರಲು “ವಕ್ಫ್ ಕಾಯಿದೆ-1995” ಕ್ಕೆ ತಿದ್ದುಪಡಿಯನ್ನು ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: MSP Price List-ಬೆಂಬಲ ಬೆಲೆಯಲ್ಲಿ ಕುಸುಬೆ ಖರೀದಿ!ದರ ಎಷ್ಟು?

Waqf Amendment

ಇದನ್ನೂ ಓದಿ: Land Rights Cases-ಕೃಷಿ ಜಮೀನಿನ ಪ್ರಕರಣಗಳಲ್ಲಿ ಪೊಲೀಸರು ಈ ನಿಯಮ ಪಾಲಿಸುವುದು ಕಡ್ಡಾಯ!

Waqf Amendment Bill-2025: ಪ್ರಮುಖ ತಿದ್ದುಪಡಿಗಳ ವಿವರ:

ವಕ್ಫ್ ಕಾಯಿದೆ ಮತ್ತು ವಕ್ಫ್ ಆಸ್ತಿ ಕುರಿತು ನಿರ್ಣಯಗಳನ್ನು ತೆಗೆದುಕೊಳ್ಳಲು ವಕ್ಫ್ ಆಸ್ತಿ ನಿರ್ವಹಣೆ, ವ್ಯಾಜ್ಯಗಳನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವುದು.

ರಾಜ್ಯ ಸರಕಾರದಡಿ ಬರುವ ರಾಜ್ಯದ ವಕ್ಫ್ ಬೋರ್ಡನಲ್ಲಿ ಮುಸ್ಲಿಂ ಒಬಿಸಿ ಸಮುದಾಯದ ಸದಸ್ಯರನ್ನು ಸೇರ್ಪಡೆಗೆ ಅವಕಾಶ ನೀಡುವುದು.

ವಕ್ಫ್ ಬೋರ್ಡನಲ್ಲಿ ಮುಸ್ಲಿಮೇತರ ಮುಖ್ಯ ಕಾರ್ಯಕಾರಿ ಅಧಿಕಾರಿಯ ಸೇರ್ಪಡೆಗೆ ಅವಕಾಶವನ್ನು ನೀಡುವುದು.

ಕೇಂದ್ರ ಮತ್ತು ರಾಜ್ಯ ವಕ್ಫ್ ಬೋರ್ಡನಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರನ್ನು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯಕ್ಕೆ ಹೆಚ್ಚಿನ ಅವಕಾಶವನ್ನು ನೀಡುವುದು.

ಬೊಹ್ರಾ ಮುಸ್ಲಿಂ ಸಮುದಾಯದವರಿಗಾಗಿ ಈಗಿರುವ ವಕ್ಫ್ ಬೋರ್ಡನಲ್ಲಿ ರೀತಿಯನ್ನು ಮತ್ತೊಂದು ಪ್ರತೇಕ ವಕ್ಫ್ ಬೋರ್ಡ ಅನ್ನು ರಚನೆ ಮಾಡಿಕೊಳ್ಳಲು ಅವಕಾಶ ನೀಡುವುದು.

ಇದನ್ನೂ ಓದಿ: Free Bus for Students- SSLC ಮತ್ತು PUC ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ!

Waqf Act Amendment

Waqf board-ವಕ್ಫ್ ಆಸ್ತಿ ವಿವಾದದ ಕುರಿತು ರಾಜ್ಯ ಸರಕಾರದಿಂದ ಹೊರಡಿಸಿರುವ ಆದೇಶ ವಿವರ:

ರಾಜ್ಯದ್ಯಂತ ಉಂಟಾದ ವಕ್ಫ್ ಆಸ್ತಿ ವಿವಾದವನ್ನು ನಿಯಂತ್ರಣಕ್ಕೆ ತರಲು ಮತ್ತು ರೈತರಿಗೆ ಈ ಕಾಯ್ದೆಯಿಂದ ಯಾವುದೇ ಬಗ್ಗೆಯ ತೊಂದರೆಯನ್ನು ಉಂಟಾಗದಂತೆ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಸರಕಾರವು ಈ ಕೆಳಗಿನಂತೆ ಆದೇಶವನ್ನು ಹೊರಡಿಸಲಾಗಿತ್ತು.

ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಆಸ್ತಿ ವಿವಾದದ ಕುರಿತು ಕಂದಾಯ ಇಲಾಖೆಯ ಅಪರ ಕಾರ್ಯದರ್ಶಿಗಳು ಈ ಕೆಳಗಿನಂತೆ ಆದೇಶ ಹೊರಡಿಸಿದ್ದಾರೆ.

ಆ ಸಮಯದಲ್ಲಿ ರೈತರಿಗೆ ಸಂಬಂಧಿಸಿದ ಹಾಗೂ ಇತರ ಆಸ್ತಿಗಳನ್ನು ವಕ್ಫ್ ಬೋರ್ಡ ಹೆಸರಿಗೆ ಖಾತೆ ಬದಲಾವಣೆ ಮಾಡುತ್ತಿದ್ದಾರೆ ಎಂಬ ದೂರಿ ಅನ್ವಯ ಸನ್ಮಾನ್ಯ ಮುಖ್ಯಮಂತ್ರಿಗಳು ಸಭೆಯನ್ನು ನಡೆಸಿ ಈ ಕೆಳಕಂಡಂತೆ ಸೂಚನೆಯನ್ನು ನೀಡಿರುತ್ತಾರೆ.

ಇದನ್ನೂ ಓದಿ: Karnataka Dam Water Level-ಈ ಬಾರಿ ರಾಜ್ಯಕ್ಕಿಲ್ಲ ನೀರಿನ ಸಮಸ್ಯೆ! ಡ್ಯಾಂ ವಾರು ನೀರಿನ ಸಂಗ್ರಹ ಎಷ್ಟಿದೆ?

A) ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರುಗಳ ಆಸ್ತಿಗೆ ಯಾವುದೇ ಬಗ್ಗೆಯ ತೊಂದರೆಯನ್ನು ನೀಡದಂತೆ ಸೂಚನೆಯನ್ನು ನೀಡಲಾಗಿತ್ತು.

B) ವಕ್ಫ್ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಯಾವುದೇ ಪ್ರಾಧಿಕಾರದಿಂದ ನೀಡಲಾಡ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆಯಬೇಕು ಹಾಗೂ ಮ್ಯುಟೇಷನ್ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

C) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಕುರಿತು ನೀಡಲಾದ ಎಲ್ಲಾ ನೋಟಿಸುಗಳನ್ನು ಹಿಂಪಡೆಯುವಂತೆ ಸೂಚನೆ.

- Advertisment -
LATEST ARTICLES

Related Articles

- Advertisment -

Most Popular

- Advertisment -