- Advertisment -
HomeGovt SchemesYashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!

Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!

ರಾಜ್ಯ ಸರಕಾರದಿಂದ ಯಶಸ್ವಿನಿ ಯೋಜನೆಯಡಿ ಅರ್ಹ ಫಲಾನುಭವಿಗಳ ನೋಂದಣಿಯನ್ನು ಮಾಡಿಕೊಳ್ಳಲು ನಿಗದಿಪಡಿಸಿದ ಕೊನೆಯ(Yashashwini Card Application Last Date) ದಿನಾಂಕವನ್ನು ವಿಸ್ತರಣೆ ಮಾಡಿ ಅಧಿಕೃತ ಆದೇಶವನ್ನು ಪ್ರಕಟಿಸಲಾಗಿದೆ.

ಈಗಾಗಲೇ ಕಳೆದ 2 ತಿಂಗಳಿನಿಂದ ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಸಹಕಾರ ಇಲಾಖೆಯಿಂದ ಯಶಸ್ವಿನಿ ಯೋಜನೆಯ(Yashashwini Yojana) ಸೌಲಭ್ಯವನ್ನು ಪಡೆಯಲು ಅರ್ಹ ಅರ್ಜಿದಾರರು ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಅದರೆ ಕೆಲವು ಕಾರಣಗಳಿಂದಾಗಿ ಈ ಯೋಜನೆಯಡಿ ನಿಗದಿಪಡಿಸಿರುವ ಗುರಿ ಸಾಧಿಸಲು ಸಾಧ್ಯವಾಗಿರುವುದಿಲ್ಲ ಆ ಕಾರಣದಿಂದಾಗಿ ಯಶಸ್ವಿನಿ ಯೋಜನೆಯಡಿ ಅರ್ಹ ಫಲಾನುಭವಿಗಳ ನೋಂದಣಿಯನ್ನು ಮಾಡಿಕೊಳ್ಳಲು ನಿಗದಿಪಡಿಸಿದ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಯಶಸ್ವಿನಿ ಯೋಜನೆಯಡಿ ಅರ್ಜಿದಾರರು ಅರ್ಜಿ(Yashashwini Card) ಸಲ್ಲಿಸಲು ಎಲ್ಲಿಯವರೆಗೆ ಅವಕಾಶ ನೀಡಲಾಗಿದೆ? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇನ್ನಿತರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು, ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Police Department-ಸಂಪುಟ ಸಭೆಯಲ್ಲಿ ಪೋಲಿಸ್ ಇಲಾಖೆಯ ನೇರ ನೇಮಕಾತಿ ಕುರಿತು ಮಹತ್ವದ ನಿರ್ಣಯ!

Yashashwini Card Application Last Date-ಯಶಸ್ವಿನಿ ಕಾರ್ಡ ಪಡೆಯಲು 31 ಮಾರ್ಚ್ 2025 ರವರೆಗೆ ಅವಕಾಶ:

ಯಶಸ್ವಿನಿ ಯೋಜನೆಯಡಿ ಅರ್ಜಿ ಸಲ್ಲಿಸಿ ಸದಸ್ಯತ್ವವನ್ನು ನೋಂದಣಿಯನ್ನು ಮಾಡಿಕೊಳ್ಳಲು ಸಹಕಾರ ಇಲಾಖೆಯಿಂದ ಈ ಹಿಂದೆ 31 ಜನವರಿ 2025 ರ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು ಅದರೆ ಪ್ರಸ್ತುತ ಈಗ 31ಮಾರ್ಚ್ 2025 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ನೋಂದಣಿಯನ್ನು ಡಿಸೆಂಬರ್-2024 ಮತ್ತು ಜನವರಿ-2025 ರ ತಿಂಗಳಲ್ಲಿ ಮಾಡಲಾಗಿತ್ತು ಆದರೆ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ / ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಈ ಸಮಯದಲ್ಲಿ ಚುನಾವಣೆ ಇದ್ದ ಕಾರಣ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು / ಅಧಿಕಾರಿಗಳು ಚುನಾವಣಾಯಲ್ಲಿ ನಿಯೋಜನೆಕೊಂಡ ಕಾರಣ ನಿಗದಿತ ಮಟ್ಟದ ಗುರಿಯನ್ನು ಸಾಧಿಸಲು ಈ ಯೋಜನೆಯಡಿ ಸಾಧ್ಯವಾಗಿರುವುದಿಲ್ಲ.

ಸದರಿ ಕಾರಣದಿಂದ ಸಹಕಾರ ಇಲಾಖೆಯು ಯಶಸ್ವಿನಿ ಯೋಜನೆಯಡಿ ಅರ್ಜಿ ಸಲ್ಲಿಸಿ ಸದಸ್ಯತ್ವವನ್ನು ನೋಂದಣಿಯನ್ನು ಮಾಡಿಕೊಳ್ಳಲು ನಿಗದಿಪಡಿಸಿದ ಕೊನೆಯ ದಿನಾಂಕವನ್ನು 31 ಮಾರ್ಚ್ 2025 ರವರೆಗೆ ವಿಸ್ತರಣೆ ಮಾಡಿ ಆದೇಶವನ್ನು ಪ್ರಕಟಿಸಲಾಗಿದೆ. ಈ ಅವಕಾಶವನ್ನು ಬಳಕೆ ಮಾಡಿಕೊಂಡು ಇಲ್ಲಿಯವರೆಗೆ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನೋಂದಣಿಯನ್ನು ಮಾಡಿಕೊಳ್ಳದವರು ನೋಂದಣಿಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Annabhagya Amount- ಜನವರಿ-2025 ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!

Yashashwini Yojana

ಇದನ್ನೂ ಓದಿ: Milk Price-ರೈತರಿಗೆ ಸಿಹಿ ಸುದ್ದಿ! ಹಾಲಿದ ದರ ಹೆಚ್ಚಳ ಮಾಡಿದ ಕೆ ಎಂ ಎಫ್!

How To Apply For Yashashwini Card-ಯಶಸ್ವಿನಿ ಯೋಜನೆಗೆ ನೋಂದಣಿಯನ್ನು ಎಲ್ಲಿ ಮಾಡಿಕೊಳ್ಳಬೇಕು?

ಯಶಸ್ವಿನಿ ಯೋಜನೆಯ ಸೌಲಭ್ಯವನ್ನು ಪಡೆಯಲು ನೋಂದಣಿಯನ್ನು ಮಾಡಿಕೊಳ್ಳಲು ಅರ್ಹ ಅರ್ಜಿದಾರರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನಿಮ್ಮ ಹತ್ತಿರದ ಸಹಕಾರಿ ಸಂಘದ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents For Yashashwini Card-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಪೋಟೋ
2) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
3) ಕುಟುಂಬದ ಪಡಿತರ ಚೀಟಿ
4) ಬ್ಯಾಂಕ್ ಪಾಸ್ ಬುಕ್
5) ಮೊಬೈಲ್ ನಂಬರ್

ಇದನ್ನೂ ಓದಿ: Ayushman card-ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Yashashwini Card Fee-ಯಶಸ್ವಿನಿ ಸದಸ್ಯತ್ವ ನೋಂದಣಿ ಶುಲ್ಕ:

ಕುಟುಂಬ ಒಂದಕ್ಕೆ ಒಂದು ವರ್ಷಕ್ಕೆ ರೂ.500/-ಗಳ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಕ್ಕೆ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.100/- ಶುಲ್ಕವನ್ನು ಪಾವತಿ ಮಾಡಬೇಕು.

ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200/-ಗಳನ್ನು ಶುಲ್ಕವನ್ನು ಪಾವತಿ ಮಾಡಬೇಕು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರಿಗೆ ಯಾವುದೇ ಶುಲ್ಕವನ್ನು ಪಾವತಿ ನಿಗದಿಪಡಿಸಿಲ್ಲ.

ಇದನ್ನೂ ಓದಿ: Budget 2025-ಕೇಂದ್ರ ಬಜೆಟ್ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೃಷಿ ಸಾಲದ ಮಿತಿ ಹೆಚ್ಚಳ!

Yashashwini Card Benefits-ಯಶಸ್ವಿನಿ ಯೋಜನೆಯಡಿ ಸಿಗುವ ಪ್ರಯೋಜನಗಳು:

ಯಶಸ್ವಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ನಿಂದ ಗುರುತಿಸಿದ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಸದಸ್ಯರು ಉಚಿತವಾಗಿ ಪಡೆಯಬಹುದು..

ರೋಗಿಗಳು ಮೇಲಿನ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ಸಿನಿ ನೆಟ್‌ವರ್ಕ್ ಆಸ್ಪತ್ರೆಗಳಿಂದ ಪಡೆಯಬಹುದು. ನೆಟ್ವರ್ಕ್ ಆಸ್ಪತ್ರೆಗಳನ್ನು ಹೊರತುವಡಿಸಿ ಇತರ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯವಿರುವುದಿಲ್ಲ. ಯಶಸ್ವಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು ಎಂದು ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -