ಗ್ರಾಮೀಣ ಜನರಿಗೆ ಹೆಚ್ಚು ಪ್ರಯೋಜನಕಾರಿ ಆರೋಗ್ಯ ವಿಮೆ ಯೋಜನೆಯಲ್ಲಿ ಒಂದಾದ ಯಶಸ್ವಿನಿ ಯೋಜನೆಯಲ್ಲಿ(Yashaswini Yojane) ಮಹತ್ವದ ಬದಲಾವಣೆಗೆ ಈ ಯೋಜನೆಯಡಿ ರಚನೆ ಮಾಡಿರುವ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
ಕರ್ನಾಟಕ ಸರ್ಕಾರದ ಯಶಸ್ವಿನಿ ಯೋಜನೆ, ಅಥವಾ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ(Yashaswini Health Insurance), ಗ್ರಾಮೀಣ ಮತ್ತು ಸಹಕಾರ ಕ್ಷೇತ್ರದ ಕಾರ್ಮಿಕರ ಜೀವನವನ್ನು ಪರಿವರ್ತಿಸಿದ ಅಗ್ರಗಣ್ಯ ಆರೋಗ್ಯ ಉಪಕ್ರಮವಾಗಿದೆ. ರೈತರು, ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಿರುವ ಆರೋಗ್ಯ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾದ ಈ ಯೋಜನೆ, ಗುಣಮಟ್ಟದ ವೈದ್ಯಕೀಯ ಆರೈಕೆಗೆ ಸಾಮಾನ್ಯವಾಗಿ ತೊಂದರೆಗೊಳಗಾಗುವ ಲಕ್ಷಾಂತರ ಜನರಿಗೆ ಭರವಸೆಯ ಕಿರಣವಾಗಿದೆ.
ಇದನ್ನೂ ಓದಿ: Horticulture Scheme-ತೋಟಗಾರಿಕೆ ಇಲಾಖೆಯಿಂದ ಈ ಬೆಳೆ ಬೆಳೆಯಲು 1,68 ಲಕ್ಷ ಸಬ್ಸಿಡಿ!
ಯಶಸ್ವಿನಿ ಯೋಜನೆಯನ್ನು(Yashaswini Card) ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಪ್ರಮುಖ ಆಸ್ಪತ್ರೆಗಳನ್ನು ಈ ಯೋಜನೆಯಡಿ ತರಲು ಹಾಗೂ ಹೆಚ್ಚೆಚ್ಚು ರೈತ ಸಹಕಾರಿ ಸದಸ್ಯರಿಗೆ ಈ ಯೋಜನೆಯ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಣೆ ಮಾಡಲು ಅಗತ್ಯ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಶಾಸಕ ಡಾ ಎಸ್ ಟಿ ಶ್ರೀನಿವಾಸ ಅವರ ಅಧ್ಯಕ್ಷತೆಯ ಯಶಸ್ವಿನಿ ದರ ಪರಿಷ್ಕರಣ ಸಮಿತಿಯು ತಮ್ಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಸಲ್ಲಿಸಿದು ಇದಕ್ಕೆ ಸಕಾರಾತ್ವಕವಾಗಿ ಸ್ಪಂದಿಸಿದ್ದಾರೆ ಎಂದು ಸಮಿತ ಸದಸ್ಯರು ಮಾಹಿತಿ ತಿಳಿಸಿದ್ದಾರೆ.
Yashaswini Yojane New Update-ಹೊಸದಾಗಿ 69 ಚಿಕಿತ್ಸೆ ಸೇರ್ಪಡೆ:
ಯಶಸ್ವಿನಿ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡಿರುವ ಅರ್ಹ ಸದಸ್ಯರಿಗೆ ಈಗಾಗಲೇ ಲಭ್ಯವಿರುವ ಚಿಕಿತ್ಸೆಗಳ ಜೊತೆಗೆ ಹೆಚ್ಚುವರಿಯಾಗಿ ಕ್ಯಾನ್ಸರ್, ನರರೋಗ, ಹೃದ್ರೋಗ, ಮಾನಸಿಕ ಕಾಯಿಲೆಗಳು, ಕಣ್ಣಿನ ನರ ಶಸ್ತ್ರಚಿಕಿತ್ಸೆ, ಮಕ್ಕಳಿಗೆ ಕ್ಯಾನ್ಸರ್, ಇಂಟರ್ ವೆನ್ಷನಲ್ ರೇಡಿಯಾಲಜಿ, ಸಿಟಿವಿಎಸ್ ಇನ್ನಿತರೆ ಒಟ್ಟೂ 69 ಹೊಸ ಚಿಕಿತ್ಸೆಗಳನ್ನು ಸೇರ್ಪಡೆ ಮಾಡಲು ಸಮಿತಿಯು ಶಿಫಾರಸು ಮಾಡಿದೆ.
ಇದನ್ನೂ ಓದಿ: Ration Card-ಸರ್ಕಾರದಿಂದ ರೇಷನ್ ಕಾರ್ಡದಾರರಿಗೆ ಮತ್ತೊಂದು ಸಿಹಿ ಸುದ್ದಿ!
Yashaswini Yojane Benefits-75 ಸಾವಿರ ಕಾರ್ಡದಾರರಿಗೆ ನೆರವು:
ಈ ಯೋಜನೆಯಡಿ ಶುಲ್ಕವನ್ನು ಪಾವತಿ ಮಾಡಿ ಯಶಸ್ವಿನಿ ಕಾರ್ಡ ಅನ್ನು ಪಡೆದಿರುವರ ಪೈಕಿ ಕಳೆದ ವರ್ಷ ಅಂದರೆ 2024ರಲ್ಲಿ ಒಟ್ಟು 68,159 ಕಾರ್ಡದಾರರು ಒಟ್ಟು 117.79 ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದಿರುತ್ತಾರೆ ಸರಾಸರಿ ಒಬ್ಬ ಕಾರ್ಡದಾರರು 17,000 ಸಾವಿರ ನೆರವನ್ನು ಪಡೆದಂತಾಗಿದೆ.
Yashaswini Yojane Registration-ನೋಂದಣಿ ಶುಲ್ಕ ಪರಿಷ್ಕರಣೆ:
ಯಶಸ್ವಿನಿ ಯೋಜನೆಯಡಿ ಪ್ರಮುಖ ಜನಸ್ನೇಹಿ ಬದಲಾವಣೆಗೆ ರಚನೆ ಮಾಡಿರುವ ಸಮಿತಿಯು ಹೊಸ ಚಿಕಿತ್ಸೆಗಳ ಸೇರ್ಪಡೆ ಮತ್ತು ಚಿಕಿತ್ಸಾ ದರಗಳ ಪರಿಷ್ಕರಣೆಯ ಜೊತೆಗೆ ಸದಸ್ಯರ ನೋಂದಣಿ ಶುಲ್ಕವನ್ನು ಸಹ ಪರಿಷ್ಕರಣೆ ಮಾಡುವ ಅಂಶವನ್ನು ಸಹ ಉಲ್ಲೇಖಿಸಿದ್ದು ಇದರಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ ಬೀಳಲಿರುವ ಆರ್ಥಿಕ ಹೊರೆಯನ್ನು ತಗ್ಗಿಸಬಹುದು ಎಂದು ತಿಳಿಸಿದೆ.
ಇದನ್ನೂ ಓದಿ: Karnataka Male Mahiti-ರಾಜ್ಯದ ಮಳೆ ಮುನ್ಸೂಚನೆ!ಈ ದಿನದ ನಂತರ ಉತ್ತಮ ಮಳೆ ಸಾಧ್ಯತೆ!

Health Insurance-ಉತ್ತಮ ಆರೋಗ್ಯ ಸೇವೆ ಪಡೆಯಲು ರೈತ ಸದಸ್ಯರಿಗೆ ಅನುಕೂಲ:
ಸಮಿತಿಯ ಶಿಫಾರಸನ್ನು ಸರ್ಕಾರದ ಅನುಷ್ಠಾನ ಮಾಡುವ ಮೂಲಕ ಈ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡು ಕಾರ್ಡ ಅನ್ನು ಪಡೆದಿರುವ ರೈತರಿಗೆ ಈ ವಿಮಾ ಯೋಜನೆಯಡಿ ಉತ್ತಮ ವೈದ್ಯಕೀಯ ಚಿಕಿತ್ಸೆ ಜೊತೆಗೆ ಹೆಚ್ಚೆಚ್ಚು ಪ್ರಮುಖ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಡಾ ಎನ್ ಟಿ ಶ್ರೀ ನಿವಾಸ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Yashaswini Scheme-ಯಶಸ್ವಿನಿ ಯೋಜನೆಯಡಿ ದರ ಪರಿಷ್ಕರಣೆ ಏಕೆ ಮುಖ್ಯ:
ರಾಜ್ಯದಲ್ಲಿರುವ ಬಹುತೇಕ ಪ್ರಮುಖ ಆಸ್ಪತ್ರೆಗಳು ದಶಕಗಳ ಹಿಂದಿನ ದರ ಎನ್ನುವ ಕಾರಣಕ್ಕೆ ಈ ಯೋಜನೆಯಿಂದ ಹಿಂದೆ ಉಳಿದಿದ್ದು ಪ್ರಸ್ತುತ ದಿನಕ್ಕೆ ಅನುಗುಣವಾಗಿ ಶೇ 50% ರಿಂದ ಶೇ 55% ಕ್ಕೆ ಚಿಕಿತ್ಸ ದರವನ್ನು ಪರಿಷ್ಕರಣೆ ಮಾಡುವುದರಿಂದ ಪ್ರಮುಖ ಆಸ್ಪತ್ರೆಗಳು ಯೋಜನೆಯ ನೆಟ್ ವರ್ಕ್ ವ್ಯಾಪ್ತಿಗೆ ಬರುತ್ತದೆ ಈಗಿನ ಸ್ಥಿತಿಯ ಪ್ರಕಾರವಾಗಿ ಚಿಕಿತ್ಸೆ ಸೌಲಭ್ಯಗಳು ನಗದು ರಹಿತವಾಗಿ ಲಭಿಸಲಿದ್ದು ಹೆಚ್ಚು ಹೆಚ್ಚು ಸದಸ್ಯರು ಈ ಯೋಜನೆಯಡಿ ನೋಂದಣಿಯನ್ನು ಮಾಡಿಕೊಳ್ಳು ಮುಂದೆ ಬರುತ್ತಾರೆ ಜೊತೆಗೆ ಈ ಯೋಜನೆಯನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.
ಇದನ್ನೂ ಓದಿ: Cyber Crime Portal-ಮೊಬೈಲ್ ಬಳಕೆದಾರರು ತಪ್ಪದೇ ಈ ಮಾಹಿತಿ ತಿಳಿಯಿರಿ!
Yashaswini Card Apply Method-ಯಶಸ್ವಿನಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವುದು ಹೇಗೆ?
ಅರ್ಹ ಅರ್ಜಿದಾರರು ನಿಮ್ಮ ಹಳ್ಳಿ ವ್ಯಾಪ್ತಿಯ ಸಹಕಾರಿ ಸಂಘದ ಕಛೇರಿಯನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ನಿಗದಿತ ನೋಂದಣಿ ಶುಲ್ಕವನ್ನು ಪಾವತಿ ಮಾಡಿ ಈ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
Yashaswini Card Last Date-ಈ ಅವಧಿಯನ್ನು ನೋಂದಣಿಗೆ ಅವಕಾಶ:
ಯಶಸ್ವಿನಿ ಯೋಜನೆಯಡಿ ನೋಂದಣಿಯನ್ನು ಮಾಡಿಕೊಳ್ಳಲು ಪ್ರತಿ ವರ್ಷ ಮಾರ್ಚ-ಎಪ್ರಿಲ್ ತಿಂಗಳಲ್ಲಿ ಅವಕಾಶ ನೀಡಲಾಗುತ್ತದೆ.