HomeNew postsPouthi Khate- ಹಾಳೆ ಖಾತೆದಾರರಿಂದ ಹಾಲಿ ಸಾಗುವಳಿದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಳ್ಳುವುದೇಗೆ?

Pouthi Khate- ಹಾಳೆ ಖಾತೆದಾರರಿಂದ ಹಾಲಿ ಸಾಗುವಳಿದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಳ್ಳುವುದೇಗೆ?

ಕುಟುಂಬದ ಮಾಲೀಕನು ಅಕಾಲಿಕವಾಗಿ ಮರಣ ಹೊಂದಿದರೆ ಅವರ ಹೆಸರಿನಲ್ಲಿರುವ ಆಸ್ತಿಯನ್ನು ಕುಟುಂಬದ ಎಲ್ಲರ ಹೆಸರಿಗೂ ಪೌತಿ ಖಾತೆ ಮೂಲಕ ಆಸ್ತಿ ಬರುತ್ತದೆ. ಆದರೆ ತದನಂತರ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಆಸ್ತಿ ಭಾಗ ಹೇಗೆ ಮಾಡಬೇಕು? ಮಾಡಿದ ನಂತರ ನೊಂದಣಿ ಹೇಗೆ ಮಾಡಬೇಕು? ಎನ್ನುವ ಪ್ರಕ್ರಿಯೆಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಪೌತಿ ಖಾತೆ ಎಂದರೇನು?

ಜಮೀನಿನ ಮಾಲೀಕನ ಸಾವಿನ ನಂತರ ಮನೆಯ ಎಲ್ಲಾ ಸದಸ್ಯರ ಹೆಸರಿನಲ್ಲಿ ಆಸ್ತಿ ಹಕ್ಕು ಜಂಟಿಯಾಗಿ ಬದಲಾವಣೆಯಾಗುವುದಕ್ಕೆ ಪೌತಿ ಖಾತೆ ಎಂದು ಕರೆಯುತ್ತಾರೆ. ಪೌತಿ ಖಾತೆ ಆದ ಮಾತ್ರಕ್ಕೆ ಪೂರ್ಣ ಪ್ರಮಾಣದ ಖಾಯಂ ಹಕ್ಕು ಇರುವುದಿಲ್ಲ. ಈ ಪಾತಿ ಖಾತೆಯ ಉದ್ದೇಶ ಏನೆಂದರೆ ಜಮೀನಿನ ಮೇಲಿನ ಕಂದಾಯ ವಸೂಲಿ ಮತ್ತು ಜಮೀನು ನಿರ್ವಹಣೆಗೆ ಮಾತ್ರ ಹಕ್ಕು ಬದಲಾವಣೆ ಮಾಡಿರುತ್ತಾರೆ. ಹೀಗಾಗಿ ಪೌತಿ ಖಾತೆ ಬದಲಾವಣೆ ನಂತರ ಜಮೀನನ್ನು ಪಾಲು/ವಿಭಾಗ ಮಾಡಿಕೊಳ್ಳಲೇಬೇಕು.  

ಜಮೀನಿನ ಮಾಲೀಕ ಮರಣ ಹೊಂದಿದಾಗ ಸದರಿ ಜಮೀನು ಕುಟುಂಬದ ಎಲ್ಲ ಸದಸ್ಯರ ಹೆಸರಿಗೆ ಜಂಟಿ ಖಾತೆ ಬದಲಾವಣೆ ಮಾಡಲಾಗುತ್ತದೆ. ಜಮೀನು ಜಂಟಿಯಾಗಿ ಇರುವುದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ. ಅದರಂತೆ ಪೂರ್ಣ ಪ್ರಮಾಣದ ಹಕ್ಕು ಯಾವೊಬ್ಬ ಸದಸ್ಯರಿಗೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಪರಸ್ಪರ ಮಾತುಕತೆಯ ನಡೆಸಿ ಒಪ್ಪಿಗೆಯಿಂದ ಜಮೀನು ವಿಭಾಗ ಮಾಡಿಕೊಳ್ಳಲು ನಿರ್ಧರಿಸಬೇಕು. ಎಲ್ಲರೂ ನಿರ್ಧರಿಸಿದ ಮೇಲೆ ಮನೆ ಸದಸ್ಯರ ಹೆಸರು, ಆಧಾರ ಕಾರ್ಡ್ ಮತ್ತು ಪಹಣಿ ಪತ್ರಗಳೊಂದಿಗೆ ನಾಡಕಚೇರಿಗೆ ಹೋಗಿ ಪೋಡಿಗೆ ಅರ್ಜಿ ಹಾಕಿ ರಶೀದಿ ಪಡೆಯಬೇಕು. ಅರ್ಜಿಯಲ್ಲಿ ಆಧಾರ ಕಾರ್ಡ್ ನಲ್ಲಿ ಇರುವಂತೆ ಸ್ಪಷ್ಟವಾಗಿ ಹೆಸರು ಮತ್ತು ಯಾವ ಸದಸ್ಯರಿಗೆ ಎಷ್ಟು ವಿಸ್ತೀರ್ಣ ಬರಬೇಕು ಎಂದು ಬರೆಯಬೇಕು. 

ಇದನ್ನೂ ಓದಿ: Crop survey details- ಕೃಷಿ ಇಲಾಖೆಯಿಂದ ಸರ್ವೆ ನಂಬರ್ ವಾರು ಬೆಳೆ ಸಮೀಕ್ಷೆ ವಿವರ ಬಿಡುಗಡೆ! ನಿಮ್ಮ ಜಮೀನಿನ ಬೆಳೆ ವಿವರ ಚೆಕ್ ಮಾಡಿ.

ಹೀಗೆ ಸಲ್ಲಿಸಿದ ಅರ್ಜಿಯು ಸಂಬಂಧಪಟ್ಟ ಸರ್ವೆ ಕಚೇರಿಗೆ ಹೋಗುತ್ತದೆ. ನಂತರ ಅವರು ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ, ಜಮೀನು ಅಳತೆ ಮಾಡಲು ಭೂಮಾಪಕರಿಗೆ ಕಡತವನ್ನು ರವಾನಿಸಲಾಗುವುದು. ನಂತರ ಭೂಮಾಪಕರು ಗೊತ್ತು ಪಡಿಸಿದ ನಿಗದಿತ ದಿನಾಂಕಕ್ಕೆ ಅರ್ಜಿಯಲ್ಲಿ ಇದ್ದಂತೆ ಅಳತೆ ಮಾಡಲು ಜಮೀನಿಗೆ ಬರುತ್ತಾರೆ. ಅರ್ಜಿದಾರ ಮತ್ತು ಪಾಲುದಾರರ ಸಮಕ್ಷಮದಲ್ಲಿ ಜಮೀನನ್ನು ಅಳತೆ ಮಾಡಲಾಗುತ್ತದೆ. ಕೊನೆಯದಾಗಿ ಎಲ್ಲರ ಸಹಿಯೊಂದಿಗೆ ಕಡತವು ಸರ್ವೆ ಕಚೇರಿಯ ಏಡಿಎಲ್ಲಾರ್ ಲಾಗೀನ್ ಗೆ ಹೋಗುತ್ತದೆ. ಅಲ್ಲಿ ಭೂಮಾಪಕರು ಮಾಡಿದ ಜಮೀನಿನ ವಿಗಂಡಣೆ, ಆಕಾರಬಂದ್, ಕಂದಾಯ ನಿಗದಿ ಮತ್ತು ವಿಂಗಡಿಸಿದ ನಕ್ಷೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಅನುಮೋದಿಸಿದರೆ, ಏಡಿಎಲ್ಲಾರ್ ಅನುಮೋದಿಸಿದ ನಕ್ಷೆಗಳನ್ನು ಆನ್ ಲೈನ್ ನಲ್ಲಿ ತೆಗೆದುಕೊಳ್ಳಬಹುದು. ಅಥವಾ ನಾಡಕಚೇರಿಯಲ್ಲಿಯೂ ಸಹ ತೆಗೆದುಕೊಳ್ಳಬಹುದು. 

11ಇ ನಕ್ಷೆಯ ಜೊತೆಗೆ ಎಲ್ಲರ ಆಧಾರ  ಕಾರ್ಡ್ ನಕಲು ಪ್ರತಿಗಳನ್ನು ತೆಗೆದುಕೊಂಡು ನೋಂದಣಿ ಕಚೇರಿಗೆ ಹೋಗಿ ವಿಭಾಗ ಪತ್ರ ಮಾಡಿಸಬೇಕು. ನಂತರ ಸಂಬಂದಪಟ್ಟ ಉಪನೋಂದಣಿ ಕಚೇರಿಗೆ ಹೋಗಿ ನೋಂದಾಯಿಸಬೇಕು. ನೋಂದಾಯಿಸಲ್ಪಟ್ಟ ವಿಭಾಗ ಪತ್ರವು ಮ್ಯುಟೇಶನ್ ಪ್ರಕ್ರಿಯೆಗಾಗಿ ಭೂಮಿ ಕೇಂದ್ರಕ್ಕೆ ಹೋಗಿ ಅಲ್ಲಿ ಕಾರ್ಯಗತವಾಗುತ್ತದೆ. 

ಮುಖ್ಯ ಅಂಶಗಳು:

ಪಾಲುಪತ್ರ/ವಿಭಾಗ ಪತ್ರ ನೋಂದಣಿ ಶುಲ್ಕ -1000 ರೂ. ಇರುತ್ತದೆ. ಸ್ಕ್ಯಾನಿಂಗ್ ಶುಲ್ಕ ಮತ್ತು ಇತರೇ ಶುಲ್ಕಗಳು ಪ್ರತ್ಯೇಕವಾಗಿರುತ್ತವೆ. ಇದಲ್ಲದೇ ಸ್ಟ್ಯಾಂಪ್ ಡ್ಯೂಟಿ ಶುಲ್ಕವನ್ನೂ ಕಟ್ಟಬೇಕು. ಗ್ರಾಮೀಣ ಭಾಗದ ಜಮೀನು ನೋಂದಣಿ ಮಾಡಬೇಕೆಂದರೆ ಪಾಲುಪತ್ರದಲ್ಲಿರುವ ಕುಟುಂಬದ ಪ್ರತಿಯೊಬ್ಬರೂ 250/- ರೂ.ನಂತೆ ಶುಲ್ಕವನ್ನು ಕಟ್ಟಬೇಕಾಗುತ್ತದೆ. 

ಜಮೀನಿನ ಮೇಲೆ ಯಾವುದಾದರೂ ಋಣಗಳು ಅಂದರೆ ಸಾಲಗಳು ಇದ್ದಲ್ಲಿ ಅದನ್ನು ವಿಭಾಗ ಪತ್ರದಲ್ಲಿ ಬರೆಯಿಸಬೇಕು. ಸದರಿ ಋಣಭಾರ ಜಂಟಿಯಾಗಿ ಇರಬೇಕಾ ಅಥವಾ ಒಬ್ಬರ ಹೆಸರಿಗೆ ಹೋಗಬೇಕಾ ಎನ್ನುವುದನ್ನು ಸ್ಪಷ್ಟವಾಗಿ ಬರೆಯಿಸಬೇಕು. 

ಯಾವುದೇ ಜಮೀನಿನ ಹಕ್ಕು ಬದಲಾವಣೆ ಮಾಡಬೇಕಾದರೆ ಕಡ್ಡಾಯವಾಗಿ ಮ್ಯುಟೇಷನ್ ಪ್ರಕ್ರಿಯೆ ಇದ್ದೇ ಇರುತ್ತದೆ. ಈ ಮ್ಯುಟೇಷನ್ ಪ್ರಕ್ರಿಯೆ ಮತ್ತು ಜೆ ಫಾರ್ಮ್ ಪ್ರಕ್ರಿಯೆ ಕಡ್ಡಾಯವಾಗಿ ಇರುತ್ತದೆ. 

ಇದನ್ನೂ ಓದಿ: Crop insurance status: ಬೆಳೆ ವಿಮೆ ಕುರಿತು ಈ ರೀತಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದಿದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?

ಪೌತಿ ಖಾತೆ ಹೊರತು ಪಡಿಸಿ ಜಮೀನಿನ ಯಾವುದೇ ಹಕ್ಕುಬದಲಾವಣೆಗಳನ್ನು ನೇರವಾಗಿ ಮಾಡಲು ಬರುವುದಿಲ್ಲ. ಅಂದರೆ ದಾನ, ಕ್ರಯ, ವಿಭಾಗ ಸಂಬಂಧಿತ ಹಕ್ಕು ವರ್ಗಾವಣೆ ಮಾಡಬೇಕಾದರೆ ಕಡ್ಡಾಯವಾಗಿ ನೋಂದಣಿ ಮಾಡಲೇಬೇಕು. 

ನಿಮ್ಮ ಮೊಬೈಲ್ ನಲ್ಲಿ ಜಮೀನಿನ ದಾಖಲೆಗಳಾದ ಪಹಣಿ, MR, Khata, akaraband, Mutation Status ನೋಡಲು ಇಲ್ಲಿ ಕ್ಲಿಕ್ ಮಾಡಿ.

LATEST ARTICLES

Related Articles

Most Popular