Agriculture Land information: ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಅಳತೆ ಎಷ್ಟು ಎಂದು ತಿಳಿಯುವುದು ಹೇಗೆ?

September 20, 2023 | Siddesh

ಕೃಷಿಕಮಿತ್ರ ಓದುಗ ಮಿತ್ರರಿಗೆ ಶುಭ ಮುಂಜಾನೆ ರಾಜ್ಯದ ಪ್ರತಿಯೊಬ್ಬ ರೈತರಿಗೆ ಈ ಗೊಂದಲ ಇದೇ ಇರುತ್ತದೆ. ಏನೆಂದರೆ ಜಮೀನಿಗೆ ಹೋಗಲು ದಾರಿ ಅಂದರೆ ಕಾಲು ದಾರಿ ಮತ್ತು ಬಂಡಿ ದಾರಿ ಅಳತೆ ಎಷ್ಟು ಎಂದು ಅನೇಕ ಜನರಿಗೆ ನಿಖರವಾಗಿ ಗೊತ್ತಿರುವುದಿಲ್ಲ  ಕಾಲು ದಾರಿ ಮತ್ತು ಬಂಡಿ ದಾರಿ ಬಗ್ಗೆ ಅದರ ಅಳತೆ ಎಷ್ಟು ಇರುತ್ತೆ ಮತ್ತು ಅದರ ನಿಯಮಗಳ ಕುರಿತು ಈ ಕೆಳಗೆ ವಿವರಿಸಲಾಗಿದೆ.
 
ರೈತರು ತಮ್ಮ ಜಮೀನಿಗೆ ಹೋಗಿ-ಬರಲು ಮತ್ತೊಬ್ಬರ ಜಮೀನಿನ ಮೂಲಕ ಹಾಯ್ದು ಹೋಗುವ ಸನ್ನಿವೇಶಗಳಿರುತ್ತದೆ. ಕುಟುಂಬಗಳು ಹೆಚ್ಚಾದಂತೆ ಜಮೀನಿನ ಕೊರತೆಯಿಂದ ಬರುಬರುತ್ತಾ ಕಾಲುದಾರಿ ಅಥವಾ ಬಂಡಿದಾರಿ ರೈತರ ನಡುವೆ ವ್ಯಾಜ್ಯಗಳು ಸಾಮಾನ್ಯವಾಗಿಬಿಟ್ಟಿದೆ.  ಈ ಹಿನ್ನಲೆಯಲ್ಲಿ ಇದಕ್ಕೆ ಶಾಶ್ವತ ಪರಿಹಾರ ಎಂಬಂತೆ ಸರ್ಕಾರವು Easement Act ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ಪ್ರತಿಯೊಬ್ಬರಿಗು ತಮ್ಮ ಜಮೀನಿಗೆ ಹೋಗಿ ಬರಲು ದಾರಿಗೆ ಜಾಗ ಇದೆ ಇರುತ್ತದೆ. ಹಾಗೂ ದಾರಿ ಪಡೆಯುವುದು ನಿಮ್ಮ ಮೂಲಭೂತ ಹಕ್ಕು ಎಂದು ಸಹ ಹೇಳಬಹುದು.
 
ಬ್ರೀಟಿಷ್‌ ಸರ್ಕಾರ ಇದ್ದಾಗ ಅಂದರೆ ಬ್ರೀಟಿಷರು ಆಳುವಾಗ ಬ್ರಿಟೀಷ್‌ ಇಂಡಿಯಾ ಸರ್ಕಾರದಿಂದ ದೇಶದಲ್ಲಿ ಮೊಟ್ಟ ಮೋದಲು ಅಧಿಕೃತವಾಗಿ ಮೂಲ ಸರ್ವೇ ಮಾಡಲಾಯಿತು. ಆ ಸಂದರ್ಭದಲ್ಲಿ ದಾಖಲಿಸಿದ ಮಾಹಿತಿಯು ಈಗ ಅಳತೆ ಮಾಡಲು ಉರುಗೋಲು ಎಂದು ಹೇಳಬಹುದು. ಏಕೆಂದರೆ ಆ ಮೂಲ ಸರ್ವೇ ಮಾಡುವಾಗ ಅವರು ಪ್ರಮುಕವಾಗಿ ಮಾಡಿರುವ ದಾಖಲೆ ಅಂದರೆ ಟಿಪ್ಪಣೆ ರಚಿಸುವ ಕೆಲಸ. ಸದರಿ ಟಿಪ್ಪಣಿಯೇ ಈಗ ಪ್ರತಿಯೊಂದು ಜಮೀನಿಗೆ ಸರ್ವೇ ಕಾರ್ಯದಲ್ಲಿ  ಆಧಾರ ಸ್ತಂಬವಾಗಿದೆ.
 
ಪ್ರತಿಯೊಂದು ಹೊಲದ ಸರ್ವೇ ಮಾಡುವಾಗ ಕಾಲು ದಾರಿಯಾಗಿರಬಹುದು ಅಥವಾ ಬಂಡಿ ದಾರಿಯಾಗಿರಬಹುದು ಅದನ್ನು ಸ್ಪಷ್ಟವಾಗಿ  ದಾಖಲಿಸಿ ಇಡುತ್ತಿದ್ದರು ಈಗ ಅದನ್ನು ನಾವು ಖರಾಬು ಭೂಮಿ ಎಂದು ಕರೆಯುತ್ತೇವೆ. ಖರಾಬು ಭೂಮಿಯಲ್ಲಿ ಎರಡು ರೀತಿಯಲ್ಲಿ ವರ್ಗಗಳಿರುತ್ತವೆ "ಬ ಖರಾಬರಲ್ಲಿ"  ಕಾಲುದಾರಿ ಮತ್ತು ಬಂಡಿದಾರಿ ವಿಸ್ತೀರ್ಣ ಅದರ ಸಂಪೂರ್ಣ ಮಾಹಿತಿಯ ವರದಿ ಅಡಕವಾಗಿರುತ್ತದೆ.
 
Karnataka land revenue Act 1966 ರ ಖಾಯ್ದೆ ಪ್ರಕಾರ  ಕಾಲುದಾರಿ ಅಂದರೆ ನಡೆದುಕೊಂಡು ಜಮೀನಿಗೆ ಹೋಗಿಬರುವಂತ ದಾರಿ ವಿಸ್ತೀರ್ಣದ ಅಗಲ 8 ಅಡಿ 2 ಇಂಚು ಇರುತ್ತದೆ. ಮತ್ತು ಇದರ ಉದ್ದದ ವಿಸ್ತೀರ್ಣ ಎಷ್ಟಂತ ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ ನಿಮ್ಮ ಜಮೀನಿಗೆ ಅಂತ್ಯದ ವರೆಗೂ ದಾರಿ ಇದ್ದರೆ ಅಲ್ಲಿಯವರೆಗೂ ವಿಸ್ತೀರ್ಣ ಲೆಕ್ಕ ಹಾಕಿದಾಗ ಬರುವ ವಿಸ್ತೀರ್ಣವೇ ಇದರ ಉದ್ದ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಇನ್ನು ಬಂಡಿ ದಾರಿ ಬಗ್ಗೆ ಹೇಳೊದಾದರೆ ಇದರ ಅಗಲವು 20  ಅಡಿ ಇರುತ್ತೆ ಎಂದು ಉಹಿಸಬಹುದು. ಅದರಂತೆ ಇದರ ಉದ್ದ ನಿಮ್ಮ ಸರ್ವೇ ನಂಬರ ಮುಗಿಯುವ ವರೆಗೂ ಇದರ ಉದ್ದ ಇರುತ್ತೇ ಎಂದು ನೀವು ತಿಳಿದುಕೊಳ್ಳಬೇಕು.

ಇದನ್ನೂ ಓದಿ: Ganga kalyana yojane- ಯಾವೆಲ್ಲ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು ಸಹಾಯಧನ ಪಡೆಯಬವುದು?

ಕಾಲುದಾರಿ ಮತ್ತು ಬಂಡಿದಾರಿ ಬಗ್ಗೆ ಕೆಲವು ಮಾಹಿತಿ ನಿಮಗೆ ಅತೀ ಅಶ್ಯಕತೆಯಾಗಿವೆ. ಅವು ಯಾವವು ಎಂದು ನೀವು ತಿಳಿದುಕೊಳ್ಳಿ

1.ಕಾಲು ದಾರಿ ಮತ್ತು ಬಂಡಿ ದಾರಿ ಇದು ಸಾರ್ವಜನಿಕ ಸ್ವತ್ತು. ಹೀಗಾಗಿ ಸಾರ್ವಜನಿಕರು ಬಂದು ನೀರಾಳವಾಗಿ ಹೋಗಿ ಬರಬಹುದು ಅದರಂತೆ ಅಕ್ಕ ಪಕ್ಕ ದ ರೈತರು ಯಾವುದೇ ರೀತಿ ತಕರಾರು ಮಾಡದೇ ಸಹಕರಿಸಿಕೊಂಡು ಹೋಗಬೇಕು.

2.ಕಾಲು ದಾರಿ ಅಥವಾ ಬಂಡಿ ದಾರಿಯ ಒಟ್ಟೂ ವಿಸ್ತೀರ್ಣ ನೀವು ತಿಳಿದುಕೊಳ್ಳಲು ನೀವು ಪಹಣಿಯಲ್ಲಿರುವ ಮೂರನೇ ಕಾಲಂನಲ್ಲಿ ಬ ಖರಾಬ ನೋಡಬಹುದು.

3.ಅದರಂತೆ ಪ್ರತ್ಯೇಕ ವಿಸ್ತೀರ್ಣ ಅಂದರೆ  ಕಾಲುದಾರಿ ಮತ್ತು ಬಂಡಿದಾರಿಯ ಉದ್ದ ಮತ್ತು ಅಗಲ ಬಗ್ಗೆ ಸ್ಪಷ್ಟವಾಗಿ ನೀವು ಮಾಹಿತಿ ತಿಳಿದುಕೊಳ್ಳಬೇಕೆಂದರೆ ನೀವು ಸರ್ವೇ ಕಚೇರಿಗೆ ಹೋಗಿ ಅರ್ಜಿ ಕೊಟ್ಟರೆ ಖಂಡಿತ ಅವರು ನಿಮಗೆ ಸಂಪೂರ್ಣ ಮಾಹಿತಿ ಪತ್ರ ಖರಾಬ ಎಕ್ಸಟ್ರಾಕ್ಟ ಪ್ರತಿ ನಿಮಗೆ ಕೊಡುತ್ತಾರೆ.

4.ಒಂದುವೇಳೆ ಸದರಿ ಜಮೀನಿಗೆ ಹೋಗಿ ಬರಲು ಅಧೀಕೃತವಾಗಿ ಅಂದರೆ ನಕ್ಷೆಯಲ್ಲಿ ಮತ್ತು ಟಿಪ್ಪಣಿಗಳಲ್ಲಿ ದಾರಿ ಇಲ್ಲ ಎಂದರೆ ನೀವು ಯಾವುದೇ ರೀತಿಯ ಬಯಪಡುವ ಅಗತ್ಯವಿಲ್ಲ. ಏಕೆಂದರೆ ನೀವು ಹೊಸದಾಗಿ ದಾರಿಯನ್ನು ಮಾಡಿಕೊಳ್ಳಬಹುದು ಹೌದು ದಾರಿ ಇಲ್ಲ ಮಾತ್ರಕ್ಕೆ ನೀವು ಬಯಪಡುವ ಅಗತ್ಯವಿಲ್ಲ.   Easement Act  ಪ್ರಕಾರ ಈ ವೊಂದು ಖಾಯ್ದೆ ಪ್ರಕಾರ ನೀವು ಹೊಸ ದಾರಿಯನ್ನು ಪಡೆದುಕೊಳ್ಳಬಹುದು. ಅದು ಹೇಗೆ ಅಂದರೆ ಎಲ್ಲಾ ದಾಖಲೆಗಳೊಂದಿಗೆ ಜಿಲ್ಲಾ ಕೇಂದ್ರದಲ್ಲಿರುವ ಡಿ.ಡಿ.ಎಲ್.ಆರ್‌‌ಅವರಿಗೆ ಅರ್ಜಿ ಕೊಟ್ಟು ದಾರಿ ಅಗತ್ಯತೆ ತಿಳಿಸಿದರೆ ಅವರು ನಿಮಗೆ ನ್ಯಾಯ ದೊರಕಿಸಿ ಕೊಡಬಹುದು.

ಇದನ್ನೂ ಓದಿ: ಬರಗಾರ ಘೋಷಣೆ: ಯಾವೆಲ್ಲ ಸವಲತ್ತು ಸಿಗಲಿದೆ ಈ ಪಟಿಯಲ್ಲಿರುವ ತಾಲ್ಲೂಕುಗಳಿಗೆ!

5.ಇದಲ್ಲದೇ ನೀವು ಸಿವಿಲ್‌ನ್ಯಾಯಾಲಯಕ್ಕೆ Easement Act ಅಡಿಯಲ್ಲಿ ಹೊಸದಾಗಿ ದಾರಿ ಪಡೆಯಲು ದಾವೆಹೂಡಿ ನ್ಯಾಯ ಪಡೆದುಕೊಳ್ಳಬಹುದು.
 
ಈ ಮೇಲೆ ತಿಳಿಸಿರುವ ಮಾಹಿತಿಯು ನಮ್ಮ ಸ್ವಂತ ಅಬಿಪ್ರಾಯವಾಗಿದ್ದು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ತಾಲ್ಲೂಕಿನ ಸರ್ವೇ ಕಚೇರಿಗೆ ಭೇಟಿ ಮಾಡಿ ಕಾಲುದಾರಿ ಮತ್ತು ಬಂಡಿದಾರಿ ಕುರಿತು ಮಾಹಿತಿ ಪಡೆಯಬವುದು.         

Village revenue map download- ನಿಮ್ಮ ಗ್ರಾಮದ ಕಂದಾಯ ನಕ್ಷೆಯನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುಲು ಲಿಂಕ್:

ರಾಜ್ಯ ಸರಕಾರದ ಕಂದಾಯ ಇಲಾಖೆಯ ಈ ಅಧಿಕೃತ ಜಾಲತಾಣ ಭೇಟಿ ಮಾಡಿ ನಿಮ್ಮ ಜಮೀನಿನ ಕಂದಾಯ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬವುದು. ಈ ನಕ್ಷೆಯಲ್ಲಿ ನಿಮ್ಮ ಗ್ರಾಮದಲ್ಲಿ ಒಟ್ಟು ಎಷ್ಟು ಸರ್ವೆ ನಂಬರ್ ಇವೆ ಅದರ ಗಡಿ, ಕಾಲುದಾರಿ, ಬಂಡಿದಾರಿ ಎಲ್ಲಿ ಎಲ್ಲಿ ಬರುತ್ತದೆ, ಕಾಲುವೆ, ,ತೆರೆದ ಬಾವಿ, ಗುಡ್ಡ, ಮನೆ, ಇತ್ಯಾದಿ ಸಂಪೂರ್ಣ ಮಾಹಿತಿ ನೋಡಬವುದು.

Step-1: ಮೊದಲು ಈ https://landrecords.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಿ ವೆಬ್ಸೈಟ್ ಭೇಟಿ ಮಾಡಬೇಕು ನಂತರ ನಿಮ್ಮ ಜಿಲ್ಲೆಯ, ತಾಲ್ಲೂಕು, ಹೋಬಳಿ, Map type ಆಯ್ಕೆಯಲ್ಲಿ Cadastral map ಎಂದು ಆಯ್ಕೆ ಮಾಡಿಕೊಂಡು search ಮಾಡಬೇಕು.

Step-2: ಇಲ್ಲಿ ನಿಮ್ಮ ಹೋಬಳಿಯ ಎಲಾ ಹಳ್ಳಿಯ ನಕ್ಷೆಗಳ PDF ಪೈಲ್ ಗೋಚರಿಸುತ್ತದೆ ಇಲ್ಲಿ ನಿಮ್ಮ ಹಳ್ಳಿಯ ಹೆಸರಿರುವ ಮುಂದಿನ ಕೊನೆಯ ಕಾಲಂ ನಲ್ಲಿರುವ PDF ಸಿಂಬಲ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹಳ್ಳಿಯ ನಕ್ಷೆಯನ್ನು ಡೌನ್ಲೋಡ್ ಮಾಡಬೇಕು.

ಗಮನಿಸಿ: Popup notification blocked ಅಂತ ಬಂದಲ್ಲಿ ಅದಕ್ಕೆ allow ಎಂದು ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮರು ಡೌನ್ಲೋಡ್ ಮಾಡಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: