Annabhagya DBT Status: “ಅನ್ನಭಾಗ್ಯ ಯೋಜನೆ” ರೂ 240 ಕೋಟಿ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ವರ್ಗಾವಣೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

Annabhagya DBT Status check: ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಒಟ್ಟು ರೂ.170 ಅನ್ನು ಪಡಿತರ ಚೀಟಿಯ ಫಲಾನುಭವಿಗಳ ಖಾತೆಗೆ ಸೆಪ್ಟೆಂಬರ್ ತಿಂಗಳ ಹಣವನ್ನು ವರ್ಗಾಯಿಸಲಾಗಿದೆ.

ಪಡಿತರ ಚೀಟಿಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೋ ಅದರ ಆಧಾರದ ಮೇಲೆ ಒಟ್ಟು ಹಣ ಎಷ್ಟು ವರ್ಗಾಹಿಸಬೇಕು ಎಂದು ಇಲಾಖೆಯಿಂದ ನಿರ್ಧರಿಸಿ ಈಗಾಗಲೇ ಹಣ ಜಮಾ ಮಾಡಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸೆಪ್ಟೆಂಬರ್ ತಿಂಗಳ ಹೆಚ್ಚುವರಿ ಅಕ್ಕಿಯ ಬದಲಿಗೆ ಈವರೆಗೆ 14 ಜಿಲ್ಲೆಗಳ 41.23 ಲಕ್ಷ ಫಲಾನುಭವಿಗಳಿಗೆ 240 ಕೋಟಿ ರೂ.ಗಳನ್ನು ನೇರವಾಗಿ ರೇಷನ್ ಕಾರ್ಡ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: BPL ಮತ್ತು  APL​​​ ಕಾರ್ಡ್​ದಾರರಿಗೆ ಆಹಾರ ಇಲಾಖೆಯಿಂದ ಗುಡ್ ನ್ಯೂಸ್!  ಮಿಸ್ ಮಾಡ್ದೆ ಸುದ್ದಿ ನೋಡಿ.

ಇಲಾಖೆಯ ಮಾಹಿತಿಯನ್ವಯ ನೇರ ಹಣ ವರ್ಗಾವಣೆಯನ್ನು ಬೆಳಗಾವಿ, ಬೆಂಗಳೂರು ಗ್ರಾಮಾಂತರ, ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಮಂಡ್ಯ, ಧಾರವಾಡ, ಕಲಬುರ್ಗಿ, ರಾಯಚೂರು, ರಾಮನಗರ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಫಲಾನುಭವಿಗಳಿಗೆ ಮಾಡಲಾಗಿದೆ.

Annabhagya September month amount: ನಿಮ್ಮ ಮೊಬೈಲ್ ನಲ್ಲೇ ನಿಮಗೆ ಎಷ್ಟು ಹಣ ಜಮಾ ಅಗಿದೆ  ಎಂದು ಚೆಕ್ ಮಾಡಬವುದು:

ಪಡಿತರ ಚೀಟಿ ಹೊಂದಿರುವವರು ನಿಮ್ಮ ಮೊಬೈಲ್ ಮೂಲಕ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮಗೆ ಎಷ್ಟು ಹಣ ವರ್ಗಾವಣೆ ಅಗಿದೆ ಎಂದು ತಿಳಿದುಕೊಳ್ಳಬವುದು ಮತು ಇತರೆ ಜಿಲ್ಲೆಯವರು ನಿಮ್ಮ ಹಣ ವರ್ಗಾವಣೆ ಯಾವ ಹಂತದಲ್ಲಿದೆ ಎಂದು ಸಹ ಮಾಹಿತಿ ಪಡೆದುಕೊಳ್ಳಬವುದು.

Step-1: ಇಲ್ಲಿ ಕ್ಲಿಕ್ ಮಾಡಿ> Annabhagya DBT Status check ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಬೇಕು. ಇಲ್ಲಿ 3 ಲಿಂಕ್ ಗೋಚರಿಸುತ್ತವೆ ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ಒಂದು ಭಾರಿಯು ಅನ್ನಭಾಗ್ಯ ಯೋಜನೆಯಡಿ ಹಣ ಜಮಾ ಅಗಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮಗಳು.

Step-2: ನಂತರ ಈ ಪುಟದಲ್ಲಿ ಕಾಣುವ “ನೇರ ನಗದು ವರ್ಗಾವಣೆಯ ಸ್ಥಿತಿ(DBT)” ಅನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. 

Step-3: ತದನಂತರ “select month” ಕಾಲಂ ನಲ್ಲಿ “September” ಎಂದು ಆಯ್ಕೆ ಮಾಡಿಕೊಂಡು ಕೆಳಗಿನ ನಿಗದಿತ ಕಾಲಂ ನಲ್ಲಿ ನಿಮ್ಮ ರೇಷನ್ ಕಾರ್ಡನ ನಂಬರ್ ಅನ್ನು ಹಾಕಿ ಅಲ್ಲೇ ಕೆಳಗೆ ತೋರಿಸುವ ಕ್ಯಾಪ್ಚಾ ಅನ್ನು ನಮೂದಿಸಿ “GO” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ನಂತರ ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ಹಣ ಜಮಾ ವಿವರ ತೋರಿಸುತ್ತದೆ ಈ ಪುಟದಲ್ಲಿ ನಿಮ್ಮ ರೇಷನ್ ಕಾರ್ಡನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? ನಿಮಗೆ ಎಷ್ಟು ಹಣ ಜಮಾ ಅಗುತ್ತದೆ ಎಂದು ತೋರಿಸುತ್ತದೆ. ಮತ್ತು ಈಗಾಗಲೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಅಗಿದ್ದರೆ “Payment Details” ಎಂದು ಕೆಳಗಡೆ ಗೋಚರಿಸುತ್ತದೆ, ಇಲ್ಲಿ ಯಾವ ದಿನ ಹಣ ವರ್ಗಾವಣೆ ಅಗಿದೆ, ಖಾತೆದಾರರ ಹೆಸರು ಮತ್ತು ಬ್ಯಾಂಕ್ ವಿವರ ತೋರಿಸುತ್ತದೆ.

ಇದನ್ನೂ ಓದಿ: Gruhalakshmi Yojana-2023: ಇನ್ನೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಈ ಕುರಿತು ಇಲಾಖೆಯಿಂದ ಟಿಪ್ಪಣಿ ಬಿಡುಗಡೆ.

ವಿಷೇಶ ಸೂಚನೆ: ಈ ವೆಬ್ಸೈಟ್ ಬೆಳಗ್ಗೆ 8-00 ಗಂಟೆಯ ನಂತರ ಮತ್ತು ರಾತ್ರಿ 8-00 ಗಂಟೆಯ ನಡುವೆ ಮಾತ್ರ ಒಪನ್ ಅಗುತ್ತದೆ ಇದರ ಮಧ್ಯದಲ್ಲೇ ನೀವು ನಿಮ್ಮ ಹಣ ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು.

ಈ ಮೇಲಿನ ಮಾಹಿತಿ ಉಪಯುಕ್ತವಾಗಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ನಮ್ಮ ಪುಟವನ್ನು ಬೆಂಬಲಿಸಿ.

ಇದನ್ನೂ ಓದಿ: PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!