BPL card suspension- ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು ಆಗುತ್ತದೆ!

ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನಕಲಿ-ಅಕ್ರಮ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ(BPL card suspension) ಹೊಂದಿರುವವರನ್ನು ಗುರುತಿಸಿ ಇಂತಹ ಕಾರ್ಡ್ ಗಳನ್ನು ಅಮಾನತ್ತು ಮಾಡುವ ಕಾರ್ಯ ಚುರುಕುಗೊಳಿಸಲಾಗಿದೆ. BPL card suspension-2024, BPL card suspension news, BPL card status, Bpl card website, BPL ration card, BPL ration card guideline, ಬಿಪಿಎಲ್ ಕಾರ್ಡ, ಬಿಪಿಎಲ್ ಕಾರ್ಡ ಪಟ್ಟಿ, ರೇಶನ್ ಕಾರ್ಡ, ರೇಶನ್ ಕಾರ್ಡ್ ಸ್ಟೇಟಸ್

BPL card suspension- ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು ಆಗುತ್ತದೆ!
BPL card suspension news

ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನಕಲಿ-ಅಕ್ರಮ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ(BPL card suspension) ಹೊಂದಿರುವವರನ್ನು ಗುರುತಿಸಿ ಇಂತಹ ಕಾರ್ಡ್ ಗಳನ್ನು ಅಮಾನತ್ತು ಮಾಡುವ ಕಾರ್ಯ ಚುರುಕುಗೊಳಿಸಲಾಗಿದೆ.

ಯಾವೆಲ್ಲ ನಿಯಮಗಳನ್ನು ಮೀರಿದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ? ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ ಹೊಂದಲು ಇರುವ ಅಧಿಕೃತ ನಿಯಮ/ಮಾರ್ಗಸೂಚಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 10,97,621 ಅನರ್ಹ ಬಿಪಿಎಲ್ ಕಾರ್ಡದಾರರನ್ನು ಗುರುತಿಸಿದ ಪರಿಶೀಲನಾ ಕಾರ್ಯ ಭರದಿಂದ ಸಾಗಿದ್ದು ಸರಕಾರಿ ನೌಕರಿಯಲ್ಲಿರುವರು, ವಾರ್ಷಿಕ ಆದಾಯ ತೆರಿಗೆ ಪಾವತಿಸುವವರು ಸಹ ಬಿಪಿಎಲ್ ಕಾರ್ಡ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ.

ಇದನ್ನೂ ಓದಿ: MSP price-ರೈತರಿಗೆ ಸಿಹಿ ಸುದ್ದಿ 4 ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ! ಯಾವ ಬೆಳೆಗೆ ಎಷ್ಟು ಬೆಲೆ?

BPL card suspension reason- ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು ಆಗುತ್ತದೆ!

ಆಹಾರ‍ ಇಲಾಖೆಯಿಂದ ನಕಲಿ ಬಿಪಿಎಲ್ ಕಾರ್ಡದಾರರ ಪತ್ತೆ ಕಾರ್ಯ ಚುರುಕುಗೊಂಡಿದ್ದು ಈ ಕೆಳಗೆ ತಿಳಿಸಿರುವ ನಿಯಮವನ್ನು ಮೀರಿರುವ ಗ್ರಾಹಕರ ಬಿಪಿಎಲ್ ಕಾರ್ಡಗಳನ್ನು ಇಲಾಖೆಯಿಂದ ಅಮಾನತು ಮಾಡಲಾಗುತ್ತದೆ.

1) ಕಳೆದ ವರ್ಷ ಆದಾಯ ತೆರೆಗೆ ಪಾವತಿ ಮಾಡಿದ್ದರೆ ಅಂತಹ ಕಾರ್ಡಗಳನ್ನು ಅಮಾನತು ಮಾಡಲಾಗುತ್ತದೆ.

2) ಕಾರ್ಡ ಹೊಂದಿರುವ ಸದಸ್ಯರು ಸರಕಾರಿ ನೌಕರಿಯಲ್ಲಿದ್ದರೆ ಇಂತಹ ಸದಸ್ಯರ ಕಾರ್ಡ ಅನ್ನು ರದ್ದುಪಡಿಸಲಾಗುತ್ತದೆ.

3) ಕಳೆದ 6 ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯನ್ನು ಭೇಟಿ ಮಾಡದೇ ಪ್ರತಿ ತಿಂಗಳು ಈ ಕಾರ್ಡದಾರರಿಗೆ ನೀಡುವ ಆಹಾರ ಧ್ಯಾನಗಳನ್ನು ಪಡೆಯದೇ ಇದ್ದಲ್ಲಿ ಇಂತಹ ಬಿಪಿಎಲ್ ಕಾರ್ಡಗಳನ್ನು ಸಹ ಅಮಾನತಿನಲ್ಲಿಡಲು ಇಲಾಖೆಯಿಂದ ಕ್ರಮ ಕೈಗೊಳ್ಳಲಿದ್ದು ಅರ್ಹ ಗ್ರಾಹಕರು ಅಗತ್ಯ ದಾಖಲೆಗಳನ್ನು ಪುನಃ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ ಅಮಾನತನ್ನು ರದ್ದುಪಡಿಸಿಕೊಳ್ಳಬಹುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

4) ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎನ್ನುವ ಮಾಹಿತಿಯ ಪ್ರಕಾರ ಪರೀಶಿಲನಾ ಪಟ್ಟಿಯಲ್ಲಿ ಸೇರಿರುವ ಬಿಪಿಎಲ್ ಕಾರ್ಡದಾರರು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯನ್ನು ಭೇಟಿ ಮಾಡಿ ಪುನಃ ಆದಾಯ ದೃಡೀಕರಣ ಪ್ರಮಾಣ ಪತ್ರವನ್ನು ನೀಡಿ ಪಟ್ಟಿಯಿಂದ ಹೆಸರನ್ನು ತೆಗೆಸಿಕೊಳ್ಳಬಹುದು.

ಇದನ್ನೂ ಓದಿ: Post office bank- ಈ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದರೆ ಸಾಕು ಎಲ್ಲಾ ಯೋಜನೆಯ ಹಣ ಸುಲಭವಾಗಿ ಜಮಾ ಅಗುತ್ತದೆ!

kaarnataka BPL card details-ರಾಜ್ಯದ ನಕಲಿ ಬಿಪಿಎಲ್ ಕಾರ್ಡಗಳ ಅಂಕಿ-ಅಂಶ ಹೀಗಿದೆ:

ಒಟ್ಟು ಅಕ್ರಮ ಬಿಪಿಎಲ್ ಕಾರ್ಡಗಳು- 10,97,621 
ಆದಾಯ ತೆರಿಗೆ ಪಾವತಿದಾರರು- 98,431 
ಸರಕಾರಿ ನೌಕರಿಯಲ್ಲಿದ್ದು ಬಿಪಿಎಲ್ ಕಾರ್ಡ್ ಹೊಂದಿರುವವರು- 4,036 

BPL card guideline-ಬಿಪಿಎಲ್ ಕಾರ್ಡ ಪಡೆಯಲು ಅನರ್ಹರು ಯಾರು?

1) ಕಳೆದ ವರ್ಷ ಆದಾಯ ತೆರಿಗೆ ಪಾವತಿಸುವವರು

2) ಸರಕಾರಿ ಮತ್ತು ಅರೆ ಸರಕಾರಿ ಕಚೇರಿಯಲ್ಲಿ ನೌಕರಿಯನ್ನು ಮಾಡುತ್ತಿರುವವರು ಕಾರ್ಡ ಪಡೆಯಲು ಅನರ್ಹರು.

3) ಸ್ವಂತ ಮನೆಯನ್ನು ಕಟ್ಟಿಸಿ ಆ ಮನೆಗಳನ್ನು ಬಾಡಿಗೆ ಕೊಟ್ಟಿರುವವರು. 

4) 7.5 ಹೆಕ್ಟೇರ್‌ಗಿಂತ ಅಧಿಕ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂದು ಇಲಾಖಾ ಅಧಿಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Life insurance yojana-2024: ಅಪಘಾತ ವಿಮೆ ಇಲ್ಲದಿದ್ದರೂ ಸಿಗುತ್ತೆ ಈ ಯೋಜನೆಯಡಿ 2 ಲಕ್ಷ!

Cancelled/suspended list-2024: ನಿಮ್ಮ ಮೊಬೈಲ್ ನಲ್ಲೇ ಜಿಲ್ಲಾವಾರು ಪ್ರತಿ ತಿಂಗಳು ಅನರ್ಹಗೊಂಡಿರುವ ಪಡಿತರ ಚೀಟಿ ಪಟ್ಟಿಯನ್ನು ಪಡೆಯುವ ವಿಧಾನ:

ಆಹಾರ ಇಲಾಖೆಯ ahara.kar.nic.in ಈ ವೆಬ್ಸೈಟ್ ಅನ್ನು ಭೇಟಿ ಮಾಡಿ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಜಿಲ್ಲಾವಾರು ಪ್ರತಿ ತಿಂಗಳು ಅನರ್ಹಗೊಂಡಿರುವ ಪಡಿತರ ಚೀಟಿ ಪಟ್ಟಿಯನ್ನು ಪಡೆಯಬಹುದು.

Step-1: ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು.

Step-2: ಮೇಲಿನ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ನಂತರ ಇಲ್ಲಿ "ಇ-ಸೇವೆಗಳು" ಆಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.

ಇದನ್ನೂ ಓದಿ: Greengram msp price-2024: ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ ರೂ 8,682 ರಂತೆ ಹೆಸರುಕಾಳು ಖರೀದಿಗೆ ಆದೇಶ!

Step-3: ಎರಡು ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಈ ಪೇಜ್ ನಲ್ಲಿ "ಇ-ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಿ "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-4: "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ/District, ತಾಲ್ಲೂಕು/Taluk ಮತ್ತು ತಿಂಗಳು/Month, ವರ್ಷ/Year ಅಯ್ಕೆ ಮಾಡಿಕೊಂಡು "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ ಆ ತಿಂಗಳಲ್ಲಿ ರದ್ದಾದ ಪಡಿತರ ಚೀಟಿ ಪಟ್ಟಿ ತೋರಿಸುತ್ತದೆ.