Business loan application-ಸ್ವ-ಉದ್ಯೋಗ ಮಾಡಲು ಶೇ 4ರ ಬಡ್ಡಿದರದಲ್ಲಿ 2.0 ಲಕ್ಷ ಸಾಲ ಮತ್ತು ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಸ್ವ-ಉದ್ಯೋಗ ಮಾಡಲು ಸಾಲ ಮತ್ತು ಸಹಾಯಧನ(Business loan application-2024)ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಜಾಲ್ತಿಯಲ್ಲಿರುವ ವಿವಿಧ ನಿಗಮಗಳಿಂದ “ಸ್ವಯಂ ಉದ್ಯೋಗ ನೇರ ಸಾಲ” ಯೋಜನೆಯಡಿ ಶೇ 4ರ ಬಡ್ಡಿದರದಲ್ಲಿ 2.0 ಲಕ್ಷದ ವರೆಗೆ  ಸಾಲಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಯಾರು ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು? ಈ ಯೋಜನೆಯಡಿ ಎಷ್ಟು ಸಹಾಯಧನ ಪಡೆಯಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಮಾಹಿತಿ ಇತ್ಯಾದಿ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಅರ್ಹ ಅರ್ಜಿದಾರರಿಗೆ ಈ ಮಾಹಿತಿ ತಲುಪಲು ಸಹಕರಿಸಿ.

ಇದನ್ನೂ ಓದಿ: Ration card application-ರೇಷನ್ ಕಾರ್ಡ ತಿದ್ದುಪಡಿಗೆ ಈ ದಿನ ಅರ್ಜಿ ಸಲ್ಲಿಸಲು ಅವಕಾಶ!

Swa udyoga neera sala yojane-ಏನಿದು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ?

ಈ ಯೋಜನೆಯಡಿ ಸ್ವ-ಉದ್ಯೋಗ ಮಾಡಲು ಆಸಕ್ತಿಯಿರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಮತ್ತು ಆ ಸಾಲಕ್ಕೆ ಸಬ್ಸಿಡಿಯನ್ನು ರಾಜ್ಯದ ವಿವಿಧ ನಿಗಮಗಳಿಂದ ನೀಡಲಾಗುತ್ತದೆ.

Business loan subsidy details-ಎಷ್ಟು ಸಾಲ ಮತ್ತು ಸಹಾಯಧನ?

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಒಟ್ಟು ಘಟಕ ವೆಚ್ಚ 2.0 ಲಕ್ಷಕ್ಕೆ 30,000 ಸಾವಿರ ಸಹಾಯಧನ ಉಳಿಕೆ 1.70 ಲಕ್ಷಕ್ಕೆ 4ಶೇ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಅದೇ ರೀತಿ ಘಟಕ ವೆಚ್ಚ 1.0 ಲಕ್ಷಕ್ಕೆ 20,000 ಸಾವಿರ ಸಹಾಯಧನ ಉಳಿಕೆ 80,000/- ಹಣಕ್ಕೆ ಶೇ4 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಇದನ್ನೂ ಓದಿ: Borewell Subsidy- ಬೋರ್ವೆಲ್ ಕೊರೆಸಲು ರೂ 4.25 ಲಕ್ಷ ಸಬ್ಸಿಡಿ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನ!

How to apply-ಈ ಯೋಜನೆಯಡಿ ಸೌಲಭ್ಯ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಲು ಅಗತ್ಯ ದಾಖಲೆಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ್ ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Required documents for swa udyoga nera sala yojane- sಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು?

1) ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.
2) ಬ್ಯಾಂಕ್ ಪಾಸ್ ಬುಕ್ ಪ್ರತಿ.
3) ಪೋಟೋ.
4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
5) ರೇಶನ್ ಕಾರ್ಡ ಸಂಖ್ಯೆ
6) ಶೈಕ್ಷಣಿಕ ಅಂಕಪಟ್ಟಿ.

last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಈ ಯೋಜನೆಯ ಪ್ರಯೋಜನ ಪಡೆಯಲು 31 ಆಗಸ್ಟ್ 2024ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Tourist car loan- ನಾಲ್ಕು ಚಕ್ರ ವಾಹನ ಖರೀದಿಗೆ 3 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Eligibility-ಅರ್ಜಿ ಸಲ್ಲಿಸಲು ಅರ್ಹತೆಗಳು:

1) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98,000/-ಗಳು ನಗರ ವುದೇಶದವರಿಗೆ ರೂ.1,20,000/-ಗಳನ್ನು ಮೀರಿರಬಾರದು.

2) ಅರ್ಜಿದಾರನ್ನು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

3) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 55 ಅರ್ಜಿದಾರರ ವರ್ಷಗಳ ಮಿತಿಯೊಳಗಿರಬೇಕು.

4) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು.

ಇದನ್ನೂ ಓದಿ: handicapped certificate- ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಲು ಮಾರ್ಗಸೂಚಿಯಲ್ಲಿ ಸಡಿಲಿಕೆ!

5) ಈ ಯೋಜನೆಯಲ್ಲಿ ಸವಲತ್ತು ಪಡೆಯಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿ ಆಧಾರ್ ಸಂಯೋಜಿತ ಬ್ಯಾಂಕ್‌ ಖಾತೆ ಹೊಂದಿರಬೇಕು.

6) ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

7) ಅಭ್ಯರ್ಥಿಯು ಕೈಗೊಳ್ಳುವ ಉದ್ದಿಮೆ/ಆರ್ಥಿಕ ಚಟುವಟಿಯ ಬಗ್ಗೆ ತರಬೇತಿ/ ಅನುಭವ/ತಿಳುವಳಿಕೆ ಹೊಂದಿರಬೇಕು.

8} ಅರ್ಜಿದಾರರು ನಿರುದ್ಯೋಗಿಯಾಗಿರಬೇಕು (ಸ್ವಯಂ ಘೋಷಿತ ಪುಮಾಣ ಪತ್ರ ಸಲ್ಲಿಸುವುದು).