Company wise bele vime details- ಇಲ್ಲಿಯವರೆಗೆ ಕಂಪನಿವಾರು ಎಷ್ಟು? ಬೆಳೆ ವಿಮೆ ಪಾವತಿ ಮಾಡಲಾಗಿದೆ ಎಂದು ಹೇಗೆ ತಿಳಿಯುವುದು?

ರೈತರು ಬೆಳೆ ವಿಮಾ ಪರಿಹಾರದ ಬೆಳೆ ವಿಮಾ ಕಂಪನಿವಾರು ಇಲ್ಲಿಯವರೆಗೆ ಎಷ್ಟು ಹಣ ರೈತರ ಖಾತೆಗೆ ಪಾವತಿ(Company wise bele vime details)ಡಲಾಗಿದೆ ಎಂದು ತಿಳಿಯಲು ಯಾವ ವಿಧಾನ ಅನುಸರಿಸಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ರೈತರು ತಮ್ಮ ಮೊಬೈಲ್ ಮೂಲಕ ಬೆಳೆ ವಿಮಾ ಯೋಜನೆಯ ಅಧಿಕೃತ samrakshane ಪೋರ್ಟಲ್ ಅನ್ನು ಭೇಟಿ ಮಾಡಿ ರೈತರಿಂದ ಬೆಳೆ ವಿಮಾ ಪ್ರಿಮೀಯಂ ಕಟ್ಟಿಸಿಕೊಂಡಿರುವ ಕಂಪನಿಗಳವಾರು ಎಷ್ಟು ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ ಎನ್ನುವ ಮಾಹಿತಿಯನ್ನು ಪಡೆಯಬಹುದು.

Company wise crop insurance details- ಇಲ್ಲಿಯವರೆಗೆ ಕಂಪನಿವಾರು ಎಷ್ಟು? ಬೆಳೆ ವಿಮೆ ಪಾವತಿ ಮಾಡಲಾಗಿದೆ ಎಂದು ತಿಳಿಯುವ ವಿಧಾನ:

ರೈತರು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಮೊಬೈಲ್ ನಲ್ಲಿಯೇ ಇಲ್ಲಿಯವರೆಗೆ ಕಂಪನಿವಾರು ಎಷ್ಟು? ಬೆಳೆ ವಿಮೆ ಪಾವತಿ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಪಡೆಯಬಹುದು.

Step-1: ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Click here ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು ಇದಾದ ಬಳಿಕ ಈ ಪೇಜ್ ನಲ್ಲಿ ಬೆಳೆ ವಿಮೆ ಅರ್ಜಿ ಸಲ್ಲಿಸಿದ ವರ್ಷ ಮತ್ತು ಋತು/ಹಂಗಾಮ ಅನ್ನು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ಈ ಪುಟದ ಬಲಬದಿಯಲ್ಲಿ ಕಾಣುವ Dashboard ವಿಭಾಗದಲ್ಲಿ ತೋರಿಸುವ Payment ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

Step-3: Payment ಬಟನ್ ಮೇಲೆ ಕ್ಲಿಕ್ ಮಾಡಿದರೆ Payment Dashboard-ಹಣ ಪಾವತಿ ವಿವರದ ಡ್ಯಾಶ್ ಬೋರ್ಡ್ ತೆರೆದುಕೊಳ್ಳುತ್ತದೆ ಇಲ್ಲಿ Select Insurance company ಬಟನ್ ಮೇಲೆ ಕ್ಲಿಕ್ ಮಾಡಿ ಒಂದೊಂದೆ ಕಂಪನಿಯಿಂದ ಎಷ್ಟು ಲಕ್ಷ ಬೆಳೆ ವಿಮೆಯನ್ನು ರೈತರಿಗೆ ಇಲ್ಲಿಯವರೆಗೆ ಪಾವತಿ ಮಾಡಲಾಗಿದೆ ಎನ್ನುವ ಮಾಹಿತಿ ತೋರಿಸುತ್ತದೆ.

ಇದನ್ನೂ ಓದಿ: How to link rtc to aadhar- ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಕಾರ್ಡ ಜೋಡಣೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

District wise crop insurance company details- ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿ ಯಾವುದು ಎಂದು ತಿಳಿಯುವ ವಿಧಾನ:

ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿಯನ್ನು ನೇಮಕ ಮಾಡಲಾಗಿದೆ ಎನ್ನುವ ವಿವರವನ್ನು ಪಡೆಯಬಹುದು.

Step-1: ಮೊದಲು ಈ ಲಿಂಕ್ crop insurance company details ಮೇಲೆ ಕ್ಲಿಕ್ ಮಾಡಿ ಬೆಳೆ ವಿಮಾ ಜಾಲತಾಣ ಭೇಟಿ ಮಾಡಿ ವರ್ಷ ಮತ್ತು ಋತು/ಹಂಗಾಮ ಅನ್ನು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ ಈ ಪೇಜ್ ನಲ್ಲಿ Farmers ಕಾಲಂ ನಲ್ಲಿ ಕೆಳಗಡೆ ತೋರಿಸುವ Know Your Insurance company ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

Step-3: ಇಲ್ಲಿ Select District/ಜಿಲ್ಲೆ ಆಯ್ಕೆ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಿಲ್ಲೆಗೆ ಯಾವ ಕಂಪನಿಯನ್ನು ನೇಮಕ ಮಾಡಲಾಗಿದೆ ಎನ್ನುವ ವಿವರ ತೋರಿಸುತ್ತದೆ.

ಗಮನಿಸಿ: ಕಂಪನಿ ಹೆಸರಿನ ಮುಂದೆ ತೋರಿಸುವ Insurance scheme ಕಾಲಂ ನಲ್ಲಿ PMFBY ಎಂದರೆ ಅದು ಕೃಷಿ ಬೆಳೆಯ ವಿಮಾ ಕಂಪನಿ WBCIS ಎಂದು ತೋರಿಸುತ್ತಿರುವುದು ತೋಟಗಾರಿಕೆ ಬೆಳೆಗಳ ವಿಮಾ ಕಂಪನಿಯಾಗಿರುತ್ತದೆ.

Insurance companies Toll free number (Claim enquiry)- ಬೆಳೆ ವಿಮಾ ಪಾವತಿ ಕುರಿತು ವಿಚಾರಣೆಗೆ ಕಂಪನಿವಾರು ಸಹಾಯವಾಣಿಗಳು:

  • Agriculture Insurance Company(AIC) 1800-425-0505 
  • Universal Sompo GIC 1800-200-5142
  • SBI GIC 1800-180-1551/ 1800-209-1111 
  • HDFC Ergo 1800-266-0700 
  • Future Generali 1800-266-4141 
  • ICICI LOMBARD 1800-103-7712 
  • Bajaj Allianz GIC 1800-209-5959 
  • Reliance General Insurance Co. Ltd., 1800-102-4088

ಬೆಳೆ ವಿಮೆ ಕುರಿತು ಉಪಯುಕ್ತ ಮಾಹಿತಿಯ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ: Read Now