Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

October 26, 2023 | Siddesh

ಇತ್ತೀಚೆಗೆ ಕೃಷಿ ಇಲಾಖೆಯಿಂದ ಬೆಳೆ ಪರಿಹಾರ, ಬೆಳೆ ವಿಮೆ ಪರಿಹಾರ ಹಣ ಮತ್ತು ವಿವಿಧ ಇಲಾಖೆಗಳ ಸಹಾಯಧನ ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ತಪ್ಪದೇ FID ನಂಬರ್ ಮಾಡಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಲಾಗಿತ್ತು.

ಈಗ ಇದಕ್ಕೆ ಸಂಬಧಪಟ್ಟಂತೆ ಮತ್ತೊಂದು ಹೊಸ ಪ್ರಕಟಣೆಯನ್ನು ಇಲಾಖೆಯಿಂದ ಹೊರಡಿಸಲಾಗಿದ್ದು, ಈಗಾಗಲೇ FID ನಂಬರ್ ಹೊಂದಿರುವ ರೈತರು ತಮ್ಮ ಹೆಸರಿನಲ್ಲಿ ಎಷ್ಟು ಜಮೀನು ಇವೆಯೋ ಅ ಎಲ್ಲಾ  ಜಮೀನಿನ ಸರ್ವೆ ನಂಬರ್ ಅನ್ನು ತಪ್ಪದೇ ಕಡ್ಡಾಯವಾಗಿ ನಿಮ್ಮ FID Number ಗೆ ಸೇರಿಸಿ ಎಂದು ತಿಳಿಸಲಾಗಿದೆ.

ನೂತನ ಪ್ರಕಟಣೆ ವಿವರ ಹೀಗಿದೆ:

ಪ್ರತಿಯೊಬ್ಬ ರೈತರು ಕಡ್ಡಾಯವಾಗಿ FID ಮಾಡಿಸಿಕೊಳ್ಳಬೇಕು. ಒಬ್ಬ ರೈತನಿಗೆ 15 ಸರ್ವೇ ನಂಬರ್ ಇದ್ದು 01 ಸರ್ವೇ ನಂಬರ್ ಮಾತ್ರ FID ನಮೂದು ಮಾಡಿಸಿದ್ದಲ್ಲಿ ಎಲ್ಲಾ ಸರ್ವೇ ನಂಬರ್‌ ಗಳನ್ನ ಸೇರಿಸಿ FID ಮಾಡಿಸಿಕೊಳ್ಳಬೇಕು, ಹಾಗೂ ಜಂಟಿ ಖಾತೆದಾರರು ಇದ್ದಲ್ಲಿ ಪ್ರತಿಯೊಬ್ಬ ಜಂಟಿ ಇರುವ ಖಾತೆದಾರರು ವೈಯಕ್ತಿಕವಾಗಿ FID ಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ಇಲ್ಲವಾದರೆ ಬರಪರಿಹಾರದ ಹಣ ನಿಮಗೆ ಜಮಾ ಆಗುವುದಿಲ್ಲ FID ಯನ್ನು ನೋಂದಣಿ ಮಾಡಿಸಿಕೊಳ್ಳಿ ಇದಕ್ಕೆ ಬೇಕಾದ ದಾಖಲೆಗಳು ಬ್ಯಾಂಕ್‌ ಪಾಸ್ ಪುಸ್ತಕ ಜೇರಾಕ್ಸ್, ಆಧಾರ್ ಕಾರ್ಡ್ ಜೇರಾಫ್ಟ್, ಪಹಣಿಗಳು, FID ಮಾಡಿಸದೆ ಇದ್ದಲ್ಲಿ ಬರ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ ಇದಕ್ಕೆ ನೀವೆ ಹೊಣೆಯಾಗಿರುತ್ತೀರಿ. ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: KSRTC Job Notification-2023: ಸರಕಾರಿ ಉದ್ಯೋಗಾಂಕ್ಷಿಗಳಿಗೆ ಶುಭ ಸುದ್ದಿ, 8 ವರ್ಷದ ಬಳಿಕ ಕರ್ನಾಟಕ ಸಾರಿಗೆ ನಿಗಮಕ್ಕೆ 6,500 ಹುದ್ದೆ ನೇಮಕಾತಿಗೆ ಅನುಮೋದನೆ!

How to apply for FID number- FID ನಂಬರ್ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ಹೊಸದಾಗಿ FID ನಂಬರ್ ಪಡೆಯಲು ಮತ್ತು ಈಗಾಗಲೇ ಇರುವ FID ಗೆ ಬಾಕಿಯಿರುವ ಸರ್ವೆ ನಂಬರ್ ಅನ್ನು ಸೇರಿಸಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಬೆಳಗ್ಗೆ: 10-00 ರಿಂದ ಸಂಜೆ 5-00 ಗಂಟೆಯ ನಡುವೆ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಪಡೆಯಬವುದು.

Required documents for fid number- ಅಗತ್ಯ ದಾಖಲಾತಿ ಮಾಹಿತಿ:

> ಹೊಸ FID ನಂಬರ್ ಪಡೆಯಲು: 1)ಆಧಾರ್ ಕಾರ್ಡ ಪ್ರತಿ 2) ಬ್ಯಾಂಕ್ ಪಾಸ್ ಬುಕ್ ಪ್ರತಿ  3) ಎಲ್ಲಾ ಸರ್ವೆ ನಂಬರ್ ನ ಪಹಣಿ/ಉತಾರ್/RTC 4) ಮೊಬೈಲ್ ಸಂಖ್ಯೆ

> FID ಗೆ ಹೆಚ್ಚುವರಿ ಸರ್ವೆ ನಂಬರ್ ಸೇರಿಸಲು: 1) ಸರ್ವೆ ನಂಬರ್ ನ ಪಹಣಿ 2) ಅಧಾರ್ ಕಾರ್ಡ ಪ್ರತಿ.

ಇದನ್ನೂ ಓದಿ: Bele parihara status- 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

FID number Survey number check- ಎಲ್ಲಾ ಸರ್ವೆ FID ಅಲ್ಲಿ ಇವೆಯೇ ಎಂದು ಹೇಗೆ ತಿಳಿಯುವುದು?

ಈಗಾಗಲೇ FID ನಂಬರ್ ಮಾಡಿಕೊಂಡಿರುವ ರೈತರು ಇಲ್ಲಿ ಕ್ಲಿಕ್ ಮಾಡಿ> FID survey number check link ನೀವು FID ನೊಂದಣಿ ಸಮಯದಲ್ಲಿ ಕೊಟ್ಟಿರುವ ಮೊಬೈಲ್ ಸಂಖ್ಯೆಯನ್ನು ಮತ್ತು ಆಧಾರ್ ಮತ್ತು ಆಧಾರ್ ಸಂಖ್ಯೆಯಲ್ಲಿರುವಂತೆ ಹೆಸರನ್ನು ನಮೂದಿಸಿ ಲಾಗಿನ್ ಅಗಿ ನಿಮ್ಮ FID ಅಲ್ಲಿ ಎಷ್ಟು ಸರ್ವೆ ನಂಬರ್ ಸೇರ್ಪಡೆಯಾಗಿವೆ ಎಂದು ಚೆಕ್ ಮಾಡಿಕೊಳ್ಳಬವುದು. 

FID number check- ನಿಮ್ಮ ಆಧಾರ್ ನಂಬರ್ ಹಾಕಿ FID ನಂಬರ್ ಅಗಿದಿಯೋ ಇಲ್ಲವೋ ಎಂದು ತಿಳಿಯಬವುದು:

ಇಲ್ಲಿ ಕ್ಲಿಕ್ ಮಾಡಿ> FID check link ನಿಮ್ಮ ಆಧಾರ್ ನಂಬರ್ ಹಾಕಿ ನಿಮ್ಮ FID ನಂಬರ್ ಯಾವುದು ಮತ್ತು ನಂಬರ್ ರಚನೆ ಅಗಿದಿಯೋ ಇಲ್ಲವೋ ಎಂದು ನಿಮ್ಮ ಮೊಬೈಲ್ ನಲೇ ನೋಡಬವುದು.

ಗೃಹಲಕ್ಷ್ಮಿ ಯೋಜನೆಯ ಕುರಿತು ನಮ್ಮ ಪುಟದ ಇತರೆ ಅಂಕಣಗಳು:

Gruhalaksmi latest updates- ಗೃಹಲಕ್ಷ್ಮಿ ನೋಂದಣಿ ಯಶಸ್ವಿ ಮೆಸೇಜ್‌ ಬಂದಿದ್ದರು 2000 ರೂ. ಬಂದಿಲ್ಲ! ಕಾರಣವೇನು?

Gruhalakshmi Yojana-2023: ಇನ್ನೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಈ ಕುರಿತು ಇಲಾಖೆಯಿಂದ ಟಿಪ್ಪಣಿ ಬಿಡುಗಡೆ.

Gruhalakshmi latest Update- ಈ ವರ್ಗದವರಿಗೂ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000 ಬರಲಿದೆ!

Gruhalakshmi 2nd Installment- ರಾಜ್ಯ ಸರಕಾರದಿಂದ ನವರಾತ್ರಿ ಹಬ್ಬಕ್ಕೆ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ!

How to do GruhaLakshmi eKYC- ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು eKYCಗಾಗಿ ವೆಬ್ಸೈಟ್ ಲಿಂಕ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯ ಮೇಸೆಜ್ ಪಡೆಯಲು ವೆಬ್ಸೈಟ್ ನಲ್ಲಿ ಬದಲಾವಣೆ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: