Gruha jyothi Yojana-ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸರಕಾರದಿಂದ ಗುಡ್ ನ್ಯೂಸ್!

ರಾಜ್ಯ ಸರಕಾರದಿಂದ ಗೃಹ ಜ್ಯೋತಿ ಯೋಜನೆಯಡಿ ಹೆಚ್ಚುವರಿ 10%  ವಿದ್ಯುತ್ ನೀಡುವ ಬದಲು 10 ಯುನಿಟ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Gruha jyothi Yojana-ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸರಕಾರದಿಂದ ಗುಡ್ ನ್ಯೂಸ್!
Gruha jyothi application-2024

ರಾಜ್ಯ ಸರಕಾರದಿಂದ ಗೃಹ ಜ್ಯೋತಿ ಯೋಜನೆಯಡಿ ಹೆಚ್ಚುವರಿ 10%  ವಿದ್ಯುತ್ ನೀಡುವ ಬದಲು 10 ಯುನಿಟ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸರಕಾರದಿಂದ ಗೃಹ ಜ್ಯೋತಿ ಯೋಜನೆಯಡಿ ಗೃಹಬಳಕೆ ವಿದ್ಯುತ್ ಅನ್ನು ಉಚಿತವಾಗಿ ನೀಡಲು ಅರ್ಜಿ ಸಲ್ಲಿಕೆಯನ್ನು ಕಳೆದ ಜೂನ್-2023 ರಿಂದ ಪ್ರಾರಂಭಿಸಲಾಗಿದ್ದು. 

ಈ ಹಿಂದೆ ಈ ಯೋಜನೆಯ ಮೂಲಕ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ(ಕಳೆದ ಒಂದು ವರ್ಷದ ಬಳಕೆಯ ಆಧಾರದನ್ವಯ) ಯೂನಿಟ್ ಗಳ ಮೇಲೆ ಶೇ 10 ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಸೇರಿಸಿ ಉಚಿತ ಬಿಲ್ಲನ್ನು ನೀಡಲಾಗುತ್ತಿತ್ತು.

ಇದನ್ನೂ ಓದಿ: Motor repair training-ಉಚಿತ ವಸತಿ ಸಹಿತ ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Gruha jyothi  Yojana- ಹೆಚ್ಚುವರಿ ಶೇ 10% ಬದಲು ಹೆಚ್ಚುವರಿ 10 ಯೂನಿಟ್ ನೀಡಲು :

ಇನ್ನು ಮುಂದೆ 48 ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಶೇ 10% ಯೂನಿಟ್ ಹೆಚ್ಚುವರಿ ನೀಡುವ ಬದಲು ಹೆಚ್ಚುವರಿ 10 ಯೂನಿಟ್ ವಿದ್ಯುತ್ ನೀಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Gruha jyothi  application link- ಅರ್ಜಿ ಸಲ್ಲಿಸಲು ಇನ್ನು ಇದೆ ಅವಕಾಶ:

ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಇಲ್ಲಿಯವರೆಗೆ ಇನ್ನು ಅರ್ಜಿ ಸಲ್ಲಿಸದ ಅರ್ಹ ಫಲಾನುಭವಿಗಳು ಈ ಲಿಂಕ್ Gruhajoyti application link ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಸುಲಭವಾಗಿ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಬವುದಾಗಿದೆ.

ಇದನ್ನೂ ಓದಿ: Yashaswini yojana-2024: ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಆಹ್ವಾನ! 5.00 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಗೆ ಅವಕಾಶ.

Gruha jyothi application status- ಗೃಹ ಜ್ಯೋತಿ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಗೃಹ ಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿದಾರರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ನಿಮ್ಮ ವಿದ್ಯುತ್ ಬಿಲ್ ಗ್ರಾಹಕರ ಐಡಿ ಸಂಖ್ಯೆಯನ್ನು ನಮೂದಿಸಿ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದಿಯೇ? ಇಲ್ಲವೇ? ಎಂದು ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಮೊಬೈಲ್ ನಲ್ಲೇ ಖಚಿತಪಡಿಸಿಕೊಳ್ಳಬವುದಾಗಿದೆ.

ಇದನ್ನೂ ಓದಿ: PM-kisan: ಪಿ ಎಂ ಕಿಸಾನ್ ಯೋಜನೆಯಡಿ ಎಷ್ಟು ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಡೈರೆಕ್ಟ್ ಲಿಂಕ್!

Gruha jyothi guidelines- ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರು:

1) ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ; ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.

2) ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಲಾಗುತ್ತದೆ. 

3) ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್ಲಿನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಕೆ net bill ನೀಡುವುದು ಹಾಗೂ ಗ್ರಾಹಕರು net bill ನ್ನು ಪಾವತಿಸಲಾಗುತ್ತದೆ.

4) ಅರ್ಹ ಯೂನಿಟ್ / ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.

5) ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.

ಇದನ್ನೂ ಓದಿ: SSLC and PUC exam time table-2024: SSLC ಮತ್ತು PUC ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ!

6) ಪ್ರತಿ ಫಲಾನುಭವಿಯು ತನ್ನ Connection ID / Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು.

7) ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ / ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ 28003 ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸುವುದು.

8) ದಿನಾಂಕ 30.06.2023ರ ಅಂತ್ಯಕ್ಕೆ (ಜೂನ್ 2023ರ ಮಾಹೆಯಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ 2023ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದ್ದು. ಬಾಕಿ ಮೊತ್ತವನ್ನು ನಿಗಧಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸ್ಥಾವರಗಳ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು.

9) ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.

10) ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ ಒಂದು ಸ್ನಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.

ಪ್ರಮುಖ ಉಪಯುಕ್ತ ಲಿಂಕ್ ಗಳು:

ಗೃಹ ಜ್ಯೋತಿ ಅರ್ಜಿ ಸಲ್ಲಿಸಲು ಲಿಂಕ್: Apply Now

ಗೃಹ ಜ್ಯೋತಿ ಯೋಜನೆ ಅಧಿಕೃತ ಮಾರ್ಗಸೂಚಿ: Download Now

ಗೃಹ ಜ್ಯೋತಿ ಅರ್ಜಿ ಸ್ಥಿತಿ ಚೆಕ್ ಮಾಡಲು ಲಿಂಕ್: Status check